Asianet Suvarna News Asianet Suvarna News

Depression: ಫೋಟೋದಲ್ಲಿರುವ ನಗು ಹಿಂದಿನ ನೋವು ಬಿಚ್ಚಿಟ್ಟ ಕಿಶನ್

ಡಿಪ್ರೆಶನ್‌ ಒಬ್ಬ ಮನುಷ್ಯನನ್ನು ಎಷ್ಟು ಬದಲಾಯಿಸುತ್ತದೆ, ಅದರಿಂದ ಹೊರ ಬರಲು ಎಷ್ಟು ಕಷ್ಟ ಎಂದು ಬಿಗ್ ಬಾಸ್ ಕಿಷನ್ ಹಂಚಿಕೊಂಡಿದ್ದಾರೆ. 

Kannada Bigg boss Kishen Bilagali opens up about depression vcs
Author
Bangalore, First Published Nov 7, 2021, 3:47 PM IST
  • Facebook
  • Twitter
  • Whatsapp

ಬಿಗ್ ಬಾಸ್ ಸೀಸನ್ 7ರ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ಡ್ಯಾನ್ಸರ್, ಕೊಡಗಿನ ಕುವರ ಕಿಶನ್ ಡಿಪ್ರೆಶನ್‌ಗೆ ಒಳಗಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಗು ಮುಖದ ಫೋಟೋ ಹಂಚಿಕೊಂಡು ಅದರ ಹಿಂದಿರುವ ನೋವನ್ನು ಹಂಚಿಕೊಂಡಿದ್ದಾರೆ. ಈ ಡಿಪ್ರೆಷನ್‌ನಿಂದ ಹೊರ ಬರಲು ಸ್ನೇಹಿತನೊಬ್ಬ ಹಾಗೂ ಖ್ಯಾತ ಹಿಂದಿ ನಿರೂಪಕಿ ಭಾರತಿ ಸಿಂಗ್ ಸಹಾಯ ಮಾಡಿದ್ದಾರಂತೆ. 

'ನೀವು ನೋಡಿದ ಹಾಗೆ ಎಲ್ಲೆಡೆ ನಾನು ನಗುತ್ತಿರುವ ಫೋಟೋ ಹಾಗೂ ವಿಡಿಯೋಗಳಿವೆ. ಆದರೆ ನಾನು ಅನುಭವಿಸುತ್ತಿರುವ ವಿಚಾರದ ಬಗ್ಗೆ ಹಂಚಿಕೊಳ್ಳಲು ನನಗೆ ಧೈರ್ಯವಿರಲಿಲ್ಲ' ಎಂದು ಹೇಳುತ್ತಾ ಟೈಮ್ಸ್ ಆಫ್ ಇಂಡಿಯಾ ಜೊತೆ ನಮ್ಮ ಡಿಪ್ರೆಷನ್ ಜರ್ನಿ ಹಂಚಿಕೊಂಡಿದ್ದಾರೆ. 

Kannada Bigg boss Kishen Bilagali opens up about depression vcs

'ಕೆಲವು ತಿಂಗಳ ಹಿಂದೆ ಯಾರಾದರೂ ಬಂದು ಡಿಪ್ರೆಶನ್‌ ಬಗ್ಗೆ ಮಾತನಾಡಿದರೆ ನಾನು ನಕ್ಕು ಸುಮ್ಮನಾಗುತ್ತಿದ್ದೆ ಆದರೆ ನಿಜಕ್ಕೂ ಡಿಪ್ರೆಷನ್ ಆಂದ್ರೆ ಏನು? ಹೇಗಿರುತ್ತದೆ ಎಂದು ನನಗೆ ತಿಳಿದುಕೊಳ್ಳಲು ತುಂಬಾನೇ ಸಮಯ ಬೇಕಾಯ್ತು. ಕೆಲಸ ಇರದ ಸಮಯದಲ್ಲಿ ಅಥವಾ ಲಾಕ್‌ಡೌನ್‌ನಲ್ಲಿ ನನಗೆ ಡಿಪ್ರೆಷನ್ ಫೀಲ್ ಆಗಿಲ್ಲ ಆದರೆ ನನಗೊಂದು ಬೇಸರವಿತ್ತು. ಅದೇನೆಂದರೆ ನಮ್ಮ ಬಿಗ್ ಬಾಸ್ ಸೀಸನ್‌ನ ಮಂದಿ ಎಷ್ಟು ಲಕ್ಕಿ ಆದರೆ ನಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಗಲಿಲ್ಲ. ಈ ಸತ್ಯ ನನಗೆ ತುಂಬಾನೇ ನೋವು ಕೊಡುತ್ತದೆ. ಯಶಸ್ಸು ಸಿಕ್ಕ ನಂತರವೂ ನನ್ನ ಲೈಫ್ ತುಂಬಾನೇ ನಾರ್ಮಲ್ ಆಗಿತ್ತು' ಎಂದು ಕಿಶನ್ ಮಾತನಾಡಿದ್ದಾರೆ. 

