Asianet Suvarna News Asianet Suvarna News

ಕೀರ್ತಿಗಾಗಿ ಓಡೋಡಿ ಬಂದ ವೈಷ್ಣವ್, ಥೂ ಕಚ್ಡಾ ಕಥೆ ಅಂತ ಬಯ್ದುಕೊಳ್ತಿದ್ದಾರೆ ನೆಟ್ಟಿಗರು!

ಕೀರ್ತಿ ಹೀಗೆ ಕುಣಿಯುತ್ತಿದ್ದರೆ ಸ್ವಲ್ಪ ಹೊತ್ತಿನಲ್ಲೇ ಕುಸಿದು ಬೀಳುತ್ತಾಳೆ ಎಂಬುದನ್ನು ಲೆಕ್ಕಹಾಕಿ ವೈಷ್ಣವ್ ಕುಳಿತಲ್ಲಿಂದ ಓಡಿ ಹೋಗಿ ಕೀರ್ತಿ ಕುಣಿಯುತ್ತಿರುವ ಸ್ಟೇಜ್‌ ಹತ್ತಿ ಆಕೆಯ ಬಳಿ ಹೋಗುತ್ತಾನೆ. ವೈಷ್ಣವ್ ಸರಿಯಾದ ಸಮಯಕ್ಕೆ ಬಂದಿದ್ದಾನೆ ಎಂಬುದನ್ನೂ ಪ್ರೂವ್...

Keerthi collapsed when Vaishnav goes on to dance stage in Lakshmi Baramma serial srb
Author
First Published May 24, 2024, 11:59 AM IST

ಸ್ಟೇಜ್‌ನಲ್ಲಿ ಡಾನ್ಸ್ ಮಾಡುತ್ತಿರುವ ಕೀರ್ತಿ (Keerthi) ಮತ್ತು ಲಕ್ಷ್ಮಿ (Lakshmi) ನೃತ್ಯದಲ್ಲಿ ಫುಲ್ ಇನ್‌ವಾಲ್ವ್ ಆಗಿದ್ದಾರೆ. ಪ್ರೇಕ್ಷಕರೊಂದಿಗೆ ವೈಷ್ಣವ್ ಕೂಡ ಕುಳಿತು ನೋಡುತ್ತಿದ್ದಾನೆ. ಡಾನ್ಸ್ ಮುಂದಕ್ಕೆ ಹೋಗುತ್ತಿದ್ದಂತೆ ಅನಾವಶ್ಯಕ ರೆಬಲ್ ಆಗು ಕೀರ್ತಿ ಲಕ್ಷ್ಮೀ ಜೊತೆ ಕಮ್ಯುನಿಕೇಟ್ ಮಾಡದೇ ತಾನೊಬ್ಬಳೇ ಡಾನ್ಸ್‌ನಲ್ಲಿ ಬ್ಯುಸಿಯಾಗಿದ್ದಾಳೆ. ಒಂದು ಹಂತದಲ್ಲಿ ಅವಳೇನು ಮಾಡುತ್ತಿದ್ದಾಳೆ ಎಂಬುದು ಅರ್ಥವಾಗದೇ ಲಕ್ಷ್ಮಿ ಡಾನ್ಸ್ ಮಾಡುವುದನ್ನಿ ನಿಲ್ಲಿಸಿ ತಾನು ಸೈಡ್‌ಗೆ ಸರಿದು, ಕೀರ್ತಿಯನ್ನೇ ನೋಡುತ್ತಾ ನಿಂತುಬಿಡುತ್ತಾಳೆ. ಪ್ರೇಕ್ಷಕರ ಸಾಲಿನಲ್ಲಿರುವ ವೈಷ್ಣವ್ (Vaishnav) ಕೂಡ ಗಾಬರಿಯಾಗುತ್ತಾನೆ. 

