ಮತ್ತೆ ಸಂಕಷ್ಟಕ್ಕೆ ಸಿಲುಕಿದ ಕಪಿಲ್ ಶರ್ಮಾ; US ಮೂಲದ ವ್ಯಕ್ತಿಯಿಂದ ದೂರು

ಬಾಲಿವುಡ್‌ನ ಖ್ಯಾತ ಹಾಸ್ಯನಟ ಕಿರುತೆರೆ ಸ್ಟಾರ್ ಕಪಿಲ್ ಶರ್ಮಾ (Kapil Sharma) ಮತ್ತೆ ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ. 2015 ರಲ್ಲಿ ಉತ್ತರ ಅಮೆರಿಕ ಪ್ರವಾಸದ ಒಪ್ಪಂದವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಪಿಲ್ ಶರ್ಮಾ ಮತ್ತೊಮ್ಮೆ ಕಾನೂನು ಸಮಸ್ಯೆಗೆ (legal trouble) ಸಿಲುಕಿದ್ದಾರೆ. ವರದಿಗಳ ಪ್ರಕಾರ, ಸಾಯಿ USA Inc ಕಪಿಲ್ ಶರ್ಮಾ ವಿರುದ್ಧ ಒಪ್ಪಂದದ ಉಲ್ಲಂಘನೆಗಾಗಿ ಮೊಕದ್ದಮೆ ಹೂಡಿದೆ.

Kapil Sharma faces legal trouble in US over tour contract sgk

ಬಾಲಿವುಡ್‌ನ ಖ್ಯಾತ ಹಾಸ್ಯನಟ ಕಿರುತೆರೆ ಸ್ಟಾರ್ ಕಪಿಲ್ ಶರ್ಮಾ (Kapil Sharma) ಮತ್ತೆ ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ. 2015 ರಲ್ಲಿ ಉತ್ತರ ಅಮೆರಿಕ ಪ್ರವಾಸದ ಒಪ್ಪಂದವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಪಿಲ್ ಶರ್ಮಾ ಮತ್ತೊಮ್ಮೆ ಕಾನೂನು ಸಮಸ್ಯೆಗೆ (legal trouble) ಸಿಲುಕಿದ್ದಾರೆ. ವರದಿಗಳ ಪ್ರಕಾರ, ಸಾಯಿ USA Inc ಕಪಿಲ್ ಶರ್ಮಾ ವಿರುದ್ಧ ಒಪ್ಪಂದದ ಉಲ್ಲಂಘನೆಗಾಗಿ ಮೊಕದ್ದಮೆ ಹೂಡಿದೆ.

ಒಪ್ಪಂದದ ಪ್ರಕಾರ ಕಪಿಲ್ ಶರ್ಮಾ ಆರು ಶೋ ಮಾಡುವುದಾಗಿ ಸಂಭಾವನೆ ಪಡೆದಿದ್ದರು. ಆದರೆ ಅವರು ಕೇವಲ ಐದು ಪ್ರದರ್ಶನಗಳನ್ನು ಮಾತ್ರ ನೀಡಿದ್ದಾರೆ. ಉಳಿದ ಶೋನ ನಷ್ಟವನ್ನು ಭರಿಸುವುದಾಗಿ ಕಪಿಲ್ ಶರ್ಮಾ ಭರವಸೆ ನೀಡಿದ್ದರು. ಆದರೆ ಇದುವರೆಗೂ ನಷ್ಟ ಭರಿಸಿಲ್ಲ ಎಂದು ಯುಎಸ್ (US) ಮೂಲದ ಕಾರ್ಯಕ್ರಮ ಆಯೋಜಕರು ಆರೋಪ ಮಾಡಿದ್ದಾರೆ. 

