ಪೂರ್ಣಿ v/s ದೀಪಿಕಾ: ಒಬ್ಬಳು ಸೊಸೆ ಎದ್ರು ಸಿಕ್ಕಿಬಿದ್ದ ಇನ್ನೋರ್ವ ಸೊಸೆ! ಬಟಾಬಯಲಾಗತ್ತಾ ಕುತಂತ್ರ?
ತುಳಸಿಗೆ ಮನೆಯಲ್ಲಿ ಕೆಟ್ಟ ಹೆಸರು ಬರುವಂತೆ ಮಾಡಲು ಓರ್ವ ಸೊಸೆ ಪ್ಲ್ಯಾನ್ ಮಾಡುತ್ತಿದ್ದಾಗಲೇ ಇನ್ನೊಬ್ಬ ಎದುರು ರೆಡ್ಹ್ಯಾಂಡ್ ಸಿಕ್ಕಿಬಿದ್ದಿದ್ದಾಳೆ. ಮುಂದೇನು?
ತುಳಸಿ ಮಾಡಿದ ಅಡುಗೆಗೆ ಉಪ್ಪು ಹಾಕಿ ಮನೆಯವರ ಎದುರು ತುಳಸಿ ತಲೆ ತಗ್ಗುವ ಹಾಗೆ ಮಾಡಿದ್ದಾಳೆ ಅಭಿ ಪತ್ನಿ ದೀಪಿಕಾ. ಎಲ್ಲರ ಎದುರು ಒಳ್ಳೆಯವಳಂತೆ ನಟನೆ ಮಾಡಿದ ದೀಪಿಕಾ ಮೇಲೆ ಯಾರಿಗೂ ಸಂದೇಹ ಬರಲು ಸಾಧ್ಯವೇ ಇಲ್ಲ. ತುಳಸಿ ಮತ್ತು ಆಕೆಯ ಮಕ್ಕಳ ಮೇಲೆ ಕಿಡಿ ಕಾರುತ್ತಿರುವ ಅಭಿಗೂ ಪತ್ನಿಯ ಕುತಂತ್ರ ಗೊತ್ತಿಲ್ಲ. ಆದರೆ ಅತ್ತೆ ಶಾರ್ವರಿಗೆ ಮಾತ್ರ ಎಲ್ಲವೂ ಗೊತ್ತು. ಇಬ್ಬರೂ ಸೇರಿ ತುಳಸಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು, ಆಕೆಗೆ ಚಿತ್ರಹಿಂಸೆ ಕೊಡಬೇಕು ಎಂಬ ಪ್ಲ್ಯಾನ್ ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ಏನೂ ತಪ್ಪು ಮಾಡದ ಮುಗ್ಧ ತುಳಸಿಗೆ ಆಗಾಗ್ಗೆ ಶಿಕ್ಷೆ ಆಗುತ್ತಲೇ ಇರುತ್ತದೆ.
ಅಡುಗೆ ವಿಷಯದಲ್ಲಿಯೂ ಹೀಗೆಯೇ ಆಗಿದೆ. ತುಳಸಿ ಮಾಡಿದ ಅಡುಗೆಗೆ ಉಪ್ಪು ಬೆರೆಸಿದ್ದಾಳೆ. ಆದರೆ ಕಳ್ಳರು ಒಂದಲ್ಲ ಒಂದು ದಿನ ಸಿಕ್ಕೇ ಬೀಳಬೇಕಲ್ವಾ? ಇದೇ ರೀತಿ ಇಲ್ಲಿಯೂ ಆಗಿದೆ. ಇನ್ನೋರ್ವ ಸೊಸೆ, ಅವಿಯ ಪತ್ನಿ ಪೂರ್ಣಿಯ ಕೈಯಲ್ಲಿ ದೀಪಿಕಾ ಸಿಕ್ಕಿಬಿದ್ದಿದ್ದಾಳೆ. ಅತ್ತೆ ತುಳಸಿಯನ್ನು ಅಮ್ಮನಂತೆ ಪ್ರೀತಿಸುವ ಸೊಸೆ ಪೂರ್ಣಿ. ಅನಾಥೆಯಾಗಿರುವ ಈಕೆಗೆ ಅತ್ತೆ-ಮಾವನೇ ಅಪ್ಪ-ಅಮ್ಮನ ರೀತಿ. ಇದೇ ಕಾರಣಕ್ಕೆ ಪೂರ್ಣಿಯನ್ನು ಅನಾಥೆ ಎಂದು ಸದಾ ಚುಚ್ಚು ಮಾತುಗಳಿಂದಲೇ ನೋಯಿಸುತ್ತಿದ್ದಾರೆ ದೀಪಿಕಾ. ಮನೆಯಲ್ಲಿ ಯಾರಿಗೂ ದೀಪಿಕಾ ಕೆಟ್ಟವಳು ಎನ್ನುವುದು ತಿಳಿಯದೇ ಇದ್ದರೂ ಪೂರ್ಣಿಗೆ ಮಾತ್ರ ಅವಳ ಮೇಲೆ ಸಂದೇಹ ಇದ್ದೇ ಇತ್ತು. ಅಷ್ಟಕ್ಕೂ, ಇದಾಗಲೇ, ಮಧ್ಯ ವಯಸ್ಕರ ಮದುವೆ ಕುರಿತ ಧಾರಾವಾಹಿಯಾಗಿರುವ ಶ್ರೀರಸ್ತು ಶುಭಮಸ್ತು ಒಂದು ಕುತೂಹಲ ಹಂತಕ್ಕೆ ಬಂದಿತ್ತು ಎನ್ನುವಾಗಲೇ ಇನ್ನೋರ್ವ ವಿಲನ್ ಎಂಟ್ರಿಯಾಗಿ ವೀಕ್ಷಕರು ಬೇಸರಪಟ್ಟುಕೊಳ್ಳುತ್ತಿದ್ದಾರೆ. ಶಾರ್ವರಿಯೊಬ್ಬಳು ಸಾಲದು ಎಂದು ದೀಪಿಕಾ ಎನ್ನುವ ಇನ್ನೋರ್ವ ವಿಲನ್ ತಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಪದೇ ಪದೇ ಇನ್ಸಲ್ಟ್ ಮಾಡುವವರನ್ನು ನಗುನಗುತ್ತಲೇ ಸೋಲಿಸೋದು ಎಂದ್ರೆ ಇದೇನಾ?
