ಖ್ಯಾತ ಕ್ವಿಜ್ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಹಾಟ್ ಸೀಟ್ ನಲ್ಲಿ ಕುಳಿತ ರಾಜಸ್ಥಾನ ಮೂಲದ ಸ್ಪರ್ಧಿಗೆ ಸಪೋರ್ಟ್ ಮಾಡಲು ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ ಭಾಗಿಯಾಗಿದ್ದರು. 

ಹಿಂದೂಗಳ ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ತಡಬಡಾಯಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಟು ವಿಮರ್ಶೆಗೆ ಒಳಗಾಗಿದ್ದಾರೆ. 

ಉತ್ತರ ಗೊತ್ತಿದ್ರೂ ಏಳು ಕೋಟಿ ಜಸ್ಟ್‌ ಮಿಸ್‌!

ರಾಮಾಯಣದ ಪ್ರಕಾರ ಹನುಮಂತ ಯಾರಿಗಾಗಿ ಸಂಜೀವಿನಿ ಪರ್ವತದಿಂದ ಗಿಡಮೂಲಿಕೆ ತರಲು ಹೋಗಿದ್ದನು? 

A. ಸುಗ್ರೀವ 
B. ಲಕ್ಷ್ಮಣ 
c. ಸೀತಾ 
D. ರಾಮ 

ಎಂದು ಕೇಳಲಾಗಿತ್ತು. ಸೋನಾಕ್ಷಿ ಗೊಂದಲಕ್ಕೀಡಾದರು. ಲೈಫ್ ಲೈನ್ ಬಳಸಿಕೊಂಡರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ. ನೆಟ್ಟಿಗರು #YoSonakshiSoDumb' ಎಂದು ಹ್ಯಾಶ್ ಟ್ಯಾಗ್ ಹುಟ್ಟುಹಾಕಿ ಕಾಲೆಳೆಯುತ್ತಿದ್ದಾರೆ. ಟ್ವಿಟರ್ ನಲ್ಲಿ #YoSonakshiSoDumb  ಟ್ರೆಂಡಿಗ್ ನಲ್ಲಿದೆ. ನೆಟ್ಟಿಗರು ಬಿಡಿ ಇಂತದ್ದೊಂದು ಸುಲಭವಾದ ಪ್ರಶ್ನೆಗೆ ಲೈಫ್ ಲೈನ್ ಬಳಸಿದ್ದಕ್ಕೆ ಸ್ವತಃ ಅಮಿತಾಬ್ ಕೂಡಾ ತಮಾಷೆ ಮಾಡಿದರು. 

ಬಿಸಿಯೂಟ ತಯಾರಿಕೆಗೆ ಕೆಬಿಸಿಯಲ್ಲಿ 1 ಕೋಟಿ!

ಇನ್ನೂ ಮಜಾ ಎಂದರೆ ಸೋನಾಕ್ಷಿ ಮನೆ ಹೆಸರು ರಾಮಾಯಣ. ಆದರೂ ಅವರಿಗೆ ರಾಮಾಯಣದ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದಿರುವುದು ಟ್ರೋಲ್ ಗೆ ಆಹಾರವಾಗಿದೆ.