ಕನ್ನಡತಿ ಸೀರಿಯಲ್ ನಲ್ಲಿ ಸದ್ಯ ನಾಯಕ ನಾಯಕಿ ಎಂಗೇಜ್ ಮೆಂಟ್ ಸಂಭ್ರಮ. ಶಿವಮೊಗ್ಗ ಜಿಲ್ಲೆ ಸಾಗರದ ಹಳ್ಳಿಯೊಂದರಲ್ಲಿ ಈ ಸೀನ್ ಚಿತ್ರೀಕರಣ ನಡೆದಿದೆ.  ಹರ್ಷ ಭುವಿ ಫುಲ್ ಮದುಮಕ್ಕಳ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ. ಮುಂದೇನಾಗಬಹುದು ಅನ್ನೋ ಕ್ಯೂರಿಯಾಸಿಟಿನಾ, ಇಲ್ಲಿದೆ ಅದಕ್ಕೆ ಉತ್ತರ..

ಕಲರ್ಸ್ ಕನ್ನಡ (Colors Kannada) ವಾಹಿನಿಯ ಬಹಳ ಜನಪ್ರಿಯ ಸೀರಿಯಲ್ 'ಕನ್ನಡತಿ' (Kannadathi). ಒಂದು ಕಡೆ ಅಚ್ಚ ಕನ್ನಡದ ಸೊಗಡು, ಇನ್ನೊಂದು ಕಡೆ ತುದಿಗಾಲಲ್ಲಿ ನಿಲ್ಲಿಸೋ ಕತೆ. ಈ ಕಾರಣದಿಂದ ಎಲ್ಲ ವರ್ಗದ ಎಲ್ಲ ಅಭಿರುಚಿಯ ಜನರ ಫೇವರಿಟ್ ಸೀರಿಯಲ್ ಅನ್ನೋ ಹೆಗ್ಗಳಿಕೆ ಇದರದ್ದು. ಈ ಸೀರಿಯಲ್ ನಾಯಕ ಹರ್ಷ ಮಾಲಾ ಕೆಫೆಯ ಸಿಇಓ. ನಾಯಕಿ ಭುವನೇಶ್ವರಿ ಅಥವಾ ಸೌಪರ್ಣಿಕಾ ಮಾಲಾ ಕೆಫೆಯ ಸ್ಥಾಪಕಿ ರತ್ನಮಾಲಾ ನಡೆಸುತ್ತಿರುವ ಕಾಲೇಜಿನಲ್ಲಿ ಟೀಚರ್. ಹೈ ಕ್ಲಾಸ್ ಫ್ಯಾಮಿಲಿ, ಅದಕ್ಕೆ ತಕ್ಕಂಥಾ ಸ್ಟೈಲ್, ಹವ್ಯಾಸಗಳ ಹರ್ಷ, ಸಂಪೂರ್ಣ ಡಿಫರೆಂಟ್ ಕ್ಯಾರೆಕ್ಟರ್ ನ ಹಳ್ಳಿ ಹುಡುಗಿ, ಮೃದು ಸ್ವಭಾವ, ಹಳೆಯ ಸಂಪ್ರದಾಯದ ಬಗ್ಗೆ ಪ್ರೀತಿ ಇರುವ ಭುವಿ ನಡುವೆ ಅದ್ಯಾವ ಮಾಯದಲ್ಲೋ ಪ್ರೇಮಾಂಕುರವಾಗಿದೆ. ತಿಂಗಳಾನುಗಟ್ಟಲೆ ಸ್ನೇಹ, ಪ್ರೀತಿಯ ಕಣ್ಣಾಮುಚ್ಚಾಲೆ ನಡೆದು ಇದೀಗ ಎಂಗೇಜ್ ಮೆಂಟ್ (Engagement) ಹಂತಕ್ಕೆ ಬಂದು ನಿಂತಿದೆ. ಭುವಿಯ ಊರು ಹಸಿರು ಪೇಟೆ ಯ ಹಳ್ಳಿ ಮನೆ ಎಂಗೇಜ್ ಮೆಂಟ್ ಗೆ ಸಾಕ್ಷಿ ಆಗುತ್ತಿದೆ. ಇಡೀ ರತ್ನಮಾಲಾ ಕುಟುಂಬ ಇದೇ ಖುಷಿಗೆ ಹಸಿರು ಪೇಟೆಯಲ್ಲಿ ಬೀಡುಬಿಟ್ಟಿದೆ.

