ಮಹಾಭಾರತದ ಈ ಪ್ರಶ್ನೆಗೆ ಉತ್ತರಿಸಿದ್ರೆ 25 ಲಕ್ಷ! ಬೆಂಗಳೂರಿನ ಯುವಕನ ಬ್ಯಾಡ್​ಲಕ್​- ನಿಮ್ಗೆ ಗೊತ್ತಾ ಉತ್ತರ?

ಮಹಾಭಾರತದ ಈ ಪ್ರಶ್ನೆಗೆ ಉತ್ತರಿಸಿದ್ರೆ 25 ಲಕ್ಷ ಪಡೆದುಕೊಳ್ಳಬಹುದಾದ ಬೆಂಗಳೂರಿನ ಯುವಕ ಪ್ರಶ್ನೆಗೆ ತಪ್ಪು ಉತ್ತರ ಹೇಳಿ ಸೋತಿದ್ದಾರೆ.  ನಿಮ್ಗೆ ಗೊತ್ತಾ ಉತ್ತರ?
 

KBC 16 Mahabharat Question That Made   First Contestant Lose Rs 25 Lakh On Amitabh Bachchan Show suc

ಕೌನ್ ಬನೇಗಾ ಕರೋರ್​ಪತಿಯ 16ನೇ ಸೀಸನ್​ ಶುರುವಾಗಿದೆ. ಈ ಸೀಸನ್​ನಲ್ಲಿಯೂ  ನಿರೂಪಕರಾಗಿ ಬಿಗ್​ ಬಿ ಅಮಿತಾಭ್​ ಬಚ್ಚನ್​  ಮರಳಿದ್ದಾರೆ. ಕಳೆದ ಎಲ್ಲಾ ಸಂಚಿಕೆಗಳನ್ನೂ ನಡೆಸಿಕೊಟ್ಟಿರುವ ಅಮಿತಾಭ್​ ಈ ಬಾರಿ ಇರುತ್ತಾರೆಯೋ ಇಲ್ಲವೇ ಎನ್ನುವ ಸಂದೇಹವಿತ್ತು. ಆದರೆ ಮತ್ತೆ ಪುನರಾಗಮನ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಈ 16ನೇ ಸೀಸನ್​ನ  ನಿನ್ನೆ ಅಂದ್ರೆ ಆಗಸ್ಟ್ 12 ರಂದು ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆಯೊಂದಿಗೆ ಪ್ರಸಾರವಾಯಿತು. ಕುತೂಹಲದ ವಿಷಯವೆಂದರೆ, ಮೊದಲಿಗೆ ಹಾಟ್​ ಸೀಟ್​ ಮೇಲೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿದ್ದು, ಬೆಂಗಳೂರು ಮೂಲದ ಉತ್ಕರ್ಷ್ ಬಾಕ್ಸಿ ಅವರಿಗೆ. ಎಂಜಿನಿಯರ್​ ಹಾಗೂ ಗಾಯಕ  ಆಗಿರುವ ಉತ್ಕರ್ಷ್​ ಅವರು 25 ಲಕ್ಷ ರೂಪಾಯಿ ಗೆಲ್ಲುವ ಸುಲಭದ ಅವಕಾಶಗಳನ್ನು ಸುಲಭದಲ್ಲಿಯೇ ಕಳೆದುಕೊಂಡು ಬಿಟ್ಟರು. ಮೂರುವರೆ ಲಕ್ಷ ರೂಪಾಯಿಗಳಿಗೆ ಅವರು ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಅಷ್ಟಕ್ಕೂ  25 ಲಕ್ಷ ಮೌಲ್ಯದ ಪ್ರಶ್ನೆಗೆ ಅಮಿತಾಭ್​ ಕೇಳಿದ್ದು ಮಹಾಭಾರತದ ಪ್ರಶ್ನೆಯನ್ನು. 12.50 ಲಕ್ಷ ರೂಪಾಯಿಗಳವರೆಗೆ ಚೆನ್ನಾಗಿಯೇ ಆಡಿದ್ದ ಉತ್ಕರ್ಷ್​ ಅವರನ್ನು ಅಮಿತಾಭ್​ ಕೊಂಡಾಡಿದರು. ಕೊನೆಗೆ 25 ಲಕ್ಷದ ಪ್ರಶ್ನೆ ಇತ್ತು. ಇದು ಗೆದ್ದರೆ 25 ಲಕ್ಷ, ಸೋತರೆ 3.50 ಲಕ್ಷ ರೂಪಾಯಿ ಗೆಲ್ಲುವ ಅವಕಾಶವಿತ್ತು. ಅಷ್ಟಕ್ಕೂ ಅಮಿತಾಭ್​ ಅವರು ಕೇಳಿದ ಪ್ರಶ್ನೆ ಏನೆಂದರೆ,  "ಮಹಾಭಾರತದ ಪ್ರಕಾರ, ಅಂಬಾಗೆ ಮಾಲೆಯನ್ನು ದೇವರೊಬ್ಬರು ಉಡುಗೊರೆಯಾಗಿ ನೀಡುತ್ತಾರೆ. ಈ ಮಾಲೆಯನ್ನು  ಧರಿಸಿದವರು  ಭೀಷ್ಮನನ್ನು ಕೊಲ್ಲುತ್ತಾರೆ ಎಂದು ಆ ದೇವರು ಹೇಳುತ್ತಾರೆ. ಹೀಗೆ ಹೇಳಿದ ದೇವರು ಯಾರು ಎನ್ನುವುದು. ಈ ಪ್ರಶ್ನೆಗೆ ಉತ್ಕರ್ಷ್​ ಅವರಿಗೆ ಉತ್ತರ ತಿಳಿಯಲಿಲ್ಲ. ಅವರು ಲೈಫ್​ಲೈನ್​ ಬಳಸಿಕೊಂಡು  'ವಿಡಿಯೋ ಕಾಲ್ ಎ ಫ್ರೆಂಡ್' ಬಳಿಸಿದರು. ಅವರ ಸ್ನೇಹಿತರು ಇದಕ್ಕೆ ಉತ್ತರವಾಗಿ ಭಗವಾನ್ ಶಿವ ಎಂದರು. ಆದರೆ  ಉತ್ಕರ್ಷ್ ಅದರ ಬಗ್ಗೆ ಸಾಕಷ್ಟು ಖಚಿತವಾಗಿರಲಿಲ್ಲ. ಆದ್ದರಿಂದ, ಅವರು ತಮ್ಮ ಅಂತಿಮ ಲೈಫ್​ಲೈನ್​ ಆಗಿ  ಡಬಲ್ ಡಿಪ್ ಅನ್ನು ತೆಗೆದುಕೊಂಡರು.

