ಕನ್ಯಾಕುಮಾರಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟ ಯಶವಂತ್ ಗೌಡ ಇದೀಗ ಪಕ್ಕದ ತೆಲುಗಿಗೆ ಹಾರಿದ್ದಾರೆ. 

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟ ಯಶವಂತ್ ಗೌಡ ಇದೀಗ ಪಕ್ಕದ ತೆಲುಗಿಗೆ ಹಾರಿದ್ದಾರೆ. ಕನ್ಯಾಕುಮಾರಿ ಧಾರಾವಾಹಿಯಲ್ಲಿ ಯಶವಂತ್ ಗೌಡ, ಚರಣ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀರೋ ಆಗಿ ಮಿಂಚಿದ್ದ ಯಶವಂತ್‌ಗೆ ಈ ಧಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಅಂದಹಾಗೆ ಕನ್ಯಾಕುಮಾರಿ ಧಾರಾವಾಹಿ ಈಗಾಗಲೇ ಪ್ರಸಾರ ನಿಲ್ಲಿಸಿದೆ. ಈ ಸೀರಿಯಲ್ ಮುಗಿಯುತ್ತಿದ್ದಂತೆ ಯಶವಂತ್ ಮತ್ತೊಂದು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಅದು ಪಕ್ಕದ ತೆಲುಗಿನಲ್ಲಿ ಎನ್ನುವುದೇ ವಿಶೇಷ. ಹೌದು ಮೊದಲ ಬಾರಿಗೆ ತೆಲುಗು ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ ಯಶವಂತ್. ಅಂದಹಾಗೆ ಈಗಾಗಲೇ ಸಾಕಷ್ಟು ಕನ್ನಡದ ಕಿರುತೆರೆ ಕಲಾವಿದರು ತೆಲುಗು ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಇದೀಗ ಆ ಲಿಸ್ಟ್‌ಗೆ ಯಶವಂತ್ ಕೂಡ ಸೇರಿಕೊಂಡಿದ್ದಾರೆ. 

ಅಂದಹಾಗೆ ಯಶವಂತ್ ಮೊದಲ ತೆಲುಗು ಸೀರಿಯಲ್ ಹೆಸರು 'ಅಮ್ಮಾಯಿಗಾರು'. ಈ ಬಗ್ಗೆ ನಟ ಯಶವಂತ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದು ಒಂದಿಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಮತ್ತೊಂದು ಹೊಸ ಪಯಣದ ಆರಂಭವಾಗಿದೆ ಎಂದಿರುವ ಯಶವಂತ್ ಹೊಸ ಧಾರಾವಾಹಿ ಬಗ್ಗೆ ಉತ್ಸುಕನಾಗಿರುವುದಾಗಿ ಹೇಳಿದ್ದಾರೆ. 'ಕನ್ನಡದ ಮೊದಲ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತೆ ಪಕ್ಕದ ಉದ್ಯಮದಲ್ಲಿ ಪ್ರಾಜೆಕ್ಟ್ ಸಿಕ್ಕಿರುವುದು ಖುಷಿಯಾಗಿದೆ. ತುಂಬಾ ಉತ್ಸುಕನಾಗಿದ್ದೇನೆ' ಎಂದು ಹೇಳಿದರು. 

ಅಂದಹಾಗೆ ಯಶವಂತ್ ತೆಲುಗಿನ ಅಮ್ಮಾಯಿಗಾರು ಧಾರಾವಾಹಿಯಲ್ಲಿ ರಾಜು ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಚರಣ್ ಆಗಿ ಮಿಂಚಿದ್ದ ಯಶವಂತ್ ಇದೀಗ ತೆಲುಗಿನಲ್ಲಿ ರಾಜು ಆಗಿ ಮಿಂಚಲು ಸಜ್ಜಾಗಿದ್ದಾರೆ. ಈ ಬಗ್ಗೆ ಮಾತನಾಡಿದ ನಟ, 'ತೆಲುಗಿನ ಅಮ್ಮಾಯಿಗಾರು ಧಾರಾವಾಹಿಯಲ್ಲಿ ರಾಜು ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದೀನಿ. ಈಗಾಗಲೇ ಪ್ರೋಮೋ ಶೂಟ್ ಮುಕ್ತಾಯವಾಗಿದೆ. ಚಿತ್ರೀಕರಣ ತುಂಬಾ ಖುಷಿ ಕೊಟ್ಟಿದೆ' ಎಂದು ಹೇಳಿದ್ದಾರೆ. 

Kannadathi: ರತ್ನಮಾಲಾ ಕಂಪನಿಯ ಹೊಸ ಎಂಡಿ ಹರ್ಷ ಕುಮಾರ್! ಅದರೆ ಇದೆಷ್ಟು ದಿನ?

ಅಂದಹಾಗೆ ಯಶವಂತ್ ಜೊತೆ ಜೋಡಿಯಾಗಿ ಕನ್ನಡ ಕಿರುತೆರೆಯ ಖ್ಯಾತ ನಟಿ, ಈಗಾಗಲೇ ತೆಲುಗು ಟಿವಿಯಲ್ಲಿ ಮಿಂಚುತ್ತಿರುವ ನಿಶಾ ರವಿಕೃಷ್ಣನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿವರಿಸಿದ ನಟ ಯಶವಂತ್, 'ತೆಲುಗಿನ ಧಾರಾವಾಹಿಯಲ್ಲಿ ಕನ್ನಡದ ನಟಿ ನಿಶಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಂದು ಅದ್ಭುತವಾದ ಫೀಲಿಂಗ್. ನಾನು ಇನ್ನು ತೆಲುಗು ಕಲಿಯಬೇಕು. ಹಾಗಾಗಿ ಇದು ಸವಾಲಿನ ಕೆಲಸವಾಗಿದೆ. ಶೀಘ್ರದಲ್ಲೇ ಭಾಷೆ ಕಲಿಯುತ್ತೇನೆ ಎನ್ನುವ ಭರವಸೆ ಇದೆ' ಎಂದು ಹೇಳಿದ್ದಾರೆ. 

ರಾಮಾಚಾರಿ: ಸಿದ್ಧಿಮಂಗಲ ದಟ್ಟ ಕಾಡಲ್ಲಿ ಚಾರು, ಮಾನ್ಯತಾ ರಾಮಾಚಾರಿ ಕಾಲು ಹಿಡಿಯೋದೊಂದು ಬಾಕಿ!

ಉತ್ತಮ ಪ್ರಾಜೆಕ್ಟ್ ಸಿಕ್ಕರೆ ಖಂಡಿತ ಕನ್ನಡಕ್ಕೆ ವಾಪಾಸ್ ಆಗುತ್ತೀನಿ ಎಂದಿರುವ ಯಶವಂತ್, 'ಕನ್ಯಾಕುಮಾರಿ ಧಾರಾವಾಹಿ ನನ್ನ ನಟನಾ ಜೀವನದ ಮೊದಲ ಮೆಟ್ಟಿಲು. ಕನ್ನಡದಲ್ಲೇ ಉತ್ತಮ ಪ್ರಾಜೆಕ್ಟ್ ಸಿಕ್ಕರೆ ಖಂಡಿತ ಕನ್ನಡ ಕಿರುತೆರೆಗೆ ಮತ್ತೆ ವಾಪಾಸ್ ಬರುತ್ತೇನೆ' ಎಂದು ಹೇಳಿದರು.