Kannadathi: ಮದುಮಗಳಂತೆ ರೆಡಿಯಾದ ವರೂ, ಹರ್ಷನ ಹೆಂಡ್ತಿ ನಾನೇ ಅಂತಿದ್ದಾಳಲ್ಲಪ್ಪಾ!
ಕನ್ನಡತಿ ಸೀರಿಯಲ್ ಪ್ರಮುಖ ಘಟ್ಟದತ್ತ ಮುಂದುವರಿಯುತ್ತಿದೆ. ಒಂದೆಡೆ ಮದುಮಗಳು ಭುವಿ ಅಲಂಕಾರ ಮಾಡಿಕೊಂಡು ಕಳೆ ಕಳೆಯಾಗಿ ಕಾಣ್ತಿದ್ರೆ, ಇನ್ನೊಂದೆಡೆ ವರೂ ತಾನೂ ಮದುಮಗಳ ಹಾಗೆ ರೆಡಿ ಆಗಿದ್ದಾಳೆ. ಹರ್ಷನ ಹೆಂಡ್ತಿ ನಾನೇ ಅಂತಿದ್ದಾಳೆ. ತನ್ನ ಹಠಕ್ಕೆ ಏನು ಮಾಡಲೂ ಹೇಸದ ಅವಳ ಮುಂದಿನ ನಡೆ ಏನು?
ಕನ್ನಡತಿ ಸೀರಿಯಲ್ (Kannadathi serial) ಇದೀಗ ಮುಖ್ಯ ಘಟ್ಟಕ್ಕೆ ಬಂದು ನಿಂತಿದೆ. ಏನೇನೋ ವಿಘ್ನಗಳ ನಡುವೆ ಮದುವೆ (Marriage) ಶಾಸ್ತ್ರ ಶುರುವಾಗಿದೆ. ಮದುವೆಯ ಮುಂಜಾನೆ ಎದ್ದು ಬಂದ ಹರ್ಷನಿಗೆ (Harsha) ಭಾವಿ ಹೆಂಡತಿ ಭುವಿ (Bhuvi) ತಾನೇ ಕೈಯಾರೆ ಕಾಫಿ ಕೊಟ್ಟಿದ್ದಾಳೆ. ಅವಳ ಮದುಮಗಳ ಅಲಂಕಾರಗಳೆಲ್ಲ ನಡೆದು ಆಕೆ ಗೌರಿ ಪೂಜೆಗೆ ಕೂತಿದ್ದಾಳೆ.
ಇನ್ನೊಂದು ಕಡೆ ಥೇಟ್ ಮದುಮಗಳ ಹಾಗೆ ವರೂಧಿನಿಯೂ ಅಲಂಕರಿಸಿಕೊಳ್ಳುತ್ತಿದ್ದಾಳೆ. ಬಗೆ ಬಗೆಯ ಒಡವೆಗಳು, ಮುಂದಲೆಬೊಟ್ಟು, ಮೊಗ್ಗಿನ ಜಡೆ ಎಲ್ಲವನ್ನೂ ತೊಟ್ಟು ಥೇಟ್ ಮದುಮಗಳಂತೇ ಬಂದ ಅವಳನ್ನು ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ. ಭುವಿಗೂ ಅವಳ ಅಲಂಕಾರ ತುಸು ಅನುಮಾನ ತಂದರೂ, ಅವಳು ಒಳ್ಳೆ ಮನಸ್ಸಿಂದ ಆಗೋದೆಲ್ಲ ಒಳ್ಳೆಯದಕ್ಕೇ ಅಂದುಕೊಂಡಿದ್ದಾಳೆ. ಹಳೆಯದನ್ನೆಲ್ಲ ಮರೆತು ವರೂ ಖುಷಿಯಿಂದ ತನ್ನ ಮದುವೆಗೆ ಅಲಂಕಾರ ಮಾಡಿಕೊಂಡಿದ್ದಾಳೆ ಅಂತಲೇ ಭಾವಿಸುತ್ತಾಳೆ. ಆದರೆ 'ನೀನೇ ಮದುಮಗಳ ಹಾಗೆ ಕಾಣ್ತಿದ್ದೀಯಾ' ಅಂದ ಮಹಿಳೆಯೊಬ್ಬರ ಮಾತಿಗೆ ವರೂ ಕೊಟ್ಟ ಪ್ರತಿಕ್ರಿಯೆ ಅಲ್ಲಿದ್ದವರೆಲ್ಲ ಯಾಕೆ ಭುವಿಯನ್ನೂ ಕಸಿವಿಸಿಗೆ ದೂಡುತ್ತೆ. ವರೂ, 'ಹೌದು, ಮದುಮಗಳ ಹಾಗೆ ರೆಡಿ ಆಗಿದ್ದೀನಿ. ಯಾಕೆ ಇಲ್ಲೇ ಮದುವೆ ಆಗ್ಬಾರ್ದು, ಹೇಗಿದ್ರು ಎಲ್ಲ ರೆಡಿ ಆಗಿದ್ಯಲ್ಲಾ..' ಅಂದು ಬಿಡ್ತಾಳೆ. ಅವಳ ಮಾತಿಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗದೇ ಭುವಿ ಒದ್ದಾಡಿ ಬಿಡ್ತಾಳೆ.
