ಬೀದೀಲಿ ಹೋಗ್ತಿರೋ ಮಾರಿಯನ್ನು ಮನೆಗೇ ಕರ್ಕೊಂಡು ಬಿಟ್ಯಲ್ಲಮ್ಮಾ ಭೂಮಿಕಾ ಅಂತಿದ್ದಾರೆ ಫ್ಯಾನ್ಸ್​!

ಮಾನ್ಯಳನ್ನು ಮನೆಯೊಳಕ್ಕೆ ಕರೆದುಕೊಂಡು ಭೂಮಿಕಾ ತಪ್ಪು ಮಾಡಿದ್ಲಾ? ಹೀಗ್ಯಾಕೆ ಮಾಡಿದ್ಯಮ್ಮಾ ಅಂತಿದ್ದಾರೆ ನೆಟ್ಟಿಗರು.
 

Did Bhumika make a mistake by taking Manya inside the house in Amrutadhare suc

ಗೌತಮ್​ ಲೈಫ್​ನಲ್ಲಿ ಮಾನ್ಯಳ ಎಂಟ್ರಿ ಆಗಿದೆ. ಗೌತಮ್​ ಮತ್ತು ಮಾನ್ಯ ಯಾರೆಂದು ತಿಳಿಯದ ಭೂಮಿಕಾ, ಮಾನ್ಯಳನ್ನು ಆಸ್ಪತ್ರೆಗೆ ಸೇರಿಸಿ ಅವಳನ್ನು ಕಾಪಾಡಿದ್ದಾಳೆ. ಸಾಲದು ಎಂಬುದಕ್ಕೆ ಮನೆಗೇ ಕರೆದುಕೊಂಡು ಬಂದಿದ್ದಾಳೆ. ಇದೀಗ ಮಾನ್ಯಳಿಗೆ ಹುಷಾರ್​ ಆಗಿದೆ. ಇತ್ತ ಮಾನ್ಯಳಿಗೆ ಹುಷಾರಾಗಿದ್ದನ್ನು ನೋಡಿ ಗೌತಮ್​ ಚಿಕ್ಕಮ್ಮ ಶಕುಂತಲಾ ದೇವಿ ಫುಲ್​  ಟೆನ್ಷನ್​ ಮಾಡಿಕೊಂಡಿದ್ದಾಳೆ. ಅವಳು ಟೆನ್ಷನ್​ ಮಾಡಿಕೊಂಡಿರುವುದಕ್ಕೆ  ಕಾರಣವೂ ಇದೆ. ಏಕೆಂದರೆ ಮಾನ್ಯಳನ್ನು ಕೂಡಿ ಹಾಕಿದ್ದು ಅವಳೇ. ಆದರೆ ಗೌತಮ್​ಗೂ ಮಾನ್ಯಗೂ ಏನು ಸಂಬಂಧ ಏನು ಎನ್ನುವುದು ಗೊತ್ತಿಲ್ಲ. ಆದರೆ ಇದೀಗ ಮಾನ್ಯ ಗೌತಮ್​ಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾಳೆ.

ಇಲ್ಯಾಕೆ ಬಂದಿ ಎಂದು ಗೌತಮ್​ ಕೇಳಿದ್ದಾನೆ. ಅದಕ್ಕೆ ಮಾನ್ಯ ತನ್ನನ್ನು ರಕ್ಷಿಸಿರೋ ಭೂಮಿಕಾಳನ್ನುಹೊಗಳುತ್ತಲೇ ತಮ್ಮಿಬ್ಬರ ಬಗ್ಗೆ ಯಾಕೆ ಮುಚ್ಚಿಟ್ಟಿದ್ದು, ಒಂದು ವೇಳೆ ಈ ವಿಷ್ಯ ನಿನ್ನ ಪತ್ನಿಗೆ ಗೊತ್ತಾದರೆ ಏನಾಗುತ್ತದೆ ಗೊತ್ತಿದ್ಯಾ ಎಂದು ಪ್ರಶ್ನಿಸುತ್ತಾಳೆ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿದೆ. ಏನು ಮಾತನಾಡಬೇಕು ಎಂದು ತಿಳಿಯುತ್ತಿಲ್ಲ. ಇದನ್ನು ನೋಡಿ ಅಮೃತಧಾರೆ ಫ್ಯಾನ್ಸ್​ಗೂ ಶಾಕ್ ಆಗಿದೆ. ಬೀದೀಲಿ ಹೋಗ್ತಿರೋ ಮಾರಿಯನ್ನು ಮನೆಗೆ ಯಾಕೆ ಕರ್ಕೊಂಡು ಬಂದ್ಯಮ್ಮಾ ಭೂಮಿಕಾ ಎಂದು ಕೇಳುತ್ತಿದ್ದಾರೆ. 

ಕೊಟ್ಟ ಮಾತು ಉಳಿಸಿಕೊಂಡ ಉರ್ಫಿ ಜಾವೇದ್​: ನಟಿಯ ವಿಶೇಷ ಉಡುಗೊರೆಗೆ ಫ್ಯಾನ್ಸ್​ ಫಿದಾ

ಅಷ್ಟಕ್ಕೂ, ಗೌತಮ್​ ಮತ್ತು ಭೂಮಿಕಾ ಒಂದಾಗುವ ಹೊತ್ತಿನಲ್ಲಿ ಈ ಅವಘಡ ಸಂಭವಿಸಿರುವುದು ಅಮೃತಧಾರೆ ಅಭಿಮಾನಿಗಳಿಗೆ ಬೇಸರ ತರಿಸಿದೆ.  ಹೇಗಾದರೂ ಮಾಡಿ ಭೂಮಿಕಾಗೆ ಪ್ರೀತಿ ನಿವೇದನೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದ ಗೌತಮ್​. ಇದೇ ಕಾರಣಕ್ಕೆ ಭೂಮಿಕಾಳನ್ನು ಕರೆದುಕೊಂಡು ಗಾರ್ಡನ್​ಗೆ ಹೋಗಿದ್ದ. ಮುಂದೇನು ಮಾಡುವುದೋ ತಿಳಿಯದೇ  ಗೆಳೆಯ ಆನಂದ್​ಗೆ ಕಾಲ್​ ಮಾಡಿದ್ದ.  ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಾಳೆ. ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಮಾನ್ಯಳ ಎಂಟ್ರಿಯಾಗಿದೆ. 

 ಭೂಮಿಕಾ ಮಾನ್ಯಳ ಆರೈಕೆಯಲ್ಲಿ ತೊಡಗಿದ್ದಳು. ಆಕೆ ತಮ್ಮ ಕಾರಿಗೆ ಅಡ್ಡ ಬಂದು ಪ್ರಜ್ಞೆ ತಪ್ಪಿರುವ ಆತಂಕ ಭೂಮಿಕಾಗೆ. ಆದರೆ ಅಲ್ಲಿಗೆ ಬಂದ ಶಕುಂತಲಾ ಆಸ್ಪತ್ರೆಯಲ್ಲಿಯೇ ಮಾನ್ಯಳನ್ನು ಸಾಯಿಸಲು ಹೊರಟಿದ್ದಳು. ಇದೇ ಕಾರಣಕ್ಕೆ ಭೂಮಿಕಾಗೆ ಮನೆಗೆ ಹೋಗುವಂತೆ ಹೇಳಿದ್ದಳು. ಒಲ್ಲದ ಮನಸ್ಸಿನಿಂದ ಭೂಮಿಕಾ ಮನೆಗೆ ಬಂದಿದ್ದಳು. ಭೂಮಿಕಾ ಇರುವಾಗ ನೀನು ಹೇಗೆ ಬದುಕಿ ಬರುತ್ತಿ ನೋಡೋಣ ಎಂದಿದ್ದಳು ಶಕುಂತಲಾ. ಹೇಗಾದರೂ ಮಾಡಿ ಆಸ್ಪತ್ರೆಯಲ್ಲಿಯೇ ಮುಗಿಸುವ ಸ್ಕೆಚ್​ ಹಾಕಿದ್ದಳು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಮಾನ್ಯ ಯಾರು ಎಂಬ ಬಗ್ಗೆ ಸೀಕ್ರೇಟ್​ ಇಡಲಾಗಿದೆ. 

ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ಅಧಿಕಾರಿ ಸಮೀರ್​ ವಾಂಖೆಡೆ!

Latest Videos
Follow Us:
Download App:
  • android
  • ios