ಬಿಗ್ ಬಾಸ್ ಮನೆಯಾಯ್ತು ಸೈಲೆಂಟ್ ಝೋನ್, ಕಿಚ್ಚನ ಪಂಚಾಯಿತಿಯಲ್ಲಿ ಯಾಕೆ ಆತಂಕದ ಕಾರ್ಮೋಡ?
ನಿನ್ನೆ ಬಿಗ್ ಬಾಸ್ ಮನೆ ಅಕ್ಷರಶಃ ಸೀರಿಯಸ್‌ನೆಸ್ ತುಂಬಿಸಿಕೊಂಡು ಘನಗಾಂಭೀರ್ಯ ಮನೆಮಾಡಿತ್ತು. ಅದರಲ್ಲೂ ಕಾರ್ತಿಕ್, ಸಂಗೀತಾ ಹಾಗೂ ತನಿಶಾ ಅವರಲ್ಲಂತೂ ಯಾವತ್ತೂ ಇಲ್ಲದಷ್ಟು ಆತಂಕ ಹಾಗೂ ಭಯ ಮನೆಮಾಡಿತ್ತು. ಸಿರಿ, ಭಾಗ್ಯಶ್ರೀ ಅವರ ಮುಖದಲ್ಲಿ ತೀವ್ರ ಚಿಂತೆ ಕಾಣಿಸುತ್ತಿತ್ತು.
ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಮೂರನೇ ವಾರದ ವೀಕೆಂಡ್ 'ಕಿಚ್ಚನ ಪಂಚಾಯಿತಿ' ಮುಗಿದಿದೆ. ಕಳೆದ ಎರಡೂ ಕಿಚ್ಚನ ಪಂಚಾಯಿತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಹರಟೆ, ತಮಾಷೆ ಹಾಗೂ ಗಾಂಭೀರ್ಯತೆ ಎಲ್ಲವೂ 'ಮಿಕ್ಸ್ಚರ್' ರೀತಿಯಲ್ಲಿ ಇತ್ತು. ಆದರೆ ನಿನ್ನೆಯ ಕಿಚ್ಚನ ಪಂಚಾಯಿತಿ ಸಂಚಿಕೆ ಫುಲ್ ಸೀರಿಯಸ್ ಆಗಿತ್ತು. ಸ್ವತಃ ಕಿಚ್ಚ ಸುದೀಪ್ ಮುಖದಲ್ಲಿ ಅಥವಾ ಸ್ವರ್ಧಿಗಳ ಮುಖದಲ್ಲಾಗಲೀ ಮುಗುಳ್ನಗು ಕಾಣಲೇ ಇಲ್ಲ. ಕಾರಣ, ವೀಕ್ಷಕರ ಕಡೆಯಿಂದ ಬಿಗ್ ಬಾಸ್ ಮನೆಯಲ್ಲಿರುವವರಿಗೆ ಕಳಿಸಲಾದ ಗಿಫ್ಟ್!
ಹೌದು, ವೀಕ್ಷಕರ ಕಡೆಯಿಂದ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಗಿಫ್ಟ್ ಕಳಿಸಲಾಗಿತ್ತು. ಅದರಲ್ಲಿ ಸ್ಪರ್ಧಿಗಳ ಬಗ್ಗೆ ವೀಕ್ಷಕರ ಅಭಿಪ್ರಾಯ ಪ್ರತಿಬಿಂಬಿಸುವಂತಿತ್ತು. ಕಿಚ್ಚ ಸುದೀಪ್ ಈ ಬಗ್ಗೆ ಹೇಳಿ ಎಲ್ಲರೂ ಅವರವರ ಗಿಫ್ಟ್ ನೋಡಿಕೊಂಡು, ಹೊರಗಡೆ ಕರ್ನಾಟಕದ ಮನೆಮನಗಳಲ್ಲಿ ನಿಮ್ಮ ಬಗ್ಗೆ ಯಾವ ಅಭಿಪ್ರಾಯವಿದೆ ನೋಡಿ ಎಂದು ಹೇಳಿ ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿಬಿಟ್ಟರು. ಕಾರಣ, ಸ್ಪರ್ಧಿಗಳಲ್ಲೇ ವಿನಯ್ ಬಗ್ಗೆ ಅತಿ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಅವರಿಗೆ ಅದರ ಜತೆಯಲ್ಲೇ ಎಚ್ಚರಿಕೆ ಸಂದೇಶ ಕೂಡ ಇದೆ.
