ಚಿಕ್ಕಮಗಳೂರಿನ ಬೆಟ್ಟಗಳಲ್ಲಿ ನೀಲ ಕುರುಂಜಿ ಅರಳತೊಡಗಿ ತಿಂಗಳಾಗುತ್ತಾ ಬಂತು. ಇದೀಗ ಕಿರುತೆರೆಯ ಸ್ಟಾರ್ ನಟ ಕನ್ನಡತಿ ಸೀರಿಯಲ್‌ ಹೀರೋ ಕಿರಣ್‌ ರಾಜ್‌ ಈ ಹೂಗಳ ಬಳಿ ಹೋಗಿದ್ದಾರೆ. ನೀಲ ಹೂಗಳಿಗೆ ಹಾರ್ಟ್ ಸಿಂಬಲ್‌ ನೀಡಿದ್ದಾರೆ.

ಕನ್ನಡತಿ ಸೀರಿಯಲ್‌ ಹೀರೋ ಕಿರಣ್‌ ರಾಜ್‌ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಕಾರಣ ಸೀರಿಯಲ್‌ ಶೂಟಿಂಗೋ, ಸಿನಿಮಾ ಶೂಟಿಂಗೋ ಅಂದ್ರೆ ,, ಊಹೂಂ ಅಲ್ಲ, ಹೂಗಳಿಗಾಗಿ ಅವರಲ್ಲಿಗೆ ಹೋದದ್ದು. ಕಿರುತೆರೆಯ ಈ ಸ್ಮಾರ್ಟ್ ಹುಡುಗನ ಬಗ್ಗೆ ಅನೇಕ ಹುಡುಗಿಯರಿಗೆ ಕ್ರಶ್ ಇದೆ. ಆದರೆ ಕಿರಣ್ ಮಾತ್ರ ಸದ್ಯಕ್ಕೆ ನನ್ನ ನಿಷ್ಠೆ ನಟನೆ ಕಡೆಗೆ ಮಾತ್ರ ಅಂತ ಘಂಟಾ ಘೋಷವಾಗಿ ಹೇಳಿದ್ದಾರೆ. ಗರ್ಲ್ ಫ್ರೆಂಡ್‌ ಬಗ್ಗೆ ಕೇಳಿದರೂ ಅವರದು ಇದೇ ಉತ್ತರ. ಅರೆ, ಇಷ್ಟು ಚೆಂದದ ಹುಡುಗನಿಗೆ ಗರ್ಲ್ ಫ್ರೆಂಡೇ ಇಲ್ವಾ ಅಂತ ಬಹಳಷ್ಟು ಜನ ಕುತೂಹಲದಿಂದ ಕಣ್ ಮಿಟುಕಿಸಿದ್ದಾರೆ. ಆದರೆ ಕಿರಣ್ ರಾಜ್‌ ಮಾತ್ರ ಏನೇ ಮಾಡಿದ್ರೂ ತನ್ನ ಗರ್ಲ್ ಫ್ರೆಂಡ್‌ ಬಗ್ಗೆ ಬಾಯಿ ಬಿಟ್ಟಿಲ್ಲ. ಇದೀಗ ಚಿಕ್ಕಮಗಳೂರಿಗೆ ಹೋಗಿದ್ದಾರೆ. ಕಾರಣ ಅಲ್ಲಿ ಅರಳಿ ನಿಂತಿರುವ ನೀಲ ಕುರುಂಜಿ ಹೂಗಳು. ಚಿಕ್ಕ ಮಗಳೂರಿನ ಬೆಟ್ಟಗಳಲ್ಲಿ ಹನ್ನೆರಡು ವರ್ಷಕ್ಕೆ ಒಮ್ಮೆ ಮಾತ್ರ ಅರಳಿ ನಿಲ್ಲುವ ಈ ಹೂಗಳನ್ನು ನೋಡಲು ಲಕ್ಷಾಂತರ ಜನ ಬೆಟ್ಟಗಳಿಗೆ ಭೇಟಿ ನೀಡುತ್ತಾರೆ. ಈ ನೀಲ ಬಣ್ಣದ ಹೂಗಳು ಅರಳಿ ನಿಂತರೆ ಬೆಟ್ಟಕ್ಕೆ ಬೆಟ್ಟವೇ ನೀಲ ಬಣ್ಣದಿಂದ ಕಂಗೊಳಿಸುತ್ತದೆ. ಇಡೀ ಬೆಟ್ಟಕ್ಕೆ ಹೂವಿನ ಅಲಂಕಾರದ ಈ ದೃಶ್ಯವನ್ನು ನೋಡಲು ಎರಡೂ ಕಣ್ಣೂ ಸಾಲದು ಅನಿಸುತ್ತೆ.

