ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಮಾಡಿ, ಈ ಅನುಭವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು (ಫೆ.3): ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಮಹಾ ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ್ದಾರೆ. ಮಹಾಕುಂಭ ಮೇಳ ನಗರದ ತ್ರಿವೇಣಿ ಸಂಗಮದಲ್ಲಿ ಅವರು ಅಮೃತಸ್ನಾನ ಮಾಡಿದ ವಿಡಿಯೋವನ್ನು ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. 'ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದಲ್ಲಿನ ತ್ರಿವೇಣಿ ಸಂಗಮದಲ್ಲಿ ನಾನು ಪವಿತ್ರವಾದ ಸ್ನಾನ ಮಾಡುತ್ತೇನೆ ಎಂದು ಕನಸು ಮನಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ. ಈ ಅದ್ಭುತವಾದ ಅನುಭವವನ್ನು ನಾನು ಸಂಪೂರ್ಣವಾಗಿ ಅನುಭವಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಮೌನಿ ಅವಮಾಸ್ಯೆಯ ದಿನವೇ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ 30 ಮಂದಿ ಸಾವು ಕಂಡಿದ್ದರು. ಆದರೆ, ಶ್ರೀನಿಧಿ ಶೆಟ್ಟಿ ಬೆಳಗಿನ ಜಾವದಲ್ಲಿ ಅಮೃತಸ್ನಾನದಲ್ಲಿ ಭಾಗಿಯಾಗಿದ್ದು ಕಂಡಿದೆ.
ಬದುಕು ಅಚ್ಚರಿಯ ಸಂತೆ ಈ ದೈವಿಕ ಅನುಗ್ರಹ ಮತ್ತು ಆಶೀರ್ವಾದದಿಂದ ನನ್ನ ಹೃದಯ ತುಂಬಿದೆ ಎಂದು ಅವರು ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗೆ ನಿರ್ದೇಶಕ ಹಾಗೂ ನಟ ರಾಜ್ ಬಿ ಶೆಟ್ಟಿ, ಚಾರ್ಲಿ ಸಿನಿಮಾದ ನಿರ್ದೇಶಕ ಕೆ. ಕಿರಣ್ ರಾಜ್, ನಿರೂಪಕಿ ಅನುಶ್ರೀ ಕೂಡ ಮಹಾ ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ್ದರು.

ಪ್ರಯಾಗ್‌ರಾಜ್ ಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಕ್ತಸಾಗರವೇ ಬರುತ್ತಿದ್ದು. ಇಲ್ಲಿಯವರೆಗೂ 35 ಕೋಟಿ ಮಂದಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಇನ್ನು ಶ್ರೀನಿಧಿ ಶೆಟ್ಟಿ ಪ್ರಯಾಗ್‌ರಾಜ್‌ನಲ್ಲಿ ಇಡೀ ದಿನ ಮಾಸ್ಕ್ ಹಾಕಿಕೊಂಡೇ ಪ್ರಯಾಣ ಮಾಡಿದ್ದು, ಪ್ರದೇಶದ ಆಧ್ಯಾತ್ಮಿಕ ಅನುಭವಬನ್ನು ಪಡೆದುಕೊಂಡಿದ್ದಾರೆ.

90ರ ದಶಕದ ಖ್ಯಾತ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ, ಯಾರು ಈ ಮಮತಾ ಕುಲಕರ್ಣಿ?
ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ಆ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾರಂಗದಲ್ಲಿ ಬ್ಯೂಸಿಯಾಗಿದ್ದು, ಸದ್ಯ ನ್ಯಾಚುರಲ್ ಸ್ಟಾರ್ ನಾನಿ ಅವರ ಹಿಟ್-3 ಸಿನಿಮಾದಲ್ಲಿ ಹಾಗೂ ಹಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ.
'ನಾನು ಕನ್ಯೆಯಾಗಿದ್ದಾಗ ಅಶ್ಲೀಲ ಚಿತ್ರ ನೋಡಿದ್ದೆ, 23 ವರ್ಷಗಳಿಂದ ನೋಡಿಲ್ಲ..' ಮಮತಾ ಕುಲಕರ್ಣಿ ಓಪನ್ ಮಾತು!
