ಕಪಿಲ್ ಶರ್ಮಾ ಶೋ ಬಂದ್; ಕಾರಣ ಬಹಿರಂಗ ಮಾಡಿದ ಕಾಮಿಡಿಯನ್!
ಇತ್ತೀಚೆಗೆ ಕಪಿಲ್ ಶರ್ಮ ಶೋ ಮುಕ್ತಾಯವಾಗಲಿದೆ ಎಂಬ ಸುದ್ದಿ ಬಂದಿತ್ತು. ಇದಕ್ಕೆ ಕಾರಣ ಮಾತ್ರ ಹೊರಬಂದಿರಲಿಲ್ಲ. ಆದರೆ ಈಗ ಸ್ವತಃ ಕಪಿಲ್ ಶರ್ಮ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಕಪಿಲ್ ಮತ್ತೊಮ್ಮೆ ತಂದೆಯಾಗಲಿದ್ದು ಗರ್ಭಿಣಿ ಪತ್ನಿಯ ಜೊತೆ ಇರಲು ಬಯಸುವುದಾಗಿ ಹೇಳಿದ್ದಾರೆ. ಹೆಂಡತಿ ಮತ್ತು ಮುಂಬರುವ ಮಗುವಿನೊಂದಿಗೆ ಸಮಯ ಕಳೆದ ನಂತರ, ಕಪಿಲ್ ಅವರ ಕಾರ್ಯಕ್ರಮವನ್ನು ಹೊಸ ಲುಕ್‌ನೊಂದಿಗೆ ಪುನಃ ಆರಂಭಿಸಲಿದ್ದಾರೆ.
ಕಪಿಲ್ ಶರ್ಮಾ ತಮ್ಮ ಅಭಿಮಾನಿಗಳೊಂದಿಗೆ ಟ್ವಿಟ್ಟರ್ ನಲ್ಲಿ ಗುರುವಾರ #AskKapil ಮೂಲಕ ಸಂವಾದ ನಡೆಸಿದ್ದಾರೆ.
ಕಪಿಲ್ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ವೀಕ್ಷಕರು ಕಪಿಲ್ ಶೋ ಬಂದ್ ಮಾಡಲು ಕಾರಣ ಕೇಳಿದರು.
'ಏಕೆಂದರೆ ನನ್ನ ಎರಡನೇ ಮಗುವನ್ನು ಸ್ವಾಗತಿಸಲು ನಾನು ನನ್ನ ಹೆಂಡತಿಯೊಂದಿಗೆ ಮನೆಯಲ್ಲಿ ಸಮಯ ಕಳೆಯಬೇಕಾಗಿದೆ' ಎಂದು ಕಪಿಲ್ ಶರ್ಮ ಉತ್ತರಿಸಿದ್ದಾರೆ.
ಅಭಿಮಾನಿಗಳು ತುಂಬಾ ಕಪಿಲ್ ಗೆ ಅಭಿನಂದನೆ ತಿಳಿಸಿದ್ದಾರೆ.
ಮಗಳು ಅನೈರಾಗೆ, ಸಹೋದರ ಅಥವಾ ಸಹೋದರಿ ಯಾವುದು ಬೇಕು ಎಂದು ಒಬ್ಬರು ಕಪಿಲ್‌ಗೆ ಕೇಳಿದಾಗ. 'ಹೆಣ್ಣು ಅಥವಾ ಗಂಡು, ಯಾವಿದೆ ಆದರೂ ಆರೋಗ್ಯವಾಗಿರಲಿ' ಎಂದು ಉತ್ತರಿಸಿದ್ದಾರೆ.
ಕಪಿಲ್ 2018ರ ಡಿಸೆಂಬರ್‌ನಲ್ಲಿ ಗೆಳತಿ ಗಿನ್ನಿಯನ್ನು ವಿವಾಹವಾದರು ಮತ್ತು ಮದುವೆಯ ಮೊದಲ ವಾರ್ಷಿಕೋತ್ಸವದ ಮೊದಲು ಕಪಿಲ್ ತಂದೆಯಾದರು. ಮಗಳು ಅನೈರಾ ತಾಯಿಯ ಪಡಿಯಚ್ಚು.
ಪ್ರತಿ ಶನಿವಾರ ಮತ್ತು ಭಾನುವಾರ ಕಪಿಲ್ ಶರ್ಮ ಶೋಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಾರೆ. ಈ ಶೋ ಪ್ರತಿ ವಾರ ಹೊಸ ಅತಿಥಿಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುತ್ತದೆ.
ಕೆಲವು ದಿನಗಳ ನಂತರ ಕಪಿಲ್ ಮತ್ತೆ ಹೊಸ ಲುಕ್‌ನೊಂದಿಗೆ ಪ್ರದರ್ಶನಕ್ಕೆ ಮರಳಲಿದ್ದಾರೆ. ಕೊರೋನಾ ವೈರಸ್‌ನಿಂದಾಗಿ 4 ತಿಂಗಳ ನಂತರ ದಿ ಕಪಿಲ್ ಶರ್ಮಾ ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಗಿತ್ತು.
ಕಪಿಲ್ ಆಗಾಗ್ಗೆ ತನ್ನ ಮಗಳ ಬಗ್ಗೆ ಮತ್ತು ಅವಳ ಪಾಲನೆಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ತನ್ನ ಮಗಳು ಬಂಗಾಳಿ ಭಾಷೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಿದ್ದಾಳೆ. ಅನೈರಾಳೊಂದಿಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುವಾಗ ಅವಳು ಪ್ರತಿಕ್ರಿಯಿಸುವುದಿಲ್ಲ. ಅವಳು ಬಂಗಾಳಿಯಲ್ಲಿ ಮಾತನಾಡುವಾಗ ಉತ್ತರಿಸುತ್ತಾಳೆ ಎಂದು ಕಪಿಲ್ ಹೇಳಿದ್ದರು.
ಮಕ್ಕಳೊಂದಿಗೆ ಅವರ ಅಜ್ಜಿಯ ಬಗ್ಗೆ ಕೂಡ ವಿಶೇಷ ಕಾಳಜಿ ವಹಿಸಬೇಕಾಗಿದೆ ಎಂದು ಕಪಿಲ್ ಹೇಳಿದ್ದಾರೆ. ಅನೈರಾ ಅಜ್ಜಿ ಬಂಗಾಳ ಮೂಲದವರು.
ಕಪಿಲ್ ಶರ್ಮಾ ಶೋ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಬಾಲಿವುಡ್ ಸೆಲೆಬ್ರಿಟಿಗಳು ಪ್ರತಿ ವಾರ ಆಗಮಿಸುತ್ತಿದ್ದರು.