ಈ ಚಟದ ಕಾರಣಕ್ಕೆ ಕಪಿಲ್ ಶರ್ಮಾ ಜೊತೆ ಜಗಳವಾಡಿದ್ದ ಅನ್‌ಸ್ಕ್ರೀನ್ ಪತ್ನಿ ಸುಮೋನಾ ಚಕ್ರವರ್ತಿ
'ದಿ ಕಪಿಲ್ ಶರ್ಮಾ ಶೋ' (The Kapil Sharma Show)ನಲ್ಲಿ ಭೂರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುಮೋನಾ ಚಕ್ರವರ್ತಿ (Sumona Chakravarti) ಅವರಿಗೆ 34 ವರ್ಷ. ಲಕ್ನೋದಲ್ಲಿ 24 ಜೂನ್ 1988 ರಂದು ಜನಿಸಿದ ಸುಮೋನಾ ಚಕ್ರವರ್ತಿ ಕಪಿಲ್ ಶರ್ಮಾ ಅವರ ಉತ್ತಮ ಸ್ನೇಹಿತೆ. ಆದರೆ ಸುಮೋನಾ ಅವರ ಒಂದು ಚಟದ ಕಾರಣ ಅವರು ಕಪಿಲ್ ಅವರೊಂದಿಗೆ ಜಗಳವಾಡಿದ್ದರು.
ವಾಸ್ತವವಾಗಿ, ಸುಮೋನಾ ಚಕ್ರವರ್ತಿ ಸಿಗರೇಟ್ ವ್ಯಸನಿಯಾಗಿದ್ದರು. ಅನೇಕ ಬಾರಿ ಕಪಿಲ್ ಅವರು ಸೆಟ್‌ನಲ್ಲಿ ಸಿಗರೇಟ್ ಸೇದುವಾಗ ಸಿಕ್ಕಿಹಾಕಿಕೊಂಡಿದ್ದರು ಮತ್ತು ಅವರಿಂದ ಬೈಯಿಸಿಕೊಂಡಿದ್ದರು. ಆದರೆ ಸುಮೋನಾ ಅವರಿಗೆ ಕಪಿಲ್ ಅವರ ಕಟ್ಟುನಿಟ್ಟಿನ ಕಾರಣ ಸಿಟ್ಟಾಗಿ ಒಮ್ಮೆ ಅವರೊಂದಿಗೆ ಜಗಳವಾಡಿದರು. ಆದರೆ, ಇಬ್ಬರು ನಂತರ ಪರಸ್ಪರ ಹೊಂದಾಣಿಕೆ ಮಾಡಿ ಕೊಂಡರು.
ಆದರೆ ಸುಮೋನಾ ಚಕ್ರವರ್ತಿ ಈಗ ಸಿಗರೇಟ್ ಸೇದುತ್ತಿಲ್ಲ. ಅವರು ಸುಮಾರು 6 ವರ್ಷಗಳ ಹಿಂದೆ ಈ ಕೆಟ್ಟ ಅಭ್ಯಾಸವನ್ನು ತೊರೆದರು. ಸುಮೋನಾ ಇದನ್ನು 2020 ರಲ್ಲಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು.
ಅವರು 4 ವರ್ಷಗಳ ಹಿಂದೆ ಸ್ನೇಹಿತರ ಪಾರ್ಟಿಯಲ್ಲಿ ಸಿಗರೇಟ್ ಬಿಡಲು ನಿರ್ಧರಿಸಿದೆ ಎಂದು ಹೇಳಿದರು. ಸುಮೋನಾ ಪ್ರಕಾರ ಈ ನಿರ್ಧಾರವು ಅವರಿಗೆ ಕಷ್ಟಕರವಾಗಿತ್ತು. ಆದರೆ ಈಗ ಅವರಿಗೆ ಧೂಮಪಾನ ಅಂದರೆ ಅಲರ್ಜಿ. ಯಾರಾದರೂ ಸಿಗರೇಟ್/ಬಿಡಿಗಳನ್ನು ಸೇದುತ್ತಿರುವಾಗ ಅವರು ಅಲ್ಲಿ ನಿಲ್ಲಲು ಸಾಧ್ಯವಿಲ್ಲವಂತೆ.
ಸುಮೋನಾ ಅವರು ಚಲನಚಿತ್ರಗಳಿಗೆ ಪ್ರವೇಶಿಸಿದಾಗ ಕೇವಲ 11 ವರ್ಷ. ಆಮೀರ್ ಖಾನ್, ಮನೀಶಾ ಕೊಯಿರಾಲಾ ಮತ್ತು ಅನಿಲ್ ಕಪೂರ್ ಅಭಿನಯದ 'ಮನ್'. ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು.
