Actor Kiran Raj New Serial: ʼಕನ್ನಡತಿʼ ಧಾರಾವಾಹಿ ಹರ್ಷ ಪಾತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದ ಕಿರಣ್‌ ರಾಜ್‌ ಮತ್ತೆ ಕಿರುತೆರೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ʼಕರ್ಣʼ ಧಾರಾವಾಹಿ ಮೂಲಕ ಅವರು ಈ ಬಾರಿ ಡಾಕ್ಟರ್‌ ಪೋಷಾಕು ಧರಿಸಿ ವೀಕ್ಷಕರನ್ನು ರಂಜಿಸಲಿದ್ದಾರೆ. 

ʼಕನ್ನಡತಿʼ ಧಾರಾವಾಹಿ ಹರ್ಷ ಆಗಿ ವೀಕ್ಷಕರ ಮನಸ್ಸು ಗೆದ್ದಿದ್ದ ನಟ ಕಿರಣ್‌ ರಾಜ್‌ ಈಗ ಕರ್ಣನಾಗಿದ್ದಾರೆ. ʼರಾನಿʼ, ʼಮೇಘʼ ಮೂಲಕ ವೀಕ್ಷಕರ ಮುಂದೆ ಬಂದಿದ್ದ ಕಿರಣ್‌ ರಾಜ್‌ ಕನ್ನಡ ಕಿರುತೆರೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಪಾತ್ರಗಳ ಮೂಲಕವೇ ಸದ್ದು ಮಾಡುವ ಕಿರಣ್‌ ರಾಜ್‌, ಈಗ ʼಕರ್ಣʼನ ಅವತಾರ ತಾಳಿದ್ದಾರೆ.

ಈ ಧಾರಾವಾಹಿ ಕಥೆ ಏನು?
ಹೌದು, ಕಿರಣ್‌ ರಾಜ್‌ ನಟನೆಯ ಹೊಸ ಸೀರಿಯಲ್‌ ಪ್ರೋಮೋ ರಿಲೀಸ್‌ ಆಗಿದೆ. ಪ್ರೋಮೋದಲ್ಲಿ ಕಿರಣ್‌ ರಾಜ್‌ ಅವರು ಕರ್ಣನ ಪಾತ್ರ ಮಾಡುತ್ತಿದ್ದಾರೆ. “ತನ್ನವರ ಮಧ್ಯಾನೇ ಅನಾಥವಾಗಿರೋ ಮನೆ ಮಗನ ಕಥೆ!” ಈ ಧಾರಾವಾಹಿಯಲ್ಲಿದೆ. 

Watch: ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ ಕನ್ನಡದ ಸ್ಟಾರ್‌ ನಟಿ!

ʼಕರ್ಣʼ ಕಥೆ ಏನು? 
ದೊಡ್ಡದಾದ ಬಂಗಲೆ, ಅಪ್ಪ-ಅಮ್ಮ, ಅತ್ತಿಗೆ ಎಲ್ಲರೂ ಇರುತ್ತಾರೆ. ಈ ಮನೆಯಲ್ಲಿ ಕರ್ಣ ಮಾತ್ರ ಅನಾಥ. ಬೆಳಗ್ಗೆ ಎದ್ದು ದೇವರಿಗೆ ಪೂಜೆ ಮಾಡಿ, ಅಡುಗೆ ಮಾಡಿ, ಅತ್ತಿಗೆಗೆ ಜ್ಯೂಸ್‌ ಕೊಟ್ಟು, ಇನ್ನು ಚಪ್ಪಲಿಯನ್ನು ಹೊಲಿಸಿ ಕೊಡುವ ಕಥೆ ಇದರಲ್ಲಿದೆ. ಈ ಕರ್ಣ ಮನೆ ಕೆಲಸಕ್ಕಷ್ಟೇ ಸೀಮಿತವಾಗಿಲ್ಲ, ಬದಲಾಗಿ ಈತ ಡಾಕ್ಟರ್‌ ಕೂಡ ಹೌದು. ಡಾಕ್ಟರ್‌ ಕರ್ಣನಿಗೆ ಪ್ರಶಸ್ತಿ ಸಿಕ್ಕಾಗಲೂ ಅವನು ಮನೆಯವರಿಗೆ ಕ್ರೆಡಿಟ್‌ ಕೊಡ್ತಾನೆ. 