ನ್ಯೂಜೆರ್ಸಿ ಮೂಲದ ಸಾಯಿ USA Inc ಅನ್ನು ಮುನ್ನಡೆಸುತ್ತಿರುವ ಅಮಿತ್ ಜೇಟ್ಲಿ ಅವರು ಫೇಸ್‌ಬುಕ್‌ನಲ್ಲಿ ಪ್ರಕರಣದ ವರದಿಯನ್ನು ಹಂಚಿಕೊಂಡಿದ್ದಾರೆ. 'SAI USA INC 2015ರಲ್ಲಿ ಒಪ್ಪಂದದ ಉಲ್ಲಂಘನೆಗಾಗಿ ಕಪಿಲ್ ಶರ್ಮಾ ವಿರುದ್ಧ ಮೊಕದ್ದಮೆ ಹೂಡಿದೆ' ಎಂದಿದ್ದಾರೆ. ಕಪಿಲ್ ನಷ್ಟವನ್ನು ತುಂಬಲು ಬದ್ಧರಾಗಿದ್ದಾರೆ ಎಂದು ಅವರು ಹೇಳಿದರು ಆದರೀಗ ಸಿಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. 

ಇಮ್ರಾನ್ ಖಾನ್ 'ದಿ ಕಪಿಲ್ ಶರ್ಮಾ ಶೋ'ಗೆ ಸೇರಲಿ: ಮತ್ತೆ ಕಾಲೆಳೆದ ಮಾಜಿ ಪತ್ನಿ

ಈ ಬಗ್ಗೆಅಮಿತ್ ಜೇಟ್ಲಿ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ,  'ಕಪಿಲ್ ಶರ್ಮಾ ಒಪ್ಪದಂದ ಪ್ರಕಾರ ಪ್ರದರ್ಶನ ನೀಡಲಿಲ್ಲ ಮತ್ತು ಅವರನ್ನು ಸಂಪರ್ಕಿಸಲು ನಾವು ಹಲವಾರು ಬಾರಿ ಪ್ರಯತ್ನಿಸಿದರೂ ಸಹ ಪ್ರತಿಕ್ರಿಯಿಸಲಿಲ್ಲ' ಎಂದು ಹೇಳಿದರು. ಈ ಪ್ರಕರಣವು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಯಲ್ಲಿದೆ.

ಈ ಚಟದ ಕಾರಣಕ್ಕೆ ಕಪಿಲ್‌ ಶರ್ಮಾ ಜೊತೆ ಜಗಳವಾಡಿದ್ದ ಅನ್‌ಸ್ಕ್ರೀನ್‌ ಪತ್ನಿ ಸುಮೋನಾ ಚಕ್ರವರ್ತಿ

ಏತನ್ಮಧ್ಯೆ, ಕಪಿಲ್ ಮತ್ತು ಅವರ ತಂಡ ಕಪಿಲ್ ಶರ್ಮಾ ಲೈವ್ ಕಾರ್ಯಕ್ರಮಕ್ಕಾಗಿ ಕೆನಡಾದಲ್ಲಿದ್ದಾರೆ. ಅವರು ವ್ಯಾಂಕೋವರ್ ಮತ್ತು ಟೊರೊಂಟೊದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಕಪಿಲ್ ತನ್ನ ಅಭಿಮಾನಿಗಳಿಗಾಗಿ ಕೆನಡಾದದಿಂದ Instagram ನಲ್ಲಿ ಅಪ್ ಡೇಟ್ ಹಂಚಿಕೊಳ್ಳುತ್ತಿದ್ದಾರೆ.

ಕಪಿಲ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇತ್ತೀಚಿಗಷ್ಟೆ ವಿದೇಶದಲ್ಲಿರುವ ಕಪಿಲ್ ಸಂತಸದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕಪಿಲ್ ತಮ್ಮ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ತೋರಿಸುತ್ತಿದ್ದಾರೆ. ಕಪಿಲ್ ಶರ್ಮಾ ಫನ್ನಿ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ. ಕಪಿಲ್ ಶೇರ್ ಮಾಡಿರುವ ಕಾಮಿಡಿ ವಿಡಿಯೋಗೆ ಈಗಾಗಲೇ ಸಿಕ್ಕಾಪಟ್ಟೆ ವ್ಯೂವ್ಸ್ ಆಗಿದೆ. ಅಧಿಕ ಲೈಕ್ಸ್ ಹರಿದುಬಂದಿದೆ.

Latest Videos
Follow Us:
Download App:
  • android
  • ios