ಬಿಗ್‌ ಬಾಸ್‌ 10 ಆರಂಭದ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ. ಅದರೊಂದಿಗೆ ಈ ಬಾರಿ ದೊಡ್ಮನೆ ಒಳಗೆ ಬಲಗಾಲಿಟ್ಟು ಹೋಗುವವರು ಯಾರೆಲ್ಲಾ ಎನ್ನುವ ಕುತೂಹಲಗಳು ಆರಂಭವಾಗಿದೆ. 

ಬೆಂಗಳೂರು (ಸೆ.22): ಕೊನೆಗೂ ಕನ್ನಡದ ಕಿರುತೆರೆಯ ವೀಕ್ಷಕರು ಕಾಯುತ್ತಿದ್ದ ಮಹತ್ವದ ಅಪ್‌ಡೇಟ್‌ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ ಬಾಸ್‌ ಕನ್ನಡದ 10ನೇ ಆವೃತ್ತಿಯ ಡೇಟ್‌ ಫಿಕ್ಸ್‌ ಆಗಿದೆ. ಬಿಗ್‌ ಬಾಸ್‌ ಕುರಿತಾದ ಪ್ರೋಮೋ ಹೊರಬಂದಾಗೆಲ್ಲಾ, 10ನೇ ಸೀಸನ್‌ ಯಾವಾಗ ಶುರುವಾಗಲಿದೆ ಎಂದು ವೀಕ್ಷಕರು ಕೇಳುತ್ತಲೇ ಇದ್ದರು. ಅದಕ್ಕೆ ಉತ್ತರ ಎನ್ನುವಂತೆ ಕಲರ್ಸ್‌ ಕನ್ನಡ ತನ್ನ ಸೋಶಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಬಿಗ್‌ ಅಪ್‌ಡೇಟ್‌ ನೀಡಿದೆ. ಇಂದಿನಿಂದ ಸರಿಯಾಗಿ 16 ದಿನಗಳಲ್ಲಿ 10ನೇ ಆವೃತ್ತಿಯ ಬಿಗ್‌ ಬಾಸ್‌ ಕನ್ನಡ ಶೋ ಆರಂಭವಾಗಲಿದೆ. ಈಗಾಗಲೇ ತಿಳಿಸಿರುವಂತೆ ಈ ಬಾರಿಯದ್ದು ಹ್ಯಾಪಿ ಬಿಗ್‌ಬಾಸ್‌ ಥೀಮ್‌ನಲ್ಲಿ ನಡೆಯಲಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಅನುಬಂಧ ಅವಾರ್ಡ್ಸ್ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಬಿತ್ತರವಾಗುತ್ತಿದೆ. ಇದರ ನಡುವೆ ಬಿಗ್‌ ಬಾಸ್‌ 10ನೇ ಆವೃತ್ತಿಯ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಾಗಿದೆ. ಮುಂದಿನ ತಿಂಗಳಿನಿಂದ ಅಂದರೆ, ಅಕ್ಟೋಬರ್‌ 8 ರಿಂದ ದೊಡ್ಮನೆ ಕಾರ್ಯಕ್ರಮ ಬಿಗ್‌ ಬಾಸ್‌ ಆರಂಭವಾಗಲಿದೆ.