Kannadathi: ಡಾ.ದೇವ್ ಪಾತ್ರಧಾರಿ ವಿಜಯ ಕೃಷ್ಣ ಸೀರಿಯಲ್‌ನಿಂದ ಔಟ್! ಹೇಮಂತ್ ಎಂಟ್ರಿ..
ವರೂಗೆ ಈ ಮದುವೆ ಮುರಿಯೋ ಪ್ಲಾನಿದೆ ಅನ್ನೋದು ಆರಂಭದಲ್ಲೇ ರಿವೀಲ್ ಆಗಿದೆ. ಹರ್ಷ ನನ್ನ ಹೀರೋ, ಹರ್ಷನ ಹೆಂಡ್ತಿ ನಾನೇ ಅನ್ನೋದನ್ನು ಅವಳು ಸಾವಿರ ಸಲವಾದ್ರೂ ಹೇಳಿದ್ದಾಳೆ. ಅವಳ ಆ ವರ್ತನೆಗೆ ವೀಕ್ಷಕರು ಶಾಪ ಹಾಕ್ತಿದ್ದಾರೆ. ಅವಳಿಗೆ 'ಸೈಕೋ' ಅನ್ನೋ ಅಡ್ಡ ಹೆಸರನ್ನೂ ಇಟ್ಟಿದ್ದಾರೆ. ಆದರೆ ಸದ್ಯಕ್ಕೆ ಅವಳು ಆಡುತ್ತಿರುವ ರೀತಿ ನೋಡಿದರೆ ಖಂಡಿತಾ ಅವಳು ತನಗಿಟ್ಟಿರೋ ಹೆಸರನ್ನು ನಿಜ ಮಾಡುವ ಎಲ್ಲ ಸೂಚನೆಗಳೂ ಕಾಣ್ತಿವೆ. ತನ್ನ ಹಠ ಈಡೇರಿಕೆಗೆ ಏನು ಮಾಡೋದಕ್ಕೂ ಹೇಸದವಳು ವರೂ. ಆದರೆ ಈಗ ಅವಳಿಗೆ ತಾನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಗೆಳತಿ ಭುವಿ ಒಂದು ಕಡೆ ಇದ್ರೆ, ತನ್ನ ಜೀವನವೇ ಆಗಿರುವ ಹರ್ಷ ಇನ್ನೊಂದು ಕಡೆ ಇದ್ದಾನೆ. ಅವಳಿಗೆ ತನ್ನ ಗೆಳತಿಯ ಮದುವೆ ನಿಲ್ಲೋದು ಇಷ್ಟ ಇಲ್ಲ. ಆದರೆ ಹರ್ಷನನ್ನು ಬಿಟ್ಟು ಕೊಡಲೂ ಅವಳು ರೆಡಿ ಇಲ್ಲ.
Hitler Kalyana: ಒಂದು ಕಡೆ ಡಿವೋರ್ಸ್ ಬೆಂಕಿ, ಇನ್ನೊಂದೆಡೆ ಪ್ರೀತಿಯ ಕಚಗುಳಿ
ಇನ್ನೊಂದು ಕಡೆ ಗೌರಿ ಪೂಜೆ ಶುರುವಾಗಿದೆ. ಎಲ್ಲರಿಗೂ ಮಂಗಳವನ್ನುಂಟು ಮಾಡುವ ಗೌರಿಯ ಪೂಜೆಯ ಮಹತ್ವವನ್ನು ಭುವಿಯ ಚಿಕ್ಕಮ್ಮ ವಿವರಿಸಿದ್ದಾರೆ. ಪುರೋಹಿತರ ಆಣತಿಯಂತೆ ಭುವಿ ಶ್ರದ್ಧೆಯಿಂದ ಗೌರಿ ಪೂಜೆ ಮಾಡ್ತಿದ್ದಾಳೆ. ಗೌರಿ ದೇವಿ, ಬೇರೆ ದೇವತೆಯರ ವಿಗ್ರಹವನ್ನು ಸೊಗಸಾಗಿ ಅಲಂಕರಿಸಲಾಗಿದೆ. ಕಾಡಿನ ನಡುವೆ ಇರುವ ರೆಸಾರ್ಟ್ ನಂಥಾ ಜಾಗದಲ್ಲಿ ಮದುವೆಯ ವಿಧಿ ವಿಧಾನಗಳು ನಡೆಯುತ್ತಿವೆ. ಗೌರಿ ಪೂಜೆಯ ವೇಳೆ ಭುವಿಯ ಕೊರಳಿಗೆ ತವರಿನ ತಾಳಿಯನ್ನು ಕಟ್ಟಲಾಗುತ್ತೆ. ಭುವಿಯಂತೇ ತಾನು ಮನದಲ್ಲೇ ಆಚರಣೆಗಳನ್ನು ನೆರವೇರಿಸುತ್ತಾ ವರೂ ವ್ಯಂಗ್ಯವಾಗಿ ಒಂದು ಮಾತು ಹೇಳ್ತಾಳೆ, 'ನೀನೆಷ್ಟೇ ಪೂಜೆ ಮಾಡಿದರೂ ಫಲ ಸಿಗೋದು ನಂಗೇ.. ಹರ್ಷ ನನ್ನ ಹೀರೋ. ಅವನ ಹೆಂಡ್ತಿ ನಾನೇ ಆಗೋದು..'. ವರೂ ಹರ್ಷನನ್ನು ಅದೇ ಮಂಟಪದಲ್ಲಿ ಮದುವೆ ಆಗೋದಕ್ಕೆ ಭರ್ಜರಿ ಸ್ಕೀಮ್ ಹಾಕ್ಕೊಂಡಿದ್ದಾಳೆ ಅನ್ನೋದು ಇದರಿಂದ ಸ್ಪಷ್ಟವಾಗುತ್ತೆ.
ಇನ್ನೊಂದೆಡೆ ಅಮ್ಮಮ್ಮನ ಕಥೆ ಮುಗಿಯಿತು ಅನ್ನೋ ಲೆವೆಲ್‌ಗೆ ಅನಾರೋಗ್ಯವಾಗಿ ಮದುವೆ ದಿನ ಏಳೋಕೋ ಆಗದಿದ್ದರೂ ಡಾಕ್ಟರ್ ಬಂದು ತಕ್ಷಣಕ್ಕೆ ಚಿಕಿತ್ಸೆ ಕೊಟ್ಟಿದ್ದಾರೆ. ಎಲ್ಲರೂ ಆತಂಕದಿಂದ ನೋಡುವಾಗಲೇ ಅಮ್ಮಮ್ಮ ಎಂದಿಗಿಂತ ಲವಲವಿಕೆಯಿಂದ ಮಗನ ಮದುವೆಯಲ್ಲಿ ಭಾಗವಹಿಸುತ್ತಿದ್ದಾರೆ.
ಅತ್ತ ಉರಿದು ಬೀಳುತ್ತಿದ್ದ ಮಂಗಳಜ್ಜಿ ಶಾಂತವಾಗಿದ್ದಾರೆ. ಮದುವೆಗೆ ಮೊದಲೇ ಹರ್ಷನಿಗೆ ಕೊಡಬೇಕಿದ್ದ ಸಾಲವನ್ನು ತೀರಿಸಿ ಭುವಿಯೂ ನಿಟ್ಟುಸಿರು ಬಿಟ್ಟಿದ್ದಾಳೆ. ಆದರೆ ವರೂ ಮಾತ್ರ ಕೊನೇವರೆಗೂ ಮದುವೆಗೆ ದೊಡ್ಡ ಅಡ್ಡಿ ಆಗಿಯೇ ಆಗ್ತಾಳೆ ಅನ್ನೋದಂತೂ ಗೊತ್ತಾಗಿದೆ. ಆದರೆ ಅವಳೇನು ಮಾಡ್ತಾಳೆ ಅನ್ನುವುದು ಸದ್ಯದ ಕುತೂಹಲ.
Kannadathi: ಭುವಿ ತಬ್ಬಿಕೊಂಡು ಗಳಗಳನೆ ಅತ್ತ ಮಂಗಳಜ್ಜಿ, ಅಂಥಾ ಮ್ಯಾಜಿಕ್ ಏನ್ ನಡೀತು?