ಹಾಗಿದ್ದರೆ ಕೀರ್ತಿಗೆ ಏನಾಗಿದೆ? ಯಾಕೆ ಅವಳಿಗೆ ಈ ಲೋಕದ ಪರಿಜ್ಞಾನವಿಲ್ಲ ಎಂದು ವೈಷ್ಣವ್ ಗಾಬರಿಯಾಗಿ ಯೋಚಿಸುತ್ತಿದ್ದಾನೆ. ಆದರೆ, ಕೀರ್ತಿ ಡಾನ್ಸ್ ಮಾಡುತ್ತಿರುವ ವೇಗವನ್ನು ನೋಡಿದರೇ ಅವಳ ಮನಸ್ಸಿನ ಆವೇಗ ಅರ್ಥವಾಗುವಂತಿದೆ. ಪ್ರೇಕ್ಷಕರು ಕೂಡ ಫುಲ್ ಗಾಬರಿಯಾಗಿದ್ದಾರೆ. ಕೀರ್ತಿ ಡಾನ್ಸ್ ಮಾಡುತ್ತಿದ್ದಾಳಾ ಅಥವಾ ಅವಳದೇ ಲೋಕದಲ್ಲಿ ಮೈಮರೆತಿದ್ದಾಳಾ ಎಂಬುದು ಅವರಿಗೂ ಅರ್ಥವಾಗದೇ ಕಂಗಾಲಾಗಿದ್ದಾರೆ. ಈಗ ವೈಷ್ಣವ್ ಅಲರ್ಟ್ ಆಗಿದ್ದಾನೆ. ಕುಳಿತಲ್ಲಿಂದ ಎದ್ದು ಓಡುತ್ತಾನೆ ವೈಷ್ಣವ್. 

ಪ್ಯಾನ್ ಇಂಡಿಯಾ 'ಹಲಗಲಿ'ಯಿಂದ ಹೊರನಡೆದ ಡಾರ್ಲಿಂಗ್ ಕೃಷ್ಣ, ಒಳಬರುವರೇ ಡಾಲಿ ಧನಂಜಯ್?

ಕೀರ್ತಿ ಹೀಗೆ ಕುಣಿಯುತ್ತಿದ್ದರೆ ಸ್ವಲ್ಪ ಹೊತ್ತಿನಲ್ಲೇ ಕುಸಿದು ಬೀಳುತ್ತಾಳೆ ಎಂಬುದನ್ನು ಲೆಕ್ಕಹಾಕಿ ವೈಷ್ಣವ್ ಕುಳಿತಲ್ಲಿಂದ ಓಡಿ ಹೋಗಿ ಕೀರ್ತಿ ಕುಣಿಯುತ್ತಿರುವ ಸ್ಟೇಜ್‌ ಹತ್ತಿ ಆಕೆಯ ಬಳಿ ಹೋಗುತ್ತಾನೆ. ವೈಷ್ಣವ್ ಸರಿಯಾದ ಸಮಯಕ್ಕೆ ಬಂದಿದ್ದಾನೆ ಎಂಬುದನ್ನೂ ಪ್ರೂವ್ ಮಾಡುವಂತೆ ಕೀರ್ತಿ ಆತ ಹಿಡಿದುಕೊಳ್ಳುತ್ತಿದ್ದಂತೆ ತನ್ನ ಕಂಟ್ರೋಲ್ ಕಳೆದುಕೊಂಡು ವೈಷ್ಣವ್ ದೇಹಕ್ಕೊರಗಿ ಆಸರೆ ಪಡೆದಂತೆ ಜ್ಞಾನ ತಪ್ಪುತ್ತಾಳೆ. ವೈಷ್ಣವ್ ಅಕ್ಷರಶಃ ಕೀರ್ತಿಯನ್ನು ಬಿಗಿದಪ್ಪಿ ಎತ್ತಿಕೊಂಡು ಅಲ್ಲೇ ಕುಳಿತಿದ್ದಾನೆ. 

