ಕನ್ನಡ ಕಿರುತೆರೆ ಒಬ್ಬ ಅತ್ಯುತ್ತಮ ಕಲಾವಿದರನ್ನು ಕಳೆದುಕೊಂಡಿದೆ.  ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಅನಿಲ್ ಕೊನೆಯುಸಿರು ಎಳೆದಿದ್ದಾರೆ.

ಬೆಂಗಳೂರು[ಏ. 03]  ರಂಗಭೂಮಿ ಹಾಗೂ ಕಿರುತೆರೆಯಲ್ಲಿ ತಮ್ಮದೆ ಆದ ಅಭಿನಯದ ಮೂಲಕ ಮನೆಮಾತಾಗಿದ್ದ ಕಲಾವಿದ ಅನಿಲ್ ನಿಧನ ಹೊಂದಿದ್ದಾರೆ. ಬಹು ಅಂಗಾಂಗಗಳ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ.

ಅನಿಲ್ ಕುಮಾರ್ ಹಾಗೂ ದರ್ಶನ್ ನೀನಾಸಂನಲ್ಲಿ ಒಟ್ಟಾಗಿ ನಾಟಕ ಅಭ್ಯಾಸ ಮಾಡುತ್ತಿದ್ದು ಒಳ್ಳೆಯ ಸಹಪಾಠಿಗಳಾಗಿದ್ದರು. ಕಷ್ಟ ಎಂದಾಕ್ಷಣ ಒಂದು ನಿಮಿಷವೂ ಯೋಚಿಸದೇ ಸಹಾಯಕ್ಕೆ ಮುಂದಾಗುವ ದರ್ಶನ್ ತನ್ನ ಸಹಪಾಠಿ ಅನಿಲ್ ಗೆ ನೆರವು ನೀಡಿದ್ದರು. ಅನಿಲ್ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ಮಿಡಿದಿದ್ದಾರೆ.

ಮಾತು ನಿಲ್ಲಿಸಿದ್ದ ಅಪ್ರತಿಮ ಕಲಾವಿದ

'ಮೂಡಲ ಮನೆ' ಧಾರಾವಾಹಿಯ ನಾಣಿ ಪಾತ್ರದ ಹೆಸರು ಅನಿಲ್ ಅವರಿಗೆ ಜತೆಯಾಗಿತ್ತು. ದುನಿಯಾ ವಿಜಯ್ ಅಭಿನಯದ 'ಕರಿಯ ಕಣ್ಬಿಟ್ಟ' ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚಿಗೆ ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಕವಲುದಾರಿ' ಸಿನಿಮಾದಲ್ಲಿಯೂ ಅಭಿನಯಿಸಿದ್ದ ಅವರು ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಎಲ್ಲ ರೀತಿಯ ಪಾತ್ರ ನಿರ್ವಹಿಸಿದ್ದರು.

Scroll to load tweet…