ಪತ್ನಿ ಸದಾ ಕೈಯಲ್ಲಿ ಒಂದು ಬ್ಯಾಗ್ ಹಿಡಿದುಕೊಂಡಿರುತ್ತಾರೆ, ಅದರಲ್ಲಿ ಏನಿದೆ ಎಂದು ನನಗೂ ಗೊತ್ತಿಲ್ಲ. ಅದಕ್ಕೆ ಈ ಸಲ ನಿಮ್ಮ ಮುಂದೆ ಓಪನ್ ಮಾಡುತ್ತಿರುವೆ, ಎಂದಿದ್ದಾರೆ ಮುರುಗಾ. 

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿ ಇಶಿತಾ ಹಾಗೂ ಡ್ಯಾನ್ಸ್‌ ಮಾಸ್ಟರ್ ಮುರುಗಾನಂದ 'ರಾಜ ರಾಣಿ' ರಿಯಾಲಿಟಿ ಶೋ ಮೂಲಕ ಸೆಲೆಬ್ರಿಟಿ ಕಪಲ್ ಆಗಿದ್ದಾರೆ. ಅದಲ್ಲದೇ ಸದಾ ಬ್ಯಾಕ್‌ ಸ್ಟೇಜ್‌ನಲ್ಲಿರುವ ಮುರುಗಾ ಟಿವಿಯಲ್ಲಿ ಕಾಣಿಸಿಕೊಂಡು, ಮನೆ ಮನೆ ಮುರುಗಾ ಎಂದು ಹೆಸರು ಪಡೆದುಕೊಂಡಿದ್ದಾರೆ. ಮೋಸ್ಟ್‌ ಎಂಟರ್ಟೈನಿಂಗ್‌ ಮ್ಯಾನ್ ಅವಾರ್ಡ್‌ ಗಿಟ್ಟಿಸಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಪಡೆದ ಈ ಜೋಡಿ ಇದೀಗ ತಮ್ಮದೇ ಯುಟ್ಯೂಬ್ ಚಾನೆಲ್‌ ತೆರೆದು, ತಮ್ಮ ಪರ್ಸನಲ್ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೃಷ್ಣ ರುಕ್ಮಿಣಿ , ಅಗ್ನಿಸಾಕ್ಷಿ ಸೇರಿ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಇಶಿತಾ ತುಂಬಾನೇ ಸ್ಟೈಲಿಷ್. ಔಟ್‌ಫಿಟ್‌ಗೆ ಮ್ಯಾಚಿಂಗ್ ಬ್ಯಾಕ್ ಕ್ಯಾರಿ ಮಾಡುತ್ತಾರೆ. ಇಶಿತಾ ಕೈಯಲ್ಲಿ ಸದಾ ಒಂದು ಬ್ಯಾಗ್‌ ಇರುವುದನ್ನು ನೋಡಿ ಪತಿ ಮುರುಗಾ ಅವರಿಗೆ ಅದರಲ್ಲಿ ಏನಿರಬಹುದು ಎಂಬ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಹೀಗಾಗಿ ಅದನ್ನು ತಮ್ಮ ಫಾಲೋವರ್ಸ್ ಎದುರು ಅದನ್ನು ರಿವೀಲ್ ಮಾಡಿದ್ದಾರೆ. 

'ನೀವು ಯಾವಾಗಲೂ ಒಂದು ಬ್ಯಾಗ್ ಇಟ್ಕೊಂಡು ಓಡಾಡುತ್ತೀರಾ ಅಲ್ವಾ? ಅದರಲ್ಲಿ ಏನಿರುತ್ತೆ ಅಂತ ನನಗೆ ಕ್ಯೂರಿಯಾಸಿಟಿ. ಆ ಬ್ಯಾಗ್‌ ಅನ್ನು ನನಗೆ ಮುಟ್ಟೋಕೆ ಬಿಡಲ್ಲ. ಶಾಪಿಂಗ್ ಹೋದ್ರೆ ಅದನ್ನು ಹಿಟ್ಕೊಂಡು ನಿಂತ್ಕೊಂಡು ಇರಬೇಕು. ಹುಡುಗಿಯರ ಬ್ಯಾಗ್ ಚೆಕ್ ಮಾಡಬಾರದು. ಆದರೆ ಮದುವೆ ಆಗಿರುವವರ ಬ್ಯಾಗ್ ನೋಡಬಹುದು. ಅದಕ್ಕೆ ಈಗ ಓಪನ್ ಮಾಡ್ತೀನಿ. ಏನೆಲ್ಲಾ ಇದೆ ಎಂದು ರಿವೀಲ್ ಮಾಡ್ತೀನಿ,' ಎಂದು ಮುರುಗಾ ಮಾತನಾಡಿದ್ದಾರೆ. 

'ಈ ಬ್ಯಾಗೆಲ್ಲಾ ಹುಡುಗಿಯರಿಗೆ ಲಾಕರ್ ಇದ್ದಂಗೆ. ಹುಡುಗರಿಗೆ ಪರ್ಸ್‌ ಇದ್ರೆ ಸಾಕು. ಈ ಹುಡುಗಿಯರಿಗೆ ಒಂದು ಬ್ಯಾಗ್. ಆದರಲ್ಲಿ ಒಂದಿಷ್ಟು ಟೈಂ. ಏನ್ ಇರುತ್ತೋ. ಬ್ಯಾಗೊಲಗೊಂದು ಬ್ಯಾಗ್ ಇಡುತ್ತಾರೆ ಬೇರೆ,' ಎಂದು ಇಶಿತಾ ಬ್ಯಾಗ್ ಓಪನ್ ಮಾಡಿದ್ದಾರೆ. 

ಮೊದಲು ಮುರುಗಾ ಅವರ ಕೈಗೆ ಸಿಕ್ಕಿದ್ದು ನೀರಿನ ಬಾಟಲ್, ಗ್ಲಾಸ್, ಪರ್ಸ್‌, ಮಾಸ್ಕ್‌, ಸ್ಯಾನಿಟೈಜರ್, ಲಿಪ್‌ಸ್ಟಿಕ್, ಮಾತ್ರೆ, ಜುಮ್ಕಿ, ಹೇರ್‌ ಕ್ಲಿಪ್, ಹೇರ್‌ ಬ್ಯಾಂಡ್, ಹೇರ್‌ ಸಿರಮ್, ಲಿಪ್‌ಬಾಮ್, ದೇವರ ದಾರ ಹೀಗೆ ಒಂದೊಂದೇ ಐಟಂನ ಮುರುಗಾ ಅವರು ರಿವೀಲ್ ಮಾಡಿದ್ದಾರೆ. 

Dancing Chamionship ಇಶಿತಾಗೂ ಮುರುಗಾನಂದಗೂ ಯಾವುದೇ ಸಂಬಂಧವಿಲ್ಲ?

ಇಶಿತಾಗೆ ಮಾತ್ರೆ ಬೇಕು:
'ಸಿಪ್ಲಾ ಮಾತ್ರೆ ಬಗ್ಗೆ ಹೇಳಲೇ ಬೇಕು. ಇದು ಕೋಲ್ಡ್‌ ಮಾತ್ರೆ. ಇಶಿ ಎಲ್ಲೇ ಹೋದ್ರೂ ಏನ್ ಇರುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಈ ಮಾತ್ರೆ ಇರಲೇಬೇಕು. ಇಶಿಗೆ Dust allergy. ಸುಮ್ಮನೆ ಒಂದು ಬಟ್ಟೆ ಎತ್ತಿ ಕೊಡವಿದರೂ ಅಕ್ಷಿ ಅಕ್ಷಿ ಹಾಕ್ತಾರೆ. ಗುಡಿಸಿದರೂ ಈ ಮಾತ್ರ ಬೇಕು. ಈ ಮಾತ್ರ ಇಲ್ಲ ಅಂದ್ರೆ ನನಗೆ ಟೆನ್ಶನ್ ಜಾಸ್ತಿ ಆಗುತ್ತೆ,' ಎಂದು ಮುರುಗಾ ಹೇಳಿದ್ದಾರೆ.

ಇತ್ತೀಚಿಗೆ ಹಲವಾರು ಕಿರುತೆರೆ ಸೆಲೆಬ್ರಿಟಿಗಳು ಯುಟ್ಯೂಬ್‌ನಲ್ಲಿ ತಮ್ಮ ತಮ್ಮ ಖಾತೆ ತೆರೆಯುವುದಕ್ಕೆ ಶುರು ಮಾಡಿದ್ದಾರೆ. ಈಗ ಹೇಗೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಬಳಸುತ್ತಿದ್ದರೋ ಹಾಗೇ ಯುಟ್ಯೂಬ್‌ ಕೂಡ ಆಗುತ್ತಿದೆ. ಒಂದು ವ್ಯತ್ಯಾಸ ಏನೆಂದರೆ ಇದರಿಂದ ಹಣ ಸಂಪಾದಿಸಬಹುದು. ಡಾಲರ್ಸ್‌ ಲೆಕ್ಕದಲ್ಲಿ ಹಣ ನೀಡುವ ಕಾರಣ ಈಗ ಇದೂ ಒಂದು ರೀತಿ ಕೆಲಸವಾಗಿಬಿಟ್ಟಿದೆ.