ಗರ್ಭಿಣಿ ಪತ್ನಿ ಮೇಲೆ 'ನೇತ್ರಾವತಿ' ನಟನಿಂದ ಹಲ್ಲೆ; ಮತ್ತೊಬ್ಬರ ಜೊತೆ ಸೈಲೆಂಟ್‌ ಆಗಿ ನಿಶ್ಚಿತಾರ್ಥ?

ಮದುವೆ ಆಗಿದ್ದರೂ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ನಟ. ಸನ್ನಿ ಮಹಿಪಾಲ್‌ ವಿರುದ್ಧ ದೂರು ದಾಖಲಿಸಿದ ಪತ್ನಿ.... 

Kannada serial actor Sunny Mahipal faces assaulting allegations by wife vcs

ಕನ್ನಡ ಕಿರುತೆರೆಯ ಜನಪ್ರಿಯ 'ನೇತ್ರಾವತಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ನಟ ಸನ್ನಿ ಮಹಿಪಾಲ್ ದಾಂಪತ್ಯ ಈಗ ಬೀದಿಗೆ ಬಂತು ನಿಂತಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ನಟನಿಗೆ ಯುವತಿಯೊಬ್ಬಳ ಪರಿಚಯ ಆಗಿದೆ. ಬಹಳ ಸಮಯದಿಂದ ಸ್ನೇಹಿತರಾಗಿದ್ದು ಆನಂತರ ಪ್ರೇತಿಗೆ ತಿರುವಿ ಅಲ್ಲಿಂದ ದೈಹಿಕ ಸಂಪರ್ಕ ಬೆಳೆದಿದೆ. ಈ ಯುವತಿ ಈಗ ಎರಡು ತಿಂಗಳ ಗರ್ಭಿಣಿ. ಜೂನ್ 15ರಂದು ಸನ್ನಿ ಮಹಿಪಾಲ್‌ ಮತ್ತು ಈ ಯುವತಿ ದೇವಸ್ಥಾನದಲ್ಲಿ ಮದುವೆ ಕೂಡ ಆಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕೆಲವೊಂದು ಫೋಟೋಗಳು ವೈರಲ್ ಆಗುತ್ತಿದೆ.

ಮದುವೆಯಾದ ನಂತರ ಕೆಲವು ದಿನಗಳಲ್ಲಿ ಪೋಷಕರನ್ನು ಒಪ್ಪಿಸಿ ಬರುವುದಾಗಿ ತಿಳಿಸಿ ಸನ್ನಿ ಮಹಿಪಾಲ್ ಹೊರಟಿದ್ದಾರೆ. ಈ ನಡುವೆ ಸ್ನೇಹಿತರಂತೆ ಇರಬೇಕು ಎಂದು ಷರತ್ತು ಕೂಡ ಹಾಕಿದ್ದಾರೆ. ಅದರಂತೆ ಆ ಯುವತಿ ಪಾಲಿಸಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಮತ್ತೊಬ್ಬಳ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಜುಲೈ 22ರಂದು ಮಹಿಪಾಲ್‌ ವಿಜ್ಞಾನ ನಗರದಲ್ಲಿರುವ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ಈ ಘಟನೆ ಬಗ್ಗೆ ಮಾತಿಗೆ ಮಾತು ಬೆಳೆದಾಗ ಗಲಾಟೆ ದೊಡ್ಡದಾಗಿ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. 

100 ಕೋಟಿ ಆಸ್ತಿ ಬೇಡ, ಒಬ್ಬ ತಂದೆಯಾಗಿ ನನಗಿದು ಖುಷಿಯಾದ ವಿಷಯ: ಚಂದನ್ ಶೆಟ್ಟಿ ತಂದೆ ರಿಯಾಕ್ಷನ್

ಈ ಗಲಾಟೆಯಲ್ಲಿ ಸನ್ನಿ ಮಹಿಪಾಲ್‌ ಚಾಕುವಿನಿಂದ ತೋಳಿಗೆ ಇರಿದಿದ್ದಾರೆ. ಅಲ್ಲದೆ ಈ ಗಲಾಟೆಯಿಂದ ಗರ್ಭಪಾತ ಆಗಿರೋದಾಗಿಯೂ ಪತ್ನಿ ಹೇಳಿದ್ದಾರೆ. ಈ ಗಲಾಟೆ ಆದ ಮೇಲೆ 112ಕ್ಕೆ ಮಹಿಪಾಲ್‌ ಪತ್ನಿ ಕರ ಮಾಡಿ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿಯನ್ನು ಕರೆದಿದ್ದಾರೆ. ಗರ್ಭಪಾತದಿಂದ ತ್ರೀವ್ರ ರಕ್ತಸ್ರಾವವಾಗುತ್ತಿತ್ತು ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ ಆದರೆ ಮಹಿಳಾ ಸಿಬ್ಬಂದಿ ಇಲ್ಲದ ಕಾರಣ ಕರೆದುಕೊಂಡು ಹೋಗಲಾಗಿಲ್ಲ.  ಹೆಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಾರೆ. ಮನೆಗೆ ಅತಿಕ್ರಮ ಪ್ರವೇಶ ಮಾಡಿರುವುದಾಗಿ ಹಾಗೂ ಒತ್ತಾಯದಿಂದ ಮದುವೆಯಾಗಿರೋದಕ್ಕೆ ಸನ್ನಿ ಮಹಿಪಾಲ್‌ ಕೂಡ ದೂರು ನೀಡಿದ್ದಾರೆ. 

Latest Videos
Follow Us:
Download App:
  • android
  • ios