Kannadathi: ಭುವಿ ತಬ್ಬಿಕೊಂಡು ಗಳಗಳನೆ ಅತ್ತ ಮಂಗಳಜ್ಜಿ, ಅಂಥಾ ಮ್ಯಾಜಿಕ್ ಏನ್ ನಡೀತು?
ಕನ್ನಡತಿ ಸೀರಿಯಲ್‌ನಲ್ಲಿ ಕಳೆದೊಂದು ವಾರದಿಂದ ಮದುವೆ ನಡೆಯುತ್ತಿದೆ. ಇಲ್ಲೀವರೆಗೆ ಭುವಿಗೆ ಕೆಟ್ಟದ್ದನ್ನೇ ಬಯಸುತ್ತಿದ್ದ ಮಂಗಳಜ್ಜಿ ಸಡನ್ನಾಗಿ ಒಳ್ಳೆಯರಾಗಿ ಬಿಟ್ಟಿದ್ದಾರೆ. ಅವ್ರಿನ್ನು ಭುವಿಗೆ ತೊಂದ್ರೆ ಮಾಡಲ್ಲ. ಅಂಥಾ ಮ್ಯಾಜಿಕ್ ಏನು ನಡೀತು?
ಮಂಗಳಜ್ಜಿ 'ಕನ್ನಡತಿ' (Kannadathi) ಸೀರಿಯಲ್‌ನಲ್ಲಿ ಬರುವ ಘಾಟಿ ಮುದುಕಿ. ಈಕೆ ಭುವಿ (Bhuvi)ಯ ಅಜ್ಜಿ. ಹಾಗಂತ ನೇರ ಅಜ್ಜಿ(Granny) ಅಲ್ಲ. ಭುವಿ ಚಿಕ್ಕವಳಿದ್ದಾಗಲೇ ಅವಳ ಅಮ್ಮ ತೀರಿಕೊಂಡಿದ್ದಾರೆ. ಆಮೇಲೆ ಅವಳ ಅಪ್ಪ ಎರಡನೇ ಮದುವೆ (Second Marriage) ಆಗಿದ್ದಾರೆ. ಹಾಗೆ ಬಂದ ಭುವಿಯ ಚಿಕ್ಕಮ್ಮನ ತಾಯಿ ಈ ಅಜ್ಜಿ. ಈಕೆಗೆ ಶುರುವಿನಿಂದಲೇ ಭುವಿಯನ್ನು ಕಂಡರಾಗದು. ಅವಳ ಬಗ್ಗೆ ತಾತ್ಸಾರ, ಸಿಟ್ಟು, ಅಸಹನೆ ಎಲ್ಲವೂ ಇದೆ. ಆದರೆ ಈಗ ಏಕಾಏಕಿ ಅಜ್ಜಿ ಮೊಮ್ಮಗಳನ್ನು ತಬ್ಬಿಕೊಂಡು ಮುದ್ದಾಡುತ್ತಿದ್ದಾರೆ. ಆಕೆಯ ಒಳ್ಳೆ ಗುಣಗಳನ್ನು ಮನಸಾರೆ ಹೊಗಳುತ್ತಿದ್ದಾರೆ. ಅಜ್ಜಿಯ ಈ ವರ್ತನೆ, ಭಾವುಕ ಕ್ಷಣಗಳು ಮದುವೆ ಮನೆಯಲ್ಲಿ ಸೇರಿರುವ ಎಲ್ಲರ ಕಣ್ಣಲ್ಲೂ ನೀರು ತರಿಸಿದೆ.
ಅಜ್ಜಿಯ ವರ್ತನೆಯಲ್ಲೇ ಅಜ್ಜಿಯ ಕೆಟ್ಟ ಗುಣಗಳು ಎಲ್ಲರಿಗೂ ರಿವೀಲ್(Reveal) ಆಗುತ್ತವೆ. ಆದರೆ ಭುವಿ ಮಾತ್ರ ಎಂದ್ರೂ ಅಪ್ಪಿ ತಪ್ಪಿಯೂ ಅಜ್ಜಿ ಬಗ್ಗೆ ಹಗುರವಾದ ಮಾತನ್ನಾಡಿದವಳಲ್ಲ. ತಂಗಿ ಬಿಂದು ಅಜ್ಜಿ ಭುವಿಗೆ ಮಾಡುತ್ತಿರುವ ಅನ್ಯಾಯವನ್ನು ವಿರೋಧಿಸಿದರೂ ಭುವಿ ಮಾತ್ರ ತಂಗಿಗೆ ಬೈದು ಅಜ್ಜಿಯ ಸಪೋರ್ಟಿಗೆ(Support) ನಿಲ್ಲುತ್ತಾಳೆ. ಅಜ್ಜಿಯಿಂದ ಎಷ್ಟು ಬೈಸಿಕೊಳ್ಳಲೂ ರೆಡಿ ಇರುತ್ತಾಳೆ. ಹಾಗೆ ನೋಡಿದರೆ ಈ ಅಜ್ಜಿ ಭುವಿಯ ಮನೆಗೆ ಬಂದ ಆರಂಭದಿಂದಲೂ ಅವಳಿಗೆ ಮಾಡಿದ ಅನ್ಯಾಯ ಒಂದೆರಡಲ್ಲ. ಊಟ, ತಿಂಡಿಯಿಂದ ಹಿಡಿದು ಅವಳ ವಿದ್ಯಾಭ್ಯಾಸದವರೆಗೂ ಎಲ್ಲದಕ್ಕೂ ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ. ಈ ಅಜ್ಜಿಯ ದೌಲತ್ತು ಯಾವ ಲೆವೆಲ್‌ಗೆ ಏರಿತ್ತು ಅಂದರೆ ಈ ಸೀರಿಯಲ್ ನೋಡೋ ಪ್ರೇಕ್ಷಕರು ಒಂದು ಕಾಲದಲ್ಲಿ ಭುವಿ ಲೈಫಿಗೆ(Life) ವಿಲನ್‌ನಂತಿದ್ದ ಅಜ್ಜಿಯನ್ನು ಬೈದು ಬೈದು ಇಟ್ಟರು. ಭುವಿ ಚಿಕ್ಕವಳಿದ್ದಾಗ ಅವಳನ್ನು ಪೇಟೆಗೆ ಕರೆದೊಯ್ದು ಅಲ್ಲೇ ಬಿಟ್ಟು ಬಂದ ಕಟುಕಿ ಈ ಅಜ್ಜಿ. ಒಂದು ವೇಳೆ ಆಗ ವರೂ ಭುವಿಯನ್ನು ಮನೆಗೆ ಕರೆದೊಯ್ಯದಿದ್ದರೆ ಆಕೆ ಇಂದು ಏನಾಗುತ್ತಿದ್ದಳೋ.
ಮತ್ತೆ ಬಂದ ಮಗಳು ಜಾನಕಿ: ಅಗಸ್ಟ್‌ನಿಂದ ನಿಮ್ಮ ಅಂಗೈಯಲ್ಲೇ ಟಿಎನ್‌ಎಸ್ ಕತೆ
ಮುಂದೆ ಭುವಿಯ ಅಪ್ಪ ತೀರಿಕೊಂಡಾಗ, ಭುವಿ ಹಿರಿಯ ಮಗಳಾಗಿ ಅಪ್ಪನ ಅಂತ್ಯ ಸಂಸ್ಕಾರ ಮಾಡಲು ಮುಂದಾದಳು. ಇದನ್ನು ತೀವ್ರವಾಗಿ ವಿರೋಧಿಸಿದವಳು ಅಜ್ಜಿ. ಹೆಣ್ಣುಮಕ್ಕಳು ಈ ಕೆಲಸ ಮಾಡಲೇಬಾರದು ಅಂತ ಪಟ್ಟು ಹಿಡಿದ ಅಜ್ಜಿ ಭುವಿಗೆ ಬೈದ ಬೈಗುಳ ಸಾಮಾನ್ಯ ಹೆಣ್ಣುಮಕ್ಕಳು ಕೇಳಿದ್ದರೆ ಏನು ಮಾಡುತ್ತಿದ್ದರೋ. ಕೊನೆಗೆ ಭುವಿಯೇ ಅಪ್ಪನ ಚಿತೆಗೆ ಬೆಂಕಿ ಕೊಡುವುದು ಅಂತ ಎಲ್ಲರೂ ತೀರ್ಮಾನಿಸಿದಾಗ ಅಜ್ಜಿ ಮತ್ತೊಂದು ಟ್ರಿಕ್(Trick) ಪ್ಲೇ ಮಾಡುತ್ತಾಳೆ. ಒಂದುವೇಳೆ ಭುವಿ ಅಪ್ಪನ ಚಿತೆಗೆ ಬೆಂಕಿ ಕೊಡೋದಾದ್ರೆ ಆಕೆ ಗಂಡು ಮಕ್ಕಳು ಮಾಡುವಂತೆ ತಲೆ ಬೋಳಿಸಿಕೊಳ್ಳಬೇಕು ಅಂತ ಷರತ್ತು ವಿಧಿಸುತ್ತಾಳೆ. ಅಜ್ಜಿಯ ಈ ಮಾತು ಅಲ್ಲಿದ್ದ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ. ಕೊನೆಗೆ ಅಂತ್ಯಸಂಸ್ಕಾರ ಮಾಡಲು ಬಂದ ಪುರೋಹಿತರೇ ಅಜ್ಜಿಯನ್ನು ತಡೆಯುತ್ತಾರೆ.
ಹುಟ್ಟುಹಬ್ಬದ ದಿನ ಮತ್ತಷ್ಟು ಹಾಟ್ ಆದ್ ದಿಶಾ; ಬಿಕಿನಿ ಫೋಟೋ ವೈರಲ್
ಹೀಗೆ ಲೀಸ್ಟ್ ಮಾಡುತ್ತಾ ಬಂದರೆ ಈ ಅಜ್ಜಿ ಭುವಿಗೆ ಮಾಡಿದ ಅನ್ಯಾಯ ಒಂದೆರಡಲ್ಲ. ಇದೀಗ ಆ ಅನ್ಯಾಯಗಳಿಗೆಲ್ಲ ಪಶ್ಚಾತಾಪದಿಂದ ಕಣ್ಣೀರು ಹಾಕುತ್ತಾ ಅಜ್ಜಿ ಭುವಿಯನ್ನು ಹೊಗಳುತ್ತಿದ್ದಾಳೆ. ತನ್ನ ಮೊಮ್ಮಗಳ ಗುಣಗಾನ ಮಾಡುತ್ತಿದ್ದಾಳೆ. ಇದ್ಹೇಗೆ ಸಡನ್ನಾಗಿ ಮ್ಯಾಜಿಕ್ ನಡೀತು ಅಂದುಕೊಂಡರೆ ಅದಕ್ಕೊಂದು ಬಲವಾದ ಹಿನ್ನೆಲೆಯೂ ಇದೆ. ಅಜ್ಜಿಯನ್ನು ಭುವಿ ಹರ್ಷ ಮದುವೆಗೆ ಅಂತ ಊರಿಂದ ಕರೆತರುವ ಡ್ರೈವರ್ ವಿಲನ್ ಸಾನಿಯಾ ಗೊತ್ತು ಮಾಡಿದವನು. ಆತ ಅಜ್ಜಿಯನ್ನು ಕಾಡಲ್ಲೇ ಬಿಟ್ಟು ಬಂದಿರುತ್ತಾನೆ. ಅಜ್ಜಿ ಭಯ, ಹೊರಬರುವ ದಾರಿ ಗೊತ್ತಾಗದೇ ದಿಕ್ಕೆಟ್ಟು ನಿಂತಾಗ ಅವರನ್ನು ಹುಡುಕಿ ಕರೆತರುವುದು ರತ್ನಮಾಲಾ. ತನ್ನನ್ನು ಅಂಥಾ ಸ್ಥಿತಿಯಿಂದ ಪಾರುಮಾಡಿದ ರತ್ನಮಾಲಾ ಬಗ್ಗೆ, ಭುವಿಯ ಬಗ್ಗೆ ಅಜ್ಜಿಯ ಅಭಿಪ್ರಾಯ(Opinion)ವೇ ಬದಲಾಗುತ್ತೆ.
ಅಜ್ಜಿ ಈಗ ಭುವಿಗೆ ಪರವಾಗಿ ನಿಂತಿದ್ದಾರೆ. ಕಾಶೀಯಾತ್ರೆಗೆ ಹೊರಟ ಹರ್ಷನಿಗೆ ತನ್ನ ಮೊಮ್ಮಗಳು ಭುವಿ ಎಷ್ಟು ಒಳ್ಳೆಯವಳು ಅನ್ನೋದನ್ನು ತಿಳಿಸಿ ತಿಳಿಸಿ ಹೇಳಿ ಕಣ್ಣೀರುಗರೆಯುತ್ತಾಳೆ. ಅಜ್ಜಿಯ ಈ ವರ್ತನೆ ಕಂಡು ಸಾನಿಯಾ ಬಿಟ್ಟು ಉಳಿದವರೆಲ್ಲ ಗದ್ಗದಿತರಾಗುತ್ತಾರೆ.
ಎಲ್ಲೋ ಒಂದು ಕಡೆ ಸಾನಿಯಾ ಭುವಿಗೆ ಕೆಟ್ಟದ್ದಾಗಲಿ ಅಂತ ಮಾಡಿದ ಕೆಲಸಗಳೆಲ್ಲ ಭುವಿ ಹರ್ಷನಿಗೆ ಒಳ್ಳೆಯದನ್ನೇ ಮಾಡುತ್ತಿವೆ. ಕೆಟ್ಟವರು ಕೆಟ್ಟದ್ದನ್ನೇ ಬಗೆದರೂ ಒಳ್ಳೆಯವರಿಗೆ ಅದರಿಂದ ಹೇಗೆ ಒಳ್ಳೆಯದೇ ಆಗುತ್ತದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಮಂಗಳಜ್ಜಿ ಪಾತ್ರದಲ್ಲಿ ಹಿರಿಯ ಕಲಾವಿದೆ ಆರ್ ಟಿ ರಮಾ(R T Rama) ಅದ್ಭುತ ಅಭಿನಯ ಮೆರೆಯುತ್ತಿದ್ದಾರೆ. ಭುವಿ ಪಾತ್ರದಲ್ಲಿ ರಂಜನಿ ರಾಘವನ್(Ranjani Raghavan), ಹರ್ಷ ಪಾತ್ರದಲ್ಲಿ ಕಿರಣ್ ರಾಜ್(Kiran Raj), ರತ್ನಮಾಲಾ ಆಗಿ ಚೀತ್ಕಳಾ ಬಿರಾದಾರ್ ಮಿಂಚುತ್ತಿದ್ದಾರೆ.
"