Asianet Suvarna News Asianet Suvarna News

Kannada serial: ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಹೀರೋನೆ ವಿಲನ್, ಜನ ಏನಂತಾರೆ?

ಜೀ ಕನ್ನಡದ ಜನಪ್ರಿಯ ಸೀರಿಯಲ್ ’ಜೊತೆ ಜೊತೆಯಲಿ’ ಸೀರಿಯಲ್ ಇತಿಹಾಸದಲ್ಲೇ ಮೊದಲೇನೋ ಎಂಬಂತೆ ತಿರುವು ಪಡೆದುಕೊಂಡಿದೆ. ಇದರಲ್ಲಿ ಹೀರೋನೇ ವಿಲನ್ ಆಗಿದ್ದಾರೆ. ಇದನ್ನು ಜನ ಒಪ್ಕೊಳ್ತಾರಾ?

 

Kannada serial Jothe Jotheyali hero turned to villatin netizens comments
Author
Bengaluru, First Published Jan 7, 2022, 5:14 PM IST

ಜೀ ಕನ್ನಡ (Zee Kannada) ವಾಹಿನಿಯ ಜನಪ್ರಿಯ ಧಾರಾವಾಹಿ ’ಜೊತೆ ಜೊತೆಯಲಿ’. ಬೇರೆಲ್ಲ ಸೀರಿಯಲ್ (Kannada Serial) ಗಳಿಗೆ ಹೋಲಿಸಿದರೆ ಆರಂಭದಿಂದಲೂ ಈ ಸೀರಿಯಲ್ ವಿಭಿನ್ನವಾಗಿತ್ತು. ತನ್ನ ಈ ಡಿಫರೆಂಟ್ ಕಥೆಯ ಕಾರಣಕ್ಕೇ ಸೀರಿಯಲ್ ಜನರ ಆಕರ್ಷಣೆಗೆ ಪಾತ್ರವಾಯಿತು. 20ರ ಹರೆಯದ ಹುಡುಗಿ ನಲವತ್ತೖದರ ಮಧ್ಯವಯಸ್ಕನ ಜೊತೆಗೆ ಪ್ರೀತಿಯಲ್ಲಿ ಸಿಲುಕುವ ಕಥೆ ಈ ಧಾರಾವಾಹಿಯದು. ಸೀರಿಯಲ್ಲ್‌ನ ಮೊದಲ ಭಾಗ ಅನು ಸಿರಿಮನೆ (Anu sirimane) ಎಂಬ ಹುಡುಗಿ ಹಾಗೂ ಆರ್ಯವರ್ಧನ್ (Aryavardhan) ಎಂಬ ಮಧ್ಯ ವಯಸ್ಸಿನ ವ್ಯಕ್ತಿಯ ಪ್ರೀತಿ, ಪ್ರೇಮ, ಅವರಿಬ್ಬರ ಪ್ರೀತಿಗೆ ಅಡ್ಡಿಯಾಗುವ ಅನೇಕ ವಿಚಾರಗಳಿಗೆ ಸಾಕ್ಷಿಯಾಯಿತು. ಬಡತನದ ಕಷ್ಟದ ಹಿನ್ನೆಲೆಯಿಂದ ಬಂದ ಅನು ಸಿರಿಮನೆ ತಾನು ಕೆಲಸ ಮಾಡುವ ಕಂಪನಿಯ ಬಾಸ್ ಆರ್ಯವರ್ಧನ್ ಜೊತೆಗೇ ಪ್ರೀತಿಯಲ್ಲಿ ಬೀಳುವ ಕಥೆ, ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ (Aniruddha) ಹಾಗೂ ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ (Megha Shetty) ನಟನೆಗೆ ಜನ ಫಿದಾ ಆದರು. ಈ ಸೀರಿಯಲ್‌ನ ಮುಂದುವರಿದ ಭಾಗವಾಗಿ ಇವರಿಬ್ಬರ ಮದುವೆ ಆಯ್ತು. ಮದುವೆ ಆದ್ಮೇಲೆ ಇನ್ನೇನು, ಕಥೆ ಸುಖಾಂತ ಹ್ಯಾಪಿ ಎಂಡಿಂಗ್ ಅಂದುಕೊಳ್ಳುವ ಹೊತ್ತಿಗೆ ಮತ್ತೊಂದು ತಿರುವು ಬಂತು. ಆರ್ಯವರ್ಧನ್ ಮೊದಲ ಹೆಂಡತಿ ರಾಜ ನಂದಿನಿ ಆಗಾಗ ಅನು ಸಿರಿಮನೆ ಮೈಮೇಲೆ ಬರಲಾರಂಭಿಸಿದಳು. ಇದೊಂಥರ ಆಪ್ತಮಿತ್ರದ ಸ್ಟೈಲ್ ಪಡ್ಕೊಳ್ತಿದೆ ಅನ್ನುವಾಗ ಅದು ಬದಲಾಗಿ ಆರ್ಯವರ್ಧನ್ ಹಾಗೂ ಅನು ನಡುವೆ ರೊಮ್ಯಾಂಟಿಕ್ ದೃಶ್ಯಗಳು ಮೂಡಿಬಂದವು. ಜನ ಈ ಗುಂಗಲ್ಲೇ ಇರುವಾಗ ಇದೀಗ ಇಡೀ ಕಥೆ ಉಲ್ಟಾ ಹೊಡಿಯುವಂಥಾ ಸನ್ನಿವೇಶ ಸೀರಿಯಲ್‌ನಲ್ಲಿ ಬರ್ತಿದೆ. 

Ganesh Golden Gang: ಜೀ ಕನ್ನಡದಲ್ಲಿ ಚಂದನವನದ ಗೆಳೆಯ-ಗೆಳತಿಯರಿಗೋಸ್ಕರ ಹೊಸ ರಿಯಾಲಿಟಿ ಶೋ

ಜನ ಈವರೆಗೆ ಹೀರೋ (Hero) ಥರ ನೋಡಿದ, ಆರಾಧಿಸಿದ ಆರ್ಯವರ್ಧನ್ ಇದೀಗ ವಿಲನ್ (Villain) ಆಗಿ ಜನರೆದುರಿಗೆ ಬಂದಿದ್ದಾರೆ. ಸಡನ್ನಾದ ಈ ಟ್ವಿಸ್ಟ್‌ ಬಹುಶಃ ಕನ್ನಡ ಸೀರಿಯಲ್‌ ಇತಿಹಾಸದಲ್ಲೇ ಹೊಸತು. ಸಿನಿಮಾದಲ್ಲಿ ಈ ಟ್ರಿಕ್ ಕಾಮನ್. ಬಾಲಿವುಡ್ ಮಾತ್ರ ಅಲ್ಲ, ಅನೇಕ ಕನ್ನಡ ಸಿನಿಮಾಗಳೂ ಇದೇ ಕಾಂಸೆಪ್ಟ್‌ನಲ್ಲಿ ಬಂದಿವೆ. ಆದರೆ ಸೀರಿಯಲ್ ನಲ್ಲಿ ಪೋಷಕ ಪಾತ್ರಗಳು ಈ ಥರ ಟರ್ನ್ ತಗೊಳ್ತವೆ. ಆದರೆ ಬಹುಮುಖ್ಯ ಹೀರೋ ಪಾತ್ರವೇ ಸಡನ್ನಾಗಿ ನೆಗೆಟಿವ್ ಶೇಡ್ ಪಡೆದುಕೊಂಡು ವಿಲನ್ ಆಗೋದು ಮಾತ್ರ ಆಗಿಲ್ಲ. ಇಂಥಾ ಟ್ರಿಕ್ ಅನ್ನು ಸೀರಿಯಲ್ ವೀಕ್ಷಕರು ಒಪ್ಪಿಕೊಳ್ಳಲಿಕ್ಕಿಲ್ಲ ಅನ್ನೋದು ಒಂದು ವಾದ. ಇದರ ಪರಿಣಾಮ ಟಿಆರ್ಪಿ ಢಂ ಆದ್ರೆ ಸೀರಿಯಲ್‌ಅನ್ನೇ ನಿಲ್ಲಿಸಬೇಕಾಗುತ್ತೆ, ಈ ರಿಸ್ಕ್ ತಗೊಳ್ಳೋಕೆ ಯಾವ ಸೀರಿಯಲ್‌ ತಂಡಗಳೂ ರೆಡಿ ಇಲ್ಲ. ಆದರೆ ಆರೂರು ಜಗದೀಶ್‌ ಅವರಂಥಾ ಅನುಭವಿ ನಿರ್ದೇಶಕರು ಹೀಗೊಂದು ಹೊಸ ಹೆಜ್ಜೆ ತಗೊಂಡಿದ್ದಾರೆ. 

