ಕೊನೆಗೂ ಶೈನ್‌ ಶೆಟ್ಟಿಗೆ ಕೈ ಸೇರಿದ ಟಾಟಾ ಆಲ್ಟ್ರೋಜ್ ಕಾರು. ವಿಶೇಷವಾದ ರೀತಿಯಲ್ಲಿ ವಿಡಿಯೋ ಶೇರ್ ಮಾಡಿಕೊಂಡ ನಟ.

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌ 7ರ ವಿಜೇತ ಶೈನ್ ಶೆಟ್ಟಿ ಕೆಲವು ದಿನಗಳ ಹಿಂದೆ ಬಹುಮಾನವಾಗಿ ಪಡೆದುಕೊಂಡ ಟಾಟಾ ಆಲ್ಟ್ರೋಜ್‌ ವೈಟ್ ಕಾರನ್ನು ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶೈನ್‌ ಶೆಟ್ಟಿಗೆ 'ನೀನೆ ನೀನೇ' ಎಂದ ಸಂಗೀತಾ ರಾಜೀವಿ; ಇದು ಮದ್ವೆ ಅಲ್ಲ ಸರ್! 

'ಬಿಗ್ ಬಾಸ್‌ ಸೀಸನ್‌ 7ರಿಂದ ಪಡೆದ ಕಾರು. ನಿಮ್ಮೆಲ್ಲರ ಆಈರ್ವಾದಿಂದ ಈ ಕಾರು ನನಗೆ ದೊರಕಿರುವುದೆಂದು ಸಂತಸದಿಂದ ತಿಳಿಸಬಯಸುತ್ತೇನೆ. ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸಿದ ಕೀ ಮೋಟರ್ಸ್‌, ಕನಕಪುರ ರಸ್ತೆ ಇವರಿಗೆ ಧನ್ಯವಾದಗಳು,' ಎಂದು ಬರೆದಿದ್ದಾರೆ. 

View post on Instagram

ತಾಯಿ ಜೊತೆ ತೆರಳಿ ಕೇಕ್‌ ಕತ್ತರಿಸಿ, ಹೂ ಗುಚ್ಛದೊಂದಿಗೆ ಕಾರನ್ನು ಸ್ವೀಕರಿಸಿದ್ದಾರೆ ಶೈನ್. ನಿರೂಪಕಿ ಚೈತ್ರಾ ವಾಸುದೇವನ್ ಹಾಗೂ ಪೃಥ್ವಿ ಕಾಮೆಂಟ್ ಮಾಡುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. 

'ಗಲ್ಲಿ ಕಿಚನ್' ಫುಡ್‌ ಟ್ರಕ್‌ ಆರಂಭಿಸಿದ ಬಿಗ್ ಬಾಸ್‌ ವಿನ್ನರ್ ಶೈನ್‌ ಶೆಟ್ಟಿ; ರುಚಿ ನೋಡಿದ್ದೀರಾ?

ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಶೈನ್‌ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು, ಸಿನಿಮಾ ಕತೆಗಳನ್ನು ಒಪ್ಪಿಕೊಂಡರು ಹಾಗೂ ತಮ್ಮ ಕನಸಿನ ಫುಡ್‌ ಟ್ರಕ್‌ ಪ್ರಾರಂಭಿಸಿದರು.