ರಜನಿಕಾಂತ್ ಫೇವರೆಟ್ ಸ್ಟಾರ್ ನಟಿಯ ದುರಂತ ಸಾವು 22ರಲ್ಲೇ ಯಾಕೆ ಸಂಭವಿಸಿತು?

ಕೀರ್ತಿಗೆ ಜ್ಞಾನವಿಲ್ಲ. ವೈಷ್ಣವ್ ಆಕೆಗೆ ಏನಾಗಿರಬಹುದು ಎಂದು ಅರಿಯದೇ 'ಏನಾಯ್ತು ಕೀರ್ತಿ?' ಎಂದು ಕೇಳುತ್ತಾ ಆಕೆಗೆ ಆಸರೆ ಕೊಟ್ಟು ಕಂಗಾಲಾಗಿದ್ದಾನೆ. ಇತ್ತ ಲಕ್ಷ್ಮಿ ಕೂಡ ಕಂಗಾಲಾಗಿದ್ದಾಳೆ. ಲಕ್ಷ್ಮಿಯದು ವಿಚಿತ್ರ ಪರಿಸ್ಥಿತಿ. ಒಂದು ಕಡೆ ಕೀರ್ತಿಗೆ ಏನಾಯ್ತು ಎಂಬ ಚಿಂತೆ, ಮತ್ತೊಂದು ಕಡೆ ವೈಷ್ಣವ್ ಕೀರ್ತಿ ಕಡೆ ವಾಲುತ್ತಿದ್ದಾನಾ? ಆತನ ಪ್ರೀತಿಯಿಂದ ತಾನು ವಂಚಿತಳಾಗಬಹುದಾ? ಈ ಥರಹದ ಆಲೋಚನೆ ಲಕ್ಷ್ಮಿಯನ್ನು ಕಾಡತೊಡಗಿದೆ. ಮುಂದಿನ ದಿನಗಳಲ್ಲಿ ಲಕ್ಷ್ಮೀ ಪ್ರಶ್ನೆಗೆ ಉತ್ತರ ದೊರಕಲಿದೆ. 

ನಟ ಚಂದ್ರಕಾಂತ್‌ ಸಾವು ಹತ್ಯೆಯೋ ಆತ್ಮಹತ್ಯೆಯೋ? ಶಿಲ್ಪಾ ತಂದೆ ಸಂಶಯ ವ್ಯಕ್ತಪಡಿಸಿ ಹೇಳಿದ್ದೇನು?

ಇನ್ನೊಂದು ಕಂಡೆ, ಅಂಕಿತ್ ತನ್ನ ಅಪ್ಪ ಯಾರು ಎಂಬುದನ್ನು ಇನ್ನೂ ಕಂಡುಹಿಯಲು ಸಾಧ್ಯವಾಗದೇ ಕಂಗಾಲಾಗಿದ್ದಾನೆ. ಯಾರನ್ನು ಕೇಳಿದರೂ ಅಂಕಿತ್ ಗೆ ಈ ಬಗ್ಗೆ ಸೂಕ್ತ ಉತ್ತರ ಸಿಗುತ್ತಿಲ್ಲ. ಆತ ಇನ್ನೂ ಕಾಯುವುದಕ್ಕೆ ನಿರ್ಧಾರ ಮಾಡಿ ಸದ್ಯಕ್ಕೆ ಸಮಾಧಾನ ಗೊಂಡಿದ್ದಾನೆ. ಈ ಎಲ್ಲ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರ ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಮುಂದಿನ ಎಪಿಸೋಡ್‌ಗಳಲ್ಲಿ ಸಿಗಲಿದೆ. ಅಂದಹಾಗೆ, ಕಲರ್ಸ್ ಕನ್ನಡಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 7.30ಕ್ಕೆ ಲಕ್ಷ್ಮೀ ಬಾರಮ್ಮ (Lakshmi Baramma)  ಧಾರಾವಾಹಿ ಪ್ರಸಾರವಾಗುತ್ತಿದೆ. 

Latest Videos
Follow Us:
Download App:
  • android
  • ios