ಐಶ್ವರ್ಯ ಜತೆ ರೊಮಾನ್ಸ್​ಗೆ ಕಾಯ್ತಿದ್ದ ಶಾರುಖ್​, ಐದು ಚಿತ್ರಗಳಿಂದ ನಟಿಯನ್ನು ಹೊರಹಾಕಿದ್ದು ಯಾಕೆ?

ಹೀಗೆ ಮಾಡಿದ ಬಳಿಕ ಅವರು ಡಿ ಅನ್ನು ಆಯ್ಕೆ ಮಾಡಿಕೊಂಡರು. ಇದು  ವಾಯುದೇವ ಆಗಿತ್ತು. ಆದರೆ ಆ ಉತ್ತರ ಕೂಡ ತಪ್ಪಾಯಿತು. ಉತ್ಕರ್ಷ್​ ಅವರು ಅಲ್ಲಿಯೇ ಆಟ ಬಿಟ್ಟಿದ್ದರೆ 12.5 ಲಕ್ಷ ರೂ. ಗೆಲ್ಲುತ್ತಿದ್ದರು. ಆದರೆ 25 ಲಕ್ಷದ ಆಸೆಯಲ್ಲಿ ಎಲ್ಲಾ ಕಳೆದುಕೊಂಡು 3.5 ಲಕ್ಷ ರೂಪಾಯಿಗೆ ತೃಪ್ತಿಪಟ್ಟಿಕೊಳ್ಳಬೇಕಾಯಿತು. ಹಾಗಾದರೆ ಈ ದೇವರು ಯಾರು ಎನ್ನುವುದು ನಿಮಗೆ ಗೊತ್ತಾ? ಗೊತ್ತಿಲ್ಲದವರಿಗೆ ಉತ್ತರ ಅಂಬಾಗೆ ಈ ಹಾರ ನೀಡಿದ ದೇವರು  ಕಾರ್ತಿಕೇಯ. ಈ ಎಪಿಸೋಡ್‌ನ ಕ್ಲಿಪ್ ಅನ್ನು ಸೋನಿ ಟಿವಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದೆ.  

ಅಂದಹಾಗೆ, ಕೌನ್ ಬನೇಗಾ ಕರೋರ್​ಪತಿ 16ರಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಮಾಡಲಾಗಿದೆ.  'ಸೂಪರ್ ಸವಾಲ್' ಮತ್ತು 'ದುಗ್ನಾಸ್ತ್ರ' ಎಂಬುದನ್ನು ಪರಿಚಯಿಸಲಾಗಿದೆ.  ಸ್ಪರ್ಧಿಯು ಸೂಪರ್ ಸವಾಲ್ ಉತ್ತರಿಸಲು ಪ್ರಯತ್ನಿಸುವ ಮೂಲಕ ಮೊತ್ತವನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯಬಹುದಾಗಿದೆ.  ಇದೇ ವೇಳೆ ಅಮಿತಾಭ್​, ಸೆಟ್​ ಬಗ್ಗೆ ಹೇಳಿದ್ದಾರೆ. ಈ ಸೆಟ್ ಸಾಕಷ್ಟು ಸಂಕೀರ್ಣವಾಗಿದೆ. ಒಂದು ಸಾವಿರ ಲೈಟ್‌ಗಳು, ಕಂಪ್ಯೂಟರ್‌ಗಳು ಇಲ್ಲಿವೆ.  ಸುಮಾರು 10-12 ಕ್ಯಾಮೆರಾಗಳಿವೆ. ಎಲ್ಲವನ್ನೂ ರೆಕಾರ್ಡ್ ಮಾಡಲಾಗುತ್ತದೆ ಎಂದಿದ್ದಾರೆ. 

ಸೇಮ್​-ಟು-ಸೇಮ್​ ಡ್ರೆಸ್​ನಲ್ಲಿ ಮಿಂಚಿದ ಸೀತಾ- ಶ್ರಾವಣಿ! ಇವರಿಬ್ಬರ ಸಂಬಂಧವಾದ್ರೂ ಏನು?

Latest Videos
Follow Us:
Download App:
  • android
  • ios