ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಕನ್ನಡ ಬಿಗ್‌ಬಾಸ್ ಸೀಸನ್ 8ಕ್ಕೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸ್ಕೊಡೋಕೆ ರೆಡಿಯಾಗಿದ್ದಾರೆ. ಹೊಸ ಪ್ರೊಮೋ ವೈರಲ್ ಆಗಿದೆ.

ಸುದೀಪ್ ಎಲ್ಲೋ ಹೊರಟು ಪಾಸ್‌ಪೋರ್ಟ್ ಕಾಪಿ ಮಾಡೋಕೆ ಹೇಳ್ತಾರೆ. ಆದ್ರೆ ಟವರ ಪಾಸ್‌ಪೋಟ್‌ ಮಾತ್ರ ಫೋಟೋ ಕಾಪಿ ತೆಗೆಯೋಕೆ ಆಗಲ್ಲ. ಏನ್ ಕೊಟ್ರೂ ಬರೀ ಎಂಟು ಅಂತ ಮಾತ್ರ ಐಎರಾಕ್ಸ್ ಮೆಷಿನ್‌ನಲ್ಲಿ ಔಟ್‌ಪುಟ್ ಬರ್ತಿದೆ.

ಬಿಗ್ ಬಾಸ್‌ ಪ್ರೋಮೋ ಶೂಟ್‌; ಇವರೇ ಸ್ಪರ್ಧಿಗಳು, ನಿಮಗೆ ಗೊತ್ತಿರುವವರು ಇದ್ದಾರಾ ನೋಡಿ!

ಏನಪ್ಪಾ ಇದು, ಅಪರೂಪಕ್ಕೆ ಎಲ್ಲಾದ್ರೂ ಹೋಗಿ ರಿಲ್ಯಾಕ್ಸ್ ಆಗಿ ಬರೋಣ ಅಂದ್ರೆ ಹೀಗಾಗ್ತಿದೆ, ಬಿಗ್‌ಬಾಸ್ ಸಿಂಬಲ್ ಕಾಪಿ ಬರ್ತಿದೆ ಎಂದು ಕಿಚ್ಚ ತಲೆ ತುರಿಸ್ಕೊಳೋವಾಗ್ಲೇ ಬಿಗ್‌ಬಾಸ್ ಧ್ವನಿ ಕೇಳಿಸುತ್ತದೆ. ಈ ಮೂಲಕ ಶೀಘ್ರದಲ್ಲಿ ಬಿಗ್‌ಬಾಸ್ ಸೀಸನ್ 8 ಆರಂಭವಾಗಲಿದೆ ಎಂಬ ಹಿಂಟ್ ಕೊಟ್ಟಿದ್ದಾರೆ.