Asianet Suvarna News Asianet Suvarna News

Dancing Chamionship ಇಶಿತಾಗೂ ಮುರುಗಾನಂದಗೂ ಯಾವುದೇ ಸಂಬಂಧವಿಲ್ಲ?

ಡ್ಯಾನ್ಸ್‌ ರಿಯಾಲಿಟಿ ಶೋ ಬಗ್ಗೆ ನೆಟ್ಟಿಗರು ಪದೇ ಪದೇ ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಿದ ಕಿರುತೆರೆ ನಟಿ ಇಶಿತಾ...

Kannada actress Ishitha Varsha to participate in Dancing Championship vcs
Author
Bangalore, First Published Jan 8, 2022, 4:27 PM IST

'ಅಗ್ನಿಸಾಕ್ಷಿ' (Agnisakshi) ಧಾರಾವಾಹಿ ಮೂಲಕ ವೀಕ್ಷಕರ ಮನಸ್ಸಿಗೆ ಹತ್ತಿರವಾದ ನಟಿ ಇಶಿತಾ (Ishitha Varsha) ರಾಜ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಡ್ಯಾನ್ಸಿಂಗ್ ಚಾಂಪಿಯನ್ (Dancing Championship) ಒಪ್ಪಿಕೊಂಡಿದ್ದಾರೆ. ಸದಾ ವೇದಿಕೆ ಹಿಂದೆ ನಿಂತು ಕೆಲಸ ಮಾಡಿ, ಪ್ರತಿಯೊಬ್ಬ ಕಲಾವಿದರಿಗೂ ಡ್ಯಾನ್ಸ್ ಹೇಳಿಕೊಡುವ ಮುರುಗಾನಂದ್ (Murugananda) ಅವರೇ ಇವರ ಪತಿ. ರಾಜ ರಾಣಿ (Raja Rani) ವೇದಿಕೆ ಮೇಲೆ ಇವರಿಬ್ಬರ ಕಾಂಬಿನೇಷನ್‌ಗೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಇಬ್ಬರೂ ಮತ್ತೊಂದು ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ ಆದರೆ ಜೋಡಿಯಾಗಿ ಬೇರೆಯವರಿದ್ದಾರೆ. 

ಹೌದು! ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ ರಿಯಾಲಿಟಿ ಶೋನಲ್ಲಿ (Dance Reality Show) ಇಶಿತಾ ಸ್ಪರ್ಧಿಸುತ್ತಿದ್ದಾರೆ, ಇವರಿಗೆ ಜೋಡಿಯಾಗಿ ತೌಶೀರ್‌ ಕಾಣಿಸಿಕೊಳ್ಳಿದ್ದಾರೆ. ಪತಿಯೇ ಡ್ಯಾನ್ಸ್ ಮಾಸ್ಟರ್ ಆಗಿರುವ ಕಾರಣ ಇವರಿಬ್ಬರ ಬಗ್ಗೆ ಕುತೂಹಲ ಹೆಚ್ಚಾಗಿದೆ. 'ಯಾವ ಶೋಗೂ ನಾನು ಇಷ್ಟೊಂದು  nervous ಆಗಿರಲಿಲ್ಲ. ನನ್ನ ಮೇಲೆ ನನಗೆ ನಿರೀಕ್ಷೆ ಹೆಚ್ಚಿದೆ. ಡ್ಯಾನ್ಸ್ ಮಾಡುವುದು ನನ್ನ ಪ್ಯಾಶನ್, ಡ್ಯಾನ್ಸ್ ಮಾಡೋದು ಅಂದ್ರೆನೇ ಒಂದು ರೀತಿ ಖುಷಿ ನನಗೆ. ಆದರೆ ಇಲ್ಲಿ ಕಾಂಪಿಟೇಶನ್‌ ಇರೋದಕ್ಕೆ ಪ್ರೆಶರ್‌ ಕೂಡ ಇದೆ ನನಗೆ' ಎಂದು ಇಶಿತಾ ಮಾತನಾಡಿದ್ದಾರೆ.

