ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಖ್ಯಾತ ನಟ ಅನಿಲ್ ಕುಮಾರ್ ಅನಾರೋಗ್ಯದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ವೆಚ್ಚ ಹೆಚ್ಚಾಗಿದ್ದು ನಟ ದರ್ಶನ್ ರವರ ನೆರವು ಯಾಚಿಸುತ್ತಿದ್ದಾರೆ.

ಕಿರುತೆರೆಯ ‘ಮೂಡಲ ಮನೆ’ ಧಾರಾವಾಹಿ ಮೂಲಕ ತಮ್ಮ ಬಣ್ಣದ ಜರ್ನಿ ಆರಂಭಿಸಿದ ಅನಿಲ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ದರ್ಶನ್ ಸಹಾಯ ನೆನೆದು ಕಣ್ಣೀರಿಟ್ಟ ಕಾಮಿಡಿ ಕಿಲಾಡಿ ಸಂಜು!

ಅನಿಲ್ ಕುಮಾರ್ ಹಾಗೂ ದರ್ಶನ್ ನೀನಾಸಂನಲ್ಲಿ ಒಟ್ಟಾಗಿ ನಾಟಕ ಅಭ್ಯಾಸ ಮಾಡುತ್ತಿದ್ದು ಒಳ್ಳೆಯ ಸಹಪಾಠಿಗಳಾಗಿದ್ದರು. ಕಷ್ಟ ಎಂದಾಕ್ಷಣ ಒಂದು ನಿಮಿಷವೂ ಯೋಚಿಸದೇ ಸಹಾಯಕ್ಕೆ ಮುಂದಾಗುವ ದರ್ಶನ್ ತನ್ನ ಸಹಪಾಠಿ ಅನಿಲ್ ಗೆ ನೆರವು ನೀಡುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ ಕುಟುಂಬಸ್ತರು.