ಅದರೊಂದಿಗೆ ಬಿಗ್‌ ಬಾಸ್‌ 10 ಕನ್ನಡ ಕುರಿತಾಗಿ ಕೆಲವೊಂದು ಎಕ್ಸ್‌ಕ್ಲೂಸಿವ್‌ ಮಾಹಿತಿ ಕೂಡ ಲಭ್ಯವಾಗಿದೆ. ಅಕ್ಟೋಬರ್‌ 8 ರಂದು ಕಾರ್ಯಕ್ರಮ ಪ್ರಸಾರವಾಗಲಿದ್ದರೆ, ಅಕ್ಟೋಬರ್‌ 7 ರಂದು ಇದರ ಲಾಂಚ್‌ ಶೂಟಿಂಗ್‌ ನಡೆಯಲಿದೆ ಎಂದು ವರದಿಯಾಗಿದೆ. ಈವರೆಗೂ ಬಿಗ್‌ ಬಾಸ್‌ ಮನೆಗೆ ಕೆಲವರು ತೆರಳಲಿದ್ದಾರೆ ಎನ್ನುವ ಊಹಾಪೋಹಗಳಿದ್ದರೂ, ಯಾರೊಬ್ಬರ ಬಗ್ಗೆಯೂ ಖಚಿತವಾಗಿಲ್ಲ. ಅದರೊಂದಿಗೆ ಬಿಗ್‌ ಬಾಸ್ ಕಾರ್ಯಕ್ರಮ ನಡೆಯುವ ದೊಡ್ಮನೆ ಇನ್ನೋವೇಟಿವ್‌ ಫಿಲ್ಮ್‌ ಸಿಟಿಯಿಂದ ದೊಡ್ಡ ಆಲದ ಮರದ ಬಳಿಕ ಸೈಟ್‌ಗೆ ವರ್ಗಾವಣೆ ಆಗಿದೆ. ತಾವರೆಕೆರೆ ಹಾಗೂ ದೊಡ್ಡ ಆಲದ ಮಧ್ಯೆ ಇರುವ ದೊಡ್ಡ ಸೈಟ್‌ನಲ್ಲಿ ಬಿಗ್‌ ಬಾಸ್‌ ಕನ್ನಡ ಕಾರ್ಯಕ್ರಮದ ದೊಡ್ಡ ಮನೆ ನಿರ್ಮಾಣವಾಗಿದೆ. ಈ ಬಾರಿಯ ಎಲ್ಲಾ ಶೂಟಿಂಗ್‌ ಇದೇ ಮನೆಯಲ್ಲಿಯೇ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಇನ್ನು 16 ಹೊಸ ಬಿಗ್‌ ಬಾಸ್‌ ಸ್ಪರ್ಧಿಗಳು ಯಾರೆಲ್ಲಾ ಎನ್ನುವ ಕುತೂಹಲವೂ ಇದೆ. ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ನಟಿಸಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ನಟಿ ಮೇಘಾ ಶೆಟ್ಟಿ, ಈಗತಾನೆ ಮನೆಯ ಗೃಹಪ್ರವೇಶ ಮುಗಿಸಿಕೊಂಡಿರುವ ನಾಗಿಣಿ 2 ಧಾರವಾಹಿ ಖ್ಯಾತಿಯ ನಮ್ರತಾ ಗೌಡ, ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌, ಲಕ್ಷಣ ಧಾರವಾಹಿಯಲ್ಲಿ ನಟಿಸುತ್ತಿರುವ ಸುಕೃತಾ ನಾಗ್‌, ಗೀತಾ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿರುವ ಭವ್ಯಾ ಗೌಡ ಹೊಸ ಮನೆಗೆ ಬರಬಹುದು ಎನ್ನಲಾಗಿದೆ. ಅದರೊಂದಿಗೆ ಡಾ.ಬ್ರೋ ಇದ್ದರೆ ಒಳ್ಳೆಯದು ಎನ್ನುವ ಮಾತುಗಳೂ ಕೇಳಿ ಬಂದಿದೆ. ಇನ್ನು ಬಿಗ್‌ ಬಾಸ್‌ ಕಾರ್ಯಕ್ರಮದ ಸಲುವಾಗಿಯೇ ಬ್ರೇಕಪ್‌ ಮಾಡಿಕೊಂಡು ಸುದ್ದಿಯಾಗಿರುವ ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳಾದ ವರುಣ್‌ ಆರಾಧ್ಯ ಹಾಗೂ ವರ್ಷಾ ಕಾವೇರಿ ಕೂಡ ಕಾರ್ಯಕ್ರಮದಲ್ಲಿ ಅವಕಾಶ ಪಡೆಯಿವ ಸಾಧ್ಯತೆ ಇದೆ.

ಅಸಲಿ-ನಕಲಿ ಆಟದ ನಡುವೆ ನಾನೇ ಬದಲಾಗಿರುವೆ: ಅನುಪಮಾ ಗೌಡ ವೈರಲ್ ಪೋಸ್ಟ್‌

ಹೊಸ ಥೀಮ್‌ನಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮ ನಡೆಯಲಿದೆ. ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮಕ್ಕಾಗಿ ಹೊಸ ತಾಂತ್ರಿಕ ತಂಡ ಕೆಲಸ ಮಾಡುತ್ತಿದ್ದು, ಹೊಸ ನಿರ್ದೇಶಕರು ಈ ವರ್ಷ ‘ಬಿಗ್ ಬಾಸ್’ ಆಟವನ್ನ ಆಡಿಸಲಿದ್ದಾರೆ ಎಂದು ವರದಿಯಾಗಿದೆ.

BBK9 ಈ ಬಾರಿ ಬಿಗ್‌ ಬಾಸ್ ವಿನ್ನರ್ ರೂಪೇಶ್‌ ಶೆಟ್ಟಿನ? ಸಂಬರಗಿ ಭವಿಷ್ಯವನ್ನು ನೀವೂ ಒಪ್ತೀರಾ?

View post on Instagram