ಮುಂಬೈ(ಜ.  07)  ಖ್ಯಾತ ಹಾಸ್ಯ ಕಲಾವಿದ, ನಟ ಕಪಿಲ್ ಶರ್ಮಾಗೆ ಪೊಲೀಸರಿಂದ ಬುಲಾವ್ ಹೋಗಿದೆ. ನಕಲಿ ದಾಖಲೆಗಳನ್ನು ಹೊಂದಿದ್ದ ಕಾರುಗಳನ್ನು ಜಪ್ತಿ ಮಾಡಿರುವ ಪೊಲೀಸರು  ವಿಚಾರಣೆಗಾಗಿ ಶರ್ಮಾ ಅವರನ್ನು ಕರೆಸಿಕೊಂಡಿದ್ದಾರೆ.

ಕ್ರೈಮ್ ಇಂಟಲಿಜನ್ಸ್ ವಿಭಾಗದ ಎಪಿಐ ಸಚಿನ್ ವಝೆ ವಿಚಾರಣೆ ನಡೆಸಿದ್ದಾರೆ.  ಕಾರುಗಳ ಡಿಸೈನರ್ ದಿಲೀಪ್ ಚಾಬ್ರಿಯಾಗೆ ಶರ್ಮಾ ಹಣ ನೀಡಿದ್ದರು.  ಆದರೆ ಚಾಬ್ರಿಯಾ  ಐಷಾರಾಮಿ ಕಾರನ್ನು ಡಿಸೈನ್ ಮಾಡಿಕೊಡಲಿಲ್ಲ. ಈ ಕಾರಣಕ್ಕೆ ಶರ್ಮಾ ದೂರು ನೀಡಿದ್ದರು.

ಆನ್ ಲೈನ್ ನಲ್ಲಿ ಬಟ್ಟೆ ಬಿಚ್ಚಿದರೆ ಅಷ್ಟೆ ಕತೆ

ಚಾಬ್ರಿಯಾ ವಂಚನೆ ಮಾಡಿದ್ದಾರೆ ಎಂದು ದೂರು ನೀಡುರುವ ಶರ್ಮಾ ಬಳಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ.   ಬಾಲಿವುಡ್ ನಲ್ಲಿ ಇನ್ನೊಂದು ಕಡೆ ಡ್ರಗ್ಸ್  ಪ್ರಕರಣದ ವಿಚಾರಣೆ ನಡೆಯುತ್ತಲೇ  ಇದೆ.