ಬಾಸ್‌ ಬೇಬಿ ಎಂದು ಗಂಡನ ನಂಬರ್ ಸೇವ್ ಮಾಡಿಕೊಂಡಿರುವ ನಟಿ ಕಾವ್ಯಾ ಗೌಡ, ಇದೀಗ ತಮ್ಮ ಮೊಬೈಲ್‌ನಲ್ಲಿರುವ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. 

ಕನ್ನಡ ಕಿರುತೆರೆಯ ರಾಧಿಕಾ ಪಂಡಿತ್ (Radhika Pandit) ಎಂದೇ ಗುರುತಿಸಿಕೊಂಡಿರುವ ಕಾವ್ಯಾ ಗೌಡ (Kavya Gowda) ಲೈಮ್‌ಲೈಟ್‌ನಿಂದ ದೂರ ಉಳಿದುಕೊಂಡು ಆಭರಣ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. 2021ರ ಡಿಸೆಂಬರ್‌ನಲ್ಲಿ ಉದ್ಯುಮಿ ಸೋಮಶೇಖರ್‌ ಜೊತೆ ದಾಂಪತ್ಯ (Marriage) ಜೀವನಕ್ಕೆ ಕಾಲಿಟ್ಟ ಕಾವ್ಯಾ, ಇದೀಗ ಯುಟ್ಯೂಬ್‌ (Youtube Channel) ಮೂಲಕ ಫಾಲೋವರ್ಸ್‌ಗೆ ಹತ್ತಿರವಾಗಲು ಸಜ್ಜಾಗಿದ್ದಾರೆ. ಕಳೆದ ವಾರ ಯುಟ್ಯೂಬ್ ಖಾತೆ ತೆರೆದಿರುವುದಾಗಿ ಮಾಹಿತಿ ಹಂಚಿಕೊಂಡ ನಟಿ, ಇದೀಗ ತಮ್ಮ ಮೊದಲ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್ ಆಗಲು ಕಾರಣವಿದೆ.

'ನನ್ನ ಫೋನ್‌ನಲ್ಲಿ ಏನಿದೆ? ಎಂದು ತಿಳಿದುಕೊಳ್ಳುವ ಮುನ್ನ ನನ್ನ ಫೋನ್‌ ಸಂಬಂಧ ಹೇಗಿದೆ ಎಂದು ಹೇಳ್ತೀನಿ. ಇದು ನನ್ನ ಫೋನ್ ಮಾತ್ರವಲ್ಲ ನನ್ನ ಬೆಸ್ಟ್‌ ಫ್ರೆಂಡ್, ನನ್ನ ಗಂಡ ಹೊರಗಡೆ ಇರುತ್ತಾರೆ ಅವರಿಗೆ ಕಾಲ್ ಮಾಡಿ ನನ್ನ ಫೀಲಿಂಗ್ ಶೇರ್ ಮಾಡ್ತೀನಿ. ನಂಗೆ ಬೇಜಾರು ಆಗಿದ್ದಾಗ ನನ್ನ ಅಕ್ಕನ ಮಗಳಿಗೆ ವಿಡಿಯೋ ಕಾಲ್ ಮಾಡ್ತೀನಿ. ಫೋನ್ ಅನ್ನೋದು ಜನರನ್ನ ಒಂದು ಮಾಡುತ್ತೇ. ಹ್ಯಾಪಿನೆಸ್ ಕೊಡುತ್ತೆ. ಫೋನ್‌ ಇಲ್ಲ ಅಂದ್ರೆ ಲೈಫಲ್ಲಿ ಏನೂ ಇಲ್ಲ' ಎಂದು ಕಾವ್ಯಾ ಹೇಳಿದ್ದಾರೆ. 

ಹೆಚ್ಚಾಗಿ ಬಳಸುವ ಆ್ಯಪ್: ಇನ್‌ಸ್ಟಾಗ್ರಾಂ
ಹೋಮ್‌ ಪೇಜ್ ವಾಲ್‌ಪೇಪರ್: ಲಾಕ್ ಸ್ಕ್ರೀನ್‌ ವಾಲ್‌ ಪೇಪರ್‌ನಲ್ಲಿ ನನ್ನ ಫೇವರೆಟ್‌ ದೇವರು ಸಾಯಿ ಬಾಬ ಇದಾರೆ, ಹೋಮ್‌ ಸ್ಕ್ರಿನ್‌ನಲ್ಲಿ ನಾನು ಮತ್ತೆ ಪತಿ ಸೋಮಶೇಖರ್ ಮಾಲ್ಡೀವ್ಸ್‌ಗೆ ಹೋದಾಗ ಕ್ಲಿಕ್ ಮಾಡಿದ್ದು. 

ಫೇವರೆಟ್ ಫೋಟೋ: ತುಂಬಾ ಫೋಟೋಗಳು ಇಷ್ಟ. ಅದರಲ್ಲಿ ಒಂದು ಮದುವೆ ದಿನ ಗಂಡನ ಜೊತೆ ಕ್ಲಿಕ್ ಮಾಡಿದ್ದು, ಇಡೀ ಫ್ಯಾಮಿಲಿ ಜೊತೆ ಕ್ಲಿಕ್ ಮಾಡಿದ್ದು. ನನ್ನ ಅಕ್ಕನ ಮಗಳು ಫೋಟೋಗೆ ನಿಲ್ಲುವುದಿಲ್ಲ ಆದರೆ ನನ್ನ ಪತಿ ಫೋಟೋ ಕೇಳಿದರೆ ಫೋಸ್ ಕೊಡುತ್ತಾರೆ, ಹೀಗಾಗಿ ಅವರಿಬ್ಬರ ಪೋಟೋ ಇಷ್ಟ. 

