Asianet Suvarna News

ಕೋಟ್ಯಧಿಪತಿ: ದೀಪಿಕಾ ಪಡುಕೋಣೆಯಿಂದ 6.40ಲಕ್ಷ ಹೋಯ್ತು...

'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಕೇಳಿದ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟು 6.40 ಲಕ್ಷ ಮಿಸ್ ಮಾಡಿಕೊಂಡಿದ್ದಾರೆ ಪ್ರೇರಣಾ ಎಂಬ ಸ್ಪರ್ಧಿ.

KBC 11 prerana fails to answer deepika padukone related question lost 6.40 lakhs
Author
Bangalore, First Published Nov 22, 2019, 11:57 AM IST
  • Facebook
  • Twitter
  • Whatsapp

ಬಾಲಿವುಡ್‌ ಬಿಗ್ ಬಿ ನಡೆಸಿಕೊಡುವ 'KBC'ಕಾರ್ಯಕ್ರಮದಲ್ಲಿ ರಾಜಸ್ಥಾನದ ಕುವರಿ ಪ್ರೇರಣಾ ಕನ್ಫೂಷನ್‌ನಲ್ಲೇ ಆಟ ಶುರು ಮಾಡಿ ಮನೆಗೆ 3.20 ಲಕ್ಷ ರೂ. ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಅದೂ ಹೆಚ್ಚಿನ ಮೊತ್ತವನ್ನು ಕಳೆದುಕೊಂಡಿದ್ದು ನಮ್ಮ ಕನ್ನಡ ಚಿತ್ರದ ಬಗ್ಗೆ ಕೇಳಿದ ಪ್ರಶ್ನೆಯಿಂದ ಎನ್ನುವುದು ಇಂಟರೆಸ್ಟಿಂಗ್ ಸುದ್ದಿ.

ಕನ್ನಡದ ಹೆಮ್ಮೆ ಸುಧಾಮೂರ್ತಿ ಕೆಬಿಸಿಲಿ; ಅಮಿತಾಬ್‌ಗೆ ಸಿಕ್ತು ದೇವದಾಸಿಯರ ಕೌದಿ !

 

ಕೌನ್‌ ಬನೇಗಾ ಕರೋಡ್‌ ಪತಿ ಸೀಸನ್ 11ರ 68 ಎಪಿಸೋಡ್‌ನಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್‌ ಖ್ಯಾತ ನಟಿ ಹಾಗೂ ಕನ್ನಡ ಚಿತ್ರದ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಅದಕ್ಕೆ ಉತ್ತರಿಸಲಾಗದೇ ಪ್ರೇರಣಾ ಹಣ ಕಳೆದುಕೊಳ್ಳಬೇಕಾಯಿತು. ಸಾಲು ಸಾಲು ಪಶ್ನೆಗಳಿಗೆ ವಿಪರೀತ ಮಂಡೆ ಬಿಸಿ ಮಾಡ್ಕೊಂಡು, ಗೊಂದಲದಲ್ಲಿಯೇ ಉತ್ತರಿಸಿದ ಪ್ರೇರಣಾ ಕಡೆಗೂ ಕನ್ನಡ ಚಿತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಹಾಟ್ ಸೀಟನ್ನು ಬಿಟ್ಟುಕೊಡಲೇ ಬೇಕಾಯಿತು.

 

'ಈ ಚಾಂಪಿಯನ್ ಕ್ರೀಡಾಪಟುಗಳಲ್ಲಿ ಯಾರು ತಮ್ಮ ಕ್ರೀಡೆಯೊಂದಿಗೆ ಸರಿಯಾಗಿ ಹೊಂದಿಕೆಯಾಗುವುದಿಲ್ಲ? ' ಅದಕ್ಕೆ ಸರಿಯಾದ ಉತ್ತರ ಗೊತ್ತಿಲ್ಲದ ಕಾರಣ 50-50 ಲೈಫ್‌ಲೈನ್ ಬಳಸಿ ಮೈಕೆಲ್ ಫೆಲ್ಪ್ಸ್‌- ಗಾಲ್ಫ್ ಎಂದು ಗುಂಡು ಹೊಡೆದು, ಲಕ್ಷ ಗಡಿ ದಾಟುವಲ್ಲಿ ಯಶಸ್ವಿಯಾಗಿದ್ದರು ಪ್ರೇರಣಾ.

ಕೆಬಿಸಿಯಲ್ಲಿ ಶಿವಾಜಿಗೆ ಅವಮಾನ: ಕ್ಷಮೆಯಾಚಿಸಿದ ಅಮಿತಾಬ್, ಸೋನಿ ಟಿವಿ!

 

ಕೈಯಲ್ಲಿ ಉಳಿದಿದ್ದ 3.20 ಲಕ್ಷ ರೂ. ಪ್ರಶ್ನೆ ಎದುರಿಸಿದರು. 1868ರಲ್ಲಿ ಭಾರತದಲ್ಲಿ ಪತ್ತೆಯಾದ ಹೀಲಿಯಂಗೆ ಯಾವ ನೈಸರ್ಗಿಕ ಘಟಕಗಳ ಹೆಸರಿಡಲಾಗಿತ್ತು? ಎಂದು ಕೇಳಿದ ಪ್ರಶ್ನೆಗೆ ಸೂರ್ಯ ಎಂದು ಉತ್ತರಿಸಿ ಮುಂದಿನ ಹಂತ ತಲುಪಿದ್ದರು. ಅದೇ 6.40 ಲಕ್ಷ ರೂ. ಪ್ರಶ್ನೆಗೆ ತಲುಪಿದರು.

6.40 ಲಕ್ಷ ರೂ. ಗೆಲ್ಲಲು ಕೇಳಿದ ಪ್ರಶ್ನೆ ಹೀಗಿತ್ತು:

'ಐಶ್ವರ್ಯಾ ಎಂಬ ಚಿತ್ರದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಯಾರು?'

 

A: ಐಶ್ವರ್ಯಾ ರೈ

B: ದೀಪಿಕಾ ಪಡುಕೋಣೆ

C: ಪ್ರಿಯಾಂಕಾ ಚೋಪ್ರಾ

D: ಸೋನಂ ಕಪೂರ್

ಕೆಬಿಸಿಯಲ್ಲಿ ಕೋಟಿ ಗೆದ್ದ ಬಬಿತಾಗೆ ಮತ್ತೊಂದು ಬಂಪರ್ ಆಫರ್!

ಬಹಳ ಸಮಯಗಳ ಕಾಲ ಯೋಚಿಸಿ ಸೋನಂ ಕಪೂರ್ ಎಂದು ತಪ್ಪು ಉತ್ತರ ನೀಡಿ 6.4 0ಲಕ್ಷ ರೂ. ಮಿಸ್ ಮಾಡಿಕೊಂಡರು. ಕೇವಲ 3.20 ಲಕ್ಷ ರೂ. ಮೊತ್ತವನ್ನು ಮನೆಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಈ ಪ್ರಶ್ನೆಗೆ ಸರಿಯಾದ ಉತ್ತರ ದೀಪಿಕಾ ಪಡುಕೋಣೆ. ಕನ್ನಡ ಚಿತ್ರರಂಗದ ಮೂಲಕ ಸಿನಿ ಜರ್ನಿ ಶುರು ಮಾಡಿದ ದೀಪಿಕಾ ಮೊದಲು ನಟಿಸಿದ ಚಿತ್ರವೇ 'ಐಶ್ವರ್ಯಾ'. ಈ ಚಿತ್ರದಲ್ಲಿ ಡೈಸಿ ಬೋಪಣ್ಣ ಹಾಗೂ ಉಪೇಂದ್ರ ಕೂಡ ನಟಿಸಿದ್ದಾರೆ.

 

ಇಂದ್ರಜಿತ್ ಲಂಕೇಶ್ ನಿರ್ದೇಶನದ ಐಶ್ವರ್ಯಾ ದೀಪಿಕಾ ಪಡುಕೋಣೆ ಮೊದಲು ನಟಿಸಿದ ಸ್ಯಾಂಡಲ್‌ವುಡ್ ಚಿತ್ರ. ಸೌಂದರ್ಯ ಹಾಗೂ ಅಭಿನಯ ಅವರಿಗೆ ಒಲಿದಿದ್ದರಿಂದ ಬಾಲಿವುಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ದೀಪಿಕಾ ಯಶಸ್ವಿಯಾದರು. ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರೊಂದಿಗೆ ನಟಿಸಿದ 'ಓಂ ಶಾಂತಿ ಓಂ' ಸೂಪರ್ ಹಿಟ್ ಆಯಿತು. ಅಲ್ಲಿಂದ ಬಾಲಿವುಡ್ ಜರ್ನಿ ಆರಂಭಿಸಿದ ಡಿಪ್ಪಿ, ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಅಷ್ಟೇ ಅಲ್ಲ ತಾವು ಮೊದಲು ಅಭಿನಯಿಸಿದ ಕನ್ನಡ ಚಿತ್ರದ ಬಗ್ಗೆಯೂ ಎಲ್ಲಿಯೂ ಹೇಳಿ ಕೊಳ್ಳುವುದಿಲ್ಲ. ಮೊದಲ ಚಿತ್ರವೆಂದಾಗ ಓಂ ಶಾಂತಿ ಓಂ ಎಂದೇ ಜಪಿಸುತ್ತಾರೆ. ಹಾಗಾಗಿ ಕನ್ನಡಿಗರಿಗೆ ಹೊರತು ಪಡಿಸಿ, ಅನ್ಯ ಭಾಷಿಗರಿಗೆ ಈ ಬಾಲಿವುಡ್ ಬ್ಯೂಟಿ ತಮ್ಮ ಸಿನಿ ಜರ್ನಿ ಆರಂಭಿಸಿದ್ದು ನಮ್ಮ ಗಾಂಧಿನಗರದ ಮೂಲಕ ಎಂಬ ವಿಷಯವೇ ಗೊತ್ತಿಲ್ಲ.

ಕೋಟ್ಯಧಿಪತಿಯಲ್ಲಿ ರಾಮಾಯಣದ ಬಗ್ಗೆ ಉತ್ತರ ಗೊತ್ತಿಲ್ಲದೇ ಒದ್ದಾಡಿದ ಸೋನಾಕ್ಷಿ

ಇಂಥ ಪ್ರಖ್ಯಾತ ನಟ, ನಟಿಯರು ಕನ್ನಡ ಚಿತ್ರ, ಕನ್ನಡದ ಮೇಲಿನ ಭಾಷಾಭಿಮಾನವನ್ನು ತೋರಿದರೆ ಕನ್ನಡಿಗರಿಗೂ ಹೆಮ್ಮೆ, ಜಗತ್ತಿಗೂ ನಮ್ಮ ನಾಡು, ಸಂಸ್ಕೃತಿ, ನುಡಿ ಪರಿಚಯವಾಗುತ್ತದೆ. ಹಾಗಾಗಲಿ ಎಂಬುವುದು ಕನ್ನಡಿಗರ ನಮ್ಮ ಆಶಯ.

Follow Us:
Download App:
  • android
  • ios