ಕೀರ್ತಿ ಆಕ್ಟಿಂಗ್ ಸೂಪರ್, ಆದ್ರೆ ತಲೆಗೆ ಹುಳು ಬಿಟ್ಟಿದ್ದಾರೆ ನಿರ್ದೇಶಕರು!
ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ನಟನೆ ಅದ್ಭುತವಾಗಿದೆ. ಕೀರ್ತಿ ಆಕ್ಟಿಂಗ್ ನೋಡಿದ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಕೀರ್ತಿ ಡಬಲ್ ಆಕ್ಟಿಂಗ್ ಅವರನ್ನು ಕನ್ಫ್ಯೂಸ್ ಮಾಡಿದೆ.
ಕಲರ್ಸ್ ಕನ್ನಡ ಲಕ್ಷ್ಮೀ ಬಾರಮ್ಮ ಸೀರಿಯಲ್ (Colors Kannada Lakshmi Baramma Serial) ಸದ್ಯ ಇಂಟರೆಸ್ಟಿಂಗ್ ಆಗಿದೆ. ಕಾವೇರಿಗೆ ಜೈಲಾಗುತ್ತಾ ಎಂದು ತುದಿಗಾಲಿನಲ್ಲಿ ನಿಂತಿದ್ದ ವೀಕ್ಷಕರಿಗೆ ಈಗ ಕೀರ್ತಿ ಪ್ರಶ್ನೆಯಾಗಿ ನಿಂತಿದ್ದಾಳೆ. ಕೀರ್ತಿ ಹಾಗೂ ಮಹಾಲಕ್ಷ್ಮಿ ಮೇಲೆ ಸದ್ಯ ಎಲ್ಲರ ಕಣ್ಣಿದೆ. ಕೀರ್ತಿ ವಿಚಿತ್ರ ವರ್ತನೆ, ವೀಕ್ಷಕ (Viewer)ರ ತಲೆಗೆ ಹುಳು ಬಿಟ್ಟಂತಾಗಿದೆ.
ಕಾವೇರಿ ತನ್ನ ಕೈಯಾರೆ ಕೀರ್ತಿಯ ಹತ್ಯೆ ಮಾಡಿದ್ಲು. ಅಂತ್ಯ ಸಂಸ್ಕಾರ ಕೂಡ ನಡೆದಿತ್ತು. ಕೀರ್ತಿ ಸತ್ತೇ ಹೋದ್ಲು ಎಂದಾಗ ವೀಕ್ಷಕರೆಲ್ಲ, ಕೀರ್ತಿ ಸಾಯಿಸ್ಬೇಡಿ, ಅವರ ನಟನೆ ಅದ್ಭುತವಾಗಿದೆ ಅಂತ ಕಮೆಂಟ್ ಮೇಲೆ ಕಮೆಂಟ್ ಮಾಡಿದ್ರು. ಆ ನಂತ್ರ ನಿರ್ದೇಶಕರು ಸೀರಿಯಲ್ಗೆ ಮತ್ತೊಂದು ಟ್ವಿಸ್ಟ್ ನೀಡಿ, ಮಹಾಲಕ್ಷ್ಮಿಯನ್ನು ಸಾಯಿಸಿದ್ರು. ಇನ್ನೇನು ಇಬ್ಬರೂ ಇಲ್ಲ ಎನ್ನುವಷ್ಟರಲ್ಲೇ ರೀ ಎಂಟ್ರಿಯಾಗಿದ್ದು ಕೀರ್ತಿ. ಆಕೆ ಬರ್ತಿದ್ದಂತೆ ಕಾವೇರಿಗೆ ಸಂಕಷ್ಟ ಶುರುವಾಗಿತ್ತು. ಜೈಲು ಪಾಲಾದ ಕಾವೇರಿ ವಿರುದ್ಧ ಸಾಕ್ಷ್ಯ ಸಿಕ್ಕಿರಲಿಲ್ಲವಾದ್ರೂ ಮಹಾಲಕ್ಷ್ಮಿ ಹತ್ಯೆ ಯತ್ನದಲ್ಲಿ ಕಾವೇರಿ ಕಂಬಿ ಹಿಂದೆ ಹೋಗಿದ್ದಾಳೆ. ಒಂದ್ಕಡೆ ಅಮ್ಮ ಜೈಲು ಸೇರಿರುವ ನೋವು ವೈಷ್ಣವ್ ಕಾಡ್ತಿದ್ದು, ಇನ್ನೊಂದು ಕಡೆ ಕೀರ್ತಿಗೆ ಏನಾಗ್ತಿದೆ ಎಂಬುದು ಅರ್ಥವಾಗ್ತಿಲ್ಲ. ಕೀರ್ತಿ, ಇನ್ನೆಷ್ಟು ದಿನ ಈ ಕಥೆಯಲ್ಲಿ ಆಕ್ಟಿಂಗ್ ಮಾಡ್ಬೇಕು, ಇದು ಮುಗಿಯೋದಿಲ್ವ ಅಂತ ಕೇಳ್ತಿದ್ದಂತೆ ವೈಷ್ಣವ್ ದಂಗಾಗಿದ್ದಾನೆ. ಕೀರ್ತಿ ಏನು ಹೇಳ್ತಿದ್ದಾಳೆ ಎಂಬುದು ಅವನಿಗೆ ಅರ್ಥವಾಗಿಲ್ಲ. ವೈಷ್ಣವ್ ಗೆ ಮಾತ್ರವಲ್ಲ, ಕೀರ್ತಿ ಈ ವರ್ತನೆ ವೀಕ್ಷಕರಿಗೂ ಅರ್ಥವಾಗ್ತಿಲ್ಲ.
ಒಂದೇ ದಿನದಲ್ಲಿ ಎರಡು ಮದುವೆಯಾದ ಕೀರ್ತಿ ಸುರೇಶ್? ಲಿಪ್ ಲಾಕ್ ಫೋಟೋ ವೈರಲ್!
ಕೀರ್ತಿ ವಾಪಸ್ ಬಂದಾಗಿಂದ್ಲೂ ಭಿನ್ನವಾಗಿದ್ದಾಳೆ. ಮೊದಲಿನ ಕೀರ್ತಿಯಲ್ಲ. ಕೀರ್ತಿಯಾಗಿ ನಾಟಕ ಮಾಡಿ ಸಾಕಾಗಿದೆ, ಇದು ಮುಗಿಯೋದಿಲ್ವ ಅಂತ ಪದೇ ಪದೇ ಕೇಳ್ತಾನೆ ಇದ್ದಾಳೆ. ಈಗ ಕಲರ್ಸ್ ಕನ್ನಡದ ಪ್ರೋಮೋ ಒಂದು ಮತ್ತಷ್ಟು ತಲೆಕೆಡಿಸಿದೆ. ಕೀರ್ತಿ ಆರಂಭದಲ್ಲಿ ಮಹಾಲಕ್ಷ್ಮಿ ಜೊತೆ ಮಾತನಾಡ್ತಾಳೆ. ನಾವಿಬ್ಬರು ಸೇರಿದ್ರೆ ಕಾವೇರಿಯನ್ನು ಜೈಲಿಗೆ ಹಾಕ್ಬಹುದು ಎನ್ನುತ್ತಾಳೆ. ಇನ್ನೊಂದರಲ್ಲಿ ಕಾವೇರಿ ಫೋಟೋ ನೋಡ್ತಿದ್ದಂತೆ ರಣಚಂಡಿಯಾಗ್ತಾಳೆ. ಕಾವೇರಿ ಫೋಟೋಕ್ಕೆ ಚಾಕು ಹಾಕ್ತಾಳೆ. ಫೋಟೋ ಹರಿಯುವ ಪ್ರಯತ್ನ ಮಾಡ್ತಾಳೆ. ಕೀರ್ತಿ ಹೀಗೇಕೆ ಆಡ್ತಿದ್ದಾಳೆ ಎಂಬುದೇ ವೀಕ್ಷಕರ ಪ್ರಶ್ನೆ.
