ಕಿರುತೆರೆ ವಾಹಿನಿಯ ಜನಪ್ರಿಯ ನಟ ಶೈನ್ ಶೆಟ್ಟಿ ಮದುವೆ ಆಗುತ್ತಿದ್ದಾರೆ. ಹುಡುಗಿ ಜೊತೆ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಆದರೆ ಹೆಸರು ಹಾಗೂ ಮುಖವನ್ನು ರಿವೀಲ್ ಮಾಡಿಲ್ಲ. ಯಾರಿರಬಹುದು ಎಂದು ಕುತೂಹಲದಲ್ಲಿರುವ ನೆಟ್ಟಿಗರಿಗೆ ಇಲ್ಲಿದೆ ಉತ್ತರ...

'ಗಲ್ಲಿ ಕಿಚನ್' ಫುಡ್‌ ಟ್ರಕ್‌ ಆರಂಭಿಸಿದ ಬಿಗ್ ಬಾಸ್‌ ವಿನ್ನರ್ ಶೈನ್‌ ಶೆಟ್ಟಿ; ರುಚಿ ನೋಡಿದ್ದೀರಾ? 

ಹೌದು! ಶೈನ್‌ ಜೊತೆ ಯುವ ಗಾಯಕಿ ಜೊತೆ ಕಾಣಿಸಿಕೊಂಡು ವಿಡಿಯೋ ಶೇರ್ ಮಾಡಿಕೊಂಡಿರುವುದು ನಿಜ ಆದರೆ ಮದುವೆ ವಿಚಾರವಾಗಿ ಅಲ್ಲ. ಸಂಗೀತಾ ಅವರ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವ ಹಾಡಿನಲ್ಲಿ ಶೈನ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಕುತೂಹಲ ಹೆಚ್ಚಿಸುವುದಕ್ಕೆ ವಿಡಿಯೋವೊಂದನ್ನು ಶೇರ್ ಮಾಡಿದ್ದರು.

 

ಸಂಗೀತಾ ಪೋಸ್ಟ್‌: 

ವಿಡಿಯೋ ನೋಡಿ ಶೈನ್ ಶೆಟ್ಟಿ ಮದುವೆ ಆಗುತ್ತಿದ್ದಾರೆ ಎಂದು ಹಬ್ಬುತ್ತಿದ್ದಂತೆ  ಗಾಯಕಿ ಸಂಗೀತಾ ಪೋಸ್ಟ್‌ ಶೇರ್ ಮಾಡಿದ್ದಾರೆ ಹಾಗೂ ಇಂದು ತಮ್ಮ ಅಲ್ಬಂ ಸಾಂಗ್ ಹೆಸರನ್ನು ರಿವೀಲ್ ಮಾಡಿದ್ದಾರೆ.  'ಹೌದು ನೀವೆಲ್ಲರೂ ಗೆಸ್ ಮಾಡಿದ್ದು ಕರೆಕ್ಟ್ ಆಗಿದೆ. ಶೈನ್‌ ಶೆಟ್ಟಿ ಜೊತೆ' ಎಂದು ಹೇಳಿ 'ನೀನೆ ನೀನೇ. ಇಲ್ಲಿದೆ ನಮ್ಮ ಮೊದಲ ಸರ್ಪ್ರೈಸ್. ಇನ್ನು ತುಂಬಾ ರಿವೀಲ್ ಮಾಡುವುದು ಇದೆ. ಕಾದು ನೋಡಿ' ಎಂದು ಬರೆದುಕೊಂಡಿದ್ದಾರೆ.

ಉಡುಪಿ ಶೆಟ್ಟಿ ಹುಡುಗನ ವಿಭಿನ್ನ ಹೆಸರು; 'ಶೈನ್‌' ಹೆಸರ ರಹಸ್ಯ ರಿವೀಲ್!