ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಮಾಡುವ ನೆಟ್ಟಿಗರಿಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ನಿವೇದಿತಾ ಗೌಡ...

ಕನ್ನಡ ಕಿರುತೆರೆ ಮತ್ತು ಸೋಷಿಯಲ್ ಮೀಡಿಯಾ ಗೊಂಬೆ ನಿವೇದಿತಾ ಗೌಡ ಮಾತನಾಡುವ ಶೈಲಿ ಮತ್ತು ಅಲಂಕಾರ ಮಾಡಿಕೊಳ್ಳುವ ರೀತಿಗೆ ಅಭಿಮಾನಿಗಳೂ ಇದ್ದಾರೆ ದುಷ್ಮನ್‌ಗಳೂ ಇದ್ದಾರೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಚೆಲುವೆ ಇದೇ ಮೊದಲ ಬಾರಿ ವಿಡಿಯೋ ಮಾಡುವ ಮೂಲಕ ಕೆಟ್ಟ ಕಾಮೆಂಟ್ ಮಾಡುವವರಿಗ ಉತ್ತರ ನೀಡಿದ್ದಾರೆ. 

'ಇವತ್ತಿನ ವಿಡಿಯೋ ಬಂದು replying to haters comments. ನನಗೆ ಬಂದಿರುವ ನೆಗೆಟಿವ್ ಕಾಮೆಂಟ್‌ನ ಲಿಸ್ಟ್‌ ಮಾಡಿಕೊಂಡು ಅವರಿಗೆ ಉತ್ತರ ಕೊಡೋಣ ಅಂತ ಈ ವಿಡಿಯೋ ಮಾಡಿರುವುದು,' ಎಂದು ತಮ್ಮ ಮಾತನ್ನು ಆರಂಭಿಸಿದ್ದಾರೆ ಬಿಗ್‌ಬಾಸ್ ಸ್ಪರ್ಧಿ. (ಸಂಪೂರ್ಣ ಉತ್ತರದ ವಿಡಿಯೋ ಲಿಂಕ್‌ ಕೆಳಗೆ ಹಾಕಲಾಗಿದೆ.)

ಪತಿ ಚಂದನ್‌ ಶೆಟ್ಟಿಗೆ ಕ್ಯಾರೆಟ್‌ ಹಲ್ವ ಮಾಡಿಕೊಟ್ಟ ನಿವೇದಿತಾ ಗೌಡ!

ನೆಟ್ಟಿಗರು: ಮುಚ್ಕೊಂಡು ಕನ್ನಡ ಮಾತನಾಡು. ಇಲ್ಲ ಇಂಗ್ಲಿಷ್ ಯುಟ್ಯೂಬ್‌ ಚಾನೆಲ್ ಕ್ರಿಯೇಟ್ ಮಾಡ್ಕೋ. ಕನ್ನಡ ಕಲಿ...

ನಿವಿ ಉತ್ತರ: ಯುಟ್ಯೂಬ್‌ ಒಂದು ಗ್ಲೋಬಲ್ ಪ್ಲ್ಯಾಟ್‌ಫಾರ್ಮ್‌. ಇಲ್ಲಿ ಇಂಗ್ಲಿಷ್‌, ಕನ್ನಡ ಅಂತ ಏನೂ ವ್ಯತ್ಯಾಸ ಇಲ್ಲ. ಈ ಕಾಮೆಂಟ್ ಫನ್ನಿಯಾಗಿದೆ. ನೀವು ಇಂಗ್ಲಿಷ್‌ನಲ್ಲಿ ಕಾಮೆಂಟ್ ಮಾಡಿ, ಕನ್ನಡ ಮಾತನಾಡು ಅಂತ ಹೇಳ್ತಿದ್ದೀರಿ. ನನಗೆ ಬೇರೆ ಬೇರೆ ಭಾಷೆಯಿಂದ ನೋಡುವ ಅಭಿಮಾನಿಗಳು ಇದ್ದಾರೆ. ನಾನು ಕನ್ನಡನೂ ಮಾತನಾಡುತ್ತೀನಿ. ಅದನ್ನು ನೀವು ಗಮನಿಸುತ್ತಿಲ್ಲ. 

ನೆಟ್ಟಿಗರು: ನ್ಯೂ ಇಯರ್‌ ಅಂದ್ರೆ ಫುಲ್ ಎಣ್ಣೆ ಹೊಡೆಯೋದು ಅಷ್ಟೆನಾ? ನಿನಗೆ ಮಾಡೋಕೆ ಬೇರೆ ಕೆಲಸನೇ ಇಲ್ವಾ? 

ನಿವಿ ಉತ್ತರ: ನೀವು ಎಲ್ಲಿ ನೋಡಿದ್ರಿ ನಾನು ಫುಲ್ ದಿನ ಎಣ್ಣೆ ಹೊಡೆದೆ ಅಂತಾ? 10 ನಿಮಿಷ ವಿಡಿಯೋ ನೋಡಿ ಕಾಮೆಂಟ್ ಮಾಡುವುದು ತಪ್ಪು. ಗೊತ್ತಿಲ್ಲದೇ ಕಾಮೆಂಟ್ ಮಾಡಬೇಡಿ.

ನೆಟ್ಟಿಗರು:  ಎಲ್ಲರ ಮನೆಯಲ್ಲೂ ನಿಮ್ಮ ತರ ಹೆಣ್ಣು ಮಕ್ಕಳಿದ್ದರೆ ಅವರ ಹೊಟ್ಟೆ ತುಂಬಿದ ಹಾಗೆ...