ಕಾವೇರಿ, ಜೈಲಿಗೆ ಹೋಗಲು ಜೀಪ್ ಹತ್ತಿದಾಗ್ಲೂ, ಕೀರ್ತಿ ಜೀಪ್ಗೆ ಕಲ್ಲು ಎಸೆದಿದ್ದಳು. ಈಗ ಫೋಟೋ ನೋಡಿ ಕಿರಿಚಾಡುತ್ತಿದ್ದಾಳೆ. ಕಾವೇರಿ ನೋಡ್ತಿದ್ದಂತೆ ಕೀರ್ತಿಗೆ ಹಳೆ ನೆನಪು ಬರುತ್ತಾ? ಕೀರ್ತಿ ಮತ್ತೆ ಮೊದಲಿನಂತೆ ಆಗ್ತಾಳಾ? ಅವಳಿಗೆ ನಿಜವಾಗ್ಲೂ ಎಲ್ಲ ಮರೆತಿದ್ಯಾ ಎಂಬುದು ವೀಕ್ಷಕರಿಗೆ ಗೊತ್ತಾಗ್ತಿಲ್ಲ. ಒಂದೊಂದು ಸಲ ಒಂದೊಂದು ರೀತಿ ವರ್ತಿಸುವ ಕೀರ್ತಿ ಹೇಗೆ ಬದುಕಿ ಬಂದ್ಲು, ಯಾಕೆ ಹೀಗಾಗಿದ್ದಾಳೆ ಎಂಬುದನ್ನು ಆದಷ್ಟು ಬೇಗ ತಿಳಿಸಿ ಎನ್ನುತ್ತಿದ್ದಾರೆ ಫ್ಯಾನ್ಸ್.
ಈ ಚಿತ್ರದಿಂದ ಬಂದ ಸಂಭಾವನೆಯಲ್ಲಿ ಮದುವೆ ಸಾಲ ತೀರಿಸಿದ್ದ ಡಾ.ರಾಜ್‌ಕುಮಾರ್; ಶಾಕ್
ಕೀರ್ತಿ ಪ್ರತಿ ದೃಶ್ಯದಲ್ಲೂ ಅದ್ಭುತವಾಗಿ ಆಕ್ಟಿಂಗ್ ಮಾಡಿದ್ದಾರೆ. ಅವರ ಕೋಪ, ಪೆದ್ದುತನ, ಶಾಂತ ಸ್ವಭಾವ ಎಲ್ಲವನ್ನೂ ವೀಕ್ಷಕರು ನೆಚ್ಚಿಕೊಂಡಿದ್ದಾರೆ. ಕೀರ್ತಿ ಆಕ್ಟಿಂಗ್ ಸೂಪರ್ ಎನ್ನುತ್ತಿರುವ ವೀಕ್ಷಕರು, ಮತ್ತೆ ಕೀರ್ತಿ ಬದಲಿಸಬೇಡಿ ಎಂದು ನಿರ್ದೇಶಕರಿಗೆ ವಿನಂತಿ ಮಾಡ್ಕೊಂಡಿದ್ದಾರೆ. ಕೀರ್ತಿ ಹೀಗೆ ಇರಲಿ ಅಂತ ಒಬ್ಬರು ಹೇಳಿದ್ರೆ ಮತ್ತೊಬ್ಬರು ಹಳೆ ಕೀರ್ತಿ ನಮಗೆ ಬೇಕು ಎನ್ನುತ್ತಿದ್ದಾರೆ. ವೈಷ್ಣವ್ ಬಿಟ್ಟು, ಮಹಾಲಕ್ಷ್ಮಿ ಹಿಂದೆ ಕೀರ್ತಿ ಏಕೆ ಬಿದ್ದಿದ್ದಾಳೆ ಎಂಬುದು ಇನ್ನೊಬ್ಬರ ಪ್ರಶ್ನೆ. ಈ ಮಧ್ಯೆ ಗಂಗಾ ಕ್ಯಾರೆಕ್ಟರ್ ಬದಲಾವಣೆ ವೀಕ್ಷಕರಿಗೆ ಇಷ್ಟವಾಗಿಲ್ಲ. ಹಳೆ ಗಂಗಾ ಚೆನ್ನಾಗಿ ನಟನೆ ಮಾಡ್ತಿದ್ರು ಎನ್ನುತ್ತಿದ್ದಾರೆ ವೀಕ್ಷಕರು.