Asianet Suvarna News Asianet Suvarna News

ರಜನಿಕಾಂತ್ ಫೇವರೆಟ್ ಸ್ಟಾರ್ ನಟಿಯ ದುರಂತ ಸಾವು 22ರಲ್ಲೇ ಯಾಕೆ ಸಂಭವಿಸಿತು?

ಈ ನಟಿ ಜಯಲಕ್ಷ್ಮಿ ಅವರನ್ನು ಫಟಾಫಟ್ ಜಯಲಕ್ಷ್ಮಿ ಎನ್ನಲಾಗುತ್ತಿತ್ತು. ಕಾರಣ, ಅವರೊಂದು ಸಿನಿಮಾದಲ್ಲಿ ಪದೇಪದೇ 'ಫಟಾಫಟ್' ಎಂಬ ಡೈಲಾಗ್ ಹೇಳಿದ್ದರು. ನಟಿ ಜಯಲಕ್ಷ್ಮಿ ಅವರು ಅಕ್ಕಿನೇನಿ ನಾಗೇಶ್ವರರಾವ್ ನಟನೆಯ...

Rajinikanth Favourite actress Fatafat Jayalakshmi died tragic death srb
Author
First Published May 23, 2024, 6:39 PM IST

ಅದು ಸಿನಿಮಾರಂಗದ ಉತ್ತುಂಗದ ಕಾಲ ಎನ್ನಬಹುದು. ನಟ ರಜನಿಕಾಂತ್, ಕಮಲ್ ಹಾಸನ್ ಚಿತ್ರರಂಗದಲ್ಲಿ ಮೆರೆಯುತ್ತಿದ್ದ ಕಾಲ. ಕನ್ನಡ ಚಿತ್ರರಂಗದಲ್ಲೂ ಅಷ್ಟೇ, ನಟರಾದ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತ್‌ನಾಗ್, ಶಂಕರ್‌ನಾಗ್ ಹೀಗೆ ಘಟಾನುಘಟಿ ನಾಯಕರು ಸ್ಟಾರ್‌ಗಳಾಗಿ ಎಂಟ್ರಿ ಕೊಡುತ್ತಿದ್ದ ಅಥವಾ ಮೆರೆಯುತ್ತಿದ್ದ ಕಾಲ. ಅದೇ ವೇಳೆ ಬಹಳಷ್ಟು ನಟಿಯರು ಸಹ ಸಿನಿರಂಗಕ್ಕೆ ಆಗಮಿಸಿದ್ದರು. ಅವರಲ್ಲಿ ಅನೇಕರು ಚೆಲುವೆಯರು ಮಾತ್ರವಲ್ಲ, ಸಾಕಷ್ಟು ಪ್ರತಿಭೆ ಹೊಂದಿದ್ದರು.

ಅಂದಿನ ಕಾಲದ ನಟಿಯರಲ್ಲಿ ಅಂತಹುದೊಂದು ವಿಶೇಷತೆಯಿತ್ತು. ಅದೇನೆಂದರೆ, ನಟಿಯೊಬ್ಬರು ಸೌತ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರೆ, ಅವರು ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಹೀಗೆ ನಾಲ್ಕೂ ಭಾಷೆಗಳಲ್ಲೂ ಅಭಿನಯಿಸುತ್ತಿದ್ದರು. ಎಲ್ಲರೂ ಹಾಗೇ ಎಂದು ಹೇಳಲು ಅಸಾಧ್ಯವಾಗಿದ್ದರೂ ಬಹಳಷ್ಟು ನಟಿಯರು ನಾಲ್ಕೂ ಭಾಷೆಗಳಲ್ಲಿ ನಟಿಸುವುದು ಪಕ್ಕಾ ಆಗಿತ್ತು. ಅದರಲ್ಲೂ ಕೆಲವರು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿ ಪಂಚಭಾಷಾ ತಾರೆ ಎನಿಸಿಕೊಂಡವರೂ ಇದ್ದರು. ನಾಲ್ಕು ಭಾಷೆಗಳಲ್ಲಿ ನಟಿಸಿ ಚತುರ್ಭಾಷಾ ತಾರೆ ಎನಿಸಿಕೊಂಡವರ ಸಾಲಿನಲ್ಲಿ ನಿಲ್ಲುವ ಒಬ್ಬರು ನಟಿ ಜಯಲಕ್ಷ್ಮಿ. 

