ಹೇಗಿದ್ದ ಶಕುಂತಲಾ ಹೇಗಾದ್ಲು? ಅಂತ್ಯಕ್ಕೂ ಮುನ್ನ ಪ್ರಶ್ನೆಯೊಂದಕ್ಕೆ ಸಿಕ್ತು ಉತ್ತರ
ಗೌತಮ್ ಮತ್ತು ಭೂಮಿಕಾ ಹೆಣೆದ ಬಲೆಯಲ್ಲಿ ಶಕುಂತಲಾ ಹಾಗೂ ಜೈದೇವ್ ಸಿಲುಕಿದ್ದಾರೆ. ವೈರಲ್ ವಿಡಿಯೋದಲ್ಲಿ ಶಕುಂತಲಾ ಜೈಲು ಸೇರುವುದು ಖಚಿತವಾಗಿದ್ದು, ಜೈದೇವ್ ಅಂತ್ಯದ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಅಮೃತಧಾರೆ - Amruthadhaare
ಅಮೃತಧಾರೆ ಸೀರಿಯಲ್ ಹೇಗೆ ಮುಕ್ತಾಯ ಆಗಲಿದೆ ಎಂಬ ಎರಡು ಪ್ರಶ್ನೆಗಳ ಪೈಕಿ ಒಂದಕ್ಕೆ ಉತ್ತರ ಸಿಕ್ಕಿದೆ. ಗೌತಮ್ ಮತ್ತು ಭೂಮಿಕಾ ಹೆಣೆದ ಬಲೆಯಲ್ಲಿ ಶಕುಂತಲಾ ಮತ್ತು ಜೈದೇವ್ ಸಿಲುಕಿದ್ದು, ಕಥೆ ರೋಚಕಘಟ್ಟಕ್ಕೆ ಬಂದು ನಿಂತಿದೆ.
ಶಕುಂತಲಾಗೆ ಪೊಲೀಸರಿಂದ ಡ್ರಿಲ್
ಭೂಮಿಕಾ ಕಾಣೆಯಾಗಿದ್ದಾಳೆ ಎಂದು ಗೌತಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಜೈದೇವ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು, ಶಕುಂತಲಾಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಷ್ಟು ಮಾತ್ರವಲ್ಲ ಪದೇ ಪದೇ ಜೈದೇವ್ಗೆ ಕಾಲ್ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಒಂದು ಪ್ರಶ್ನೆಗೆ ಸಿಕ್ತು ಉತ್ತರ
ಪೊಲೀಸ್ ವಿಚಾರಣೆ ಬಳಿಕ ಮಗನ ಬಳಿ ಹೋಗುತ್ತಿದ್ದ ಶಕುಂತಲಾಳನ್ನು ಪೊಲೀಸರು ಹಿಂಬಾಲಿಸುತ್ತಿರೋದನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಮತ್ತೊಂದೆಡೆ ಶೂಟಿಂಗ್ ಕೊನೆಯ ದಿನದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಕ್ಷಕರ ಪ್ರಶ್ನೆಯೊಂದಕ್ಕೆ ಉತ್ತರ ಸಿಕ್ಕಿದೆ.
ಇಬ್ಬರ ವಿಲನ್ಗಳ ಅಂತ್ಯ ಹೇಗೆ?
ಅಮೃತಧಾರೆಯ ವಿಲನ್ಗಳಾದ ಶಕುಂತಲಾ ಮತ್ತು ಜೈದೇವ್ ಅಂತ್ಯ ಹೇಗೆ ಎಂಬುದಕ್ಕೆ ಅಧಿಕೃತ ಉತ್ತರ ಸಿಕ್ಕಿಲ್ಲ. ವೈರಲ್ ವಿಡಿಯೋದಲ್ಲಿ ಶಕುಂತಲಾ ಜೈಲಿನ ಕೈದಿಯ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು, ಅಂತಿಮವಾಗಿ ಕತ್ತಲೆಕೋಣೆ ಸೇರೋದು ಸದ್ಯಕ್ಕೆ ಕನ್ಫರ್ಮ್ ಆಗಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ಶಕುಂತಲಾ ಮುಂದಿನ ಜೀವನ ಜೈಲಿನಲ್ಲಿಯೇ ಮುಗಿಯಲಿದೆ.
ಜೈದೇವ್ ಅಂತ್ಯ?
ಮಲ್ಲಿ ತನ್ನ ವಿರುದ್ಧ ಸಾಕ್ಷಿ ಸಂಗ್ರಹ ಮಾಡಿರೋದು ಮತ್ತು ಭೂಮಿಕಾ-ದೀಪಿಕಾ ಒಂದಾಗಿರೋ ವಿಷಯ ತಿಳಿದು ಜೈದೇವ್ ಪತರುಗುಟ್ಟಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಂಡು ಭೂಗತವಾಗ್ತಾನಾ? ಜೈದೇವ್ ಸಾಯ್ತಾನಾ? ತಾಯಯೊಂದಿಗೆ ಜೈಲು ಸೇರುತ್ತಾನಾ ಅನ್ನೋದು ಈ ವಾರದ ಅಂತ್ಯದಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