Prabhas About Deepika Padukone Smile: ದೀಪಿಕಾ ನಗುವಿಗೆ ಪ್ರಭಾಸ್ ಫಿದಾ..! ಚಂದದ ನಗುವಿನ ಹುಡುಗಿ ಎಂದ ನಟ

ಆದರೆ ಜನ ಇದನ್ನು ಒಪ್ಪಿಕೊಳ್ಳೋದಕ್ಕೆ ರೆಡಿ ಇಲ್ಲ. ಯಾಕೆಂದರೆ ಜನರು ಈ ಸೀರಿಯಲ್‌ ಜೊತೆಗೆ ಎಮೋಶನಲ್‌ ಆಗಿ ಕನೆಕ್ಟ್‌ ಆಗಿದ್ದಾರೆ. ಈ ಹಿಂದೆ ಅನು ಮದುವೆ ಸೂರ್ಯ ಜೊತೆಗೆ ನಡೆಯುತ್ತೆ ಅನ್ನುವಾಗಲೂ ಜನ ವಿರೋಧಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಆದರೆ ಅದು ಜಸ್ಟ್ ಒಂದು ಟ್ರಿಕ್‌ ಅಷ್ಟೇ ಅನ್ನೋದು ಜನಕ್ಕೆ ತಿಳಿದಿತ್ತು. ಆ ಬಳಿಕ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಸೀರಿಯಲ್‌ನಿಂದ ಹೊರ ಬರ್ತಿದ್ದಾರೆ ಅಂತ ಗೊತ್ತಾದಾಗಲೂ ಜನ ಸೋಷಿಯಲ್‌ ಮೀಡಿಯಾದಲ್ಲಿ ಕ್ಯಾಂಪೇನ್‌ಅನ್ನೇ ಶುರು ಮಾಡಿದ್ರು. ಆಮೇಲೆ ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ಕಂಟಿನ್ಯೂ ಆದ್ರು. ಇನ್ನು ಹೀರೋನೇ ವಿಲನ್‌ ಆಗ್ತಾರೆ ಅಂದಾಗ ಜನ ಸುಮ್ಮನಿರ್ತಾರಾ? ಜನ ಸೀರಿಯಲ್ ಟೀಮ್‌ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಈ ಬಗ್ಗೆ ಜನರನ್ನು ಸಮಾಧಾನಿಸಲು ಪ್ರಯತ್ನಿಸಿದ್ದಾರೆ. ಹೊಸದನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು ಅಂತ ತಿಳಿಹೇಳಿದ್ದಾರೆ. ತಾನು ಈ ನೆಗೆಟಿವ್ ಶೇಡ್ ಅನ್ನು ಖುಷಿಯಿಂದ ಎನ್ ಜಾಯ್ ಮಾಡುತ್ತಿರೋದಾಗಿಯೂ ಹೇಳಿದ್ದಾರೆ. ಒಂದು ವರ್ಗದ ಜನ ಇದೂ ಒಂದು ಗಿಮಿಕ್. ಆರ್ಯವರ್ಧನ್ ಈ ಎಲ್ಲದರಿಂದ ಶೀಘ್ರದಲ್ಲೇ ಹೊರಬರ್ತಾರೆ ಅನ್ನೋ ವಿಶ್ವಾಸ ಇಟ್ಟಿದ್ದಾರೆ. ಇನ್ನೊಂದು ವರ್ಗದವರು ಮಾತ್ರ ಇಷ್ಟು ಸಮಯ ಹೀರೋ ಆಗಿ ಆರಾಧಿಸುತ್ತಿದ್ದ ಆರ್ಯವರ್ಧನ್ ಅನ್ನು ಸಡನ್ನಾಗಿ ವಿಲನ್ ಛಾಯೆಯಲ್ಲಿ ನೋಡೋದಕ್ಕಾಗ್ತಿಲ್ಲ. ದಯಮಾಡಿ ಕಥೆ ಬದಲಿಸಿ ಎಂದು ಪದೇ ಪದೇ ಸೀರಿಯಲ್‌ ಟೀಮ್‌ಗೆ ರಿಕ್ವೆಸ್ಟ್‌ ಕಳಿಸುತ್ತಿದ್ದಾರೆ. ಇದೀಗ ಚೆಂಡು ಸೀರಿಯಲ್ ಟೀಮ್‌ನ ಅಂಗಳದಲ್ಲಿದೆ. ಹೀರೋನೇ ವಿಲನ್ನಾ, ಅಥವಾ ಹೀರೋ ಯಾವತ್ತಿದ್ರೂ ಹೀರೋನೆನಾ ಅನ್ನೋದನ್ನು ಅವರೇ ನಿರ್ಧರಿಸಬೇಕು.

Pushpa Success: ರಶ್ಮಿಕಾಳನ್ನು ಹೊಗಳದ ಮಹೇಶ್ ಬಾಬು, ಫ್ಯಾನ್ಸ್ ಗರಂ

Follow Us:
Download App:
  • android
  • ios