ಕನ್ನಡತಿ ಸೀರಿಯಲ್ ಮೂಲಕ ಸ್ವಲ್ಪ ಸಮಯದಲ್ಲಿ ಕನ್ನಡಿಗರ ಮನಗೆದ್ದ ನಟಿ ಸಾರಾ ಅನ್ನಯ್ಯ ವರುಧಿನಿ ಪಾತ್ರದ ಮೂಲಕ ಮಿಂಚುತ್ತಿದ್ದಾರೆ. ಸೀರಿಯಲ್‌ನಲ್ಲಿ ಡ್ರಗ್ಸ್‌ ಕೇಸ್‌ನಲ್ಲಿ ಜೈಲು ಸೇರಿದ ನಟಿ ಈಗ ಏನ್ಮಾಡ್ತಿದ್ದಾರೆ..?

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮಾಡೆಲ್ ಮತ್ತು ನಟಿ ಸಾರಾ ಅನ್ನಯ್ಯ ಫೋಟೋ, ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೊಡಗಿನ ಚೆಲುವೆ ಸಾರಾ ನಿಜಕ್ಕೂ ಬ್ಯೂಟಿಫುಲ್ ನಟಿ.

ರೀಲ್‌ ಅಲ್ಲ, ರಿಯಲ್‌ನಲ್ಲೂ ಕನ್ನಡತಿ ವರುಧಿನಿ ಬೋಲ್ಡ್ ಬ್ಯೂಟಿ: ಇಲ್ನೋಡಿ ಫೊಟೋಸ್

ಇದೀಗ ಹೊಸದೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ನಟಿ. ಜೈಲಿನ ಕೋಣೆಯೊಳಗೆ ಚಾಪೆ ಮೇಲೆ ಕುಳಿತು ಆಟಾಡ್ತಾ ಇದ್ದಾರೆ ಸಾರಾ. ಶೂಟ್ ನಡುವೆ ಫನ್ ಮೂಡ್‌ನಲ್ಲಿರೋ ವಿಡಿಯೋ ಶೇರ್ ಮಾಡಿದ್ದಾರೆ.

ಹಾಟ್ ಫೊಟೋ ಪೋಸ್ಟ್ ಮಾಡಿದ್ರು ನಟಿ: ಫ್ಯಾನ್ಸ್ ಕಮೆಂಟ್ಸ್ ಹೀಗಿತ್ತು..!

ಚಾಪೆ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಕಲ್ಲಾಟ ಆಡಿದ್ದಾರೆ ಸಾರಾ ಅಣ್ಣಯ್ಯ. ಬಾಲ್ಯದ ನೆನಪು! ಯಾರ್ಯಾರಿಗೆ ನೆನಪಿದೆ ಈ ಆಟ..? ಎಂದು ಕ್ಯಾಪ್ಶನ್ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ.