Asianet Suvarna News Asianet Suvarna News

ಕನ್ನಡತಿ ಹೀರೋ ಕಿರಣ್‌ರಾಜ್ ಮಾಡಿರೋ ಮಹತ್ಕಾರ್ಯ ನೋಡಿ!

ಕನ್ನಡತಿ ಸೀರಿಯಲ್ ನ ಸ್ಮಾರ್ಟ್ ಬಾಯ್ ಕಿರಣ್ ರಾಜ್ ಅಂದ್ರೆ ಯಾರಿಗೆ ಗೊತ್ತಿಲ್ಲ? ಸೈಲೆಂಟ್‌ ಆಗಿ ಒಂದು ಫೌಂಡೇಷನ್ ಸ್ಥಾಪಿಸಿ, ಬಡವರಿಗೆ ಸಹಾಯ ಮಾಡಲು ಮುಂದಾಗಿರುವ ಈ ನೈಜ ಹೀರೋ ಬಗ್ಗೆ ಮತ್ತೊಂದಿಷ್ಟು.

 

What did Kannadathi Kannada serial hero Kiranraj did differently
Author
Bengaluru, First Published Dec 26, 2020, 5:16 PM IST

ಕನ್ನಡತಿ ಸೀರಿಯಲ್ ಜೊತೆಗೆ ಆ ಸೀರಿಯಲ್ ನ ಹೀರೋ ಹೀರೋಯಿನ್ ಮೇಲೂ ಜನಕ್ಕೆ ಸಾಕಷ್ಟು ಆಸಕ್ತಿ ಹುಟ್ಟಿದೆ. ಈ ಕಡೆ ಕನ್ನಡತಿ ಹೀರೋಯಿನ್ ರಂಜಿನಿ ರಾಘವನ್ ಜಯತೀರ್ಥ ಅವರ ಹೊಸ ಸಿನಿಮಾದಲ್ಲಿ ಸೀರಿಯಸ್ ಆಗಿ ನಟಿಸುತ್ತಿದ್ದಾರೆ. ಅವರು ಇನ್ ಸ್ಟಾದಲ್ಲಿ ಹಾಕ್ಕೊಂಡಿರೋ ಫೋಟೋ ನೋಡಿದ್ರೇ ಅವರದು ಸಖತ್ ಮೆಚ್ಯೂರ್ಡ್ ಹಾಗೂ ಸೀರಿಯಸ್ ಪಾತ್ರ ಅಂತ ಗೊತ್ತಾಗುತ್ತೆ. ಜೊತೆಗೆ ಕವಲುದಾರಿ ಹೀರೋ ರಿಷಿ ಇದ್ದಾರೆ. ಇಬ್ಬರೂ ಗಂಭೀರವಾಗಿ ಕೂತು ಚೆಸ್ ಆಟದಲ್ಲಿ ತಲ್ಲೀನರಾಗಿದ್ದಾರೆ. ಶೂಟಿಂಗ್ ನಡುವಿನ ಗ್ಯಾಪ್ ನಲ್ಲಿ ಸಾಂತಾಕ್ಲಾಸ್ ಟೊಪ್ಪಿ ಧರಿಸಿ, ಜಿಂಗಲ್ ಬೆಲ್ಸ್ ಜಿಂಗಲ್ ಬೆಲ್ಸ್ ಅಂತ ಹಾಡಿರೋ ಈ ಕನ್ನಡತಿ ಇದಕ್ಕೆ ಕನ್ನಡದಲ್ಲಿ ಏನರ್ಥ ಅಂತ ಅಭಿಮಾನಿಗಳನ್ನೇ ಪ್ರಶ್ನೆ ಮಾಡಿ ಮಾಡಿದ್ದಾರೆ.

What did Kannadathi Kannada serial hero Kiranraj did differently

ಅತ್ತ ಕಿರಣ್ ರಾಜ್ ಒಂದು ಕಡೆ ಕನ್ನಡತಿಯಲ್ಲಿ ಬ್ಯುಸಿ ಆದ್ರೆ ಮತ್ತೊಂದು ಕಡೆ ‘ಜೀವ್ನಾನೇ ನಾಟಕ ಸ್ವಾಮೀ’ ಅಂತಿದ್ದಾರೆ. ಹಾಗಂತ ಯಾರಿಂದಲೋ ಮೋಸ ಹೋಗಿ ಹೀಗೊಂದು ಡಯಲಾಗ್ ಹೊಡ್ದಿರೋದಲ್ಲ, ಆ ಹೆಸರಿನ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಶಿವಣ್ಣನ ಬೆಂಬಲವೂ ಸಿಕ್ಕಿದೆ.

ರಂಜನಿ ಕ್ರಿಸ್ಮಸ್: ಜಿಂಗಲ್ ಬೆಲ್ಸ್‌ಗೆ ಕನ್ನಡದಲ್ಲಿ ಏನಂತಾರೆ ಅಂತ ಕೇಳಿದ ಕನ್ನಡತಿ ...

ವಿಷ್ಯ ಅದಲ್ಲ, ಈ ಕಿರಣ್ ಇದ್ದಾರಲ್ಲ, ಅವ್ರು ಕಂಡ ಹಾಗಲ್ಲ. ಒಂದು ಕಡೆ ಸೀರಿಯಲ್ ನ ರೊಮ್ಯಾಂಟಿಕ್ ಹೀರೋ ಆಗಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಹುಡುಗೀರ ಮನಸ್ಸು ಕದ್ದಿದ್ದಾರೆ. ಕಿರಣ್ ನಿಜಕ್ಕೂ ಸಂವೇದನೆ ಉಳ್ಳ, ಕನ್ನಡತಿ ಸೀರಿಯಲ್ ನ ಹೀರೋ ಹರ್ಷನ ವ್ಯಕ್ತಿತ್ವಕ್ಕೆ ಸಾಮ್ಯ ಇರುವ ಹುಡುಗ. ಅದು ಹೇಗೆ ಅನ್ನೋ ಪ್ರಶ್ನೆ ನಿಮಗೆ ಬಂದೇ ಬರುತ್ತೆ. ಒಬ್ಬ ಪೇಪರ್ ಬಾಯ್ ನ ಕನಸುಗಳನ್ನು ಅವರೊಂದು ಚಿಕ್ಕ ವಿಷ್ಯುವಲ್ ನಲ್ಲಿ ಹಿಡಿದಿಟ್ಟಿರೋ ರೀತಿಲೇ ಅವರ ಕ್ರಿಯೇಟಿವಿಟಿ ಎಂಥಾದ್ದು ಅನ್ನೋದು ಗೊತ್ತಾಗುತ್ತೆ. ಚಿಕ್ಕ ಕೆಲಸ ಮಾಡುತ್ತಿದ್ದರೂ ದೊಡ್ಡ ಕನಸು ಕಾಣಿ ಅನ್ನೋ ಸಂದೇಶವನ್ನು ಇದರಲ್ಲಿ ಕೊಟ್ಟಿದ್ದಾರೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ 'ಕನ್ನಡತಿ' ರಂಜನಿ ರಾಘವನ್‌; ಫೋಟೋ ನೋಡಿ! ...

ಇದರ ಜೊತೆಗೆ ಕಿರಣ್ ಮತ್ತೊಂದು ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ. ತಮ್ಮದೇ ಆದ ಕಿರಣ್ ರಾಜ್ ಫೌಂಡೇಶನ್ ನಡೆಸುತ್ತಿದ್ದಾರೆ. ಈ ಫೌಂಡೇಶನ್ ಮೂಲಕ ಈಗಾಗಲೇ ಬಡಮಕ್ಕಳಿಗೆ, ಬಡ ಜನರಿಗೆ ಅನ್ನ ಶಿಕ್ಷಣ ನೀಡುವ ಗುರಿ ಹೊಂದಿದ್ದಾರೆ. ನಿತ್ಯ ಸಾವಿರ ಜನಕ್ಕಾದರೂ ಊಟ ಹಾಕ್ಬೇಕು ಅನ್ನೋದು ಇವರ ಕನಸು. ಇವರಿಂದ ಈಗಾಗಲೇ ಸಾವಿರಾರು ಜನ ಸಹಾಯ ಪಡೆದಿದ್ದಾರೆ.

ತುಂಬಾ ಮಂದಿ ಸೀರಿಯಲ್‌ನಲ್ಲಿ ಅಥವಾ ಸಿನಿಮಾದಲ್ಲಿ ಪಾಪ್ಯುಲರ್ ಆದ ಬಳಿಕ, ತಾವು ಎಲ್ಲಿಂದ ಬಂದೆವೂ ಆ ಹಿನ್ನೆಲೆಯನ್ನು ಮರೆತೇ ಬಿಡ್ತಾರೆ. ಕಾರಿನಲ್ಲಿ ಓಡಾಡ್ತಾರೆ. ಬಡವರನ್ನು ಮರೆಯುತ್ತಾರೆ. ಕೆಲವರಿಗೆ ತಮ್ಮ ಹಳೆಯ ಗೆಳೆಯರೂ ಗೆಳತಿಯರೂ ತಾವು ಓಡಾಡಿದ ಜಾಗಗಳೂ ನೆನಪಿರೋಲ್ಲ. ಕಾರಿನಲ್ಲಿ ಹೋಗುವಾಗ ಭಿಕ್ಷುಕರ ಹತ್ತಿರ ಬಂದು ಕೈ ಒಡ್ಡಿದರೂ ಕಿಟಕಿ ಗಾಜು ಕೆಳಗಿಳಿಸೋದಿಲ್ಲ. ಇಂಥ ಹೊತ್ತಿನಲ್ಲಿ ಕಿರಣ್‌ರಾಜ್ ಅವರು ಕೈಗೊಂಡಿರುವ ಕೆಲಸ ನಿಜಕ್ಕೂ ನಾವೆಲ್ಲ ಮೆಚ್ಚಬೇಕಾದ್ದು ಅಲ್ವೇ? ಒಳ್ಳೆ ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಕಿರಣ್, ವೈಯಕ್ತಿಕ ಜೀವನದಲ್ಲೂ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಶುಭವಾಗಲಿ. 

ಮಸ್ತಾನಿಯಾದ್ರು ಕನ್ನಡತಿ ನಟಿ..! ಏನ್ ಚಂದ ಡ್ಯಾನ್ಸ್ ನೋಡಿ ...

 

Follow Us:
Download App:
  • android
  • ios