ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ ವೇದಿಕೆ ಮೇಲೆ ಕಲಾವಿದ ಬಸ್ಸುಗೆ ಕ್ಷಮೆ ಕೇಳಿದ ತರುಣ್ ಸುಧೀರ್.....

ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್‌ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳ ಜಡ್ಜ್‌ ಆಗಿ ಮಿಂಚುತ್ತಿದ್ದಾರೆ. ಈ ವೇಳೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿ ವಿಶೇಷ ಅತಿಥಿಯಾಗಿ ಎಂಟ್ರಿ ಕೊಡುತ್ತಾರೆ. ಅಲ್ಲಿ ಒಂದು ಸ್ಕಿಟ್‌ ನೋಡಿದ ನಂತರ ಆ ತಂಡದಲ್ಲಿ ಇದ್ದ ಕಲಾವಿದ ಬಸ್ಸು ಬಳಿ ಕ್ಷಮೆ ಕೇಳುತ್ತಾರೆ.

'ಸ್ಪರ್ಧಿ ಬಸು ಅವರಿಗೆ ನಾನು ಸಾರಿ ಕೇಳುವ ಮೂಲಕ ಮಾತು ಶುರು ಮಾಡುತ್ತೀನಿ. ಕಾಟೇರ ಅನ್ನೋ ಸಿನಿಮಾ ಚಿತ್ರೀಕರಣ ಮಾಡುವಾಗ ನನ್ನ ತಂಡಕ್ಕೆ ಹೇಳುತ್ತೀನಿ ಹಳ್ಳಿ ಸೆಟ್ ಹಾಕಿದಾಗ ಅಲ್ಲಿ ಏನು 150 ಜನರು ಇರುತ್ತಾರೆ ಅವರು ಕೊನೆವರೆಗೂ ಇರಬೇಕು ಅದರಲ್ಲೂ 20-25 ಜನರದ್ದು ಎಮೋಷನ್ಸ್‌ ಮುಖ್ಯವಾಗುತ್ತದೆ. ನಟನನ್ನು ಕರೆದುಕೊಂಡು ಹೋಗುವಾಗ ಅಳುವುದು ಆಗ ಭಾವನೆಗಳನ್ನು ವ್ಯಕ್ತ ಪಡಿಸುವುದು ಮುಖ್ಯವಾಗುತ್ತದೆ ಎನ್ನೋ ಕಾರಣಕ್ಕೆ. ಚಿತ್ರೀಕರಣ ಮುಗಿಯುತ್ತದೆ ಆಗ ಆ 25 ಜನರನ್ನು ನಾನು ಮಾತನಾಡಿಸುತ್ತೀನಿ ಪ್ರತಿಯೊಬ್ಬರು ತಮ್ಮ ರಂಗಭೂಮಿ ತಂಡದ ಬಗ್ಗೆ ಹೇಳಿಕೊಂಡು ಪರಿಚಯ ಆಗುತ್ತಾರೆ ಆದ ಬಸ್ಸು ಪರಿಚಯ ಮಾಡುತ್ತಾರೆ. ಬಸ್ಸು ಕಿರುತೆರೆಯಲ್ಲಿ ಆಗಲೇ ಮಿಂಚುತ್ತಿರುವ ವ್ಯಕ್ತಿ ಅವರನ್ನು ಸಿನಿಮಾಗೆ ಕರೆದುಕೊಂಡು ಬಂದು ಸಣ್ಣ ಪಾತ್ರ ಕೊಡುವುದು ಸರಿ ಅಲ್ಲ ದಯವಿಟ್ಟು ಇದನ್ನು ಮಾಡಬೇಡ ಅಂತ ಹೇಳಿ ಕಳುಹಿಸಿದೆ. ಆದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಸಿನಿಮಾದಲ್ಲಿ ನಟಿಸಿದ ಬಸ್ಸು ನೋಡಿ ನನಗೆ ಬೇಸರ ಆಯ್ತು. ಇಷ್ಟು ಒಳ್ಳೆ ಕಲಾವಿದನಿಗೆ ನಾನು ಸರಿಯಾಗಿ ಅವಕಾಶ ಕೊಟ್ಟಿಲ್ಲ ಸರಿಯಾಗಿ ಪಾತ್ರ ಬರೆದಿಲ್ಲ ಎಂದು. ಇದನ್ನು ಕೂಡ ಬಸ್ಸು ಅವರಿಗೆ ವಿವರಿಸಿದ ಮೇಲೆ ಅವನ್ನು ಹೆಚ್ಚಾಗಿ ಬಳಸಿಕೊಳ್ಳಲಿಲ್ಲ ಹೀಗಾಗಿ ನಾನು ಮೊದಲು ಬಸ್ಸು ಅವರ ಬಳಿ ಕ್ಷಮೆ ಕೇಳುತ್ತೇನೆ' ಎಂದು ತರುಣ್ ಸುಧೀರ್ ಮಾತನಾಡುತ್ತಾರೆ.

