ನಿವೇದಿತಾಗೆ ತಂದೆ ತಾಯಿ ಕಷ್ಟನೇ ತೋರಿಸಿಲ್ಲ: 3ನೇ ವಾರ್ಷಿಕೋತ್ಸವದ ದಿನ ಭಾವುಕರಾದ ಚಂದನ್-ನಿವಿ

ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ 3ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಿವೇದಿತಾ ಗೌಡ - ಚಂದನ್ ಶೆಟ್ಟಿ. ಪತಿ ಮಾಡಿರುವ ಕೇಕ್‌ ನೋಡಿ ನಿವಿ ಎಮೋಷನಲ್.... 

Kannada Rapper Chandan shetty prepares special cake for Niveditha on wedding anniversary colors kannada gicchi giligili vcs

ಕನ್ನಡ ಕಿರುತೆರೆ ಜನಪ್ರಿಯ ಸೆಲೆಬ್ರಿಟಿ ಜೋಡಿ ನಿವೇದಿತಾ ಗೌಡ ಮತ್ತು Rapper ಚಂದನ್ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 3 ವರ್ಷ ಕಳೆದಿದೆ. ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸುತ್ತಿರುವ ನಿವಿಗೆ ಸರ್ಪ್ರೈಸ್‌ ನೀಡಬೇಕು ಎಂದು ಫ್ಯಾಮಿಲಿ ರೌಂಡ್‌ನಲ್ಲಿ ಚಂದನ್ ಶೆಟ್ಟಿ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. 

ನಿವಿ ಮಾಡಿದ ಸ್ಕಿಟ್‌ನಲ್ಲಿ ತಾಯಿ ಪಾತ್ರ ಮಾಡಿದ್ದಾರೆ. ಹೀಗಾಗಿ ನಿಮ್ಮ ಮಗು ಎಂಟ್ರಿ ಯಾವಾಗ ಎಂದು ನಿರೂಪಕ ನಿರಂಜನ್ ದೇಶಪಾಂಡೆ ಪ್ರಶ್ನೆ ಮಾಡಿದ್ದಾರೆ. 'ಸ್ವಲ್ಪ ವರ್ಷ ಆದ್ಮೇಲೆ ಮಗು ಮಾಡಿಕೊಳ್ಳುತ್ತೀನಿ. ಮಗು ಸಾಕಬಹುದು ಎನ್ನುವ ನಂಬಿಕೆ ಬಂದ ಮೇಲೆ ನಾನು ಮಗು ಮಾಡಿಕೊಳ್ಳುವುದು. ನನಗೆ ಹೆಣ್ಣು ಮಗು ಆಗಬೇಕು ನೋಡಲು ನನ್ನಂತೆ ಇರಬೇಕು ಆದರೆ ಹೈಟ್ ಮಾತ್ರ ಚಂದನ್ ರೀತಿ ಇರಬೇಕು. ಬೆಕ್ಕಿನ ಕಣ್ಣು ನನಗೆ ತುಂಬಾ ಇಷ್ಟವಾಗುತ್ತದೆ ಹೀಗಾಗಿ ಕಣ್ಣು ಮೂಗು ನನ್ನ ರೀತಿ ಇರಬೇಕು ಕೂದಲು ಮಾತ್ರ ಬ್ರೌನ್ ಇರಬೇಕು. ನಾನು ಹೇಳಿದ ಮಾತುಗಳನ್ನು ಕೇಳಬೇಕು' ಎಂದು ನಿವಿ ಮಾತನಾಡಿದ್ದಾರೆ.

ಕಣ್ಣು ಬಿಟ್ಕೊಂಡು ಮಾಡಿದ್ರೆನೇ ಸರಿಯಾಗಲ್ಲ; ನಿವೇದಿತಾ ಗೌಡ ಬಿರಿಯಾನಿ ತಿಂದು ಹೊಸ ಹೆಸರಿಟ್ಟ ಚಂದನ್ ಶೆಟ್ಟಿ

'ಮೊಮ್ಮಗು ನನ್ನ ಮಗಳ ರೀತಿ ಇರಬೇಕು. ಹುಡುಗಿ ಪಾಪುನೇ ಹುಟ್ಟಬೇಕು' ಎಂದು ನಿವಿ ಪೋಷಕರು ಹೇಳಿದ್ದಾರೆ. 

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮೂರನೇ ವರ್ಷ ವಿವಾಹ ವಾರ್ಷಿಕೋತ್ಸವವನ್ನು ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಆಚರಿಸಿಕೊಂಡಿದ್ದಾರೆ. ನಿವೇದಿತಾಗೆ ಸರ್ಪ್ರೈಸ್ ಕೊಡಬೇಕು ಎಂದು ರಾಗಿ ಮುದ್ದೆಯಿಂದ ಮಾಡಿರುವ ಕೇಕ್‌ನ ತಯಾರಿಸಿರುವೆ ಎಂದು ಹಾಸ್ಯ ಕ್ರಿಯೇಟ್ ಮಾಡಿದ್ದಾರೆ. ಕೇಕ್ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಒಂದೊಂದು ಲೇಯರ್ ಇಡುವ ಮುನ್ನ ಪ್ರತಿ ವರ್ಷವನ್ನು ನೆನಪಿಸಿಕೊಂಡಿದ್ದಾರೆ. ಹಾರ್ಟ್‌ ಶೇಪ್‌ ಕೇಕ್‌ಗೆ ಕೆಂಪು ಬಣ್ಣ ಹಾಕಿದ್ದಾರೆ. ಹ್ಯಾಪಿ ಆನಿವರ್ಸರಿ ಪಪ್ಪಿ ಎಂದು ಬರೆದು ಕೇಕ್ ಮಾಡಿದ್ದಾರೆ. ಚಂದನ್ ವೇದಿಕೆ ಮೇಲೆ ಬರುವುದಿಲ್ಲ ಎಂದು ಕೊಂಡು ಇದು ನನಗೆ ಸರ್ಪ್ರೂಸ್‌ ಅಥವಾ ಶಿಕ್ಷೆನಾ ಗೊತ್ತಿಲ್ಲ ಅನುಭವಿಸಲು ಆಗುತ್ತಿಲ್ಲ. ಯಾವತ್ತೂ ಚಂದನ್ ಈ ರೀತಿ ಮಾಡಿರಲಿಲ್ಲ ಹೀಗಾಗಿ ಖುಷಿಯಾಗುತ್ತಿದೆ ಎಂದು ನಿವಿ ಭಾವುಕರಾಗಿದ್ದಾರೆ.

ನಾನು ಪ್ರೆಗ್ನೆಂಟ್ ಅನ್ನೋದು ನನಗೆ ಗೊತ್ತಿಲ್ಲ, ಪಾಳು ಬಂಗಲೆಗೆ ಹೋಗಬೇಕು; ನಿವೇದಿತಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಾಕ್

ನನ್ನ ಮನಸ್ಸಿನಲ್ಲಿ ಪ್ರತಿ ಕ್ಷಣವೂ ಚಂದನ್ ಇದ್ದಾರೆ ಎಂದು ನಿವಿ ಮಾತನಾಡುವಾಗ ಚಂದನ್ ಹಿಂದಿನಿಂದ ಬಂದು ಸರ್ಪ್ರೈಸ್ ಕೊಡುತ್ತಾರೆ. 'ಲೈಫಲ್ಲಿ ನನಗೆ ಒಂದು ದಿನವೂ ಸರ್ಪ್ರೈಸ್ ಆಗಿಲ್ಲ. ಜೀವನದಲ್ಲಿ ಇದೇ ಮೊದಲ ನನಗೆ ಸರ್ಪ್ರೈಸ್ ಕೊಟ್ಟಿರುವುದು. ಮ್ಯೂಸಿಕ್ ಕಾನ್ಸರ್ಟ್‌ ಹೋಗುವುದಾಗಿ ಹೇಳಿ ಇಲ್ಲಿದೆ ಬಂದಿದ್ದಾರೆ' ಎಂದು ಕೇಕ್ ನೋಡಿ ನಿವಿ ಮಾತನಾಡಿದ್ದಾರೆ. 'ನಿವಿಗೆ ಸುಳ್ಳು ಹೇಳುವುದು ತುಂಬಾ ಕಷ್ಟವಾಗಿತ್ತು. ವಾರ್ಷಿಕೋತ್ಸ ಆಚರಣೆಗೆ ಇರುವುದಿಲ್ಲ ಎಂದು ಹೇಳಿದಾಗ ಮನೆಯಲ್ಲಿ ದೊಡ್ಡ ಜಗಳ ಅಗಿತ್ತು.. ನನಗಿಂತ ಮ್ಯೂಸಿಕ್ ಕಾನ್ಸರ್ಟ್‌ ಮುಖ್ಯ ಅಂತ ಹೇಳುತ್ತಿದ್ದಳು. ನಿವಿ ಖುಷಿ ಮುಖ್ಯವಾಗುತ್ತದೆ' ಎಂದು ಚಂದನ್ ಹೇಳಿದ್ದಾರೆ.

'ಮೊದಲು ನಿವಿ ನೋಡಿದಾಗ ಕ್ಯೂಟ್ ಅನಿಸಿತ್ತು. ಬಿಗ್ ಬಾಸ್‌ನಲ್ಲಿ ಮದುವೆ ಮಾಡಿಕೊಳ್ಳುವ ಐಡಿಯಾ ಬಂದಿರಲಿಲ್ಲ. ಹೊರಗಡೆ ಬಂದ ಮೇಲೆ ಫೀಲಿಂಗ್ ಶುರುವಾಗಿತ್ತು. ಫೀಲಿಂಗ್ ಶುರುವಾದ ಮೇಲೆ ಪ್ರಪೋಸ್ ಮಾಡಿದೆ ಸಂಬಂಧ ಗಟ್ಟಿ ಆಯ್ತು ಆಮೇಲೆ ಗೌರವ ಹೆಚ್ಚಾಗಿತ್ತು. ಇಬ್ಬರು ಅರ್ಥ ಮಾಡಿಕೊಳ್ಳುತ್ತಾ ಜೀವನ ಶುರುವಾಯ್ತು...ಕಷ್ಟ ಅಂದ್ರೆ ಏನೆಂದು ನಿವಿಗೆ ಅವರ ತಂದೆ ತಾಯಿ ತೋರಿಸಿಲ್ಲ. ಎಷ್ಟೇ ಕಷ್ಟ ಇದ್ರೂ ಮಗಳಿಗೆ ತೋರಿಸದೆ ರಾಣಿ ರೀತಿ ಬೆಳೆಸಿಕೊಂಡು ಬಂದಿದ್ದಾರೆ. ಈಗಲೂ ನಿವಿಗೆ ಪ್ರಿನ್ಸೆಸ್‌ ಫೀಲಿಂಗ್ ಮದುವೆ ಆದ ಮೇಲೆ ನಾನು ಹಾಗೆ ನೋಡಿಕೊಳ್ಳುತ್ತಿರುವೆ' ಎಂದು ಚಂದನ್ ಮಾತನಾಡಿದ್ದಾರೆ.

ಹೆಂಡ್ತಿ ಹಾಕೋ ಬಟ್ಟೆನ ನೀಟಾಗಿ ನೋಡಿ; ಚಂದನ್‌ ಜೊತೆ ಜಗಳ ಮಾಡ್ಕೊಂಡು ಗಿಫ್ಟ್‌ ತೆಗೆಸಿಕೊಂಡ ನಿವೇದಿತಾ ಗೌಡ

'ಏನಾದರೂ ಆಗಲಿ ಜೀವನದಲ್ಲಿ ನಿನ್ನ ಪರ ನಿಲ್ಲುವೆ. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಂಡು ಜೀವನದಲ್ಲಿ ಒಟ್ಟಿಗೆ ಬೆಳೆಯೋಣ. ನೀನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅಷ್ಟು ನಿನ್ನನ್ನು ಪ್ರೀತಿ ಮಾಡುತ್ತೀನಿ ಚಂದನ್. ನನ್ನ ಜೀವನದ ಜರ್ನಿ ಪ್ರತಿ ಕ್ಷಣವೂ ನಿನ್ನ ಜೊತೆಗಿರಬೇಕು.
 

Latest Videos
Follow Us:
Download App:
  • android
  • ios