Asianet Suvarna News Asianet Suvarna News

ಬ್ಯಾಗಲ್ಲಿಟ್ಟುಕೊಂಡ ರಹಸ್ಯ ಬಿಚ್ಟಿಟ್ಟ ನಿವೇದಿತಾ ಗೌಡ!

ಗೊಂಬೆ ಬ್ಯಾಗ್‌ನಲ್ಲಿ ಏನೆಲ್ಲಾ ಇರಬಹುದು ಎಂದು ಪ್ರಶ್ನೆ ಕೇಳುತ್ತಿದ್ದ ನೆಟ್ಟಿಗರಿಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ನಿವಿ....

Kannada Niveditha gowda reveals handbag secret on youtube channel vcs
Author
Bangalore, First Published Oct 28, 2021, 5:07 PM IST
  • Facebook
  • Twitter
  • Whatsapp

ಕನ್ನಡ ಕಿರುತೆರೆಯ ಗೊಂಬೆ, ಚಂದನ್ ಶೆಟ್ಟಿ (Chandan Shetty)ಯ ಪ್ರೀತಿಯ ಬಾಳ ಸಂಗಾತಿ ನಿವೇದಿತಾ ಗೌಡ (Niveditha Gowda) ಜನಪ್ರಿಯತೆ ಪಡೆದಿದ್ದು ಸೋಷಿಯಲ್ ಮೀಡಿಯಾ ಮೂಲಕ. ಡಬ್‌ಸ್ಮ್ಯಾಶ್, ಟಿಕ್‌ಟಾಕ್‌ (Tiktok), ಫೇಸ್‌ಬುಕ್‌ ಈಗ ಇನ್‌ಸ್ಟಾಗ್ರಾಂನಲ್ಲಿ (Instagram) ತಮ್ಮ ಲೈಫ್‌ಸ್ಟೈಲ್, ಫ್ಯಾಷನ್ (Fashion), ಡ್ಯಾನ್ಸ್ (Dance) ಮತ್ತು ರೀಲ್ಸ್ (Reels) ಹಂಚಿಕೊಂಡು ನಮ್ಮ ಜೀವನದ ಹಲವು ವಿಷಯಗಳನ್ನು ನೆಟ್ಟಿಗರ ಜೊತೆ ಹಂಚಿಕೊಳ್ಳುತ್ತಾರೆ. ಲಾಕ್‌ಡೌನ್‌ ಅವಧಿಯಲ್ಲಿ ಇಂಥದ್ದನ್ನು ಮಾಡಿ, ಟೈಮ್ ಪಾಸ್‌ ಮಾಡಿಕೊಂಡು, ಫಾಲೋವರ್ಸ್‌ ಅನ್ನು ಎಂಗೇಜ್‌ ಆಗಿಟ್ಟುಕೊಂಡ ನಿವಿ 1 ಮಿಲಿಯನ್ ಫಾಲೋವರ್ಸ್ ತಲುಪಿದ್ದಾರೆ.

'ರಾಜಾ ರಾಣಿ' ರಿಯಾಲಿಟಿ ಶೋ ಗೆದ್ದೇ ಬಿಡ್ತಾರಾ ಚಂದನ್ ಶೆಟ್ಟಿ -ನಿವೇದಿತಾ ?

ಗಿದೆ, ಕೂದಲು ಆರೈಕೆ (Haircare) ಹೇಗೆ ಮಾಡುತ್ತಾರೆ? ಕಾರೊಳಗೆ ಏನೆಲ್ಲಾ ಇವೆ ಎಂದು ವಿಡಿಯೋ ಮೂಲಕ ಫಾಲೋವರ್ಸ್‌ಗೆ ತೋರಿಸಿದ್ದಾರೆ. ಆದರೆ ಹಲವು ವರ್ಷಗಳಿಂದ ನಿವಿ ಫಾಲೋವರ್ಸ್ ಕೇಳುತ್ತಿರುವುದು ಒಂದೇ ಪ್ರಶ್ನೆ ತಮ್ಮ ಬ್ಯಾಗ್‌ನಲ್ಲಿ ಏನೇಲ್ಲಾ (What's in my bag) ಇರುತ್ತವೆ ಎಂದು. ಏಕೆಂದರೆ ಒಮ್ಮೆ ದೊಡ್ಡ ಬ್ಯಾಗ್ ಇದ್ದರೆ ಮತ್ತೊಮ್ಮೆ ಪುಟ್ಟ ಮಕ್ಕಳಂತೆ ಸಣ್ಣ ಬ್ಯಾಗ್ ಹಿಡಿದು ಕೊಂಡಿರುತ್ತಾರೆ. 