ಹುಟ್ಟೂರಿನಲ್ಲಿ ರೈತನಾಗುತ್ತಿರುವ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಲಾಗಲಿ!

'ನಾನು ಕೆಲಸದಲ್ಲಿ ತುಂಬಾನೇ ಬ್ಯುಸಿಯಾಗಿದ್ದೆ. ಆಗ ಏನೋ ಖಾಲಿ ಖಾಲಿ ಅನಿಸುತ್ತಿತ್ತು. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಬೇಕು ಅನಿಸುತ್ತಿರಲಿಲ್ಲ ನನ್ನ ಉದ್ದೇಶ ಏನು ಎಂದು ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೆ. ಹಿಂದಿ ರಿಯಾಲಿಟಿ ಶೋ ಡ್ಯಾನ್ಸ್‌ ದೀವಾನೆ ಅಥವಾ ನನ್ನ ಕನ್ನಡ ಸಿನಿಮಾಗೆ ಸದಾ ಶೂಟಿಂಗ್ ಮಾಡುತ್ತಿದ್ದೆ. ಆದರೆ ಕೆಲ ಸಮಯದ ಬಳಿಕ ನನಗೆ ಬೇಸರವಾಗಿರುವುದೇ ಖುಷಿ ಕೊಡುತ್ತಿತ್ತು, ಸದಾ ಬೇಸರದ ಹಾಡುಗಳನ್ನು ಕೇಳುತ್ತಿದ್ದೆ' ಎಂದಿದ್ದಾರೆ. 

ಬಿರಿಯಾನಿ ವ್ಯಾಪಾರ ಮಾಡಿದ್ರೆ ಸಾಕಾ, ಅಡುಗೆ ಮಾಡೋದು ಬೇಡ್ವಾ?; ಕಿಶನ್ ವಿಡಿಯೋ ವೈರಲ್

'ನಾನು ಪಾರ್ಟಿ ಅಥವಾ ಡ್ರಿಂಕ್ಸ್ ಮಾಡುವ ವ್ಯಕ್ತಿ ಅಲ್ಲ ಆದರೆ ನನಗೆ ಈ ಫೀಲಿಂಗ್ ಬರಲು ಕಾರಣ ಏನು ಎಂದು ಥಿಂಕ್ ಮಾಡುತ್ತಿದ್ದೆ. ನನ್ನ Ambitions ದೊಡ್ಡದಾ ಅಥವಾ ನನ್ನ ಹಳೆ ರಿಲೇಷನ್‌ಶಿಪ್‌ ಬಗ್ಗೆ ಯೋಚನೆನಾ ಅಥವಾ ಚಿಕ್ಕವಯಸ್ಸಿಗೆ ದೌರ್ಜನ್ಯಕ್ಕೆ ಒಳಗಾಗಿದ್ದೆ ಅದಕ್ಕೆ ಹೀಗೇನೋ ಎನ್ನುವ ಯೋಚನೆ ಶುರುವಾಗಿತ್ತು. ಯಾವುದೇ ಕಾರಣವಿಲ್ಲದೆ ಸುಮ್ಮನೆ ಅಳುತ್ತಿದ್ದೆ. ಹಿಂದಿ ಶೋ ಚಿತ್ರೀಕರಣದ ವೇಳೆ ನಾನು 7 ನಿಮಿಷಗಳ ಕಾಲ ಸುಮ್ಮನೆ ಅಳುತ್ತಿದ್ದೆ ಆಗ ಚಿತ್ರೀಕರಣ ನಿಲ್ಲಿಸಿದ್ದರು. ನಾನು ಡಿಪ್ರೆಷನ್ ಇರುವುದಾಗಿ ಯಾರಿಗೂ ಹೇಳಿಲ್ಲ ನನ್ನ ಕುಟುಂಬಕ್ಕೂ ಗೊತ್ತಿಲ್ಲ.  ಡಿಪ್ರೆಷನ್‌ನಿಂದ ಹೊರ ಬರಲು ಸಹಾಯ ಮಾಡಿದ್ದು ನನ್ನ ಸ್ನೇಹಿತ ಹಾಗೂ ಭಾರತಿ ಸಿಂಗ್‌' ಎಂದು ಮಾತನಾಡಿದ್ದಾರೆ.

Follow Us:
Download App:
  • android
  • ios