Kannada actress Ishitha Varsha to participate in Dancing Championship vcs

'ಡಾನ್ಸಿಂಗ್ ಚಾಂಪಿಯನ್‌ನಲ್ಲಿರುವ ಇಶಿತಾ ವರ್ಷಗೂ ಮುರುಗಾನಂದಾಗೂ ಯಾವುದೇ ಸಂಬಂಧ ಖಂಡಿತ ಇಲ್ಲ.ಅವ್ರೇ ಬೇರೆ ನಾನೇ ಬೇರೆ. ಇದರಲ್ಲಿ ನಾನು ಮದ್ವೆನೇ ಅಗಿಲ್ಲ ಅನ್ನೋ ಫೀಲ್‌ನಲ್ಲಿ ಅವರು ಪರಿಚಯನೇ ಇಲ್ಲದ ವ್ಯಕ್ತಿ ಅನ್ನುವ ಫೀಲ್‌ನಲ್ಲಿದ್ದೀನಿ. ಸದ್ಯಕ್ಕೆ ತೌಶೀರ್‌ ನನ್ನ ಪಾರ್ಟ್ನರ್ ಮುರುಗಾನಂದ ಅಲ್ಲ. ಇವ್ರು ನನ್ನ ಅಕ್ಕ ಅಂತಾನೇ ಕರೆಯುವುದು. ಸ್ಟೆಪ್ಸ್ ಕಷ್ಟ ಇದ್ರೂನು ತಲೆಗೆ ಏನೂ ಹೋಗ್ತಿಲ್ಲ ಅಂದ್ರೂನು ಮಾಡಿ ಅಕ್ಕ ಮಾಡಿ ಅಕ್ಕ ಅಂತ ಪ್ರೋತ್ಸಾಹ ನೀಡ್ತಾರೆ' ಎಂದು ಇಶಿತಾ ಹೇಳಿದ್ದಾರೆ. 

ಮಕ್ಕಳಿಗೆ ಲಾಲಿ ಹಾಡು ಹಾಡಿದ ನಿವೇದಿತಾ-ಚಂದನ್; ಇಶಿತಾ ಯಾಕಮ್ಮ ಈ ಹಾಡು?

'ಇದು ಇನ್ನೂ ಮೊದಲ ಎಪಿಸೋಡ್‌ ಇಗಲೇ ನಾನು ತುಂಬಾ ಕಲ್ತೀದ್ದೀನಿ. ಒಂದು ಫಿನಿಶಿಂಗ್, ಹ್ಯಾಂಡ್ ಪೋಸಿಶನ್ ಹೇಗಿರಬೇಕು ಎಷ್ಟು ಬ್ರಾಡ್ ಆಗಿ ಡ್ಯಾನ್ಸ್ ಮಾಡಬೇಕು. ಹೋಗ್ತಾ ಹೋಗ್ತಾ ತುಂಬಾ ಫಾರ್ಮ್‌ ಮತ್ತು ಟೆಕ್ನಿಕ್‌ಗಳನ್ನು ಕಲಿಯುತ್ತೀನಿ. ಕೆಲಸ ಅಂತ ಬಂದಾಗ ನನ್ನ ಕೆಲಸ ನನಗೆ ಅವರ ಕೆಲಸ ಅವರಿಗೆ. ನಾವು ಮನೆಗೆ ಹೋದಾಗ ಜಾಸ್ತಿ ಕೆಲಸ ಬಗ್ಗೆ ಮಾತನಾಡುವುದಿಲ್ಲ ನಾವಿಬ್ಬರು ಒಂದೇ ಇಂಡಸ್ಟ್ರಿಯಲ್ಲಿರುವುದರಿಂದ ಎಲ್ಲರ ತಲೆಯಲ್ಲಿ ಇರುತ್ತೆ ಓ ಗಂಡ ಹೆಂಡ್ತಿ ಇಲ್ಲಿರೋ ಸೀಕ್ರೆಟ್‌ ಎಲ್ಲಾ ಹೇಳ್ಬಿಡ್ತಾರೆ ಅಂತ. ಇಶಿತಾ ಮುರುಗಾ ಸಹಾಯ ತೆಗೆದುಕೊಳ್ಳುತ್ತಾರೆ. ಕಾನ್ಸೆಪ್ಟ್‌ನಲ್ಲಿ ಚರ್ಚೆ ಮಾಡ್ತಾರೆ ಅಂತ. ಈ ರೀತಿ ಖಂಡಿತವಾಗಲ್ಲೂ ಏನೂ ಇಲ್ಲ. ನಿಜ ಹೇಳಬೇಕು ಅಂದ್ರೆ ನಾನು ಈ ಆರ್ಟಿಸ್ಟ್‌ ಲಿಸ್ಟ್‌ನಲ್ಲಿ ಇದ್ದೀನಿ ಅಂತ ಗೊತ್ತೇ ಇಲ್ಲ ಅವ್ರು ನನಗೆ ಏನೂ ಹೇಳಿಲ್ಲ ಎರಡು ಮೂರು ದಿನಗಳಲ್ಲಿ ಚಿತ್ರೀಕರಣ ಶುರು ಆಗುತ್ತೆ ಅನ್ನೋ ಪ್ಲ್ಯಾನಿಂಗ್ ಶುರು ಮಾಡಿದ್ದಾಗ ನನ್ನ ಫೈಲ್‌ ಮಾಡಿದ್ದು' ಎಂದು ಇಶಿತಾ ಮಾತನಾಡಿದ್ದಾರೆ.

 

Follow Us:
Download App:
  • android
  • ios