ತನ್ನ ಅತ್ತೆ ತುಳಸಿ ಅಡುಗೆಯಲ್ಲಿ ಎಕ್ಸ್ಪರ್ಟ್ ಎಂದು ತಿಳಿದಿದ್ದ ಪೂರ್ಣಿಗೆ ಇದರಲ್ಲಿ ಏನೋ ಎಡವಟ್ಟು ಆಗಿದೆ ಎಂಬ ಸಂದೇಹ ಮೊದಲಿನಿಂದಲೂ ಇತ್ತು. ಇದೇ ಕಾರಣಕ್ಕೆ ಈಕೆ ದೀಪಿಕಾ ಮೇಲೆ ಕಣ್ಣಿಟ್ಟಿದ್ದಳು. ಮತ್ತೊಂದು ದಿನ ಅಡುಗೆ ಮಾಡಿದಾಗ ಅದಕ್ಕೆ ಸಿಕ್ಕಾಪಟ್ಟೆ ಖಾರ ಹಾಕಲು ದೀಪಿಕಾ ಹೊರಟಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ ದೀಪಿಕಾ. ನನಗೆ ನಿನ್ನ ಮೇಲೆ ಮೊದಲೇ ಡೌಟ್ ಇತ್ತು. ಅದಕ್ಕಾಗಿ ಕಣ್ಣು ಇಟ್ಟಿದ್ದೆ ಎಂದುಕೊಂಡು ಅಡುಗೆ ಕೋಣೆಗೆ ಬಂದಿದ್ದಾಳೆ. ಇದನ್ನು ನೋಡಿ ದೀಪಿಕಾಗೆ ಶಾಕ್ ಆಗಿದೆ. ಅಂದಹಾಗೆ, ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್ ಕಥೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ದೀಪಿಕಾಳ ಮುಖವಾಡ ಬಯಲಾಗುವುದೇ ಎನ್ನುವುದು ಈಗಿರುವ ಪ್ರಶ್ನೆ.
ತುಳಸಿಗೆ ಇಷ್ಟೆಲ್ಲಾ ಕಷ್ಟ ಏಕೆ ಕೊಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ ಸೀರಿಯಲ್ ಫ್ಯಾನ್ಸ್. ಇದಕ್ಕೂ ಮುನ್ನ ತುಳಸಿ ತನ್ನ ಹೆತ್ತ ಮಗಳಿಂದಲೇ ತೊಂದರೆ ಅನುಭವಿಸುತ್ತಿರುವುದಕ್ಕೂ ಪ್ರೇಕ್ಷಕರು ತುಂಬಾ ಬೇಸರ ವ್ಯಕ್ತಹಾಕುತ್ತಿದ್ದಾರೆ. ತುಳಸಿಯೆಂಬ ಒಳ್ಳೆಯ ಹೆಣ್ಣುಮಗಳು ಇಷ್ಟೆಲ್ಲಾ ತೊಂದರೆ ಅನುಭವಿಸುವುದು ನೋಡಲು ಸಾಧ್ಯವಿಲ್ಲ. ಆಕೆ ಎಷ್ಟೇ ಒಳ್ಳೆಯದ್ದನ್ನೇ ಮಾಡಿದರೂ ಆಕೆಗೆ ತೊಂದರೆಯೇ ಸಿಗುವುದು ಸರಿಯಲ್ಲ ಎನ್ನುತ್ತಿದ್ದಾರೆ. ಒಂದೆಡೆ ದೀಪಿಕಾ, ಶಾರ್ವರಿಯಾದರೆ ಇನ್ನೊಂದೆಡೆ ಖುದ್ದು ಮಗಳು ಸಂಧ್ಯಾಳೇ ತುಳಸಿಗೆ ವಿಲನ್ ಆಗಿರುವುದು ಸರಿಯಲ್ಲ ಎಂದೂ ಹೇಳುತ್ತಿದ್ದಾರೆ. ಇಂಥ ಒಬ್ಬಳು ಮಗಳು ಮನೆಯಲ್ಲಿ ಇದ್ದರೆ ಸರ್ವನಾಶ ಎನ್ನುತ್ತಿದ್ದರೆ, ದೀಪಿಕಾಳಂತ ಸೊಸೆಯಿದ್ದರೆ ಬದುಕೇ ದುಸ್ತರ ಎನ್ನುತ್ತಿದ್ದಾರೆ.
ರಾಮ್ ಬಾಯಿಬಿಡಲ್ಲ, ಸೀತಾಗೆ ಅರ್ಥವಾಗಲ್ಲ ಎನ್ನುವಷ್ಟರಲ್ಲಿಯೇ ದೇವರ ಮುಂದೆ ನಡೆದೇ ಹೋಯ್ತು ಪವಾಡ