Asianet Suvarna News Asianet Suvarna News

ಪ್ಯಾನ್ ಇಂಡಿಯಾ 'ಹಲಗಲಿ'ಯಿಂದ ಹೊರನಡೆದ ಡಾರ್ಲಿಂಗ್ ಕೃಷ್ಣ, ಒಳಬರುವರೇ ಡಾಲಿ ಧನಂಜಯ್?

ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆಯನ್ನು ಸಿನಿಮಾ ನಿರ್ದೇಶಕ ಸುಕೇಶ್ ಡಿಕೆ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾದ್ದರಿಂದ ಆ ಕಾಲ ಘಟ್ಟವನ್ನು..

Actor Dolly Dhananjay is in talks to replace Darling Krishna in upcoming Halagali srb
Author
First Published May 23, 2024, 7:56 PM IST

ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ (Darling Krishna) ತಮ್ಮ ಮೊದಲ ಪ್ಯಾನ್ ಇಂಡಿಯಾ 'ಹಲಗಲಿ' ಸಿನಿಮಾದಿಂದ ಹೊರಬಂದಿದ್ದಾರೆ. ಈ ಜಾಗಕ್ಕೆ ಈಗ ನಟ ಡಾಲಿ ಧನಂಜಯ್ ಹೆಸರು ಕೇಳಿ ಬರುತ್ತಿದೆ. ಈ ಒಂದೇ ಚಿತ್ರಕ್ಕೆ 3 ವರ್ಷ ಡೇಟ್ಸ್ ಕೊಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ  ಡಾರ್ಲಿಂಗ್ ಕೃಷ್ಣ ಈ ಸಿನಿಮಾದಿಂದ ಹೊರನಡೆದಿದ್ದಾರೆ. ಖಾಲಿಯಾಗಿರುವ ಈ ಸ್ಥಾನಕ್ಕೆ ಈಗ ನಟ ಡಾಲಿ ಧನಂಜಯ್ (Dolly Dhananjay) ಹೆಸರು ಕೇಳಿ ಬರುತ್ತಿದೆ. 

ಈ ಬಗ್ಗೆ ಮಾತನಾಡಿ ‘ಹಲಗಲಿ’ (Halagali Film) ಸಿನಿಮಾ ಅತೀ ದೊಡ್ಡ ಪ್ರಾಜೆಕ್ಟ್. ಬೇರೆ ಸಿನಿಮಾಗಳಲ್ಲಿ ನಟಿಸುತ್ತಾ ಈ ಚಿತ್ರದಲ್ಲಿ ನಟಿಸಲು ನಾನು ಸಿದ್ಧನಿದ್ದೆ. ಆದರೆ ಚಿತ್ರತಂಡ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ನನಗೆ ಮೂರು ವರ್ಷ ಬೇರೆ ಸಿನಿಮಾದಲ್ಲಿ ನಟಿಸದೇ ಈ ಸಿನಿಮಾಗಾಗಿ ಮೀಸಲಿಡಲು ಸಾಧ್ಯವಿಲ್ಲ' ಎಂದಿರುವ ಡಾರ್ಲಿಂಗ್ ಕೃಷ್ಣ, ತಾವು ಈ ಸಿನಿಮಾದಿಂದ ಹೊರಬಂದಿರುವ ಬಗ್ಗೆ ತಿಳಿಸಿದ್ದಾರೆ.

ರಜನಿಕಾಂತ್ ಫೇವರೆಟ್ ಸ್ಟಾರ್ ನಟಿಯ ದುರಂತ ಸಾವು 22ರಲ್ಲೇ ಯಾಕೆ ಸಂಭವಿಸಿತು?

ಈ ಬಗ್ಗೆ ಡೀಟೇಲ್‌ ಆಗಿ ಮಾತನಾಡಿರುವ ನಟ ಡಾರ್ಲಿಂಗ್ ಕೃಷ್ಣ, 'ಹಲಗಲಿ' ಸಿನಿಮಾಗಾಗಿ ನಾನು ಕಳೆದ 6 ತಿಂಗಳಿಂದ ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಇತ್ತೀಚೆಗೆ ಫಾದರ್ ಸಿನಿಮಾದ ಆಫರ್ ಸಿಕ್ಕಿದೆ. ಇದಾದ ನಂತರ ಮತ್ತೆ ನಿರ್ದೇಶಕ ಶಶಾಂಕ್ ಜೊತೆ ಹೊಸ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಆದರೆ ‘ಹಲಗಲಿ’ ಚಿತ್ರತಂಡ ಈಗ 3 ವರ್ಷದ ಕಮೀಟ್‌ಮೆಂಟ್ ಕೇಳಿದೆ. ಆದರೆ, ನಾನು ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಅವುಗಳ ಜೊತೆ ಈ ಚಿತ್ರ ಮಾಡುವುದು ಸಾಧ್ಯವಿದ್ದರೆ ಹೊರಬರುತ್ತಿರಲಿಲ್ಲ' ಎಂದಿದ್ದಾರೆ. 

ನಟ ಚಂದ್ರಕಾಂತ್‌ ಸಾವು ಹತ್ಯೆಯೋ ಆತ್ಮಹತ್ಯೆಯೋ? ಶಿಲ್ಪಾ ತಂದೆ ಸಂಶಯ ವ್ಯಕ್ತಪಡಿಸಿ ಹೇಳಿದ್ದೇನು?

ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆಯನ್ನು ಸಿನಿಮಾ ನಿರ್ದೇಶಕ ಸುಕೇಶ್ ಡಿಕೆ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾದ್ದರಿಂದ ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದೆ. ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ. ಇದೊಂದು ಅಪರೂಪದ ಕಥನವಾಗಿದ್ದರಿಂದ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೀಗ ಆಯ್ಕೆಯಾಗಿದ್ದ ಹೀರೋ ಡಾರ್ಲಿಂಗ್ ಕೃಷ್ಣ ಈ ಚಿತ್ರದಿಂದ ಹೊರಬಂದಿದ್ದಾರೆ. 

ಲೀಕ್ ಆಗಲಿದೆ 'ಪಾತರಗಿತ್ತಿ' ಸೃಷ್ಟಿಕರ್ತನ ಪೆನ್‌ ಡ್ರೈವ್ ಸ್ಟೋರಿ..! ದೊಡ್ಡವರೆಲ್ಲ ಜಾಣರಲ್ಲ ಅಂದ್ರೇನು?

ಇನ್ನು ನಟ ಧನಂಜಯ್ ಸದ್ಯ ಪರಮ್ ನಿರ್ದೇಶನದ 'ಕೋಟಿ' ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದಲ್ಲಿ ತೀರಾ ವಿಭಿನ್ನ ಎನಿಸುವ ಪಾತ್ರದಲ್ಲಿ ನಟ ಧನಂಜಯ್ ಅಭಿನಯಿಸಿದ್ದಾರೆ ಎಂದು ಪರಮ್ ಹೇಳಿದ್ದಾರೆ. ಇದೀಗ, ನಟ ಡಾರ್ಲಿಂಗ್ ಕೃಷ್ಣ ಹೊರಬಂದಿರುವ ಹಲಗಲಿ ಸಿನಿಮಾದ ನಾಯಕನ ಸ್ಥಾನಕ್ಕೆ ನಟ ಧನಂಜಯ್ ಹೆಸರು ಕೇಳಿ ಬರುತ್ತಿದೆ. ಇದು ಅಧಿಕೃತ ಘೋಷಣೆಯಲ್ಲ. ಆದರೆ, ನಟ ಡಾರ್ಲಿಂಗ್ ಕೃಷ್ಣ ಹೊರಬಂದಿರುವುದಂತೂ ಪಕ್ಕಾ. ಏಕೆಂದರೆ, ಅದನ್ನು ಸ್ವತಃ ನಟ ಕೃಷ್ಣ ಅವರೇ ಸ್ಪಷ್ಟಪಡಿಸಿದ್ದಾರೆ. 

ನಾನಿನ್ನೂ ಮದುವೆಯಾಗಿಲ್ಲ, ಉಪೇಂದ್ರರ 'A'ಸಿನಿಮಾ ನನ್ನ ತಲೆ ಹಾಳು ಮಾಡಿದೆ; ನಟಿ ಚಾಂದಿನಿ

Latest Videos
Follow Us:
Download App:
  • android
  • ios