ನೀಲ ಕುರುಂಜಿ ಹೂವರಳಿ ನಿಂತ ಈ ಬೆಟ್ಟಗಳ ಚೆಲುವನ್ನು ಆಸ್ವಾದಿಸಲು ಲಕ್ಷಾಂತರ ಜನ ಚಿಕ್ಕ ಮಗಳೂರಿನ ಬೆಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಅನೇಕ ಸೆಲೆಬ್ರಿಟಿಗಳೂ ಇಲ್ಲಿಗೆ ವಿಸಿಟ್‌ ಮಾಡಿದ್ದಾರೆ. ಆದರೆ ಈ ಹೂಗಳಿರುವುದು ಒಂದು ತಿಂಗಳ ಕಾಲ ಮಾತ್ರ. ಅಷ್ಟರೊಳಗೆ ಈ ಹೂಗಳನ್ನು ಕಣ್ತುಂಬಿಸಿಕೊಳ್ಳಬೇಕು. ಒಮ್ಮೆ ಮಿಸ್‌ ಮಾಡಿದರೆ ಆಮೇಲೆ ಈ ಹೂಗಳನ್ನು ನೋಡಲು ಹನ್ನೆರಡು ವರ್ಷ ಕಾಯಬೇಕು. ಹೀಗಾಗಿಯೇ ಜನ ತಮ್ಮನ್ನು ನೋಡಲು ಮುಗಿಬೀಳ್ತಾರೆ ಅನ್ನೋದನ್ನೂ ಲೆಕ್ಕಿಸದೇ ಸೆಲೆಬ್ರಿಟಿಗಳೂ ಈ ಹೂಗಳ ಚೆಲುವನ್ನು ನೋಡಲು ಈ ಬಾರಿ ಚಿಕ್ಕಮಗಳೂರ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೆ ಕಿರಣ್‌ ರಾಜ್ ಅವರೂ ಹೊರತಾಗಿಲ್ಲ. ನೀಲಿ ಹೂಗಳ ಬೆಟ್ಟಗಳ ನಡುವೆ ನಿಂತು ಅವರು ಫೋಟೋ ತೆಗೆಸಿಕೊಂಡಿದ್ದಾರೆ. ಕೊಳವೊಂದರ ಪಕ್ಕ ಎರಡೂ ಕೈ ಚಾಚಿ ಬೆಟ್ಟವನ್ನು ತಬ್ಬುವಂತಿರುವ ಅವರ ಫೋಸ್‌ಗೆ ಅವರ ಫ್ಯಾನ್ಸ್‌ ಅದರಲ್ಲೂ ಹುಡುಗಿಯರು ಫಿದಾ ಆಗಿದ್ದಾರೆ.

View post on Instagram

ಹಾಗೆ ನೋಡಿದರೆ ಕಿರಣ್‌ ರಾಜ್‌ ಅವರಿಗೆ ಪ್ರಕೃತಿಯ ಬಗ್ಗೆ ಬಹಳ ಪ್ರೀತಿ ಇರುವ ಹಾಗೆ ಕಾಣುತ್ತದೆ. ಅವರ ಇನ್‌ಸ್ಟಾ(Instagram) ಪೋಸ್ಟ್ ನೋಡಿದರೆ ಹೊಲ ಉಳುವ, ಕಾಡಿನ ಹುಲ್ಲಿನ ನಡುವೆ ನಿಂತಿರುವ ಫೋಟೋಗಳನ್ನು ಕಾಣಬಹುದು. ಮೂಲತಃ ಮಾಡೆಲ್‌ ಆಗಿರುವ ಕಿರಣ್‌ ರಾಜ್‌ ತಮ್ಮದೇ ಬ್ರಾಂಡ್‌(Brand)ನ ಉಡುಪುಗಳನ್ನೂ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕೆಆರ್‌ ಬ್ರಾಂಡಿನಲ್ಲಿ ಪುರುಷರ ಟೀ ಶರ್ಟ್, ಸೂಟ್, ಶರ್ಟ್ ಹೀಗೆ ಹಲವು ಬಗೆಯ ವೆರೈಟಿ(Varity) ಅವರ ಕೆಆರ್‌ ಸಂಗ್ರಹದಲ್ಲಿ ಕಾಣಲು ಸಿಗುತ್ತದೆ. ಇತ್ತೀಚೆಗೆ ಬಿರಿಯಾನಿ ಬ್ರಾಂಡ್‌ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಸೋಷಿಯಲ್ ಸರ್ವೀಸ್(Social service) ನಡೆಯುತ್ತಿದೆ. ಸಿನಿಮಾಗಳೂ ಒಂದಾದ ಮೇಲೊಂದರಂತೆ ರಿಲೀಸ್‌ ಆಗುತ್ತಿವೆ.

