Asianet Suvarna News Asianet Suvarna News

KBC 16: ಮದುವೆಯಾಗದ ಮಹಿಳೆಯರು ಸಂಸಾರಕ್ಕೆ ಭಾರ ಎಂದ ಸ್ಪರ್ಧಿಗೆ ಅಮಿತಾಭ್ ಬಚ್ಚನ್​ ಕ್ಲಾಸ್​! ​

ಮದುವೆಯಾಗದ ಮಹಿಳೆಯರು ಸಂಸಾರಕ್ಕೆ ಭಾರ ಎಂದು ಕೌನ್​ ಬನೇಗಾ ಕರೋರ್​ಪತಿ  ಬಂದ ಸ್ಪರ್ಧಿ ಹೇಳಿದಾಗ ಅಮಿತಾಭ್​ ಬಚ್ಚನ್​ ಹೇಳಿದ್ದೇನು? 
 

KBC 16 Amitabh Bachchan calls out contestant for calling unmarried women a burden suc
Author
First Published Aug 30, 2024, 6:10 PM IST | Last Updated Aug 30, 2024, 6:10 PM IST

ಅಮಿತಾಭ್​ ಬಚ್ಚನ್​ (Amitabh Bachchan) ಬಾಲಿವುಡ್​ ಕಂಡ ಅಪರೂಪದ ನಟ. ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಈ 80ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್​ ಬಚ್ಚನ್​ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ.  80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್​ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್​ ಬಚ್ಚನ್​ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಕೌನ್​ ಬನೇಗಾ ಕರೋರ್​ಪತಿ. 

 ಕಳೆದ 24 ವರ್ಷಗಳಿಂದ ಈ ಕಾರ್ಯಕ್ರಮದ 15 ಕಂತುಗಳನ್ನು ಪೂರೈಸಿರುವ ನಟ ಈಗ 16ನೇ ಕಂತಿಗೆ ಬಂದಿದ್ದಾರೆ. ಇದು ಕೇವಲ ಪ್ರಶ್ನೋತ್ತರದ ವೇದಿಕೆ ಆಗಿರದೇ ನಟ ಕೆಲವು ಸಲ ಬುದ್ಧಿಮಾತುಗಳನ್ನೂ ಹೇಳುವುದು ಇದೆ. ಇದೀಗ ಮದುವೆಯಾಗದ ಹೆಣ್ಣುಮಕ್ಕಳ ಬಗ್ಗೆ ಅಲ್ಲಿ ಬಂದಿರುವ ಸ್ಪರ್ಧಿ ಮಾತನಾಡಿರುವುದನ್ನು ಕೇಳಿ ಕೋಪಗೊಂಡ ನಟ ಅ ವರಿಗೆ ಕ್ಲಾಸ್​​ ಮಾಡುವ ಮೂಲಕ ಎಲ್ಲರ ಶಹಬ್ಬಾಸ್​ಗಿರಿ ಪಡೆದುಕೊಂಡಿದ್ದಾರೆ.  ಕೃಷ್ಣ ಸುಲೇಖರ್ ಎನ್ನುವ ಸ್ಪರ್ಧಿ ಕೋವಿಡ್​ ಸಮಯದಲ್ಲಿ ತಮಗಾಗಿರುವ ನೋವನ್ನು ಹಂಚಿಕೊಳ್ಳುತ್ತಿದ್ದರು. ಇದನ್ನು ಬಿಗ್​-ಬಿ ಅತ್ಯಂತ ಶಾಂತಚಿತ್ತದಿಂದಲೇ  ಆಲಿಸುತ್ತಿದ್ದರು. ಆದರೆ ಒಂದು ಹಂತದಲ್ಲಿ ಆಗಿದ್ದೇ ಬೇರೆ.

ನನ್ನ ಸೈಜ್​ 41, ಇಲ್ಲೇ ಕೊಡ್ಲಾ ಅಥವಾ ಅಲ್ಲಿಗೆ ಬರ್ತಿಯಾ? ನಿರ್ಮಾಪಕನಿಗೆ ಹೀಗೆ ಹೇಳಿದ್ರಂತೆ ಖುಷ್ಬೂ!

