ಕಲರ್ಸ್ ಕನ್ನಡದಲ್ಲಿ ಕನ್ನಡತಿ ಧಾರಾವಾಹಿ ಕ್ಲಾಸ್ ಸೀರಿಯಲ್ ಅನಿಸಿಕೊಂಡರೂ ಇದೀಗ ಮಾಸ್ ಎಟ್ರಾಕ್ಷನ್ ಗೂ ಕಾರಣವಾಗ್ತಿದೆ. ಭುವಿ ಮತ್ತು ಹರ್ಷ ಜೋಡಿ ನಿಧಾನಕ್ಕೆ ಮನೆ ಮಾತಾಗ್ತಿದೆ. ದೊಡ್ಡ ಕಂಪೆನಿ ಸಿಇಓ ಹರ್ಷ ಮತ್ತು ಬಡ ಹುಡುಗಿ, ಅದ್ಭುತವಾಗಿ ಕನ್ನಡವನ್ನೇ ಮಾತಾಡುವ ಟೀಚರ್ ಭುವಿಯ ನಡುವಿನ ಗೆಳೆತನ, ಗುಪ್ತಗಾಮಿನಿಯಾಗಿ ಹರಿಯೋ ಪ್ರೇಮ, ನಡು ನಡುವೆ ಪ್ರೀತಿಯ ಕಣ್ಣಾಮುಚ್ಚಾಲೆ ಎಲ್ಲವನ್ನೂ ಜನ ಸಖತ್ ಎಂಜಾಯ್ ಮಾಡ್ತಿದ್ದಾರೆ. 

ಸಾಮಾನ್ಯವಾಗಿ ಮನೆ ಹೆಂಗಸ್ರು ಸೀರಿಯಲ್ ನೋಡೋದು ಅನ್ನೋ ಮಾತಿದೆ. ಆದರೆ ಈ ಸೀರಿಯಲ್ ಅನ್ನು ಕದ್ದುಮುಚ್ಚಿ ಆದ್ರೂ ಕಾಲೇಜ್ ಹುಡುಗೀರೂ ನೋಡ್ತಿದ್ದಾರೆ. ಭುವಿ ಮತ್ತು ಕಿರಣ್ ನಡುವಿನ ಕಚಗುಳಿ ಇಡೋ ಸನ್ನಿವೇಶ ಎಲ್ರಿಗು ಕಿಕ್ಕೇರಿಸೋ ಥರ ಇದೆ. ನಡು ನಡುವೆ ಬರುವ ಫ್ಯಾಮಿಲಿ ಇಶ್ಯೂಗಳು, ಕ್ರೈಮ್ ನ ಎಳೆ ತುಸು ಕೃತಕ ಅನಿಸಿದ್ರೂ ಕತೆಯ ದೃಷ್ಟಿಯಿಂದ ಅದು ಅನಿವಾರ್ಯ.

ಈಗ ಪ್ರಶ್ನೆ ಅದಲ್ಲ. ಸೀರಿಯಲ್ ನಲ್ಲೇನೋ ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯೋ ಥರ ಹರ್ಷನೂ ಭುವಿನೂ ಒಬ್ಬರಿಗೊಬ್ಬರು ಪ್ರೀತಿಸ್ತಾರೆ. ಆದ್ರೆ ರಿಯಲ್ ನಲ್ಲೂ ಇವ್ರಿಬ್ರ ನಡುವೆ ಕುಚ್ ಕುಚ್ ನಡೀತಿದ್ಯಾ, ರಂಜಿನಿಗೆ ಕಿರಣ್ ಮೇಲೆ ಕ್ರಶ್ ಶುರುವಾಗಿದ್ಯಾ ಅನ್ನೋದು ಹಲವರ ಡೌಟ್. ಹೀಗೆ ಡೌಟ್ ಬರೋದಿಕ್ಕೆ ಕಾರಣವೂ ಇದೆ. ನೀವು ರಂಜಿನಿ‌ ಅವರ ಇನ್ ಸ್ಟಾ ಅಕೌಂಟ್ ಗೆ ಹೋದ್ರೆ ಈ ಸಂದೇಹ ನಿಮ್ಗೂ ಬರುತ್ತೆ. ಈವರೆಗೆ ಇನ್ ಸ್ಟಾಗ್ರಾಮ್ ನಲ್ಲಿ ನೀವು ರಂಜಿನಿ ಫೋಟೋ ಮಾತ್ರ ನೋಡ್ತಿದ್ರಿ. ಆದ್ರೆ ಇತ್ತಿತ್ಲಾಗಿ ರಂಜಿನಿ ಕಿರಣ್ ಜೊತೆಗೆ ತಮ್ ಫೋಟೋ ಹಾಕೋದಿಕ್ಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ, ಇಬ್ಬರ ಚಿತ್ರದ ನಡುವೆ ಹಾರ್ಟ್ ಸಿಂಬಲ್ ಮಿನುಗ್ತಿದೆ. ಜೊತೆಗೆ ಹಿನ್ನೆಲೆಯಲ್ಲಿ ಚೆಂದದ ಪ್ರೇಮಗೀತೆಯೂ ಇದೆ. ಎದೆಯಲ್ಲಿ ಪ್ರೀತಿ ಚಿಟ್ಟೆ  ಪಟ ಪಟ ರೆಕ್ಕೆ ಬಡೀತಿದ್ರೆ ಎಷ್ಟು ದಿನ ಮುಚ್ಚಿಡೋದಕ್ಕಾಗುತ್ತೆ ಅಲ್ವಾ!

ಕರುನಾಡ‌ ಕ್ರಶ್‌ ಅಗಿದ್ದ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್‌! ...
ಸೋ.. ಇವ್ರಿಬ್ರು ರಿಯಲ್ ಲೈಫ್ ನಲ್ಲೂ ಲವ್ವಿ ಡವ್ವಿ ಶುರು ಹಚ್ಕೊಂಡಿದ್ದಾರಾ ಅಥವಾ ಸೀರಿಯಲ್ ಪ್ರೊಮೋಶನ್ ಗೋಸ್ಕರ ಹಿಂಗೊಂದ್ ಸೀನ್ ಕ್ರಿಯೇಟ್ ಮಾಡ್ತಿದ್ದಾರಾ ಅನ್ನೋ ಡೌಟ್ ಅಭಿಮಾನಿಗಳದು. ಅಷ್ಟರಲ್ಲೇ ಸತ್ಯ ರಿವೀಲ್ ಆಗಿದೆ. ವಿಷ್ಯ ಏನಪ್ಪಾ ಅಂದ್ರೆ ಈ ಸೀರಿಯಲ್ ಅನ್ನು ಸಿಕ್ಕಾಪಟ್ಟೆ ಇಷ್ಟಪಡೋ ಯಾರೋ ಅಭಿಮಾನಿಗಳು ರಂಜಿನಿ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಇವರಿಬ್ಬರ ಪ್ರೇಮವನ್ನು ವಿಪರೀತ ಹಚ್ಚಿಕೊಂಡಿರುವ ಆ ಅಭಿಮಾನಿ ಹೀಗೆಲ್ಲ ತರಲೆ ಮಾಡ್ತಿದ್ದಾರೆ. ಹಾಗೆಂದು ಈ ಬಗ್ಗೆ ರಂಜಿನಿ ಏನೂ ತಲೆ ಕೆಡಿಸ್ಕೊಂಡ ಹಾಗಿಲ್ಲ. ಸೀರಿಯಲ್ ಪಾಪ್ಯುಲರ್ ಆಗ್ತಿರುವಂತೆ ಇಂಥಾ ತರಲೆಗಳೆಲ್ಲ ಸಾಮಾನ್ಯ ಅನ್ನೋದು ಅವರಿಗೆ ಗೊತ್ತಿಲ್ಲದ ವಿಚಾರ ಅಲ್ಲ. 

'ಮಾಸ್ಟರ್ ಪೀಸ್‌' ಹುಡುಗಿ ಶಾನ್ವಿ ಮಾಲ್ಡೀವ್ಸ್‌ ಬಿಕಿನಿ ಫೋಟೋ ವೈರಲ್! ...

ಉಳಿದಂತೆ ರಂಜಿನಿ ತನ್ನ ಎಂದಿನ ಸರಳತೆಯಲ್ಲಿ, ಗಂಭೀರತೆಯಲ್ಲಿ ಸೀರಿಯಲ್ ಬಿಟ್ರೆ ಸಿನಿಮಾ ಅಂತ ಬ್ಯುಸಿ ಆಗಿದ್ದಾರೆ. ಒಂದು ಕಡೆ ದಿಗಂತ್ ಜೊತೆಗೆ ನಿಮ್ಮ ಖಾತೆಯಲ್ಲಿ ಹಣವಿಲ್ಲ ಅನ್ನೋ ಸಿನಿಮಾ, ಸಂಚಾರಿ ವಿಜಯ್ ಜೊತೆಗೆ ಅವಸ್ಥಾಂತರ ಅನ್ನೋ ಇನ್ನೊಂದು ಸಿನಿಮಾ, ಜೊತೆಗೆ ಇನ್ನೊಂದಿಷ್ಟು ಚಿತ್ರಗಳು ಕೈಯಲ್ಲಿವೆ. ಇಂಥಾ ಟೈಮ್ ನಲ್ಲಿ ಹಬ್ಬದ ದಿನವೂ ಅಮ್ಮನ ಕೈಯಲ್ಲಿ ಬೈಸಿಕೊಂಡು ಶೂಟಿಂಗ್ ಗೆ ಹೋದ ಕೀರ್ತಿ ಕುಮಾರಿ ರಂಜಿನಿ ರಾಘವನ್ ಅವರದು. 

 

 

ಸಖತ್ತಾದ ಅಭಿನಯ, ಪುಟ್ಟ ಗೌರಿ ಮದುವೆ, ಕನ್ನಡತಿಯಂಥಾ ಯಶಸ್ವಿ ಸೀರಿಯಲ್ಗಳ ಸಕ್ಸಸ್ ಜೊತೆಗಿದ್ದರೂ ಅಹಂ ಹತ್ತಿಸಿಕೊಂಡಿಲ್ಲ ರಂಜಿನಿ. ಸೋ, ಇಂಥವರ ಬಗ್ಗೆ ಅಭಿಮಾನಿಗಳಿಗೂ ಕೊಂಚ ಹೆಚ್ಚೇ ಪ್ರೀತಿ. ಅದು ಅವರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಲ್ಲೂ ಸೀರಿಯಲ್ ಪ್ರೇಮ ಮುಂದುವರಿಸೋ ಮಟ್ಟಿಗೂ ಬೆಳೆದಿದೆ. 

ಸೌತ್‌ ಸ್ಟಾರ್‌ ಕಪಲ್‌ ಸಮಂತಾ ನಾಗ ಚೈತನ್ಯರ ಮನೆ ಹೇಗಿದೆ ನೋಡಿ! ...