ತಿಪ್ಪೆಗುಂಡಿಯಲ್ಲಿ ಬಿದ್ದಿದ್ದ ಕರ್ಣನನ್ನು ಮನೆ ಮಗ ಅಂತ ಒಪ್ಪಿಕೊಳ್ಳಲ್ಲ ಎಂದು ತಂದೆ ಹೇಳುತ್ತಾರೆ. ಅವರು ಯಾಕೆ ಹೀಗೆ ಹೇಳಿದರು? ಅನಾಥಮಗುವನ್ನು ತಂದು ಬೆಳೆಸಿದ್ದು ಯಾರು? ಓದಿಸಿದ್ದು ಯಾರು? ಡಾಕ್ಟರ್‌ ಮಾಡಿದ್ದು ಯಾರು ಎಂಬ ಪ್ರಶ್ನೆ ಕೂಡ ಇದೆ. ಸಾಕಷ್ಟು ಕುತೂಹಲಗಳ ಜೊತೆಯಲ್ಲಿ ಈ ಧಾರಾವಾಹಿ ಪ್ರಸಾರ ಆಗಲಿದೆ. ಒಟ್ಟಿನಲ್ಲಿ ಕಿರಣ್‌ ರಾಜ್‌ ಮತ್ತೆ ಕಿರುತೆರೆಯಲ್ಲಿ ಸಂಚಲನ ಮೂಡಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ರಸ್ತೆ ಅಪಘಾತದಲ್ಲಿ 'ಕನ್ನಡತಿ' ನಟ ಕಿರಣ್ ರಾಜ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ತಾರಾಬಳಗದಲ್ಲಿ ಯಾರಿದ್ದಾರೆ?
ಹಿರಿಯ ನಟಿ ಆಶಾರಾಣಿ ಅವರು ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರ್‌ ವೀಣಾ ಹಾಗೂ ನಾಗಾಭರಣ, ವೀಣಾ ರಾವ್‌ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ʼಒಲವಿನ ನಿಲ್ದಾಣʼ ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರು ಇಲ್ಲಿದ್ದಾರೆ. ಈ ಧಾರಾವಾಹಿ ಪ್ರೋಮೋ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. 

ಗಮನಸೆಳೆಯುವ ಕಿರಣ್‌ ರಾಜ್‌ ನಟನೆ! 
ಈ ಧಾರಾವಾಹಿಯ ಪ್ರೋಮೋದಲ್ಲಿ ವಿಜಯ್‌ ಪ್ರಕಾಶ್‌ ಹಾಡಿರುವ ಹಾಡು ಕೂಡ ಇದೆ. ಈ ಹಾಡು ಈ ಪ್ರೋಮೋದ ತೂಕವನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನೋದರಲ್ಲಿ ಯಾವುದೇ ಸಂದೇಹ ಇಲ್ಲ. ಇನ್ನು ಕಿರಣ್‌ ರಾಜ್‌ ಅವರು ಎಂದಿನಂತೆ ಅಭಿನಯದಲ್ಲಿ ಗಮನಸೆಳೆಯುತ್ತಾರೆ. 

ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಕಾರ್ ಅಪಘಾತ; ಎದೆ ಭಾಗಕ್ಕೆ ಪೆಟ್ಟು

ಬಿಗ್‌ ಸರ್ಪ್ರೈಸ್!‌ 
ಈ ಹಿಂದೆಯೇ ಈ ಸೀರಿಯಲ್‌ ಶುರುವಾಗುವುದು ಎಂಬ ಮಾತು ಕೇಳಿಬಂದಿತ್ತು. ಇನ್ನು ಕಲಾವಿದರು ಫೈನಲ್‌ ಆಗಿರಲಿಲ್ಲವಷ್ಟೇ. ಈಗ ಈ ಧಾರಾವಾಹಿ ಪ್ರೋಮೋ ರಿಲೀಸ್‌ ಆಗಿದ್ದು, ಯಾವಾಗ ತೆರೆ ಕಾಣಲಿದೆ ಎಂದು ಕಾದು ನೋಡಬೇಕಾಗಿದೆ. ಈ ಹಿಂದಿನ ಧಾರಾವಾಹಿಯಲ್ಲಿ ಉದ್ಯಮಿಯಾಗಿದ್ದ ಕಿರಣ್‌ ರಾಜ್‌ ಈ ಬಾರಿ ಡಾಕ್ಟರ್‌ ಪೋಷಾಕು ಧರಿಸಿದ್ದಾರೆ. ಕಿರುತೆರೆಯಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರೋ ಕಿರಣ್‌ ರಾಜ್‌ ಬೆಳ್ಳಂಬೆಳಗ್ಗೆ ವೀಕ್ಷಕರಿಗೆ ಬಿಗ್‌ ಸರ್ಪ್ರೈಸ್‌ ನೀಡಿದ್ದಾರೆ. 

View post on Instagram