ಪ್ರಸ್ತುತ ಅವರಿಗೆ 'ದಿ ಕಪಿಲ್ ಶರ್ಮಾ ಶೋ' ಹೊರತುಪಡಿಸಿ ಬೇರೆ ಯಾವುದೇ ಪ್ರಾಜೆಕ್ಟ್‌ಗಳಿಲ್ಲ. ಎರಡು ವರ್ಷಗಳ ಹಿಂದೆ ಸುಮೋನಾಗೆ ಯಾವುದೇ ಕೆಲಸವಿಲ್ಲ ಎನ್ನುವ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಕೆಲಸಕ್ಕಾಗಿ ಮನವಿ ಮಾಡಿದರು.
ಅವರು 2020 ರಲ್ಲಿ ಒಂದು ಪೋಸ್ಟ್‌ನಲ್ಲಿ ಅವರಿಗೆ ದೀರ್ಘಕಾಲದವರೆಗೆ ಯಾವುದೇ ಕೆಲಸವಿಲ್ಲ.ಭಾರಿ ಶುಲ್ಕವನ್ನು ವಿಧಿಸುತ್ತಾರೆ ಮತ್ತು ಅದಕ್ಕಾಗಿಯೇ ಅವರು ಕೆಲಸ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಜನರು ತಪ್ಪಾಗಿ ಅರ್ಥೈಸಿದ್ದಾರೆ ಎಂದು ನಟಿ ಹೇಳಿದ್ದಾರೆ. ಪಾರ್ಟಿಗಳಿಗೆ ಹೋಗದ ಕಾರಣ ಅವರ ಸಂಪರ್ಕಗಳು ಉತ್ತಮವಾಗಿಲ್ಲದಿರವುದು ಕೆಲಸವನ್ನು ಪಡೆಯದಿರಲು ಒಂದು ಕಾರಣ ಎನ್ನುತ್ತಾರೆ.
ಸುಮೋನಾ ಎಂಡೊಮೆಟ್ರಿಯೊಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರು ಕಳೆದ ವರ್ಷ ಸಾಮಾಜಿಕ ಮಾಧ್ಯಮಗಳ ಮೂಲಕ ಈ ಬಗ್ಗೆ ಮಾಹಿತಿ ನೀಡಿದರು. ಕಳೆದ 11 ವರ್ಷಗಳಿಂದ ತನಗೆ ಈ ಕಾಯಿಲೆ ಇದೆ. ಈ ಕಾರಣದಿಂದಾಗಿ, ಅವರ ಗರ್ಭಾಶಯದಲ್ಲಿ ನೋವು ಇದೆ. ರೋಗವನ್ನು ತೊಡೆದುಹಾಕಲು ಏಕೈಕ ಮಾರ್ಗವೆಂದರೆ ಉತ್ತಮ ಆಹಾರ, ವ್ಯಾಯಾಮ ಮತ್ತು ಸ್ಟ್ರೇಸ್ ಫ್ರೀ ಜೀವನಶೈಲಿ ಎಂದು ಸುಮೋನಾ ಹೇಳಿದರು.
'ಕಸಮ್ ಸೆ' ಧಾರಾವಾಹಿಯ ಮೂಲಕ ಸುಮೋನಾ ಕಿರುತೆರೆಗೆ ಹೆಜ್ಜೆ ಹಾಕಿದ್ದರು. ಆದಾಗ್ಯೂ, 'ಬೇಡ್ ಅಚೆ ಲಾಗ್ಟೆ ಹೈ' ಧಾರಾವಾಹಿಯ ಮೊದಲ ಸೀಸನ್‌ನಲ್ಲಿ ರಾಮ್ ಕಪೂರ್ ಅವರ ಸಹೋದರಿಯ ಪಾತ್ರವನ್ನು ಅವರು ಪಡೆದರು.
ಸುಮೋನಾ 'ಕಹಾನಿ ಕಾಮಿಡಿ ಸರ್ಕಸ್ ಕಿ', 'ಏಕ್ ಥಿ ಹೀರೋಯಿನ್', 'ಕಾಮಿಡಿ ನೈಟ್ಸ್ ವಿಥ್ ಕಪಿಲ್', 'ಜಮೈ ರಾಜಾ' ಮತ್ತು 'ದಿ ಕಪಿಲ್ ಶರ್ಮಾ ಶೋ' (ಫ್ರ್ಯಾಂಚೈಸ್) ನಂತಹ ಶೋ ಮತ್ತು ಹಾಸ್ಯ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ.