ಜನಪ್ರಿಯ ಧಾರವಾಹಿ ಕನ್ನಡತಿಯ ನಟ ಕಿರಣ್ ರಾಜ್ ಫಿಗರ್ ಮುಂದೆ ಇದ್ದಾಗ್ಲೇ ಕ್ಯಾಮೆರಾ ಫೋಕಸ್ ಆಗೋದು ಎಂದಿದ್ದಾರೆ. ಏನದು..? ಇಲ್ಲಿ ಓದಿ
ಕನ್ನಡದ ಜನಪ್ರಿಯ ಧಾರವಾಹಿ ಕನ್ನಡತಿಯ ನಟ ಫಿಗರ್ ಮುಂದೆ ಇದ್ರೆ ಮಾತ್ರ ಕ್ಯಾಮೆರಾ ಫೋಸ್ ಆಗೋದು ಎಂದು ಹಾಡಿದ್ದಾರೆ. ಕನ್ನಡತಿ ಸೀರಿಯಲ್ ಮೂಲಕ ಜನರ ಮನ ಗೆಲ್ಲುತ್ತಿರುವ ನಟ ವಿಡಿಯೋ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಹರ್ಷ ಆಗಿ ಕನ್ನಡತಿಯಲ್ಲಿ ಮಿಂಚುತ್ತಿರುವ ನಟ ನಟಿಸಿರೋ ಸೆಲ್ಫ್ ಮೇಡ್ ಮ್ಯಾನ್ ಆಲ್ಬಂ ಸಾಂಗ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಈಗ ಲಭ್ಯವಿದೆ.
ಕನ್ನಡತಿ ಹೀರೋ ಕಿರಣ್‌ರಾಜ್ ಮಾಡಿರೋ ಮಹತ್ಕಾರ್ಯ ನೋಡಿ!
ಕಿರಣ್ ರಾಜ್ ಕ್ರೀಯೇಟಿವ್ಸ್‌ನ ಈ ಆಲ್ಬಂಗೆ ಸಾಹಿತ್ಯ ನೀಡಿ ಹಾಡಿದ್ದು ಚಿರಾಯು. ಮಣಿ ಜೆನ್ನಾ ಸಂಗೀತ ನಿರ್ದೇಶಿಸಿದ್ದಾರೆ. ಸೆಲ್ಫ್ ಮೇಡ್ ಬ್ರ್ಯಾಂಡ್ ಕುರಿತಾಗಿ ಈ ಹಾಡು ಮಾಡಲಾಗಿದೆ.
ಕಷ್ಟಪಟ್ಟು ಮೇಲೆ ಬರೋ, ತನ್ನನ್ನು ತಾನು ಬ್ರ್ಯಾಂಡ್ ಮಾಡಿಕೊಳ್ಳೋ, ಕನಸು ಕಾನೋಕೆ ಯೋಗ್ಯತೆ ಬೇಕು ಎನ್ನೋರಿಗೆ ಕನಸು ನನಸಾಗಿ ತೋರಿಸೋ ಕುರಿತ ಹಾಡು ಯುವ ಜನರಿಗೆ ಪ್ರೋತ್ಸಾಹ ಎಂಬ ರೀತಿಯಲ್ಲಿದೆ.

