Aishwarya Vinay: ಕನ್ನಡ ಕಿರುತೆರೆಯ ಜನಪ್ರಿಯ ನಟರಾದ ಐಶ್ವರ್ಯ ಸಾಲಿಮಠ್ ಮತ್ತು ವಿನಯ್ ತಮ್ಮ ಮುದ್ದಾದ ಅವಳಿ ಮಕ್ಕಳಾದ ವಜ್ರ ಮತ್ತು ವೈಡೂರ್ಯರಿಗೆ ಸರಳವಾಗಿ ಕಿವಿ ಚುಚ್ಚಿಸುವ ಶಾಸ್ತ್ರ ಮಾಡಿದ್ದಾರೆ. ಮುದ್ದಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಜ್ರ-ವೈಡೂರ್ಯರಿಗೆ ಕಿವಿ ಚುಚ್ಚಿಸೋ ಶಾಸ್ತ್ರ

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅವಳಿ ಮಕ್ಕಳಿಗೆ ಪೋಷಕರಾಗಿ ಭಡ್ತಿ ಪಡೆದಿದ್ದ ಕನ್ನಡ ಕಿರುತೆರೆಯ ಜನಪ್ರಿಯ ನಟರಾದ ಐಶ್ವರ್ಯ ಸಾಲಿಮಠ್ ಮತ್ತು ವಿನಯ್ ಜೋಡಿ ಇದೀಗ ಮುದ್ದು ಅವಳಿ ಮಕ್ಕಳಾದ ವಜ್ರ ಮತ್ತು ವೈಡೂರ್ಯರಿಗೆ ಸರಳವಾಗಿ ಕಿವಿ ಚುಚ್ಚಿಸುವ ಶಾಸ್ತ್ರ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ತಮ್ಮ ಮಕ್ಕಳ ಮುಖವನ್ನು ಮೊದಲ ಬಾರಿಗೆ ಮುದ್ದಾದ ವಿಡಿಯೋ ಮೂಲಕ ರಿವೀಲ್ ಮಾಡಿದ್ದರು. ಇದೀಗ ಸರಳವಾಗಿ ಕಿವಿ ಚುಚ್ಚಿಸುವ ಶಾಸ್ತ್ರ ಮಾಡಿ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅವಳಿ ಮಕ್ಕಳಿಗೆ ಮಾವನ ಮಡಿಲಲ್ಲಿ ಶಾಸ್ತ್ರ

ಐಶ್ವರ್ಯ ಸಾಲೀಮಠ್ ಅವರು ತಮ್ಮ ಕುಟುಂಬದ ಜೊತೆ ಜ್ಯುವೆಲ್ಲರಿ ಮಳಿಗೆಗೆ ತೆರಳಿ, ಅಲ್ಲಿ ಇಬ್ಬರು ಮಕ್ಕಳನ್ನು ಮಾವನ ಮಡಿಲಿನಲ್ಲಿ ಕೂರಿಸಿ, ಕಿವಿ ಚುಚ್ಚುವ ಶಾಸ್ತ್ರ ಮಾಡಿಸಿದ್ದಾರೆ. ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪತಿ ವಿನಯ್ ಜು ಈ ಶಾಸ್ತ್ರಕ್ಕೆ ಗೈರಾಗಿದ್ದರು, ಆದರೆ ವಿಡಿಯೋ ಕರೆ ಮಾಡುವ ಮೂಲಕ ಅಳುವ ಮಕ್ಕಳನ್ನು ಸಮಾಧಾನ ಮಾಡುತ್ತಿರುವುದು ಕಾಣಿಸುತ್ತದೆ. ಅಭಿಮಾನಿಗಳು ವಿಡಿಯೋ ನೋಡಿ ಶುಭ ಹಾರೈಸಿದ್ದಾರೆ. ಐಶ್ವರ್ಯ ಮತ್ತು ವಿನಯ್ ಜೂನ್ ತಿಂಗಳ 27ರಂದು, ತಮ್ಮ ಬದುಕಿನ ವಿಶೇಷ ದಿನದಂದು, ಅಂದರೆ ಇಬ್ಬರು ನಟನೆಗೆ ಕಾಲಿಟ್ಟು ಹತ್ತು ವರ್ಷಗಳ ಸಂದರ್ಭದಲ್ಲಿ ಮಕ್ಕಳ ವಿಡೀಯೋ ಮಾಡಿ ಫೇಸ್ ರಿವೀಲ್ ಮಾಡಿದ್ದರು.

ನಟಿ ಐಶ್ವರ್ಯ ಸಾಲಿಮಠ ‘ಅಗ್ನಿಸಾಕ್ಷಿ’, ‘ರಾಮಾಚಾರಿ’ , ‘ಸೇವಂತಿ’ ‘ಸರಯೂ’, ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಪತಿ ವಿನಯ್ ಜು ಕೂಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದಾರೆ. ವಿನಯ್ ಮತ್ತು ಐಶ್ವರ್ಯ ‘ಮಹಾಸತಿ’ ಧಾರಾವಾಹಿ ಶೂಟಿಂಗ್‌ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆ ಧಾರಾವಾಹಿಯಲ್ಲಿ ವಿನಯ್‌ ಹೀರೋ ಆಗಿದ್ದರು. ಬಳಿಕ ವಿನಯ್‌ ಹಾಗೂ ಐಶ್ವರ್ಯಾ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರ ಸ್ನೇಹ ಗಟ್ಟಿಯಾಗಿ ಪ್ರೀತಿಗೆ ತಿರುಗಿತ್ತು. ಮೂಲತಃ ಉತ್ತರ ಕರ್ನಾಟಕದವರಾದ ಈ ಜೋಡಿ ಕುಟುಂಬದವರ ಒಪ್ಪಿಗೆ ಪಡೆದು 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

View post on Instagram