ಬಿಗ್ ಬಾಸ್‌ ಸೀಸನ್‌ 6 ಖ್ಯಾತಿಯ ಧನ್‌ರಾಜ್‌ ಕುಟುಂಬಕ್ಕೆ ಪುಟ್ಟ ಕೃಷ್ಣನನ್ನು ಬರ ಮಾಡಿಕೊಂಡು ನಾಮಕರಣ ಮಾಡಿದ್ದಾರೆ. ಇದರ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌6ರ ಸ್ಪರ್ಧಿ ಧನ್‌ರಾಜ್‌ ತಮ್ಮ ಪುಟ್ಟ ಕಂದಮ್ಮನಿಗೆ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಧನ್‌ರಾಜ್‌ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಬಿಗ್‌ಬಾಸ್ ಧನರಾಜ್ ಮನೆಗೆ ಬರ್ತಿದೆ ಪುಟಾಣಿ ಬಿಗ್‌ಬಾಸ್; ಅದ್ಧೂರಿ ಸೀಮಂತ!

'ನಮ್ಮ ಲಿಟಲ್‌ ಮ್ಯಾನ್‌ಗೆ ಇಂದು ಹೆಸರಿಡಲಾಗಿದೆ. ನಮ್ಮ ಕುಡಿಯನ್ನು ನೀವು ಅಗಸ್ತ್ಯ ಧನ್‌ರಾಜ್‌ ಎಂದು ಕರೆಯಬಹುದು' ಎಂದು ಬರೆದುಕೊಂಡಿದ್ದಾರೆ. ಧನ್‌ರಾಜ್‌ ಪತ್ನಿಯೂ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಇದ್ದು ಪುತ್ರನ ಪಾದದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆದರೆ ಮುಖವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ.

View post on Instagram

ಜೂನ್‌ ತಿಂಗಳಲ್ಲಿ ಪತ್ನಿಗೆ ಅದ್ಧೂರಿ ಸೀಮಂತ ಕಾರ್ಯಕ್ರಮ ಮಾಡಿದ್ದರು.ಆ ಸೀಸನ್ ನ ಇನ್ನಿತ್ತರ ಸ್ಪರ್ಧಿಗಳಾದ ಶಶಿ ಹಾಗೂ ಕವಿತಾ ಗೌಡ ಭಾಗಿಯಾಗಿದ್ದರು.ಕೊರೋನ ಕಾಟದಿಂದ ಆಪ್ತರ ಸಮ್ಮುಖದಲ್ಲಿ ಆಚರಣೆ ಮಾಡಲಾಗಿತ್ತು. ಮಿಮಿಕ್ರಿ ಮಾಡುತ್ತಾ ವೀಕ್ಷಕರನ್ನು ಮನೋರಂಜಿಸುತ್ತಿದ್ದ ಧನ್‌ರಾಜ್‌ ರಿಯಾಲಿಟಿ ಶೋ ನಂತರ ಸಿನಿಮಾಗಳಲ್ಲಿ ಬ್ಯುಸಿಯಾದರು. ನಟನೆ ಮಾತ್ರವಲ್ಲದೆ ಡಬ್ಬಿಂಗ್ ಕೂಡ ಮಾಡುತ್ತಾರೆ. 

ಬಿಗ್‌ ಬಾಸ್ ಧನ್‌ರಾಜ್ ಹಾಗೂ ಶಾಲಿನಿ ಕ್ಯೂಟ್‌ ಲವ್‌ಸ್ಟೋರಿ!

ಪುತ್ರನ ಹೆಸರು ರಿವೀಲ್ ಮಾಡಿರುವುದರ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಮಗು ಮುಖವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ.

View post on Instagram