ರತ್ನಮಾಲಾ ಕೆಫೆಯ ಭಾವೀ ಒಡೆಯನ ನಿಶ್ಚಿತಾರ್ಥ ಪ್ಯಾಲೇಸ್ ಗ್ರೌಂಡ್‌ನಲ್ಲಿ (Palace ground) ಎಲ್ಲರ ಕಣ್ಣು ಕೋರೈಸೋ ಹಾಗೆ ನಡೀಬೇಕಿತ್ತು. ಆದರೆ ಈ ಕುಗ್ರಾಮದಲ್ಲಿ ಕತ್ತಲು ಕತ್ತಲಿರುವ ಪುಟ್ಟ ಕೋಣೆಗಳ ಈ ಸಣ್ಣ ಮನೆಯಲ್ಲಿ ಸಣ್ಣ ಅಲಂಕಾರವೂ ನಡೀತಿದೆ ಅಂತ ತಗಾದೆ ತೆಗೀತಿದ್ದಾಳೆ ವಿಲನ್ ಸಾನಿಯಾ. ಆದರೆ ಹಳ್ಳಿಯ ಸಹಜ ಸುಂದರ ಪರಿಸರದಲ್ಲಿ ಹಳ್ಳಿಯ ಅಲಂಕಾರದಲ್ಲಿ ತನ್ನ ಎಂಗೇಜ್ ಮೆಂಟ್ ನಡೀತಿರೋದಕ್ಕೆ ಹರ್ಷನಿಗೆ ಖುಷಿ ಇದೆ. ಅದಕ್ಕೆ ಸರಿಯಾಗಿ ಎಂಗೇಜ್ ಮೆಂಟ್ ಸೆಟ್ಟಿಂಗ್‌ಅನ್ನು ತೋರಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಕೇವಲ 7.5 ಕಿ.ಮೀ. ದೂರದಲ್ಲಿರುವ ಉದರಿ ಎನ್ನುವ ಪುಟ್ಟ ಹಳ್ಳಿಯೇ ಇದೀಗ ಈ ಕಥೆಯಲ್ಲಿ ಬರುವ ಹಸಿರುಪೇಟೆ ಎಂಬ ಭುವಿಯ ಊರಾಗಿದೆ. ಇಲ್ಲಿನ ಹಳ್ಳಿಮನೆಯೊಂದರಲ್ಲಿ ಎಂಗೇಜ್ ಮೆಂಟ್ ಚಿತ್ರೀಕರಣ ಕಳೆದ ತಿಂಗಳೇ ನಡೆದಿತ್ತು. ಸಾಂಪ್ರದಾಯಿಕ ಶೈಲಿಯ ಹಳೆಯ ಮನೆಯನ್ನು ಈ ನಿಶ್ಚಿತಾರ್ಥಕ್ಕಾಗಿಯೇ ಸೆಟ್ ಮಾಡಲಾಗಿತ್ತು. ಇದೀಗ ಇಲ್ಲಿನ ಹಳ್ಳಿ ಅಲಂಕಾರ ಕನ್ನಡತಿಯಲ್ಲಿ ಗಮನ ಸೆಳೆಯುತ್ತಿದೆ. ಎಲ್ಲೆಲ್ಲೂ ಮಾವಿನ ಎಲೆಗಳ ಹಸಿರು ತೋರಣವಿದೆ. ನಿಶ್ಚಿತಾರ್ಥ ನಡೆಯುವ ಜಾಗಕ್ಕೆ ತೆಂಗಿನ ಗರಿಯ ಚಪ್ಪರ ಹಾಕಲಾಗಿದೆ. ತೆಂಗಿನ ಎಳೆಯ ಗರಿಗಳನ್ನು ಕತ್ತರಿಸಿ ಕೇರಳ ಸಾಂಪ್ರದಾಯಿಕ ಸ್ಟೈಲ್ ನಲ್ಲಿ ಚಪ್ಪರಕ್ಕೆ ಅಲಂಕಾರ ಮಾಡಲಾಗಿದೆ. ಗೊನೆಬಿಟ್ಟ ಬಾಳೆಗಿಡಗಳು ಸುತ್ತಲೂ ಇವೆ. ಬಾಳೆ ಎಲೆ, ಊರಲ್ಲಿ ಸಿಗುವ ಹೂಗಳು, ಮಾವಿನ ಎಲೆಗಳನ್ನು ಬಳಸಿ ಚಂದದ ಮಂಟಪವನ್ನು ಮಾಡಿದ್ದಾರೆ. ಹೂವಿನ ಗಣೇಶನ ಹಿನ್ನೆಲೆಯ ಮಂಟಪದಲ್ಲಿ ನೂತನ ವಧೂವರರಿಗಾಗಿ ಕುರ್ಚಿ ಇಡಲಾಗಿದೆ. 

ಮುಗ್ಗರಿಸಿ ಬಿದ್ದ ನಿವೇದಿತಾ ಗೌಡ ಎರಡು ಹಲ್ಲು ಡಮಾರ್, ಗಂಡ ಅತ್ತೆ ಮಾವ ರಿಯಾಕ್ಷನ್ ಇದು!

ಖುಷಿಯಿಂದ ಮದುವೆ ಆಗುವವರಿಗೆ ದೇವಸ್ಥಾನದಲ್ಲಿ ಅರಶಿನ ದಾರ ಕಟ್ಟಿದರೂ ಖುಷಿಯೇ ಎನ್ನುವ ಹರ್ಷ ತನ್ನ ಎಂಗೇಜ್ ಮೆಂಟ್ ಅಲಂಕಾರ ಅದ್ದೂರಿ ಆಗಿರದಿದ್ದರೂ, ಸರಳವಾಗಿ ಸೊಗಸಾಗಿದೆ. ಎಲ್ಲಕ್ಕಿಂತ ತಾವಿಬ್ಬರೂ ಇಷ್ಟಪಟ್ಟು ಜೊತೆಯಾಗುತ್ತಿರುವ ಕಾರಣ ಅಲಂಕಾರ ಇತ್ಯಾದಿಗಳಿಗಿಂತ ನಮ್ಮ ಪ್ರೀತಿಯೇ ಹೆಚ್ಚು ಮ್ಯಾಟರ್ ಆಗುತ್ತೆ ಅನ್ನೋ ಮೂಲಕ ಸಾನಿಯಾಗೆ ಚುರುಕು ಮುಟ್ಟಿಸಿದ್ದಾನೆ. 

ಈಗ ಹೆಚ್ಚಿನ ಸೀರಿಯಲ್‌ ಗಳಲ್ಲಿ ನಿಶ್ಚಿತಾರ್ಥವನ್ನು ರೆಸಾರ್ಟ್ ಗಳಲ್ಲಿ ಬಹಳ ಅದ್ದೂರಿಯಾಗಿ ಚಿತ್ರೀಕರಿಸಲಾಗುತ್ತದೆ. ಹೆಲಿಕಾಪ್ಟರ್ ಬಳಸಿ ವಧೂವರರನ್ನು ಕರೆತರೋದು, ಅದ್ದೂರಿ ಮಂಟಪಗಳು, ಎಲ್ಲೆಲ್ಲೂ ಆಧುನಿಕ ಶೃಂಗಾರ ಇತ್ಯಾದಿಗಳಿಂದ ಟಿಆರ್ ಪಿ ಏರಿಸಿಕೊಳ್ಳುವ ಸರ್ಕಸ್ ಮಾಡಲಾಗುತ್ತೆ. ಆದರೆ ಡಿಫರೆಂಟ್ ಕತೆಯಿಂದಲೇ ಗಮನ ಸೆಳೆದಿರೋ ಕನ್ನಡತಿ ಸೀರಿಯಲ್ ಎಂಗೇಜ್‌ಮೆಂಟ್‌ನಂಥಾ ಸನ್ನಿವೇಶವನ್ನೂ ಅರ್ಥಗರ್ಭಿತವಾಗಿ ತಂದಿರೋದು ವಿಶೇಷ. ಈ ಮೂಲಕ ತಾನು ಎಲ್ಲದರಲ್ಲೂ ಡಿಫರೆಂಟ್ ಅಂತ ಕನ್ನಡತಿ ಟೀಮ್ ಹೇಳಹೊರಟಿದೆ. 

ನನ್ನಮ್ಮ ಸೂಪರ್‌ ಸ್ಟಾರ್ ವಿನ್ನರ್ ವಂಶಿಕಾ ಮತ್ತು ಯಶಸ್ವಿನಿ, ಕೈ ಸೇರಿದ ಮೊತ್ತ ಎಷ್ಟು ಗೊತ್ತಾ?

 ಒಂದೂಟದಲ್ಲಿ ಸಿಹಿ, ಹುಳಿ, ಖಾರ, ಉಪ್ಪು ಇತ್ಯಾದಿ ಷಡ್ರಸಗಳು ಇರುವ ಹಾಗೆ ಸದ್ಯದ ಈ ಎಪಿಸೋಡ್ ಇದೆ. ಇಲ್ಲಿ ಸ್ವೀಟ್ ಪ್ರಣಯ ಹಕ್ಕಿಗಳು (Love birds) ಹರ್ಷ ಮತ್ತು ಭುವಿ ನವ ಬದುಕಿನ ಕನಸಿನಲ್ಲಿದ್ದಾರೆ. ಅಜ್ಜಿ ಮಂಗಳಮ್ಮ ಉರಿ ಮುಖದಿಂದಲೇ ಆಗಾಗ ತಗಾದೆ ತೆಗೆಯುತ್ತಾ ಇದ್ದಾರೆ. ಮದುವೆಯಾದರೆ ರತ್ನಮಾಲಾ ಅವರ ಕೋಟ್ಯಂತರ ರುಪಾಯಿ ಸಾಮ್ರಾಜ್ಯಕ್ಕೆ ಒಡತಿಯಾಗುವ ಭುವಿ ಬಗ್ಗೆ ಅವರಿಗೆ ಒಳಗೊಳಗೇ ಅಸಹನೆ, ಕೋಪ. ಮೊಸರಿನಲ್ಲೂ ಕಲ್ಲು ಹುಡುಕುತ್ತಾ ಹೇಗೆ ಈ ಸಂಬಂಧ ಕೊನೆಗೊಳಿಸಬಹುದು ಅನ್ನೋ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಇನ್ನೊಂದು ಕಡೆ ಭಗ್ನಪ್ರೇಮಿ ವರೂಧಿನಿ, ಮತ್ತೊಂದೆಡೆ ವಿಲನ್ ಸಾನಿಯಾ, ಜೊತೆಗೆ ರತ್ನಮ್ಮ, ಹರ್ಷನ ತಮ್ಮ ಆದಿ, ತಂಗಿ ಸುಚಿ, ಭುವಿಯ ಕುಟುಂಬದವರಿದ್ದಾರೆ. ಉಂಗುರಗಳು ಬಂದಾಗಿವೆ. ಈ ಎಲ್ಲ ಅಡೆತಡೆಗಳ ನಡುವೆ ಮುಂದಿನ ವಾರವಿಡೀ ಎಂಗೇಜ್‌ಮೆಂಟ್ ಖುಷಿ ಆವರಿಸೋದು ಪಕ್ಕಾ. ಎಂಥಾ ಅಡೆತಡೆಗಳಿದ್ದರೂ ಅವನ್ನೆಲ್ಲ ಬೇಧಿಸಿ ಹರ್ಷನ ಬೆರಳಿಗೆ ಭುವಿ ರಿಂಗ್ ಹಾಕೋದು ಪಕ್ಕಾ. ಈ ಖುಷಿಯನ್ನು ಕಣ್ತುಂಬಿಸಿಕೊಳ್ಳಲು ಪ್ರೇಕ್ಷಕರೂ ಕಾತರದಿಂದ ಕಾಯ್ತಿದ್ದಾರೆ. 

ಅನುಪಮ ಧಾರಾವಾಹಿಯ Rupali Ganguly ಜೀವನದ ಇಂಟರೆಸ್ಸಿಂಗ್‌ ಫ್ಯಾಕ್ಟ್ಸ್‌