ಸಂಗೀತಾ, ಕಾರ್ತಿಕ್, ತನಿಶಾ, ಸ್ನೇಹಿತ್ ಎಲ್ಲರಿಗೂ ಸ್ವಲ್ಪ ಕಾಳೆದು ವೀಕ್ಷಕರು ಗಿಫ್ಟ್ ಹಾಗೂ ಲೆಟರ್ ಕಳುಹಿಸಿದ್ದರು. ಲೆಟರ್ ಓದಿರುವ ಸ್ಪರ್ಧಿಗಳ ಮುಖದಲ್ಲಿ ಮಂದಹಾಸ ಮಾಯವಾಗಿ ಬೇಸರ, ಆತಂಕ ಮನೆಮಾಡಿತು. ಸಾಲದು ಎಂಬಂತೆ, ವಿನಯ್ ಹೊರತುಪಡಿಸಿ ಸುದೀಪ್ ಎಲ್ಲರನ್ನೂ ಮಾತನಾಡಿಸಿ ಅವರವರ ಕನ್ನಡಿಯನ್ನು ಅವರವರಿಗೆ ತೋರಿಸಿ ಅವರೆಲ್ಲರನ್ನೂ ಬಾಯಿ ಮುಚ್ಚಿಸಿಬಿಟ್ಟರು.
ಡ್ರೋನ್ ವಿಷಯ ಮತ್ತೆ ಎಳೆದು ತಂದ ವಿನಯ್-ಸ್ನೇಹಿತ್, ಸಂದೇಹಗಳಿಗೆ ಬೆಚ್ಚಿಬಿದ್ರಾ ಪ್ರತಾಪ್?
ನಿನ್ನೆ ಬಿಗ್ ಬಾಸ್ ಮನೆ ಅಕ್ಷರಶಃ ಸೀರಿಯಸ್‌ನೆಸ್ ತುಂಬಿಸಿಕೊಂಡು ಘನಗಾಂಭೀರ್ಯ ಮನೆಮಾಡಿತ್ತು. ಅದರಲ್ಲೂ ಕಾರ್ತಿಕ್, ಸಂಗೀತಾ ಹಾಗೂ ತನಿಶಾ ಅವರಲ್ಲಂತೂ ಯಾವತ್ತೂ ಇಲ್ಲದಷ್ಟು ಆತಂಕ ಹಾಗೂ ಭಯ ಮನೆಮಾಡಿತ್ತು. ಸಿರಿ, ಭಾಗ್ಯಶ್ರೀ ಅವರ ಮುಖದಲ್ಲಿ ತೀವ್ರ ಚಿಂತೆ ಕಾಣಿಸುತ್ತಿತ್ತು. ರಕ್ಷಕ್, ಡ್ರೋನ್ ಪ್ರತಾಪ್ ಮುಖದಲ್ಲಿ ಕೂಡ ಆತಂಕ ಎದ್ದು ಕಾಣುತ್ತಿತ್ತು. ಒಟ್ಟಿನಲ್ಲಿ, ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆ ಸೈಲೆಂಟ್ ಝೋನ್ ಆಗಿಬಿಟ್ಟಿತ್ತು.
ರಣರಂಗವಾಯ್ತು ಬಿಗ್ ಬಾಸ್ ಮನೆ, ಡಾಮಿನೇಟ್ ಮಾಡೋಕೆ ಯಾವಳೋ ಅವ್ಳು, ತನಿಶಾ ವಿರುದ್ಧ ಹರಿಹಾಯ್ದ ನಮ್ರತಾ!
ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಎಂಬುದೆಲ್ಲವನ್ನೂ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.