ಅಪ್ಪನ ಹೆಸರು ಕೇಳ್ಕೊಂಡು ಬೆಳೆಯಲ್ಲ ಎಂದ ಉಪೇಂದ್ರ ಪುತ್ರ; ನನ್ನ ಮಗನನ್ನು ಹೆತ್ತಿದ್ದಕ್ಕೂ ಸಾರ್ಥಕ ಅಂದಿದ್ಯಾಕೆ?

'ನಾನು ಮೊದಲ ದಿನ ಚಿತ್ರೀಕರಣಕ್ಕೆ ಬಂದಾಗ ಮೊದಲ ಸಲ ದರ್ಶನ್‌ ಅವರನ್ನು ನೇರವಾಗಿ ನೋಡಿದೆ. ಸೀನ್ ಆದ್ಮೇಲೆ ಅವರು ನನ್ನನ್ನು ಗುರುತಿಸಿ ನಿಮ್ಮೊಟ್ಟಿಗೆ ಮಾತನಾಡಿದ್ದು ಈ ಚಿತ್ರದಿಂದ ನನಗೆ ಸಿಕ್ಕಿದ್ದು ದೊಡ್ಡ ಸಂಭಾವನೆ ಅಂದ್ರೆ ಇದೆ' ಎಂದು ಬಸ್ಸು ಹೇಳುತ್ತಾರೆ.

'ಚಿತ್ರೀಕರಣ ಮಾಡುವಾಗ ದರ್ಶನ್‌ ಕರೆದು ಮಗ್ನೆ ಅವ್ರು ಟಿವಿಯಲ್ಲಿ ಮಾಡುತ್ತಾರೆ ಅಲ್ವಾ ಅಂದ್ರು. ಪ್ರತಿಯೊಬ್ಬರ ಗೆಟಪ್‌ ಬದಲಾಯಿಸಿದ್ದರು ಆಗ ನಾನು ಗುರುತಿಸಲಿಲ್ಲ. ತಕ್ಷಣವೇ ಕರೆದು ಕೇಳಿದಾಗ ಅವರು ಮತ್ತೊಂದು ಜನಪ್ರಿಯ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದರು, ಆಗ ನನಗೆ ತುಂಬಾ ಬೇಸರ ಆಯ್ತು. ಅದಾದ ಮೇಲೆ ಅಲ್ಲಿದ್ದ ಕಲಾವಿರ ಜೊತೆ ಪರ್ಸನಲ್ ಆಗಿ ಮಾತನಾಡಿ ಈ ಪಾತ್ರ ಓಕೆನಾ ಇಷ್ಟ ಆಯ್ತು ನಟಿಸುತ್ತೀರಾ ಎಂದು ಕೇಳಿದ್ದೀನಿ' ಎಂದು ತರುಣ್ ಹೇಳುತ್ತಾರೆ. 

ದರ್ಶನ್‌ಗೆ ಗಂಡಾಂತರ ಇರೋದು ಮೊದ್ಲೇ ಗೊತ್ತಿತ್ತು; ದೊಡ್ಡ ಜ್ಯೋತಿಷಿ ಹತ್ರ ವಿಜಯಲಕ್ಷ್ಮಿ ಕೇಳ್ತಾರೆ: ಲತಾ ಜಯಪ್ರಕಾಶ್

'ಒಬ್ಬ ಕಲಾವಿದರ ಕುಟುಂಬದಿಂದ ಬಂದಿರುವ ನನಗೆ ಕಲಾವಿದರ ಬೆಲೆ ಏನು ಎಂದು ಗೊತ್ತಿದೆ. ಕಲಾವಿದರಿಗೆ ಅವಕಾಶ ಕೊಡಲು ನಮಗೆ ಯೋಗ್ಯತೆ ಇಲ್ಲ ಅಂದ್ರೆ ಅವರನ್ನು ಅವಮಾನ ಮಾಡಬಾರದು ಅನ್ನೋದು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತುಬಿಟ್ಟಿದೆ. ನಮ್ಮ ಇಂಡಸ್ಟ್ರಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಅಂದ್ರೆ ಅವಮಾನದಿಂದಲೇ ಶುರು ಆಗುವುದು. ಅವಮಾನ ಆದ್ಮೇಲೆ ಸನ್ಮಾನಕ್ಕೆ ಬರುತ್ತೀವಿ. ಸ್ಟಾರ್ ಕಲಾವಿದ ಸುಧೀರ್ ಮಗನಾಗಿರುವ ನಾನು ಕೂಡ ಅದೇ ಅವಮಾನ ಎದುರಿಸುತ್ತೀನಿ' ಎಂದಿದ್ದಾರೆ ತರುಣ್.