Asianet Suvarna News Asianet Suvarna News

2 ವರ್ಷದಲ್ಲಿ 4 ಸಲ ಎಂಗೇಜ್‌ಮೆಂಟ್: ಮದುವೆ ಬಗ್ಗೆ ಶೈನ್ ಶೆಟ್ಟಿ ಶಾಕಿಂಗ್ ಹೇಳಿಕೆ

ಮದುವೆಯಾಗಲು ಸೂಕ್ತ ಸಂಬಂಧ ಬಂದರೂ ಸೋಷಿಯಲ್ ಮೀಡಿಯಾದಲ್ಲಿ ನಟ, ಬಿಗ್‌ಬಾಸ್ ವಿಜೇತ ಶೈನ್ ಶೆಟ್ಟಿ ಎಂಗೇಜ್‌ಮೆಂಟ್ ಸುದ್ದಿ ನೋಡಿ ಬೇಡ ಅಂತಿದ್ದಾರಂತೆ!
 

Kannada Shine Shetty clarifies rumours about wedding with Sukrutha vcs
Author
Bangalore, First Published Oct 26, 2021, 12:29 PM IST
  • Facebook
  • Twitter
  • Whatsapp

ಕನ್ನಡ ಕಿರುತೆರೆ ಜನಪ್ರಿಯ ನಟ ಶೈನ್ ಶೆಟ್ಟಿ (Shine Shetty), ಬಿಗ್ ಬಾಸ್ ಸೀಸನ್ 7ರ (Bigg Boss Kannada) ವಿನ್ನರ್ ಟ್ರೋಫಿ ಹಿಡಿದ ನಂತರ ಸಖತ್ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಮೂರ್ನಾಲ್ಕು ಕಡೆ ತಮ್ಮ 'ಗಲ್ಲಿ ಕಿಚನ್' ಹೊಟೇಲ್ (Hotel) ಆರಂಭಿಸಿದ್ದಾರೆ ಹಾಗೂ ಖಾಸಗಿ ವಾಹಿನಗಳಲ್ಲಿ ಕೆಲವು ಶೋಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ಈ ನಡುವೆ ಕಲರ್ಸ್ ಕನ್ನಡ (Colors Kannada) ಅನುಬಂಧ ಅವಾರ್ಡ್ (Anubhanda Awards) ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದ ಶೈನ್, ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ದುಬಾರಿ ಬಿಎಂಡಬ್ಲ್ಯೂ ಕಾರು ಖರೀದಿಸಿದ ಕಿರುತೆರೆ ನಟ ಶೈನ್ ಶೆಟ್ಟಿ!

ಹೌದು! ಹೀಗೆ ನಿರೂಪಕಿ ಜೊತೆ ತಮಾಷೆ ಮಾಡಿದ ಶೈನ್ ಸುಕೃತಾ (Sukrutha) ಅವರನ್ನು ಮದುವೆ ಆಗುವುದಾಗಿ ಹೇಳಿದ್ದರು. ಸುಕೃತಾ ಯಾರು ಎಂದು ನೆಟ್ಟಿಗರೇ ಹುಡುಕಿ ಎಂಗೇಜ್‌ಮೆಂಟ್ ಕೂಡ ಮಾಡಿಸಿದ್ದಾರೆ. ಶೈನ್ ಶೆಟ್ಟಿ ಅವರ ತಾಯಿ (Mother), ಮಗನ ಮದುವೆಗೆ ಎಂದು ಸಂಬಂಧ ಹುಡುಕಿದರೆ, ಅವರೆಲ್ಲಾ ಸೋಷಿಯಲ್ ಮೀಡಿಯಾ ನೋಡಿ ಈಗಾಗಲೇ ಶೈನ್‌ಗೆ ಮದುವೆ ಆಗಿದೆ ಎಂದು ಮಾತುಕತೆ ಮುಂದುವರಿಸಲು ಹಿಂದೆ ಸರಿಯುತ್ತಿದ್ದಾರಂತೆ. 

Kannada Shine Shetty clarifies rumours about wedding with Sukrutha vcs

'ನಿಜ ಹೇಳಬೇಕು ಅಂದ್ರೆ ಕಳೆದ ಎರಡು ವರ್ಷದಲ್ಲಿ ನಾನು ನಾಲ್ಕು ಸಲ ಎಂಗೇಜ್ (Engage) ಆಗಿದ್ದೀನಿ. ಇನ್ನೂ ಲವ್ (Love) ಎಂದು ಪೇರ್‌ ಆಗಿರುವುದು ಎಷ್ಟು ಸಲ ಎಂದು ಮರೆತಿರುವೆ. ಇವೆಲ್ಲಾ ಶುರುವಾಗಿದ್ದು ನಾನು ಬಿಗ್ ಬಾಸ್‌ನಲ್ಲಿದ್ದಾಗ. ಮೊದಲು ದೀಪಿಕಾ ದಾಸ್ (Deepika Das) ಜೊತೆ ಆನಂತರ ಸಂಗೀತಾ ರಾಜೀವ್ (Sangeetha Rajeev) ಅವರ ಜೊತೆ. ಖಾಸಗಿ ಕಾರ್ಯಕ್ರಮದಲ್ಲಿ ವೈಷ್ಣವಿ (Vaishnavi Gowda) ಜೊತೆ ಕಾಣಿಸಿಕೊಂಡೆ ಎಂದು ಅವರ ಜೊತೆಗೂ ನನ್ನನ್ನು ಪೇರ್ ಮಾಡಿದ್ದಾರೆ. ಇತ್ತೀಚಿಗೆ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ತಮಾಷೆ ಮಾಡಲು ಸುಕೃತಾ ಅವರನ್ನು ಮದುವೆ ಆಗುತ್ತಿರುವೆ ಎಂದು ಹೇಳಿದೆ. ಸುಮ್ಮನೆ ಸುಕೃತಾ ಅಂತ ಹೇಳಿದ್ದೆ. ಆದರೆ ನೆಟ್ಟಿಗರು ಅದನ್ನು ಸುಕೃತಾ ವಾಗ್ಲೆ (Sukrutha Wagle) ಎಂದು ತಾವೇ ಗೆಸ್ ಮಾಡಿ, ಅವರೊಂದಿಗೂ ಗಂಟು ಹಾಕಿದ್ದಾರೆ,' ಎಂದು ಶೈನ್ ಮದುವೆ ವಿಚಾರದ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.

'ಗಲ್ಲಿ ಕಿಚನ್' ಫುಡ್‌ ಟ್ರಕ್‌ ಆರಂಭಿಸಿದ ಬಿಗ್ ಬಾಸ್‌ ವಿನ್ನರ್ ಶೈನ್‌ ಶೆಟ್ಟಿ; ರುಚಿ ನೋಡಿದ್ದೀರಾ?

'ಇತ್ತೀಚಿಗೆ ನನ್ನ ತಾಯಿ ಒಳ್ಳೆಯ ಸಂಬಂಧ ನೋಡಿದ್ದರು. ಅದನ್ನು ನಾನು ಒಪ್ಪಿಕೊಳ್ಳುವಂತೆಯೂ ಹೇಳುತ್ತಿದ್ದರು. ಆದರೆ ಅಷ್ಟರಲ್ಲಿ ಹುಡುಗಿ ಫ್ಯಾಮಿಲಿ (Family) ನಮ್ಮನ್ನು ಮತ್ತೆ ಸಂಪರ್ಕಿಸಿ ದಯವಿಟ್ಟು ಕ್ಷಮಿಸಿ, ನಿಮ್ಮ ಹುಡುಗನಿಗೆ ಮದುವೆ ಆಗಿದೆ ಎಂದು ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ನೋಡಿದ್ವಿ, ವಿಚಾರ ಗೊತ್ತಿರದ ಕಾರಣ ಮಾಹಿತಿ ಕಳುಹಿಸಿಕೊಟ್ಟೆವು ಎಂದು ಬಿಟ್ಟರು. ಅದಕ್ಕೆ ನಾನು ಈಗಾಗಲೇ ಮದುವೆ ಆಗಿದ್ದೀನಿ, ಎಂದು ಹರಿದಾಡುತ್ತಿರುವ ವಿಚಾರದ ಮೂರ್ನಾಲ್ಕು ಲಿಂಕ್ ಮತ್ತೆ ಕಳುಹಿಸಿದೆ. ಶೀಘ್ರದಲ್ಲಿಯೇ ನನಗೆ ನಾಲ್ಕನೆ ಡಿವೋರ್ಸ್ (Divorce) ಕೂಡ ಕೊಡಿಸುತ್ತಾರೆ. ಈ ರೀತಿ ಹರಿದಾಡುತ್ತಿರುವಾಗ ನಾನು ಹೇಗೆ ಒಂದು ಸಂಬಂಧ ಕಟ್ಟಿಕೊಳ್ಳಲಿ? ತಮಾಷೆಯನ್ನು ಪಕ್ಕಕ್ಕಿಟ್ಟು, ನೋಡಿದರೆ ನಾನು ಸದಾ ಸುದ್ದಿಯಲ್ಲಿರುವುದಕ್ಕೆ ಯಾವುದೇ ಕಂಪ್ಲೇಂಟ್ (Complaints) ಇಲ್ಲ ನನಗೆ ತುಂಬಾನೇ ಖುಷಿ ಆಗುತ್ತದೆ,' ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಸುಕೃತಾ ವಾಗ್ಲೆ ಕೂಡ 'ನಾನು ಶೈನ್ ಶೆಟ್ಟಿನ ಮದುವೆ ಆಗುತ್ತಿಲ್ಲ' ಎಂದು ಬರೆದುಕೊಂಡು ಫೋಸ್ಟ್ ಹಾಕಿದ್ದರು.

Follow Us:
Download App:
  • android
  • ios