ಕೋವಿಡ್​ನ  ಕರಾಳ ಅಧ್ಯಾಯದ ಕುರಿತು ಮಾತನಾಡುತ್ತಿದ್ದ ವೇಳೆ ಕೃಷ್ಣ ಅವರು,  ಆ ಸಮಯದಲ್ಲಿ ತಾವು ಕೆಲಸವನ್ನು ಕಳೆದುಕೊಳ್ಳಬೇಕಾಯಿತು ಎಂದರು. ಇದೇ ಸಮಯದಲ್ಲಿ ಕೆಲಸ ಕಳೆದುಕೊಂಡಾಗ ನನಗೆ ಅರ್ಥವಾಗಿದ್ದು ಏನೆಂದರೆ ಸರ್ ಹೇಗೆ ಮದುವೆಯಾಗದ ಹೆಣ್ಣು ಮಕ್ಕಳು ಮನೆಗೆ ಭಾರವಾಗಿರುತ್ತಾರೋ ಅದೇ ರೀತಿ ಕೆಲಸ ಇಲ್ಲದ ಗಂಡು ಮಕ್ಕಳು ಕೂಡ ಮನೆಗೆ ಭಾರ ಆಗುತ್ತಾರೆ ಎಂದರು. ಇದನ್ನು ಕೇಳಿ ಅಮಿತಾಭ್​ ಅವರಿಗೆ ಅಸಮಾಧಾನ ಉಂಟಾಯಿತು. ಸ್ವಲ್ಪ ಹೊತ್ತು ಮೌನವಾಗಿಯೇ ಇದ್ದ ನಟ, ಕೊನೆಗೆ ನೋಡಿ  ನಿಮಗೆ ಒಂದು ಮಾತು ಹೇಳುತ್ತಿದ್ದೇನೆ ಕೇಳಿ.  ಹೆಣ್ಣುಮಕ್ಕಳು ಯಾವತ್ತೂ ಕೂಡ ಮನೆಗೆ ಭಾರವಲ್ಲ, ಅವರು  ಮನೆಯ ಭಾಗ್ಯ. ಹೆಣ್ಣುಮಕ್ಕಳನ್ನು ಪಡೆಯುವುದೇ ಧನ್ಯತೆಯ ಭಾವ ಎಂದರು. ಈ ಮಾತನ್ನು ಕೇಳಿ ಕೃಷ್ಣ ಸುಲೇಖರ್ ಅವರು ಸುಮ್ಮನಾದರೆ, ಅಲ್ಲಿದ್ದವರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟಿದರು.  

ಇನ್ನು ಅಮಿತಾಭ್​ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ,  ಇತ್ತೀಚೆಗಷ್ಟೇ ಕಲ್ಕಿ 2898ಎಡಿ ಚಿತ್ರದ ಮೂಲಕ ತಮ್ಮ ಅಭಿನಯದಿಂದ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದರು.  ರಜಿನಿಕಾಂತ್ ಜೊತೆ 32 ವರ್ಷಗಳ ನಂತರ ಅಮಿತಾಭ್​ ಮತ್ತೆ ಸಿನಿಮಾ ಮಾಡಿದ್ದಾರೆ. ಇವರು ಇಬ್ಬರು ಅಭಿನಯದ ವೆಟ್ಟೈಯನ್ ಅಕ್ಟೋಬರ್ ಹತ್ತರಂದು ಬಿಡುಗಡೆಯಾಗಲಿದೆ. ಸದ್ಯ  ಕೌನ್ ಬನೇಕಾ ಕರೋಡ್‌ಪತಿಯಲ್ಲಿ ಬ್ಯುಸಿಯಾಗಿರುವ ಅಮಿತಾಭ್​ ಬೇರೆ ಯಾವ ಹೊಸ ಚಿತ್ರವನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಅಂದಹಾಗೆ, ಅಮಿತಾಭ್​ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ  2000 ರಲ್ಲಿ ಷೋ ಪ್ರಾರಂಭವಾದಾಗಿನಿಂದ, ಅದರ ಮೂರನೇ ಸೀಸನ್ ಅನ್ನು ಹೊರತುಪಡಿಸಿ ಎಲ್ಲವನ್ನೂ ನಿರ್ವಹಿಸಿದ್ದಾರೆ. ಮೂರನೇ ಸೀಸನ್ ಅನ್ನು ನಟ ಶಾರುಖ್​ ಖಾನ್​ ನಡೆಸಿಕೊಟ್ಟಿದ್ದರು. 

ಪೂರ್ಣ ಬೆತ್ತಲಾಗೋಕೆ ರೆಡಿನಾ ಕೇಳಿದ... ಶಾಕಿಂಗ್​ ವಿಷ್ಯ ತಿಳಿಸಿದ ಬಿಗ್​ಬಾಸ್​ ತನಿಷಾ ಕುಪ್ಪಂಡ
 

Latest Videos
Follow Us:
Download App:
  • android
  • ios