ಕಪಿಲ್ ಶರ್ಮಾ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಸೋಮವಾರ ಬೆಳಗ್ಗೆ ಫ್ಯಾನ್ಸ್ ಜೊತೆ ಈ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಪತ್ನಿ ಗಿನ್ನಿ ಚತ್ರತ್ ಎರಡನೇ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಸುರಕ್ಷಿತವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಆಶಿರ್ವಾದಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.

2018ರಲ್ಲಿ ವಿವಾಹಿತರಾದ ಕಪಿಲ್ ಶರ್ಮಾ ಮತ್ತು ಗಿನ್ನಿ2019 ಡಿಸೆಂಬರ್‌ನಲ್ಲಿ ಮೊದಲ ಮಗು ಅನೈರಾಳನ್ನು ವೆಲ್‌ಕಂ ಮಾಡಿದ್ದರು. ತಮ್ಮ ಕುಟುಂಬ ಇನ್ನಷ್ಟು ದೊಡ್ಡದಾಗುತ್ತಿದೆ ಎಂದು ಕಪಿಲ್ ಶೇರ್ ಮಾಡಿದ್ದಕ್ಕೆ ಟೂ ಕ್ವಿಕ್ ಎಂದಿದ್ದಾರೆ ಜನರು.

ಕಪಿಲ್ ಶರ್ಮಾ ಶೋ ಬಂದ್; ಕಾರಣ ಬಹಿರಂಗ ಮಾಡಿದ ಕಾಮಿಡಿಯನ್!

ಮಕ್ಕಳ ನಡುವೆ ಗ್ಯಾಪ್ ಇಲ್ಲ, ಅಷ್ಟೊಳ್ಳೆ ಅಭ್ಯಾಸವಲ್ಲ ಎಂದು ಕಮೆಂಟ್ ಮಾಡಿದ್ದಾರೆ ನೆಟ್ಟಿಗರು. ಇದೂ ತುಂಬಾ ಬೇಗ ಆಯ್ತು, ಕಳೆದ ವರ್ಷವಷ್ಟೇ ಹೆಣ್ಮಗುವನ್ನು ಸ್ವಾಗತಿಸಿದ್ರಲ್ಲಾ ಎಂದಿದ್ದಾರೆ.

ಕಪಿಲ್ ಶರ್ಮಾಗೆ ಕರೆ ಮಾಡಿದ ಮುಂಬೈ ಪೊಲೀಸರು.. ಯಾವ ಪ್ರಕರಣ!

ಫ್ಯಾಮಿಲಿಗೆ ಫೋಕಸ್ ಮಾಡೋ ಉದ್ದೇಶದಿಂದ ಕಪಿಲ್ ಶರ್ಮಾ ದಿ ಕಪಿಲ್ ಶರ್ಮಾ ಶೋದಿಂದ ಸಣ್ಣ ಗ್ಯಾಪ್ ತೆಗೆದುಕೊಂಡಿದ್ದಾರೆ. ಈ ಪಾಪ್ಯುಲರ್ ಶೋ ಮತ್ತೊಮ್ಮೆ ಸೆಕೆಂಡ್ ಸೀಸನ್ ಆಗಿ ಮೂಡಿ ಬರಲಿದೆ.