Lakshana: ಲೇಡಿ ವಿಲನ್ ಅಬ್ಬರಕ್ಕೆ ತತ್ತರಿಸಿದ ಭೂಪತಿ ಫ್ಯಾಮಿಲಿ

ಕಿರಣ್‌ರಾಜ್‌ ಅವರಿಗೆ ಭಾರೀ ಪ್ರಸಿದ್ಧಿ ತಂದುಕೊಂಡಿದ್ದು 'ಕನ್ನಡತಿ' ಸೀರಿಯಲ್‌(Serial). ಇದರಲ್ಲಿ ಕಿರಣ್‌ ಅವರ ಹರ್ಷ ಪಾತ್ರ ಮನೆ ಮಾತಾಗಿದೆ. ಸದ್ಯಕ್ಕೆ 'ಕನ್ನಡತಿ'ಯಲ್ಲಿ ಹರ್ಷನ ಮೇಲೆ ಅಮ್ಮಮ್ಮ ಸಿಟ್ಟಾಗಿದ್ದಾರೆ. ತನ್ನ ಮಗನ ನಿಯಂತ್ರಿಸಲಾಗದ ಸಿಟ್ಟು ಅಮ್ಮಮ್ಮನ ಅಸಾಮಾಧಾನಕ್ಕೆ ಕಾರಣವಾಗಿದೆ. ಸದ್ಯ ಅವರು ತನ್ನೆಲ್ಲ ವ್ಯವಹಾರಗಳನ್ನೂ, ಜವಾಬ್ದಾರಿ(Resposibility)ಗಳನ್ನೂ ನಿಧಾನಕ್ಕೆ ಭುವಿಯ ಹೆಗಲಿಗೇರಿಸುತ್ತಿದ್ದಾರೆ. ಕಿರಣ್‌ ರಾಜ್‌ ಅಸಹನೆಯ, ಇಗೋ ಇರುವ, ಕೊಂಚ ಮುಂಗೋಪದ ಹರ್ಷನ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ. ಇನ್ನೊಂದೆಡೆ ನೀಲ ಕುರುಂಜಿ ನಡುವೆ ನಿಂತ ತಮ್ಮ ನೆಚ್ಚಿನ ನಟನನ್ನೂ ಜನ ಕಣ್ತುಂಬಿಸಿಕೊಂಡಿದ್ದಾರೆ.

ಹೊಂಗನಸು: ರಿಷಿ ಸಾರ್ ಹತ್ರ ಬಂದ್ರೆ ವಸುಂಧರಾ ಎದೆಯಲ್ಲಿ ಢವ ಢವ

ಇನ್ನೊಂದೆಡೆ ಕಿರಣ್‌ರಾಜ್‌ ಪಟ್ಟದ ಬೊಂಬೆಯ ವೇಷದಲ್ಲಿರುವ ಫೋಟೋವೂ ವೈರಲ್‌ ಆಗಿದೆ. ಈ ಸೀರಿಯಲ್‌ನಲ್ಲಿ ಹರ್ಷನ ಅಮ್ಮನ ಪಾತ್ರ ಮಾಡ್ತಿರೋ ಚಿತ್ಕಳಾ ಬಿರಾದಾರ್‌ ಈ ಫೋಟೋ ಶೇರ್‌ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ದಪ್ಪ ಮೀಸೆಯ ಪಟ್ಟದ ರಾಜನ ಲುಕ್‌ ಅನ್ನೂ ಜನ ಮೆಟ್ಟಿಕೊಂಡಿದ್ದಾರೆ.