ಹಿರಿಯ ನಟಿ ಲೀಲಾವತಿ ಜೀವನದ ಗುಟ್ಟನ್ನು ಬಿಚ್ಚಿಟ್ಟ ಪುತ್ರ ವಿನೋದ್‌ ರಾಜ್!

ನನ್ನಮ್ಮ ಇಡೀ ಜೀವನ ಕಳೆದಿದ್ದು, ಇನ್ನೊಬ್ಬರನ್ನು ನೋಯಿಸಿದ್ದೀನಾ ಅನ್ನೋ ಚಿಂತೆಯಲ್ಲೇ? ಬಹುಶಃ ಇವತ್ತು ಅದಕ್ಕೇ ಅವರಿಗೆ ಈ ಸ್ಥಾನ ಬಂದಿದೆ.

Veteran actress Leelavathi Vaikuntha Samaradhan Son Vinod Raj has revealed some secrets sat

ಬೆಂಗಳೂರು (ಡಿ.18): ನನ್ನಮ್ಮ ಇಡೀ ಜೀವನ ಕಳೆದಿದ್ದು, ಇನ್ನೊಬ್ಬರನ್ನು ನೋಯಿಸಿದ್ದೀನಾ ಅನ್ನೋ ಚಿಂತೆಯಲ್ಲೇ? ಬಹುಶಃ ಇವತ್ತು ಅದಕ್ಕೇ ಅವರಿಗೆ ಈ ಸ್ಥಾನ ಬಂದಿದೆ. ಕನ್ನಡ ಪರವಾಗಿ ನಾನು ಯಾವಾಗಲೂ ನಿಂತ್ಕೊಳ್ತೀನಿ ಅನ್ನೋ ಪ್ರತಿಯೊಬ್ಬರೂ ನನಗೆ ಧೈರ್ಯ ತುಂಬಿದಾರೆ ಎಂದು ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್‌ ರಾಜ್ ಅಳಲು ತೋಡಿಕೊಂಡದ್ದಾರೆ. 

ಹಿರಿಯ ನಟಿ ಲೀಲಾವತಿ ರವರ ವೈಕುಂಠ ಸಮಾರಾಧನೆ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ಕಲಾವಿದರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ವಿನೋದ್ ರಾಜ್ ಅವರು, ಸಮಯಕ್ಕೆ ಸರಿಯಾಗಿ ಅಮ್ಮನ ತರ ಕೆಲಸ ಮಾಡೋದು ಕಷ್ಟ. ಅವರು ಇಡೀ ಜೀವನ ಕಳೆದಿದ್ದು ಇನ್ನೊಬ್ಬರನ್ನು ನೋಯಿಸಿದ್ದೀನಾ ಅನ್ನೋ ಚಿಂತೆಯಲ್ಲೇ? ಬಹುಶಃ ಇವತ್ತು ಅದಕ್ಕೇ ಅವರಿಗೆ ಈ ಸ್ಥಾನ ಬಂದಿದೆ. ಕನ್ನಡ ಪರವಾಗಿ ನಾನು ಯಾವಾಗಲೂ ನಿಂತ್ಕೊಳ್ತೀನಿ ಅನ್ನೋ ಪ್ರತಿಯೊಬ್ಬರೂ ನನಗೆ ಧೈರ್ಯ ತುಂಬಿದಾರೆ ಎಂದರು.

ಎಲ್ಲವೂ, ಜೀವನವೇ ಒಂದು ಭ್ರಮೆ ಎನಿಸುತ್ತಿದೆ. ಎಷ್ಟು ದೈರ್ಯ ತುಂಬಿಕೊಂಡರೂ ದುಃಖದ ಕಟ್ಟೆ ಒಡೆದು ಹೋಗುತ್ತಿದೆ. ಅಮ್ಮನ ನೆನಪಲ್ಲಿ ವಿನೋದ್ ರಾಜ್ ಹಾಡು ಹಾಡಿದ್ದಾರೆ. ಈ ಹಿಂದಿ ಹಾಡಿನ ಅರ್ಥ ಮಾಡ್ಕೊಂಡ್ರೆ ಎಲ್ಲಾ ಗೊತ್ತಾಗುತ್ತದೆ ಅಂತ ಹಿಂದಿಯಲ್ಲಿ ಹಾಡು ಹಾಡಿದ್ದಾರೆ. ಪ್ರೀತಿ ಮಾಡಿದ್ಮೇಲೆ ಯಾಕೆ ಹೆದರ್ಬೇಕು? ಪ್ರೀತಿ ಮಾಡಿದೀವಿ ಕಳ್ಳತನ ಮಾಡಿಲ್ಲ ಅನ್ನೋ ಅರ್ಥದ ಹಾಡು ಹಾಡಿದರು. ನನಗೆ ತಿರತಿರುಗಿ ಕಣ್ಣೀರು ಬರ್ತಿದೆ. ಅವರ ಸ್ಥಾನವನ್ನು ಹೇಗೆ ತುಂಬೋದು ಅಂತ ಭಯ ಶುರುವಾಗಿದೆ ಎಂದು ಹೇಳಿದರು.

ನಾಯಿ, ನರಿ ಬೊಗಳಿದರೆ ಇತಿಹಾಸ ಬದಲಾಗುವುದೆ? ನಟ ಜಗ್ಗೇಶ್​ ಟ್ವೀಟ್​ ವೈರಲ್​

ನಾನು ಹಿಂದಿಯಲ್ಲಿ ಹಾಡು ಹಾಡಿದೆ ಅಲ್ವಾ ಅಂತ ಕೇಳ್ಬೋದು.? ಆದ್ರೆ ಆ ಹಾಡಿನ ಅರ್ಥ ಅಷ್ಟು ಅಮೋಘವಾಗಿದೆ. ಅಮ್ಮನಿಗೆ ಇಷ್ಟವಾದ ಆಹಾರದ ಪದಾರ್ಥವನ್ನು ಇವತ್ತು ಸೋಮವಾರ ಮಾಡಿ ಇಡೋ ಅನಿವಾರ್ಯ ಇವತ್ತೇ ಬಂತು. ಹಾಗಾಗಿ ಸಸ್ಯಹಾರ ತಿಂಡಿಗಳನ್ನು ಮಾಡಿಟ್ಟಿದೀವಿ. ಕಟ್ಟೆ ಪೂಜೆ ವೇಳೆಯೂ ತೆಂಗಿನಕಾಯಿ ಚೆನ್ನಾಗಿ ಒಡೆದಿದೆ. ಬಹುಶಃ ಅಮ್ಮನ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು ಎಂದು ತಿಳಿಸಿದರು.

ಈ ಹಿಂದೆಯೂ ತಾಯಿಯ ಸಾವಿನ ಬಗ್ಗೆ ಪುತ್ರ ವಿನೋದ್ ರಾಜ್ ಭಾವುಕರಾಗಿ ಮಾತನಾಡಿದ್ದರು. ಅಮ್ಮನ ಜೊತೆಗಿನ ಜೀವನ ಪಯಣದಲ್ಲಿ ನನ್ನ ಪ್ರಾಣನೇ ಹೋಗಬೇಕಿತ್ತು. ಆದರೆ, ಅರ್ಧ ಜೀವ ಹೋಗಿದೆ. 56 ವರ್ಷ ಜೊತೆ ತಾಯಿ ಜೊತೆಗೆ ಕಾಲ ಕಳೆದೆ. ಇಷ್ಟು ವರ್ಷದಲ್ಲಿ ಒಂದೇ ಚೂರು ಪ್ರೀತಿ ಕೊರತೆ ಮಾಡಲಿಲ್ಲ. ಕೊನೆಯದಾಗಿ ನನ್ನ ಕೈಹಿಡಿದುಕೊಂಡೇ ಕಳೆದು ಹೋದ್ರು. ನೀರು ಕುಡಿಸುತ್ತಲೇ ಪ್ರಾಣ ಕಳೆದುಕೊಂಡ್ರು. ಕೊನೆದಾಗಿ ನಾಲ್ಕು ಸಲ ನನ್ನ ಹೆಸರನ್ನೇ ಕರೆದು ಪ್ರಾಣಬಿಟ್ರು ಎಂದು ತಾಯಿಯ ನಿಧನದ ಕೊನೆಯ ಕ್ಷಣಗಳನ್ನು ನೆನಪಿಸಿಕೊಂಡು ಪುತ್ರ ವಿನೋದ್ ರಾಜ್ ಗದ್ಗದಿತರಾಗಿದ್ದರು.

ಬೆಳಗಾವಿ ಸಂತ್ರಸ್ಥೆ ಮಹಿಳೆ ಕೇಸ್ ವಿಚಾರಣೆಯಲ್ಲಿ ಮಾನವೀಯತೆ, ಸ್ತ್ರೀ ಗೌರವ ಎತ್ತಿಹಿಡಿದ ಹೈಕೋರ್ಟ್!

ಅಮ್ಮ ಊಟ ಬಿಟ್ಟು 3 ತಿಂಗಳಾಗಿತ್ತು: ಅಮ್ಮ ಊಟ ಬಿಟ್ಟ ಎರಡ್ಮೂರು ತಿಂಗಳಿಂದ ನಾನೂ ಊಟ ಮಾಡೋದನ್ನ ಬಿಟ್ಬಿಟ್ಟೆ. ಶಿವಣ್ಣ ಅಪ್ಸೇಟ್ ಆಗಬೇಡಿ ಅಂತಾ ಹೇಳಿದ್ರು. ಆದರೆ ನಾನು ನನ್ನ ತಾಯಿ ಸ್ಥಿತಿ ಕಂಡು ಊಟನೂ ಮಾಡಲಾಗಿಲ್ಲ. ಕೊನೆವರೆಗೂ ನನ್ನ ತಾಯಿ ಜೊತೆ ಇದ್ದೆ, ಈಗ ಯಾರೂ ಇಲ್ಲ. ಎಷ್ಟು ಬೇಡಿಕೊಂಡ್ರೂ ತಾಯಿನ ಪಡೆದುಕೊಳ್ಳಲು ಆಗಲ್ಲ. ಅವರು ಹೇಳಿದ ತಾಳ್ಮೆ, ಸಮಾಧಾನ ಯಾರೂ ಹೇಳಲು ಸಾಧ್ಯವಿಲ್ಲ. ನನ್ನ ಅಮ್ಮನಿಗೆ ಸಾಕಷ್ಟು ಕನಸು ಗಳಿದ್ವು. ಅಮ್ಮ ತನ್ನ ಕನಸುಗಳನ್ನು ನನ್ನ ಮುಂದೆ ಹಂಚಿಕೊಳ್ತಿದ್ಳು. ಅಮ್ಮ ಹೇಳಿರೋ ಬಾಕಿ ಕೆಲಸ ನಾನು ಮಾಡಿ ಮುಗಿಸ್ತೀನಿ ಎಂದು ಕಣ್ಣೀರಾಗಿದ್ದರು.

Latest Videos
Follow Us:
Download App:
  • android
  • ios