ನಟ ಚಂದ್ರಕಾಂತ್‌ ಸಾವು ಹತ್ಯೆಯೋ ಆತ್ಮಹತ್ಯೆಯೋ? ಶಿಲ್ಪಾ ತಂದೆ ಸಂಶಯ ವ್ಯಕ್ತಪಡಿಸಿ ಹೇಳಿದ್ದೇನು?

ಈ ನಟಿ ಜಯಲಕ್ಷ್ಮಿ ಅವರನ್ನು ಫಟಾಫಟ್ ಜಯಲಕ್ಷ್ಮಿ (Fatafat Jayalakhmi) ಎನ್ನಲಾಗುತ್ತಿತ್ತು. ಕಾರಣ, ಅವರೊಂದು ಸಿನಿಮಾದಲ್ಲಿ ಪದೇಪದೇ 'ಫಟಾಫಟ್' ಎಂಬ ಡೈಲಾಗ್ ಹೇಳಿದ್ದರು. ಹೀಗಾಗಿ, ಅವರನ್ನು ಹಾಗೇ ಕರೆದು ವಿಭಿನ್ನವಾಗಿ ಗುರುತಿಸುತ್ತಿದ್ದರು. ನಟಿ ಜಯಲಕ್ಷ್ಮಿ ಅವರು ಅಕ್ಕಿನೇನಿ ನಾಗೇಶ್ವರರಾವ್ ನಟನೆಯ 'ಇದ್ದರು ಅಮ್ಮಾಯಿಲು' ಚಿತ್ರದ ಮೂಲಕ 1972ರಲ್ಲಿ ನಟನೆಗೆ ಎಂಟ್ರಿ ಕೊಟ್ಟರು. ಆಗ ಅವರಿಗೆ ಕೇವಲ 14 ವರ್ಷ ವಯಸ್ಸು. ಮುಂದೆ ಎರಡು ವರ್ಷ ಆಗುವುದರೊಳಗೆ ನಟಿ ಜಯಲಕ್ಷ್ಮಿ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಅಲ್ಲಿ ಕೆ ಬಾಲಚಂದರ್ ನಿರ್ದೇಶನದ 'ಅವಳ್ ಒರು ತೊಡರ್ ಕಥೈ' ಮೂಲಕ ಮನೆಮಾತಾದರು. 

ದೊಡ್ಡವರೆಲ್ಲ ಜಾಣರಲ್ಲ, ಸದ್ಯದಲ್ಲೇ ಬರಲಿದೆ 'ಪಾತರಗಿತ್ತಿ' ಸೃಷ್ಟಿಕರ್ತನ ಪೆನ್‌ ಡ್ರೈವ್!

ಕೆ ಬಾಲಚಂದರ್ ನಿರ್ದೇಶನದ 'ಅವಳ್ ಒರು ತೊಡರ್ ಕಥೈ'ನಲ್ಲಿ ನಟಿ ಜಯಲಕ್ಷ್ಮಿ ಹೇಳಿದ 'ಫಟಾಫಟ್' ಡೈಲಾಗ್ ಮೂಲಕ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡರು. ಬಳಿಕ ಅವರು ಕನ್ನಡದ 'ಒಂದು ಹೆಣ್ಣು ಆರು ಕಣ್ಣು' ಸಿನಿಮಾದಲ್ಲಿಯೂ ನಟಿಸಿ ಜನಮೆಚ್ಚುಗೆ ಗಳಿಸಿಕೊಂಡರು. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಟಿಸುವ ಮೂಲಕ ಜಯಲಕ್ಷ್ಮಿ ಅವರು ಸ್ಟಾರ್ ಪಟ್ಟ ಪಡೆದುಕೊಂಡರು. 