ನಟಿ Kavya Gowdaಗೆ ಹೇರ್‌ಸ್ಟೈಲ್‌ ಮಾಡಿದ ಪತಿ ಸೋಮಶೇಖರ್; ವಿಡಿಯೋ ವೈರಲ್!

ಫೇವರೆಟ್ ಹಳೆ ಫೋಟೋ: ಆದ್ಯಾ ನಾಲ್ಕು ವರ್ಷದ ಹುಟ್ಟು ಹಬ್ಬವನ್ನು ಲಂಡನ್‌ನಲ್ಲಿ ಆಚರಿಸಿಕೊಂಡಿದ್ದಳು. ಅವಳ ಮೊದಲ ಬರ್ತಡೇಯನ್ನು ಭಾರತದಲ್ಲಿ ಸೆಲೆಬ್ರೇಟ್ ಮಾಡಿದಾಗ ಕ್ಲಿಕ್ ಮಾಡಿದ ಫೋಟೋ ನನಗೆ ತುಂಬಾನೇ ಇಷ್ಟ. 

ಅತಿ ಹೆಚ್ಚು ಕರೆ ಮಾಡಿರುವ ವ್ಯಕ್ತಿ: ನಾನು 100% ಕಾಲ ಸ್ಪೆಂಡ್ ಮಾಡುವುದು ನನ್ನ ಪತಿ ಜೊತೆ. ಅವರ ನಂಬರ್‌ನ ಬಾಸ್‌ ಬೇಬಿ ಅಂತ ಸೇವ್ ಮಾಡಿದ್ದೀನಿ. ನಾನು ಮನೆಯಲ್ಲಿದ್ದರೂ ಮಿಸ್ ಕಾಲ್ ಕೊಡ್ತೀನಿ ಏನ್ ಮಾಡ್ತಿದ್ದಾರೆ ಅಂತ.

ಹೆಚ್ಚಿಗೆ ಆಡುವ ಗೇಮ್: ಲಾಕ್‌ಡೌನ್‌ ಸಮಯಲ್ಲಿ ನಾನು ಲೂಡೋ ಗೇಮ್‌ ಆಡುತ್ತಿದ್ದೆ. ಆಗ ಇನ್ನೂ ಮದುವೆ ಆಗಿರಲಿಲ್ಲ. ಪತಿ ಜೊತೆ ಆಟವಾಡುತ್ತಿದ್ದೆ ಅಕ್ಕ ಕೂಡ ಸೇರಿಕೊಳ್ಳುತ್ತಿದ್ದಳು. ಈಗ ಡಿಲೀಟ್ ಮಾಡಿರುವೆ. 

Kannada Actress's Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯಾ ಗೌಡ!

ಮೊಬೈಲ್‌ನಲ್ಲಿ ಎಷ್ಟಿದೆ ಫೋಟೋ: ನಾನು ತುಂಬಾನೇ ಫೋಟೋ ಕ್ಲಿಕ್ ಮಾಡ್ತೀನಿ ಮೊದಲು 256Gb ಇತ್ತು ಸಾಕಾಗಲ್ಲ ಅಂತ 512Gbಗೆ ಅಪ್ಡೇಟ್ ಮಾಡಿಕೊಂಡೆ. ನನ್ನ ಫೋಟೋನಲ್ಲಿ 60 ಸಾವಿರ 47 ಫೋಟೋಗಳಿವೆ. 

ಕ್ಯಾಚಿ contact ಹೆಸರು: ನನಗೆ ಗೊತ್ತಿರುವವರಿಗೆ ಒಂದು ಹೆಸರು ಕೊಡ್ತೀನಿ. ನನ್ನ ಗಂಡನಿಗೆ ಬಾಸ್‌ಬೇಬಿ ಅಂತ ಕೊಟ್ಟಿರುವೆ. ಮನೆಯಲ್ಲಿ ಅವರು ಬಾಸ್‌ ತರ ಇರುತ್ತಾರೆ. ಆದರೆ ನನ್ನ ಜೊತೆ ಮಗು ತರ ಇರುತ್ತಾರೆ. ನನ್ನ ಪರ್ಸನಲ್ ಅಸಿಸ್ಟೆಂಟ್ ಹೆಸರು ಶೈಲು ಅವನ ಹೆಸರು ಹೈಲು ಅಂತ ಸೇವ್ ಮಾಡಿದ್ದೀನಿ. ನನ್ನ ಕ್ಲೋಸ್ ಕಸಿನ್ ಅಕ್ಕ ಇದ್ದಾಳೆ. ದಿನಕ್ಕೆ ಒಂದು ಸಲ ಆದ್ರೂ ಮಾತನಾಡುತ್ತೀವಿ. ಅದಿಕ್ಕೆ ಅವಳಿಗೆ ಕ್ವಾಟ್ಲೆ ಅಂತ ಹೆಸರು ಕೊಟ್ಟಿರುವೆ...

ಹೀಗೆ ಒಂದೊಂದು ಪ್ರಶ್ನೆಗೆ ಕಾವ್ಯಾ ಉತ್ತರಿಸಿ ಮೊಬೈಲ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

YouTube video player