ಪತಿ ಚಂದನ್ ಶೆಟ್ಟಿಗೆ ಕ್ಯಾರೆಟ್ ಹಲ್ವ ಮಾಡಿಕೊಟ್ಟ ನಿವೇದಿತಾ ಗೌಡ!
ನಿವೇದಿತಾ ಕೂದಲು, ಫಿಟ್ನೆಸ್ ಮತ್ತು ಸ್ಕಿನ್ ಕೇರ್ ಬಗ್ಗೆ ಅಭಿಮಾನಿಗಳು ಸದಾ ಪ್ರಶ್ನಿಸುತ್ತಾರೆ. ಎಲ್ಲದಕ್ಕೂ ಉತ್ತರ ನೀಡುತ್ತಲೇ ಪತಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ ನಿವಿ.
ಕನ್ನಡ ಚಿತ್ರರಂಗದಲ್ಲಿರುವ ಓನ್ ಆಫ್ ದಿ ಬೆಸ್ಟ್ Rapper ಚಂದನ್ ಶೆಟ್ಟಿ (Chandan Shetty) ಮತ್ತು ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ (Niveditha Gowda) ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನದಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಾರೆ. ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಆಗಿದ್ದು, ಏನಾದರೂ ಒಂದು ವಿಭಿನ್ನ ಪ್ರಯತ್ನಕ್ಕೆ ಜನಪ್ರಿಯತೆ ಗಳಿಸುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ (instagram) ದಿನಕ್ಕೊಂದು ಫೋಟೋ ಹಾಕಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಪಡೆದಿರುವ ನಿವೇದಿತಾ ಗೌಡ ಇದೀಗ ಯುಟ್ಯೂಬ್ ಚಾನೆಲ್ (Youtube channel) ತೆರೆದಿದ್ದಾರೆ.ಈ ಸಲ ದಿನದಲ್ಲಿ ನಿವಿ ಏನು ತಿನ್ನುತ್ತಾರೆ ಹಾಗೂ ಚಂದನ್ ಡ್ಯೂಟಿ ಏನು ಎಂದು ಹಂಚಿಕೊಂಡಿದ್ದಾರೆ.
ನಿವೇದಿತಾ ಗೌಡ ಬ್ಯಾಕ್ ಟು ಬ್ಯಾಕ್ ಎರಡು ಅಡುಗೆ ಮಾಡುವ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ಅದರಲ್ಲಿ ಒಂದು ದಿನದಲ್ಲಿ ನಾನು ಏನು ತಿನ್ನುವೆ ಹಾಗೂ ಮತ್ತೊಂದು ಗಂಡನಿಗೆ ಸರ್ಪ್ರೈಸ್ ಕೊಡುವುದು. ಗಂಡನಿಗೆ ಸರ್ಪ್ರೈಸ್ (Suprising my husband) ಕೊಟ್ಟಿರುವ ವಿಡಿಯೋ ಕೊಂಚ ವೈರಲ್ ಆಗುತ್ತಿದೆ. ಇದರಲ್ಲಿ ಚಂದನ್‌ಗೆ ಇಷ್ಟವಾದ ಕ್ಯಾರೆಟ್ ಹಲ್ವ (Carrot halwa) ಮಾಡಿದ್ದಾರೆ.
ಅಡುಗೆ ಪಾತ್ರೆಗೆ ತುಪ್ಪ ಹಾಕಿದಾಗ ಹೊರಡುವ ಸೌಂಡ್ ಕೇಳಿದರೆ ಭಯ ಆಗುತ್ತದೆ ಎಂದು ನಕ್ಕಿದ್ದಾರೆ. ಕ್ಯಾರೆಟ್ ಹಲ್ವ ಮಾಡುವ ವಿಧಾನವನ್ನು ನಿನ್ನೆಯಿಂದ ಯುಟ್ಯೂಬ್ ನೋಡಿ ಕಲಿತಿರುವೆ ಎಂದಿದ್ದಾರೆ. ಹಲ್ವಾ ಚೆನ್ನಾಗಿ ಬಂದಿಲ್ಲ, ಅಂದ್ರೆ ನಿಮಗೆ ತಿನ್ನಿಸುವೆ. ಚೆನ್ನಾಗಿದ್ದರೆ ನಾನೇ ತಿನ್ನುವೆ ಎಂದು ಕ್ಯಾಮೆರಾ ಮ್ಯಾನ್ ಕಾಲೆಳೆದಿದ್ದಾರೆ. ಅಡುಗೆ ಮಾಡುವಾಗ ವಾಸನೆ ಸೂಪರ್ ಆಗಿದ್ದರೆ, ನಾನು ಕರೆಕ್ಟ್ ಆಗಿ ಮಾಡ್ತಿದ್ದೀನಿ ಅಂತ ಅರ್ಥ ಎಂದಿದ್ದಾರೆ. ಹಲ್ವ ಮುಗಿಯುವ ಹಂತಕ್ಕೆ ಬಂದಾಗ ಗೋಡಂಬಿ ದ್ರಾಕ್ಷಿ ಫ್ರೈ ಮಾಡಿ ಕೊಂಡಿಲ್ಲ ಎಂದು ನೆನಪು ಮಾಡಿಕೊಳ್ಳುತ್ತಾರೆ. ನಾನು ಎಷ್ಟು ಮಲ್ಟಿ ಟಾಸ್ಕಿಂಗ್ ಮಾಡ್ತೀನಿ ಎಂದು ತಮ್ಮ ಟ್ಯಾಲೆಂಟ್ ಅನ್ನು ಅಡುಗೆ ಮನೆಯಲ್ಲಿ ಪ್ರದರ್ಶಿಸಿ, ಹಲ್ವ ತಯಾರಿಸಿದ್ದಾರೆ ನೋಡಿ.
ಪತಿ Chandan ಜತೆ ವಿಡಿಯೋ; ಹಾಗಲಕಾಯಿ ತಿಂದು ಟ್ರೋಲ್ ಆದ Niveditha Gowdaಸ್ಟುಡಿಯೋದಲ್ಲಿ ಚಂದನ್ ಶೆಟ್ಟಿ ಕೆಲಸ ಮಾಡುವಾಗ ನಿವಿ ಹಲ್ವ ಜೊತೆ ಎಂಟ್ರಿ ಕೊಟ್ಟಿದ್ದಾರೆ. 'ಅಡುಗೆ ಮನೆಯಿಂದ ತುಪ್ಪದ ಗಮಾ ಬರ್ತಿತ್ತು. ಅಗಲೇ ಅಂದು ಕೊಂಡೆ ನೀನೇ ಮಾಡಿದ್ದಾ? ನಿಜ ಹೇಳು? ನೋಡಲು ಸಖತ್ ಆಗಿದೆ. ಈ ಕಪ್‌ಅಲ್ಲಿ ಇರುವ ಹಲ್ವ ನಾನೇ ತಿನ್ನುವೆ. ಬಂದಿರುವ ಎಲ್ಲರಿಗೂ ಕೊಡು. ಆಮೇಲೆ ನನಗೆ ಹೇಗೆ ಮಾಡಿದ ಅಂತ ರೆಸಿಪಿ ಹೇಳು. ಸೂಪರ್ ಆಗಿ ಬಂದಿದೆ,' ಎಂದು ಚಂದನ್ ಶೆಟ್ಟಿ ಮಾತನಾಡಿದ್ದಾರೆ.
ಕ್ಯಾಮೆರಾ ಮುಂದೆ ಟವಲ್ ಬಿಚ್ಚಿದ Niveditha Gowda; ವಿಡಿಯೋ ವೈರಲ್!What i eat in a day ವಿಡಿಯೋದಲ್ಲಿ ನಾನು ಎದ್ದೇಳುವುದೇ 8 ಗಂಟೆಗೆ. ಚಂದನ್ ಬೇಗ ತಿಂಡಿ ಮಾಡಬೇಕು. ಹೀಗಾಗಿ ತಿಂಡಿ ಮಾಡುವ ಕೆಲಸ ಅವರಿಗೆ ಕೊಟ್ಟಿರುವೆ ಎಂದು ಹೇಳಿದ್ದಾರೆ. ಚಂದನ್ ತಟ್ಟೆ ಇಡ್ಲಿ ಮತ್ತು ಚಟ್ನಿ (Idly chutney) ಮಾಡಿದ್ದನ್ನು ಸೇವಿಸಿದ ನಿವಿ ಸಿಂಪಲ್ ಆಗಿ ಮಧ್ಯಾಹ್ನಕ್ಕೆ ಸಲಾಡ್ (Salad) ಮತ್ತು ದೋಸೆ ಮಾಡಿಕೊಂಡಿದ್ದಾರೆ. ಈರುಳ್ಳಿ, ಟೊಮ್ಯಾಟೋ ಮತ್ತು ಉಪ್ಪು ಮಿಕ್ಸ್ ಮಾಡಿ ಸಲಾಡ್ ಎಂದು ಹೇಳಿ, ಅದನ್ನೇ ದೋಸೆ (Dosa) ಜೊತೆ ಪಲ್ಯಾ ಮಾಡಿಕೊಂಡಿದ್ದಾರೆ. ಅಡುಗೆ ಮಾಡುವಾಗ ಪದೇ ಪದೇ ನನಗೆ ಅಡುಗೆ ಮಾಡುವುದೇ ಇಷ್ಟ ಇಲ್ಲ. ಅದರಲ್ಲೂ ಪಾತ್ರ ತೊಳೆಯುವುದು ಇನ್ನೂ ಇಷ್ಟ ಇಲ್ಲ ಎಂದಿದ್ದಾರೆ. ವಿಡಿಯೋವನ್ನು ಅದ್ಭುತವಾಗಿ ಎಡಿಟ್ ಮಾಡಲಾಗಿದ್ದು ತಮ್ಮ ನೆಚ್ಚಿನ ಶ್ವಾನವನ್ನು ಆಗಾಗ ತೋರಿಸಿದ್ದಾರೆ.