ನಿವಿ ಉತ್ತರ: ನಿಮ್ಮ ತರ ಹೆಣ್ಣು ಮಕ್ಕಳು ಅಂದ್ರೆ ಏನು? ಬರೀ ಹೆಣ್ಣು ಮಕ್ಕಳೇ ಅಡುಗೆ ಮಾಡ್ಬೇಕಾ? ಹೆಣ್ಣು ಮಕ್ಕಳೇ ಮಕ್ಳು ನೋಡ್ಕೋಬೇಕಾ? ಅವರೇ ಎಲ್ಲಾ ಕೆಲಸ ಮಾಡಬೇಕಾ? ಗಂಡು ಮಕ್ಕಳು ಇರುವುದ್ಯಾಕೆ ಮನೆಯಲ್ಲಿ? ಅವ್ರು ಮಾಡಬೇಕು ತಾನೆ? ಅವರು ಕಲಿಯುವುದು ಯಾವಾಗ? ಎಲ್ಲರೂ ಕೆಲಸ ಶೇರ್ ಮಾಡಿಕೊಂಡು ಮಾಡಬೇಕು.

ನೆಟ್ಟಿಗರು: ನಿಲ್ಸಿ ನಿವೇದಿತಾ, ಸಾಕು ಇವೆಲ್ಲಾ ಮದುವೆ ಆಯ್ತು ಚಂದನ್‌ಗೆ ಸಪೋರ್ಟ್‌ ಮಾಡಿ ಅವರ ಮರ್ಯಾದೆ ತೆಗೀಬೇಡಿ. 

ನಿವಿ ಉತ್ತರ:  ಮದುವೆ ಆದ್ಮೇಲೆ ಹುಡುಗಿಯರು ಕೆಲಸ ಮಾಡ್ಬಾರ್ದಾ? ಸುಮ್ಮನೆ ಮನೆಯಲ್ಲಿ ಕುಳಿತುಕೊಂಡು ಅಡುಗೆ ಮಾಡ್ಬೇಕಾ? ಪಾತ್ರೆ ತೊಳೆದುಕೊಂಡು ಇರ್ಬೇಕಾ? ಈ ಕಾಮೆಂಟ್ ಮಾಡಿರುವುದು ಹುಡುಗಿನೇ. ನಿಮಗೆ ಅರ್ಥ ಆಗ್ಬೇಕು 21 centurayನಲ್ಲಿ ನಾವು ಅವರಿಗೆ ಸಪೋರ್ಟ್ ಮಾಡಬೇಕು ಎಷ್ಟು ಅಂತ, ಅವರು ಅವರದ್ದು ನೋಡಿಕೊಂಡು, ನಮ್ಮ ಕಡೆಯೂ ಗಮನ ಕೊಡುತ್ತಾರೆ. ನಮ್ಮ ಖರ್ಚು ನಾವೇ ನೋಡಿಕೊಳ್ಳಬೇಕು. 

ಪತಿ Chandan ಜತೆ ವಿಡಿಯೋ; ಹಾಗಲಕಾಯಿ ತಿಂದು ಟ್ರೋಲ್ ಆದ Niveditha Gowda

ನೆಟ್ಟಿಗರು: ಇಷ್ಟೆಲ್ಲಾ ತೆಗೆದು ಕೊಳ್ಳುವುದಕ್ಕಿಂತ ನೀನು ಮೈ ತುಂಬಾ ಮೈ ಮುಚ್ಚಿಕೊಳ್ಳುವ ಒಳ್ಳೆಯ ಚೂಡಿದಾರ ನೋ ಅಥವಾ ಒಳ್ಳೆಯ ಕುರ್ಥಾ ನೋ ಅಥವಾ ಒಳ್ಳೆಯ ಸೀರೆ ನೋ ತೆಗೆದುಕೊಂಡ್ರೆ ನನಗೆ ಮಾತ್ರವಲ್ಲ, ಇಡೀ ಕರ್ನಾಟಕದ ಜನತೆಗೆ ಇಷ್ಟ ಆಗ್ತಿತ್ತು. ಅದು ಬಿಟ್ಟು ಈ ತರ ತೊಡೆ ಎಲ್ಲಾ ಕಾಣೋ ಬಟ್ಟೆ ತೆಗೆದುಕೊಂಡು ಬಿಟ್ಟು....'

ನಿವಿ ಉತ್ತರ: ನಾವು ಯಾವ ರೀತಿ ಬಟ್ಟೆ ಬೇಕಿದ್ದರೂ ಹಾಕಿಕೊಳ್ಳಬಹುದು. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ನನ್ನ ಬಟ್ಟೆ ನನ್ನ ಇಷ್ಟ. ನಿಮ್ಮ ಬಟ್ಟೆ ನಿಮ್ಮಿಷ್ಟ. ಈಗ ಬಂದಿರುವುದು ಈ ರೀತಿ ಮಾತು. ಮುಂಚೆ ಯಾರು ಯಾವ ಬಟ್ಟೆ ಹಾಕೋತಿದ್ರು ಇಲ್ಲ ಅಂತ ಯಾರಿಗೆ ಗೊತ್ತಿತ್ತು? ಎಷ್ಟೊಂದು ಸಂಪ್ರದಾಯ ಇದೆ. ಅದನ್ನು ನೀವು ಮಾತನಾಡಲೇ ಬಾರದು. ನೀವು ನೋಡ ದೃಷ್ಠಿಯಲ್ಲಿ ಎಲ್ಲನೂ ಇವೆ, ಎನ್ನುವ ಮೂಲಕ ನಿವೇದಿತಾ, ನಾನೇನೂ ಇಂಥ ಕಮೆಂಟಿಗೆಲ್ಲಾ ಬಾದರ್ ಮಾಡೋಲ್ಲ ಅನ್ನವಂತೆ ಉತ್ತರಿಸಿದ್ದಾರೆ.

YouTube video player