Kannada Niveditha gowda reveals handbag secret on youtube channel vcs

'ನನ್ನ ಬ್ಯಾಗ್‌ನಲ್ಲಿ ಸದಾ ಒಂದು ಸಣ್ಣ ಪೌಚ್ ಇರುತ್ತದೆ. ಇದರೊಳಗೆ ನಾನು ಸದಾ ದೇವರ ವಿಗ್ರಹ ಇಟ್ಟಿರುತ್ತೀನಿ. ಚಾಕೋಲೇಟ್ ಇರುತ್ತದೆ,' ಎಂದು ಹೇಳುತ್ತಾ ತಮ್ಮ ಬಳಿ ಇರುವ ಕಾಪರ್ ಬಣ್ಣದ ಗಣೇಶ ಮೂರ್ತಿಯನ್ನು ತೋರಿಸಿದ್ದಾರೆ. ದೊಡ್ಡ ದೊಡ್ಡ ಸೈಜ್ ವಸ್ತುಗಳನ್ನು ಬ್ಯಾಗ್‌ನಲ್ಲಿದ್ದರೆ ಭಾರ ಆಗುತ್ತದೆ. ಇಲ್ಲವಾದರೆ ಜಾಗ ಇರುವುದಿಲ್ಲ. ಹೀಗಾಗಿ ಎಲ್ಲವೂ ಸಣ್ಣ ಸಣ್ಣ ಸೈಜ್‌ನಲ್ಲಿ ಖರೀದಿಸುತ್ತಾರಂತೆ ನಿವಿ. 

'ಲಿಪ್‌ಬಾಮ್, ಲಿಪ್‌ ಸ್ಟಿಕ್, ಹ್ಯಾಂಡ್‌ಕ್ರೀಮ್, ಪರ್ಫ್ಯೂಮ್ ಎಲ್ಲವೂ ಇರುತ್ತವೆ. ನಾನು ಕಣ್ಣಿಗೆ ಕಾಡಿಗೆ ಮತ್ತು ಕಾಜಲ್ ಹಾಕಿಲ್ಲ ಅಂದ್ರೆ ಇರುವುದಕ್ಕೇ ಆಗುವುದಿಲ್ಲ. ಮೇಕಪ್ ಹಾಕಿಲ್ಲ ಅಂದ್ರೂ ನಾನು ಈ ಎರಡು ಬಳಸುತ್ತೀನಿ. ಎಲ್ಲೇ ಹೋದ್ರೂ ಕನ್ನಡಿ ಇರುವುದಿಲ್ಲ ನಾನು ಅದನ್ನೂ ಕೂಡ ಬ್ಯಾಗ್‌ನಲ್ಲಿ ಇಟ್ಟಿಕೊಳ್ಳುವೆ. ನನಗೆ ಮುಖ್ಯವಾದ ವಸ್ತು ಅಂದ್ರೆ ಬಾಚಣಿಗೆ. ಕೆಲವೊಮ್ಮೆ ನಾನು ದೂರದ ಜಾಗಗಳಿಗೆ ಪ್ರಯಾಣ ಮಾಡುತ್ತೀನಿ. ಗಾಳಿ ಬೀಸಿದರೆ ನನ್ನ ಹೇರ್‌ ಸ್ಟೈಲ್ ಬದಲಾಗುತ್ತದೆ. ಅದಕ್ಕೆ ಕೂಂಬ್ ಇಲ್ಲದಿದ್ದರೆ ಆಗುವುದೇ ಇಲ್ಲ,' ಎಂದಿದ್ದಾರೆ.  

ಸೃಜನ್‌ಗೆ ಮೈಸೂರ್ ಭಾಷೆ ಬೈಗುಳ ಹೇಳ್ಕೊಟ್ಟ ನಿವೇದಿತಾ

'ನಾನು ಯಾವಾಗಲೂ ಫೋನ್ ಬಳಸುವೆ. ಹೀಗಾಗಿ ಸದಾ ಚಾರ್ಜರ್ ಬೇಕು. ಕಿವಿಯಲ್ಲಿ ಸದಾ ಏರ್‌ಪೋರ್ಡ್ಸ್‌ ಇರುತ್ತದೆ. ಟ್ರಾಲಿ ಬ್ಯಾಗಲ್ಲಿ ಇರುವುದು ನನ್ನ ಪುಟ್ಟ ಫ್ಯಾನ್. ಹೋದ ಎಲ್ಲಾ ಕಡೆ ಫ್ಯಾನ್ ಇರುವುದಿಲ್ಲ ಅದಿಕ್ಕೆ. ಫೇಸ್‌ ಟಿಶ್ಯೂ ಬೇಕೇ ಬೇಕು. ಮುಖ ಫ್ರೆಶ್ ಆಗಿರುತ್ತದೆ. ಬ್ಯಾಗ್‌ನಲ್ಲಿ ಅಂಬ್ರೆಲ್ಲಾ ಇರುತ್ತದೆ. ಮಳೆ ಬರುವಾಗ ಛತ್ರಿ ಇರುವುದಿಲ್ಲ. ನಾನು ಹೆಚ್ಚಾಗಿ  ಬೇರೆ ಏನನ್ನೂ ಬಳಸುವುದಿಲ್ಲ. ಆದರೆ ಎಲ್ಲರೂ ಚೆನ್ನಾಗಿದೆ ಅಂತ ಹೇಳುತ್ತಾರೆ. ಅದಕ್ಕೆ ಕೆಲವು ವಸ್ತುಗಳನ್ನು ಇಟ್ಟುಕೊಂಡಿರುವೆ. ಮೈ ಕೈ ನೋವು ಬಂದ್ರೆ ಇರ್ಲಿ ಅಂತ ಬಾಡಿ ಸ್ಪ್ರೇ ಕೂಡ ಇರುತ್ತದೆ,' ಎಂದು ನಿವೇದಿತಾ ಹೇಳಿದ್ದಾರೆ.

ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಹ ಪಾಲ್ಗೊಂಡಿದ್ದಾರೆ. ಶೋನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಈ ಜೋಡಿಯೇ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

 

Follow Us:
Download App:
  • android
  • ios