ನಾನಿನ್ನೂ ಮದುವೆಯಾಗಿಲ್ಲ, ಉಪೇಂದ್ರರ 'A'ಸಿನಿಮಾ ನನ್ನ ತಲೆ ಹಾಳು ಮಾಡಿದೆ; ನಟಿ ಚಾಂದಿನಿ

ನಟರಾದ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಕೃಷ್ಣ, ಎನ್‌ಟಿಆರ್‌ ಮುಂತಾದವರೊಂದಿಗೆ ತೆರೆ ಹಂಚಿಕೊಂಡು ನಟಿ ಜಯಲಕ್ಷ್ಮೀ ಅವರನ್ನು ಎಲ್ಲರೂ ಇನ್ನೇನು ಅವರು ಲೇಡಿ ಸೂಪರ್ ಸ್ಟಾರ್ ಆಗುತ್ತಾರೆ ಎಂದೇ ಭಾವಿಸಿದ್ದರು. ಆದರೆ, ಹಣೆಬರಹವೋ ಎಂಬಂತೆ, ತಮಿಳು ನಾಡು ಆರಾಧ್ಯ ದೈವ ಎಂಜಿಆರ್‌ ಅವರ ಸಂಬಂಧಿಯನ್ನು ಮದುವೆಯಾಗಿ ಸಿನಿಮಾರಂಗ ತೊರೆದರು. ಆದರೆ, ಸಿನಿಮಾದಲ್ಲಿ ಗೆಲುವು ಸಿಕ್ಕಿದ್ದರೂ ದಾಂಪತ್ಯ ಜೀವನ ಅವರು ಅಂದುಕೊಂಡಂತೆ ನಡೆಯದೇ ಸೋಲುಂಟಾಯಿತು. 21 ನವೆಂಬರ್ 1980ರಂದು ನಟಿ ಜಯಲಕ್ಷ್ಮಿಯವರು ಆತ್ಮಹತ್ಯೆಗೆ ಶರಣಾದರು. 

ಯಶ್ ನಿರ್ಮಾಣ-ನಟನೆಯ 'ರಾಮಾಯಣ' ಮೇಲೆ ಬಿತ್ತು ಕೇಸ್; ಶೂಟಿಂಗ್‌ ಮುಂದೂಡಿದ ಟೀಮ್!

ಹೀಗೆ, ತಮ್ಮ 14ನೆಯ ವಯಸ್ಸಿಗೇ ಸಿನಿಮಾನಟಿಯಾಗಿ, 16 ವರ್ಷಕ್ಕೇ ಸ್ಟಾರ್ ನಟಿಯಾಗಿ ಮೆರೆದಿದ್ದ ನಟಿ ಜಯಲಕ್ಷ್ಮಿ ಅವರು ಕೇವಲ 22ನೆಯ ವರ್ಷದಲ್ಲಿ ಆತ್ಮಹತ್ಯೆಗೆ ಶರಣಾಗಿ ತಮ್ಮ ಬದುಕನ್ನು ದುರಂತದಲ್ಲಿ ಮುಗಿಸಿದರು. ಈಗಲೂ ಸೌತ್ ಇಂಡಿಯಾ ಸಿನಿಪ್ರೇಮಿಗಳು ಫಟಾಫಟ್ ಜಯಲಕ್ಷ್ಮಿ ಅವರನ್ನು ಮರೆತಿಲ್ಲ. ಅಂದಹಾಗೆ, ಜಯಲಕ್ಷ್ಮೀ ಅವರನ್ನು ತಮ್ಮ ಫೇವರೆಟ್ ನಟಿ ಎಂದು ನಟ ರಜನಿಕಾಂತ್ ಅವರು ಹಲವಾರು ಕಡೆ ಹೇಳಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios