ಅನುಪಮ ಧಾರಾವಾಹಿಯ Rupali Ganguly ಜೀವನದ ಇಂಟರೆಸ್ಸಿಂಗ್ ಫ್ಯಾಕ್ಟ್ಸ್
ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ಅನುಪಮಾದಲ್ಲಿ (Anupamaa) ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ರೂಪಾಲಿ ಗಂಗೂಲಿ(Rupali Ganguly) 45 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 5 ಏಪ್ರಿಲ್ 1977 ರಂದು ಕೋಲ್ಕತ್ತಾದಲ್ಲಿ ಜನಿಸಿದ ರೂಪಾಲಿ 7 ವರ್ಷದವರಿದ್ದಾಗ ನಟನಾ ಜಗತ್ತಿಗೆ ಪ್ರವೇಶಿಸಿದ್ದರು. ಆಕೆ ಮೊದಲು ಕಾಣಿಸಿಕೊಂಡಿದ್ದು ಅನಿಲ್ ಕಪೂರ್ ಮತ್ತು ಅಮೃತಾ ಸಿಂಗ್ ಅವರ ಸಾಹೇಬ್ ಚಿತ್ರದಲ್ಲಿ. ರೂಪಾಲಿ ಅವರ ತಂದೆ ಈ ಚಿತ್ರದ ನಿರ್ದೇಶಕರು. ರೂಪಾಲಿ ತನ್ನ ವೃತ್ತಿಜೀವನದಲ್ಲಿ ಅನೇಕ ಪ್ರಸಿದ್ಧ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಮದುವೆಯಾದ ನಂತರ ನಟನಾ ಲೋಕದಿಂದ ಕೊಂಚ ವಿರಾಮ ತೆಗೆದುಕೊಂಡರು. ಅವರು ಉದ್ಯಮಿ ಅಶ್ವಿನ್ ವರ್ಮಾ ಅವರನ್ನು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ರೂಪಾಲಿ ಗಂಗೂಲಿಯವರ ಜೀವನಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳು ಇಲ್ಲಿವೆ.
ರೂಪಾಲಿ ಗಂಗೂಲಿ - ಪತಿ ಅಶ್ವಿನ್ ವರ್ಮಾ ಫೈಲ್ ಫೋಟೊ
ರೂಪಾಲಿ ಗಂಗೂಲಿ ಅವರು ತಮ್ಮ ಮದುವೆಗೆ 12 ವರ್ಷಗಳ ಮೊದಲೇ ಉದ್ಯಮಿ ಅಶ್ವಿನ್ ವರ್ಮಾ ಅವರ ಪರಿಚಯ ಹೊಂದಿದ್ದರು. ಇಬ್ಬರ ನಡುವೆ ಪ್ರೀತಿಯಿಲ್ಲದಿದ್ದರೂ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು.
ರೂಪಾಲಿ ಗಂಗೂಲಿ - ಪತಿ ಅಶ್ವಿನ್ ವರ್ಮಾ ಫೈಲ್ ಫೋಟೊ
ಆದರೆ, ಅಶ್ವಿನ್ ಅವರನ್ನು ಮದುವೆಯಾಗುವ ಮೊದಲು ರೂಪಾಲಿ ಗಂಗೂಲಿ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅಶ್ವಿನ್ ಬೇರೆ ಅವರನ್ನು ಮದುವೆಯಾಗುವುದನ್ನು ನೋಡಲಾಗಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಬಹಿರಂಗಪಡಿಸಿದರು.
ರೂಪಾಲಿ ಗಂಗೂಲಿ - ಪತಿ ಅಶ್ವಿನ್ ವರ್ಮಾ ಫೈಲ್ ಫೋಟೊ
ನಮ್ಮ ನಡುವೆ ಸಾಕಷ್ಟು ಅಂಡರ್‌ಸ್ಟಾಂಡಿಗ್ ಇತ್ತು, ಹಾಗಾಗಿ ನಾವು ಒಬ್ಬರನ್ನೊಬ್ಬರು ಪ್ರಪೋಸ್ ಮಾಡಲಿಲ್ಲ. ಒಂದು ದಿನ ಮದುವೆಯಾಗಲು ನಿರ್ಧರಿಸಿದೆ ಎಂದು ಅಶ್ವಿನ್ ಜೊತೆಗಿನ ಸಂಬಂಧದ ಬಗ್ಗೆ ಹೇಳಿದ್ದರು.
ರೂಪಾಲಿ ಗಂಗೂಲಿ - ಪತಿ ಅಶ್ವಿನ್ ವರ್ಮಾ ಫೈಲ್ ಫೋಟೊ
ಮದುವೆಯ ನಂತರ ಗರ್ಭಿಣಿಯಾಗಲು ರೂಪಾಲಿ ಗಂಗೂಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ವಾಸ್ತವವಾಗಿ, ಆಕೆಗೆ ಥೈರಾಯ್ಡ್ ಸಮಸ್ಯೆ ಇತ್ತು, ಇದರಿಂದಾಗಿ ಅವಳು ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಮತ್ತು ಈ ವಿಷಯದ ಬಗ್ಗೆ ಅವಳು ತುಂಬಾ ಚಿಂತೆ ಮಾಡುತ್ತಿದ್ದರು.
ರೂಪಾಲಿ ಗಂಗೂಲಿ - ಪತಿ ಅಶ್ವಿನ್ ವರ್ಮಾ ಫೈಲ್ ಫೋಟೊ
ಆದರೆ, ವೈದ್ಯರ ಸಲಹೆಯನ್ನು ಪಾಲಿಸಿದೆ ಮತ್ತು ತುಂಬಾ ಕಷ್ಟದಲ್ಲಿ ಗರ್ಭಿಣಿಯಾದೆ ಎಂದು ರೂಪಾಲಿ ಗಂಗೂಲಿ ಹೇಳಿದ್ದರು. ಮದುವೆಯಾದ ಸುಮಾರು 2-3 ವರ್ಷಗಳ ನಂತರ ಅವಳು ರುದ್ರಾಂಶ್ ಎಂಬ ಮಗನಿಗೆ ಜನ್ಮ ನೀಡಿದರು.
ರೂಪಾಲಿ ಗಂಗೂಲಿ
ಮಗನ ಜನನದ ನಂತರ, ರೂಪಾಲಿ ಗಂಗೂಲಿ ನಟನೆಯಿಂದ ವಿರಾಮ ತೆಗೆದುಕೊಂಡರು. ಅವರು ತನ್ನ ಮಗನ ಪಾಲನೆಯಲ್ಲಿ ಮಾತ್ರ ತನ್ನ ಸಮಯವನ್ನು ಕಳೆಯಲು ಬಯಸಿದ್ದರು. ಆ ಸಮಯದಲ್ಲಿ ಅವರು ತಮ್ಮ ಕುಟುಂಬಕ್ಕೆ ಆದ್ಯತೆ ನೀಡಿದರು.
ರೂಪಾಲಿ ಗಂಗೂಲಿ
ನಂತರ ಇದ್ದಕ್ಕಿದ್ದಂತೆ ಅನುಪಮಾ ಧಾರಾವಾಹಿಯ ಆಫರ್ ಬಂದಿದ್ದರಿಂದ ಆಕೆ ಮತ್ತೆ ಟಿವಿಗೆ ಬಂದರು. ಮೇರಾ ಯಾರ್ ಮೇರಾ ದುಷ್ಮನ್ ಚಿತ್ರದಲ್ಲಿ ರೂಪಾಲಿ ಗಂಗೂಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ.
ರೂಪಾಲಿ ಗಂಗೂಲಿ
ಅವರು ಸತ್ರಂಗಿ ಪ್ಯಾರಾಚೂಟ್ ಮತ್ತು ದೋ ಆಂಖ್ ಬರಾಹ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡುವ ಮೂಲಕ ಯಶಸ್ಸನ್ನು ಪಡೆದರು. 2000 ರಲ್ಲಿ ರೂಪಾಲಿಯ ಧಾರಾವಾಹಿ ಸುಕನ್ಯಾ ಮೂಲಕ ಟಿವಿ ಜಗತ್ತಿಗೆ ಪ್ರವೇಶಿಸಿದರು.
ರೂಪಾಲಿ ಗಂಗೂಲಿ - ಪತಿ ಅಶ್ವಿನ್ ವರ್ಮಾ ಫೈಲ್ ಫೋಟೊ
ಇದಲ್ಲದೆ, ಅವರು ಸಾರಾಭಾಯ್ Vs ಸಾರಾಭಾಯ್, ಕಹಾನಿ ಘರ್ ಘರ್ ಕಿ, ಸಂಜೀವನಿ, ಭಾಭಿ, ಏಕ್ ಪ್ಯಾಕೆಟ್ ಉಮೀದ್, ಆಪ್ಕಿ ಅಂತರಾ ಮತ್ತು ಪರ್ವರೀಶ್ – ಕುಚ್ ಖಟ್ಟಿ ಕುಚ್ ಮೀಥಿ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು.